AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Ugadi Horoscope 2026: ಯುಗಾದಿ ವರ್ಷ ಭವಿಷ್ಯ; ಈ ರಾಶಿಯವರು ಆರೋಗ್ಯದ ಬಗ್ಗೆ ಅತ್ಯಂತ ಜಾಗರೂಕರಾಗಿರಿ

Ugadi Horoscope 2026: ಯುಗಾದಿ ವರ್ಷ ಭವಿಷ್ಯ; ಈ ರಾಶಿಯವರು ಆರೋಗ್ಯದ ಬಗ್ಗೆ ಅತ್ಯಂತ ಜಾಗರೂಕರಾಗಿರಿ

ಅಕ್ಷತಾ ವರ್ಕಾಡಿ
|

Updated on: Mar 11, 2026 | 3:00 PM

Share

2026ರ ಯುಗಾದಿ ಮಕರ ರಾಶಿಯವರಿಗೆ ಅದೃಷ್ಟ ತರಲಿದೆ. ಶನಿ ಮೂರನೇ ಮನೆಯಲ್ಲಿ ಸಂಚರಿಸುತ್ತಾ, ಶ್ರಮಕ್ಕೆ ತಕ್ಕ ಫಲ ನೀಡಲಿದ್ದಾನೆ. ಆರ್ಥಿಕವಾಗಿ ಶುಭವಾಗಿದ್ದು, ರಾಜಕೀಯ ಹಾಗೂ ಉದ್ಯೋಗದಲ್ಲಿ ಪ್ರಗತಿ ಇರುತ್ತದೆ. ಆರೋಗ್ಯದ ಬಗ್ಗೆ ಜಾಗ್ರತೆ ಅಗತ್ಯ. ಪಾರ್ವತಿದೇವಿ ಆರಾಧನೆ ಮತ್ತು ಮಕ್ಕಳ ದಾನದಿಂದ ಶುಭಫಲಗಳನ್ನು ಹೆಚ್ಚಿಸಿಕೊಳ್ಳಬಹುದು.

2026ರ ಪರಾಭವ ನಾಮ ಸಂವತ್ಸರದ ಯುಗಾದಿಯು ಮಕರ ರಾಶಿಯವರಿಗೆ ಹಲವು ಶುಭ ಫಲಗಳನ್ನು ತರಲಿದೆ ಎಂದು ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಹೇಳಿದ್ದಾರೆ. ಶನಿ ಗ್ರಹವು ಮೂರನೇ ಮನೆಯಲ್ಲಿ ಸಂಚಾರ ಮಾಡುತ್ತಿದ್ದು, ಶ್ರಮಕ್ಕೆ ತಕ್ಕ ಫಲ ಹಾಗೂ ನ್ಯಾಯ, ನೀತಿ, ಧರ್ಮಕ್ಕೆ ಪ್ರಾಶಸ್ತ್ಯ ಸಿಗಲಿದೆ. ಈ ರಾಶಿಯವರ ಆದಾಯ ಖರ್ಚಿಗಿಂತ ಹೆಚ್ಚಾಗಲಿದ್ದು, ಆರ್ಥಿಕವಾಗಿ ಲಾಭವಾಗಲಿದೆ. ತಾಳ್ಮೆ, ಸಹನೆ, ಒಳ್ಳೆಯತನ ಮತ್ತು ಕರುಣೆ ಹೆಚ್ಚಾಗಿರುತ್ತದೆ.

ಈ ವರ್ಷ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಮರ್ಥ್ಯ ಇರುತ್ತದೆ ಮತ್ತು ಸ್ವಲ್ಪ ಹಣ ಉಳಿತಾಯವಾಗಲಿದೆ. ಮಹಿಳೆಯರಿಗೆ ರಾಜಕೀಯವಾಗಿ ಪ್ರಗತಿ, ಉದ್ಯೋಗದಲ್ಲಿ ಬಡ್ತಿ, ಹಾಗೂ ಹೊಸ ಆಲೋಚನೆಗಳಿಗೆ ಮನ್ನಣೆ ಸಿಗಲಿದೆ. ರಿಯಲ್ ಎಸ್ಟೇಟ್, ಕಟ್ಟಡ ವ್ಯಾಪಾರ, ಕಬ್ಬಿಣ ಮತ್ತು ಹಾರ್ಡ್‌ವೇರ್ ವ್ಯಾಪಾರಿಗಳಿಗೆ ಹೆಚ್ಚಿನ ಲಾಭವಿರುತ್ತದೆ. ಶಿಕ್ಷಣ ಕ್ಷೇತ್ರ ಮತ್ತು ವೈದ್ಯಕೀಯ ವೃತ್ತಿಯಲ್ಲಿರುವವರಿಗೆ ಶುಭ ಯೋಗವಿದೆ. ಆದಾಗ್ಯೂ, ವಿವಾಹ ವಿಷಯಗಳಲ್ಲಿ ಸ್ವಲ್ಪ ವಿಳಂಬವಾಗಬಹುದು. ಆರೋಗ್ಯದ ವಿಚಾರದಲ್ಲಿ ಹೆಚ್ಚಿನ ಜಾಗ್ರತೆ ವಹಿಸುವುದು ಉತ್ತಮ. ದುರಾಸೆಗೆ ಹೂಡಿಕೆ ಮಾಡುವುದನ್ನು ತಪ್ಪಿಸಿ ಎಂದು ಗುರೂಜಿ ಎಚ್ಚರಿಸಿದ್ದಾರೆ.

 

ಇದನ್ನೂ ಓದಿ: ಯುಗಾದಿ ಬಳಿಕ 1 ವರ್ಷ ಈ ರಾಶಿಗೆ ಸಾಕಷ್ಟು ಅದೃಷ್ಟ ಕೂಡಿಬರಲಿದೆ

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Follow Us