ಬಿಗ್ ಬಾಸ್ ಕನ್ನಡ: ಯಶಸ್ ಜೊತೆ ಮದುವೆ ಮಾತುಕಥೆ ಮಾಡಿದ ಸೌಂದರ್ಯಾ ಶೆಟ್ಟಿ
ಬಿಗ್ ಬಾಸ್ ಮನೆಯಲ್ಲಿ ಜಗಳ ಇರುವ ರೀತಿಯೇ ಲವ್ ಕೂಡ ಸಹಜ. ಕೆಲವು ಜೋಡಿಗಳ ನಡುವೆ ದೊಡ್ಮನೆಯಲ್ಲಿ ಪ್ರೀತಿ ಹುಟ್ಟುತ್ತದೆ. ಈ ಹಿಂದಿನ ಸೀಸನ್ಗಳಲ್ಲಿ ಅದಕ್ಕೆ ಉದಾಹರಣೆ ಸಿಕ್ಕಿತ್ತು. ‘ಬಿಗ್ ಬಾಸ್ ಕನ್ನಡ ಸೀಸನ್ 13’ರಲ್ಲಿ ಆ ರೀತಿ ಏನಾದರೂ ಆಗುತ್ತಾ ಎಂಬುದನ್ನು ತಿಳಿಯಲು ಪ್ರೇಕ್ಷಕರು ಕಾದಿದ್ದಾರೆ.
ಬಿಗ್ ಬಾಸ್ ಮನೆಯಲ್ಲಿ ಜಗಳ ಇರುವ ರೀತಿಯೇ ಲವ್ ಕೂಡ ಸಹಜ. ಕೆಲವು ಜೋಡಿಗಳ ನಡುವೆ ದೊಡ್ಮನೆಯಲ್ಲಿ ಪ್ರೀತಿ ಹುಟ್ಟುತ್ತದೆ. ಈ ಹಿಂದಿನ ಸೀಸನ್ಗಳಲ್ಲಿ ಅದಕ್ಕೆ ಉದಾಹರಣೆ ಸಿಕ್ಕಿತ್ತು. ‘ಬಿಗ್ ಬಾಸ್ ಕನ್ನಡ ಸೀಸನ್ 13’ರಲ್ಲಿ ಆ ರೀತಿ ಏನಾದರೂ ಆಗುತ್ತಾ ಎಂಬುದನ್ನು ತಿಳಿಯಲು ಪ್ರೇಕ್ಷಕರು ಕಾದಿದ್ದಾರೆ. ಸೆಪ್ಟೆಂಬರ್ 30ರ ಸಂಚಿಕೆಯಲ್ಲಿ ಸೌಂದರ್ಯಾ ಶೆಟ್ಟಿ ಮತ್ತು ಯಶಸ್ ಅವರು ಮದುವೆ ಬಗ್ಗೆ ಮಾತುಕಥೆ ಮಾಡಿದ್ದಾರೆ. ‘ನನಗೂ ಮದುವೆ ಆಗಬಹುದಾ? ಗೊತ್ತಿಲ್ಲ. ನಾನು ಅದರ ಬಗ್ಗೆ ಯೋಚನೆ ಮಾಡಿಲ್ಲ. ಯಾರೂ ನನ್ನನ್ನು ಫೋರ್ಸ್ ಮಾಡುತ್ತಿಲ್ಲ ಯಶು. ಕೇವಲ ನನ್ನ ಅಕ್ಕನನ್ನು ಫೋರ್ಸ್ ಮಾಡುತ್ತಿದ್ದಾರೆ’ ಎಂದು ಸೌಂದರ್ಯಾ ಶೆಟ್ಟಿ ಅವರು ಹೇಳಿದ್ದಾರೆ. ‘ನಮ್ಮಿಬ್ಬರ ಮಕ್ಕಳನ್ನು ಎಲ್ಲಿ ಬೆಳೆಸೋಣ’ ಎಂದು ಯಶಸ್ ಅವರು ಹೇಳಿದ್ದಾರೆ. ‘ಕಲರ್ಸ್ ಕನ್ನಡ’ ಹಂಚಿಕೊಂಡಿರುವ ಪ್ರೋಮೋ ಇಲ್ಲಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

