AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆ.13ರಂದು ಕರ್ನಾಟಕ ಬಂದ್​​ ದಿನ ಹೋಟೆಲ್ ಓಪನ್-ಕ್ಲೋಸ್ ಬಗ್ಗೆ ಗೌರವ ಅಧ್ಯಕ್ಷ ಹೇಳಿದ್ದಿಷ್ಟು

ಆ.13ರಂದು ಕರ್ನಾಟಕ ಬಂದ್​​ ದಿನ ಹೋಟೆಲ್ ಓಪನ್-ಕ್ಲೋಸ್ ಬಗ್ಗೆ ಗೌರವ ಅಧ್ಯಕ್ಷ ಹೇಳಿದ್ದಿಷ್ಟು

ಕಿರಣ್​ ಸೂರ್ಯ
| Edited By: |

Updated on:Jul 31, 2026 | 5:30 PM

Share

ಕರ್ನಾಟಕ ಬಂದ್​​ ಗೆ ಹೋಟೆಲ್ ಸಂಘ ಬೆಂಬಲ ನೀಡುವ ಬಗ್ಗೆ ಇನ್ನೂ ತೀರ್ಮಾನಿಸಿಲ್ಲ. ಈ ಬಗ್ಗೆ ಹೋಟೆಲ್ ಮಾಲೀಕರ ಸಂಘದ ಗೌರವಾಧ್ಯಕ್ಷ ಪಿ.ಸಿ.ರಾವ್ ಟಿವಿ9 ಜೊತೆ ಮಾತನಾಡಿದ್ದು, ಕರ್ನಾಟಕ ಬಂದ್​ಗೆ​ ಬೆಂಬಲ ನೀಡುವ ಬಗ್ಗೆ ಇನ್ನೂ ತೀರ್ಮಾನಿಸಿಲ್ಲ. ಒಂದು ವಾರ ಇರುವಾಗ ನಾವೆಲ್ಲರೂ ಸೇರಿ ತೀರ್ಮಾನ ಮಾಡುತ್ತೇವೆ. ಹೋಟೆಲ್ ಮಾಲೀಕರು, ಬಾರ್ ಆ್ಯಂಡ್​ ರೆಸ್ಟೋರೆಂಟ್ ಮಾಲೀಕರು, ಬೇಕರಿ ಮಾಲೀಕರ ಜೊತೆಗೆ ಸಭೆ ನಡೆಸುತ್ತೇವೆ. ನಾಡು ನುಡಿ ವಿಚಾರದಲ್ಲಿ ಯಾವಾಗಲೂ ನಮ್ಮ ಬೆಂಬಲ ಇರುತ್ತದೆ ಎಂದು ಸ್ಪಷ್ಟಪಡಿಸಿದರು.

ಬೆಂಗಳೂರು, (ಜುಲೈ 31): ಬರಗಾಲದ ಮಧ್ಯೆಯೂ ತಮಿಳುನಾಡಿಗೆ (Tamil Nadu) ಕಾವೇರಿ ನೀರು (Cauvery Water) ಹರಿಸುವಂತೆ ಆದೇಶಿಸಿದ್ದು, ಇದು ಕನ್ನಡಿಗರ ಆಕ್ರೋಶಕ್ಕೆ ಕಾರಣವಾಗಿದೆ. ಹೀಗಾಗಿ ಕನ್ನಡಪರ ಸಂಘಟನೆಗಳು ಇದೇ ಆಗಸ್ಟ್ 13ರಂದು ಕರ್ನಾಟಕ ಬಂದ್​​​ಗೆ (Karnataka bandh) ಕರೆ ನೀಡಿವೆ. ಇನ್ನು ಕರ್ನಾಟಕ ಬಂದ್​​ ಗೆ ಹೋಟೆಲ್ ಸಂಘ ಬೆಂಬಲ ನೀಡುವ ಬಗ್ಗೆ ಇನ್ನೂ ತೀರ್ಮಾನಿಸಿಲ್ಲ. ಈ ಬಗ್ಗೆ ಹೋಟೆಲ್ ಮಾಲೀಕರ ಸಂಘದ ಗೌರವಾಧ್ಯಕ್ಷ ಪಿ.ಸಿ.ರಾವ್ ಟಿವಿ9 ಜೊತೆ ಮಾತನಾಡಿದ್ದು, ಕರ್ನಾಟಕ ಬಂದ್​ಗೆ​ ಬೆಂಬಲ ನೀಡುವ ಬಗ್ಗೆ ಇನ್ನೂ ತೀರ್ಮಾನಿಸಿಲ್ಲ. ಒಂದು ವಾರ ಇರುವಾಗ ನಾವೆಲ್ಲರೂ ಸೇರಿ ತೀರ್ಮಾನ ಮಾಡುತ್ತೇವೆ. ಹೋಟೆಲ್ ಮಾಲೀಕರು, ಬಾರ್ ಆ್ಯಂಡ್​ ರೆಸ್ಟೋರೆಂಟ್ ಮಾಲೀಕರು, ಬೇಕರಿ ಮಾಲೀಕರ ಜೊತೆಗೆ ಸಭೆ ನಡೆಸುತ್ತೇವೆ. ನಾಡು ನುಡಿ ವಿಚಾರದಲ್ಲಿ ಯಾವಾಗಲೂ ನಮ್ಮ ಬೆಂಬಲ ಇರುತ್ತದೆ ಎಂದು ಸ್ಪಷ್ಟಪಡಿಸಿದರು.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published on: Jul 31, 2026 05:28 PM

Follow Us