
Karnataka Bandh
ಕರ್ನಾಟಕ ಬಂದ್
ಕರ್ನಾಟಕ ಬಂದ್: ಮರಾಠಿಗರಿಂದ ಕನ್ನಡಿಗರನ್ನು ಕೆರಳಿಸುವ ಪೋಸ್ಟ್
ಬೆಳಗಾವಿಯಲ್ಲಿ ಕೆಎಸ್‌ಆರ್‌ಟಿಸಿ ನಿರ್ವಾಹಕನ ಮೇಲೆ ನಡೆದ ಹಲ್ಲೆಯನ್ನು ಖಂಡಿಸಿ ಕನ್ನಡಪರ ಸಂಘಟನೆಗಳು ಕರ್ನಾಟಕ ಬಂದ್‌ಗೆ ಕರೆ ನೀಡಿದವು. ಈ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಮಹಾರಾಷ್ಟ್ರದ ಶಿವಸೇನೆಯ ಯುವಸೇನೆಯ ಉದ್ರೇಕಕಾರಿ ಪೋಸ್ಟ್ ಕನ್ನಡಿಗರ ಆಕ್ರೋಶಕ್ಕೆ ಕಾರಣವಾಯಿತು. ಪೊಲೀಸರ ಎಚ್ಚರಿಕೆಯ ನಂತರವೂ ಪೋಸ್ಟ್ ತೆಗೆಯದಿರುವುದು ಖಂಡನೀಯ.
- Vivek Biradar
- Updated on: Mar 23, 2025
- 11:54 am
Karnataka Bandh: ಮರಾಠಿ ಪುಂಡರ ವಿರುದ್ಧ ಆಕ್ರೋಶ: ಕರ್ನಾಟಕ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ
ಕನ್ನಡಿಗರ ಮೇಲಿನ ದೌರ್ಜನ್ಯ ಖಂಡಿಸಿ ಇಂದು ವಿವಿಧ ಪರ ಕನ್ನಡ ಸಂಘಟನೆಗಳು ಕರೆ ನೀಡಿದ್ದ ಕರ್ನಾಟಕ ಬಂದ್ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹಲವೆಡೆ ಜನ ಜೀವನ ಸೇರಿದಂತೆ ವಾಹನಗಳ ಓಡಾಟವೂ ಸಹಜವಾಗಿತ್ತು. ಬಸ್ ಓಡಾಟ ಎಲ್ಲವೂ ನಾರ್ಮಲ್ ಕಂಡು ಬಂದರೆ ಹೋಟೆಲ್ ಕೂಡ ಓಪನ್ ಆಗಿತ್ತು. ಹೀಗಾಗಿ ಇಂದು ಬಂದಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
- Web contact
- Updated on: Mar 22, 2025
- 8:17 pm
ಕರ್ನಾಟಕ ಬಂದ್: ಪ್ರತಿಭಟನೆ ವೇಳೆ ಜನದಟ್ಟಣೆಗೆ ಬೆದರಿ ಓಡಿದ ಎಮ್ಮೆ
ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಧಾರವಾಡದಲ್ಲಿ ನಡೆದ ಪ್ರತಿಭಟನೆಯಲ್ಲಿ ಕರವೇ ಶಿವರಾಮೇಗೌಡ ಬಣದಿಂದ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಿತು. ಎಂಇಎಸ್ ಅಣಕು ಶವಯಾತ್ರೆ ಕೂಡ ಮಾಡಲಾಗಿದೆ. ಈ ವೇಳೆ ಪ್ರತಿಭಟನೆಯಲ್ಲಿ ಎಮ್ಮೆಯೊಂದು ಬೆದರಿ ಓಡಿ ಹೋಗಿರುವಂತಹ ಘಟನೆ ವಿವೇಕಾನಂದ ಸರ್ಕಲ್ ಬಳಿ ನಡೆಯಿತು.
- Narasimha Murti Pyati
- Updated on: Mar 22, 2025
- 7:36 pm
ಕರ್ನಾಟಕ ಬಂದ್: ಬೆಂಗಳೂರು ನಗರದಿಂದ ಎಲ್ಲ ಬಸ್ಗಳು ಎಂದಿನಂತೆ ಓಡಾಡುತ್ತಿವೆ, ಪ್ರಯಾಣಿಕರ ಸಂಖ್ಯೆ ಮಾತ್ರ ಕಮ್ಮಿ
ಬಸ್ಸಿನ ಚಾಲಕನೊಬ್ಬರು ಬಸ್ಗಳ ಓಡಾಟಕ್ಕೆ ಯಾವುದೇ ಸಮಸ್ಯೆ ಆಗಿಲ್ಲ, ಮಹಾರಾಷ್ಟ್ರದವರು ಗಲಾಟೆ ಮಾಡುತ್ತಿದ್ದಾರೆಂದು ನಾವೂ ಮಾಡಿದರೆ ಅವರ ಮತ್ತು ನಮ್ಮ ನಡುವೆ ವ್ಯತ್ಯಾಸ ಉಳಿಯಲ್ಲ, ನಾವು ಬಂದ್ ಮಾಡಿದಂತೆ ಅವರು ಸಹ ಬಂದ್ ಮಾಡಿದರೆ ಸಾರ್ವಜನಿಕಕರಿಗೆ ತೊಂದರೆ ಅಗುತ್ತದೆ, ಬಂದ್ ಮಾಡುವುದರಿಂದ ಯಾವ ಪ್ರಯೋಜನವೂ ಆಗಲ್ಲ ಎಂದು ಹೇಳುತ್ತಾರೆ.
- Arun Belly
- Updated on: Mar 22, 2025
- 3:33 pm
ಕರ್ನಾಟಕ ಬಂದ್: ಫ್ರೀಡಂ ಪಾರ್ಕ್ ಬರುತ್ತಿದ್ದಂತೆಯೇ ವಾಟಾಳ್ ನಾಗರಾಜ್ರನ್ನು ವಶಕ್ಕೆ ಪಡೆದ ಪೊಲೀಸ್
ಕಾರಿನ ಡೋರ್ ಬಳಿ ನಿಂತಿದ್ದ ಒಬ್ಬ ಕನ್ನಡ ಪರ ಹೋರಾಟಗಾರನ್ನು ಪೊಲೀಸರು ಅನಾಮತ್ತಾಗಿ ಎತ್ತಿ ಬಸ್ಸಿನ ಕಡೆ ಒಯ್ಯುವುದನ್ನು ದೃಶ್ಯಗಳಲ್ಲಿ ನೋಡಬಹುದು. ವಾಟಾಳ್ ನಾಗರಾಜ್ ತಮ್ಮನ್ನು ಕರೆದೊಯ್ದ ಬಸ್ಸಿನ ಡೋರ್ ಬಳಿ ನಿಂತು ಪೊಲೀಸ್ ಗೂಂಡಾಗಿರಿಯನ್ನು ಸಹಿಸಲ್ಲ ಎನ್ನುತ್ತಾರೆ. ನಾಗರಾಜ್, ಬಂದ್ ಕರೆ ಯಶ ಕಂಡಿದೆ ಅಂತ ಹೇಳಿದರೆ ನಗರ ಪೊಲೀಸ್ ಕಮೀಶನರ್ ಜನಜೀವನ ಸಾಮಾನ್ಯವಾಗಿದೆ ಎನ್ನುತ್ತಾರೆ.
- Arun Belly
- Updated on: Mar 22, 2025
- 2:19 pm
ಕರ್ನಾಟಕ ಬಂದ್; ಸರ್ಕಾರ ನಮ್ಮ ಹೋರಾಟವನ್ನು ಹತ್ತಿಕ್ಕುವ ಪ್ರಯತ್ನ ಮಾಡುತ್ತಿದೆ: ಸಾರಾ ಗೋವಿಂದು
ಹನಿ ಟ್ರ್ಯಾಪ್ ಪ್ರಕರಣವನ್ನೂ ಪ್ರಸ್ತಾಪಿಸಿದ ಸಾರಾ ಗೋವಿಂದು ಅದನ್ನು ಮಾಡುವವರಿಗೆ ಮತ್ತು ಅದನ್ನೇ ಮುಂದಿಟ್ಟುಕೊಂಡು ಸದನದಲ್ಲಿ ಗಲಾಟೆ ಮಾಡುವವರಿಗೆ ನಾಚಿಕೆ ಇಲ್ಲ, ಎಲ್ಲರಿಗೂ ಅಧಿಕಾರದ ತೆವಲಿನ ಚಿಂತೆ, ಎಂಇಎಸ್ಅನ್ನು ನಿಷೇಧಿಸುತ್ತೇವೆ ಮತ್ತು ಮಹಾದಾಯಿ ಯೋಜನೆ ಜಾರಿಗೆ ತರಲು ಸರ್ಕಾರ ಗಡುವು ನೀಡಲಿ, ಇಲ್ಲದಿದ್ದರೆ ಅಧಿಕಾರ ಬಿಟ್ಟು ತೊಲಗಲಿ, ನಾಲ್ಕು ಜಿಲ್ಲೆಗಳ ಜನ ಕುಡಿಯುವ ನೀರಿಗಾಗಿ ಒದ್ದಾಡುತ್ತಿದ್ದಾರೆ ಎಂದು ಹೇಳಿದರು.
- Arun Belly
- Updated on: Mar 22, 2025
- 1:30 pm
ಕರ್ನಾಟಕ ಬಂದ್; ಕನ್ನಡದ ರಕ್ಷಣೆಗೆ ಮತ್ತು ಕನ್ನಡನಾಡಿಗಾಗಿ ಬಂದ್ ಕರೆ ನೀಡಿದ್ದೇವೆ: ವಾಟಾಳ್ ನಾಗರಾಜ್
ಕನ್ನಡ ಪರ ಹೋರಾಟಗಾರರು ಬಂದ್‌ಗೆ ಕರೆ ನೀಡಿದರೆ ಅದು ಮಾಧ್ಯಮದವರಿಗೆ ಮೆಣಸಿನಕಾಯಿ ತಿಂದಂತಾಗುತ್ತದೆ, ಪರೀಕ್ಷಾ ಸಮಯದಲ್ಲಿ ಯಾಕೆ ಬಂದ್ ಗೆ ಕರೆ ನೀಡಿದ್ದೀರಿ ಅಂತ ಪ್ರಶ್ನೆ, ಆದರೆ ಶನಿವಾರ ಎಸ್ಸೆಸ್ಸಿಲ್ಸಿ ಪರೀಕ್ಷೆ ಇಲ್ಲ, ಅದನ್ನು ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರಿಂದ ದೃಢೀಕರಿಸಿಕೊಳ್ಳಲಾಗಿದೆ, ಮಕ್ಕಳಿಗೆ ಎರಡು ದಿನ ಮನೆಯಲ್ಲೇ ಕೂತು ಅಭ್ಯಾಸ ಮಾಡಲು ಅವಕಾಶ ಸಿಕ್ಕಂತಾಗುತ್ತದೆ ಎಂದು ನಾಗರಾಜ್ ಹೇಳಿದರು.
- Arun Belly
- Updated on: Mar 22, 2025
- 12:32 pm
ಕರ್ನಾಟಕ ಬಂದ್: ಪೊಲೀಸರು ಪ್ರತಿಭಟನೆ ನಡೆಸಲು ಅವಕಾಶ ನೀಡುತ್ತಿಲ್ಲವೆಂದ ಕನ್ನಡಪರ ಸಂಘಟನೆಗಳು
ಬೆಳಗಾವಿಯಲ್ಲಿ ಶಿವಸೇನೆ ಮತ್ತು ಎಂಇಎಸ್ ಗೂಂಡಾಗಳು ಬಸ್ ಕಂಡಕ್ಟರ್ ಒಬ್ಬರ ಮೇಲೆ ನಡೆಸಿದ ಹಲ್ಲೆಯನ್ನು ವಿರೋಧಿಸಿ ವಾಟಾಳ್ ನಾಗರಾಜ್ ನೇತೃತ್ವದ ಕನ್ನಡ ಪರ ಸಂಘಟನೆಗಳು ಇವತ್ತು ಕರ್ನಾಟಕ ಬಂದ್‌ಗೆ ಕರೆ ನೀಡಿವೆ. ರಾಜ್ಯದ ಕೆಲ ಜಿಲ್ಲೆಗಳಲ್ಲಷ್ಟೇ ಬಂದ್ ಕರೆಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಉಳಿದ ಭಾಗಗಳಲ್ಲಿ ಜನಜೀವನ ಎಂದಿನಂತೆ ಸಾಮಾನ್ಯವಾಗಿದೆ.
- Arun Belly
- Updated on: Mar 22, 2025
- 10:59 am
ಕರ್ನಾಟಕ ಬಂದ್: ವಿಜಯಪುರದಲ್ಲಿ ಇಲ್ಲ ಬೆಂಬಲ, ರಸ್ತೆಯಲ್ಲಿ ಎಂದಿನಂತೆ ಬಸ್ ಮತ್ತು ಆಟೋರಿಕ್ಷಾಗಳ ಸಂಚಾರ
Karnataka Bandh: ನಮ್ಮ ವರದಿಗಾರ ಬಸ್ ನಿಲ್ದಾಣದ ಮುಂದೆ ಪ್ರಯಾಣಿಕರಿಗಾಗಿ ಕಾಯುತ್ತಿದ್ದ ಆಟೋರಿಕ್ಷಾ ಚಾಲಕರನ್ನು ಮಾತಾಡಿಸಿದ್ದು, ಪ್ರತಿಭಟನೆ ಮಾಡಲು ಬಂದ್ಗಳಿಗೆ ಕರೆ ನೀಡುವುದು ಸರಿಯಲ್ಲ, ದಿನದ ಸಂಪಾದನೆಯನ್ನು ನೆಚ್ಚಿಕೊಂಡು ನಡೆಸುವ ತಮ್ಮಂಥವರಿಗೆ ಬಹಳ ತೊಂದರೆಯಾಗುತ್ತದೆ ಎಂದು ಅವರು ಹೇಳುತ್ತಾರೆ. ಅವರು ಹೇಳುವುದರಲ್ಲಿ ಅರ್ಥ ಇಲ್ಲದಿಲ್ಲ.
- Arun Belly
- Updated on: Mar 22, 2025
- 10:09 am
Karnataka Bandh: ಬೆಂಗಳೂರಿಗೆ ತಟ್ಟದ ಬಂದ್ ಬಿಸಿ: ಯಾವ ಜಿಲ್ಲೆಯಲ್ಲಿ ಹೇಗಿದೆ ಪರಿಸ್ಥಿತಿ? ಇಲ್ಲಿದೆ ವಿವರ
ಕರ್ನಾಟಕ ಬಂದ್: ಬೆಳಗಾವಿಯಲ್ಲಿ ಮರಾಠಿ ಪುಂಡರ ಹಾವಳಿ ಖಂಡಿಸಿ ಕರೆ ನೀಡಲಾಗಿರುವ ಕರ್ನಾಟಕ ಬಂದ್ ಬಿಸಿ ಬೆಂಗಳೂರಿನಲ್ಲಿ ಹೆಚ್ಚು ತಟ್ಟಿಲ್ಲ. ಅದೇ ರೀತಿ ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಜನ ಜೀವನ ಸಹಜ ಸ್ಥಿತಿಯಲ್ಲಿ ಆರಂಭವಾಗಿದೆ. ಬಸ್, ಆಟೋ ಸೇವೆಗಳು ಎಂದಿನಂತೆ ಸಾಗಿವೆ. ಕೆಲವು ಪ್ರದೇಶಗಳಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಎಲ್ಲೆಲ್ಲಿ ಹೇಗಿದೆ ಪರಿಸ್ಥಿತಿ ಎಂಬ ವಿವರ ಇಲ್ಲಿದೆ.
- Ganapathi Sharma
- Updated on: Mar 22, 2025
- 8:17 am