ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.
ತಾಯಿ ಭುವನೇಶ್ವರಿ ಮತ್ತು ತಾಯಿ ಚಾಮುಂಡೇಶ್ವರಿ ಬಗ್ಗೆ ಬಾನು ಮುಷ್ತಾಕ್ ಭಿನ್ನ ನಿಲುವು ತಳೆದಿದ್ದಾರೆ: ಡಾ ಮಂಜುನಾಥ್
ಚಾಮುಂಡಿ ಬೆಟ್ಟ ಕೇವಲ ಹಿಂದೂಗಳಿಗೆ ಮಾತ್ರ ಸೇರಿದ್ದಲ್ಲ ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ನೀಡಿರುವ ಹೇಳಿಕೆ ಭಾರೀ ವಿವಾದವನ್ನು ಸೃಷ್ಟಿಸಿದೆ. ಅವರ ಹೇಳಿಕೆಯನ್ನು ಬಿಜೆಪಿ ನಾಯಕರು ತೀವ್ರವಾಗಿ ಖಂಡಿಸುತ್ತಿದ್ದಾರೆ. ಅಸಲಿಗೆ ಚಾಮುಂಡಿ ಬೆಟ್ಟ ಯಾರದು ಅಂತ ಸಂಸದ ಡಾ ಸಿಎನ್ ಮಂಜುನಾಥ್ರನ್ನು ಕೇಳಿದಾಗ ಅವರು ಚಾಮುಂಡಿ ಬೆಟ್ಟ ದೇವರಿಗೆ ಸೇರಿದ್ದು ಅಂತ ಉತ್ತರಿಸಿದರು.
- Arun Belly
- Updated on: Aug 30, 2025
- 7:23 pm
ಜಯಂತ್ ಮನೆಯಲ್ಲಿ ಗಾಂಜಾ ಮಾರುತ್ತಾರೆಂದು ನೆರೆಮನೆಯಲ್ಲಿದ್ದ ಮಹಿಳೆಯಿಂದ ನೇರ ಅರೋಪ
ಮಹಾಲಕ್ಷ್ಮಿ ಹೇಳೋದು ನಿಜವಾದರೆ ಪೊಲೀಸರ ನಿಷ್ಕ್ರಿಯತೆ ಮತ್ತು ಉಡಾಫೆ ಗಾಬರಿ ಹುಟ್ಟಿಸುತ್ತದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ರಾಜ್ಯವನ್ನು ಮುಖ್ಯವಾಗಿ ಬೆಂಗಳೂರನ್ನು ಡ್ರಗ್ಸ್ ಮುಕ್ತ ಮಾಡುವ ಪಣತೊಟ್ಟಿದ್ದಾರೆ, ಆದರೆ ನಗರದಲ್ಲಿ ಡ್ರಗ್ಸ್ ಮುಕ್ತವಾಗಿ ಸಿಗುತ್ತಿವೆ. ಈ ಮಹಿಳೆ ಅದರ ಮಾರಾಟದ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರೂ ಅವರು ಅದನ್ನು ನಿರ್ಲಕ್ಷಿಸುತ್ತಾರೆ ಅಂದರೆ ಏನರ್ಥ? ಅವರು ಯಾಕೆ ರೇಡ್ ಮಾಡಲಿಲ್ಲ?
- Arun Belly
- Updated on: Aug 30, 2025
- 6:24 pm
ಕಲಬುರಗಿ ಮರ್ಯಾದಾ ಹತ್ಯೆ: ಸಮಗ್ರ ಮಾಹಿತಿಯನ್ನು ನೀಡಿದ ಪೊಲೀಸ್ ಕಮೀಷನರ್ ಡಾ ಶರಣಪ್ಪ
ಮಗಳು ಅನ್ಯಜಾತಿಯ ಯುವಕನನ್ನು ಮದುವೆಯಾದರೆ, ಉಳಿದ ಇಬ್ಬರು ಹೆಣ್ಣುಮಕ್ಕಳಿಗೆ ವರಗಳು ಸಿಗೋದು ಕಷ್ಟವಾಗುತ್ತದೆ ಎಂಬ ಆತಂಕಕ್ಕೊಳಗಾಗಿದ್ದ ಶಂಕರ್, ಪ್ರೀತಿಯಲ್ಲಿ ಬಿದ್ದಿದ್ದ ಮಗಳನ್ನೇ ಕೊಲ್ಲಲು ನಿರ್ಧರಿಸಿದ್ದ. ಕೊಲೆ ಮಾಡಿದ್ದೂ ಅಲ್ಲದೆ ಶವಸಂಸ್ಕಾರ ನಡೆಸಿ ಸಾಕ್ಷ್ಯ ನಾಶ ಮಾಡಿದ ಆರೋಪಗಳ ಹಿನ್ನೆಲೆಯಲ್ಲಿ ಶಂಕರ್ ಮತ್ತು ಉಳಿದಿಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಕಮೀಷನರ್ ಶರಣಪ್ಪ ಹೇಳಿದರು.
- Arun Belly
- Updated on: Aug 30, 2025
- 5:28 pm
ಸಾಮಾಜಿಕ ಜಾಲತಾಣದಲ್ಲಿ ಸಿದ್ದರಾಮಯ್ಯ ವಿರುದ್ಧ ಅವಹೇಳನಕಾರಿ ಪೋಸ್ಟ್ ಹಾಕಿದ ಅರ್ಚಕನ ವಿರುದ್ಧ ಕೆಪಿಸಿಸಿ ದೂರು
ಸಿದ್ದರಾಮಯ್ಯನವರು ಎರಡನೇ ಬಾರಿಗೆ ಮುಖ್ಯಮಂತ್ರಿಯಾಗಿರುವುದು ಬಿಜೆಪಿ ನಾಯಕರಿಗೆ ಸಹಿಸಿಕೊಳ್ಳಲಾಗುತ್ತಿಲ್ಲ, ಹಾಗಾಗೇ ಕೆಲ ಸಂಘಟನೆಗಳು, ಹೋರಾಟಗಾರೆಂದು ಕರೆಸಿಕೊಳ್ಳುವವರ ಮೂಲಕ ಇಂಥ ಪೋಸ್ಟ್ಗಳನ್ನು ಹಾಕಿಸುತ್ತಾರೆ, ಬಾನು ಮುಷ್ತಾಕ್ ಅವರನ್ನು ದಸರಾ ಉದ್ಘಾಟನೆಗೆ ಆಹ್ವಾನಿಸಿದ ಬಳಿಕ ಸಿದ್ದರಾಮಯ್ಯ ಅವರ ವಿರುದ್ಧ ಟೀಕೆ ಮಾಡುವುದು ಹೆಚ್ಚುತ್ತಿದೆ ಎಂದು ಲಕ್ಷ್ಮಣ ಹೇಳಿದರು.
- Arun Belly
- Updated on: Aug 30, 2025
- 4:24 pm
ಹೇಳಿಕೆಗಳನ್ನು ನೀಡುವ ಮೊದಲು ಪ್ರತಾಪ್ ಸಿಂಹ ಚರಿತ್ರೆಯನ್ನು ಕೊಂಚ ಓದಲಿ: ಹೆಚ್ ವಿಶ್ವನಾಥ್
ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮೌನ ದಿಗಿಲು ಹುಟ್ಟಿಸುತ್ತಿದೆ, ದಸರಾ ಉನ್ನತ ಸಮಿತಿ ಮತ್ತು ಸರ್ಕಾರ ತೆಗೆದುಕೊಂಡಿರುವ ನಿರ್ಣಯ ಅದು, ಟೀಕೆಗಳಿಂದ ತಮ್ಮ ನಿರ್ಧಾರವೇನೂ ಬದಲಾಗಲ್ಲ ಅಂತ ಅವರು ಹೇಳಿ ಈ ವಿವಾದಕ್ಕೆ ಅಂತ್ಯ ಹಾಡಬೇಕು, ಮುಖ್ಯಮಂತ್ರಿಯವರ ಮೌನ ಬೇರೆಯವರು ಹೇಳಿಕೆಗಳನ್ನು ನೀಡಲು ಪ್ರೇರಣೆಯಾಗುತ್ತಿದೆ ಎಂದ ವಿಶ್ವನಾಥ್ ಬೇರೆ ಪಕ್ಷಗಳ ನಾಯಕರು ಜಿದ್ದಿಗೆ ಬಿದ್ದವರಂತೆ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು ಅಂತ ಹೇಳಿದರು.
- Arun Belly
- Updated on: Aug 30, 2025
- 2:53 pm
ಮತ್ತೊಂದು ವರದಕ್ಷಿಣೆ ಕಿರುಕುಳ ಪ್ರಕರಣ, ಮದುವೆಯಾದ ನಾಲ್ಕನೇ ದಿನದಿಂದಲೇ ಹಿಂಸೆ ಶುರು ಎನ್ನುವ ಯುವತಿ
ಪ್ರಜ್ವಲ್ ಶಂಕರ್ನ ತಂದೆ ತಾಯಿ ಇಬ್ಬರೂ ಸರ್ಕಾರೀ ಶಾಲಾ ಶಿಕ್ಷಕರಂತೆ ಮತ್ತು ತನ್ನ ಗಂಡ ಕೆಪಿಎಸ್ಸಿ ಪರೀಕ್ಷೆ ಬರೆದಿದ್ದಾರೆ ಅಂತ ಸೌಮ್ಯ ಹೇಳುತ್ತಾರೆ. ಪೊಲೀಸರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ, ಅತ್ತೆ-ಮಾವ ಮತ್ತು ಗಂಡ ತಮ್ಮ ಪ್ರಭಾವ ಬಳಸಿ ಪೊಲೀಸರು ಕ್ರಮ ತೆಗೆದುಕೊಳ್ಳದಂತೆ ಮಾಡಿದ್ದಾರೆ, ಗಂಡನಿಗೆ ಕೆಲಸವಿಲ್ಲ, ತಾನು ತವರುಮನೆಗೆ ಹೋಗಿ 5 ತಿಂಗಳಾದರೂ ಅವರಿಂದ ಫೋನ್, ಮೆಸೇಜ್ ಇಲ್ಲ ಎಂದು ಸುಪ್ರಿಯ ಹೇಳುತ್ತಾರೆ.
- Arun Belly
- Updated on: Aug 30, 2025
- 2:02 pm
ಶಿವಕುಮಾರ್ರನ್ನು ಪ್ರತ್ಯೇಕಿಸಿಲ್ಲ, ಅವರು ಸಮರ್ಥ ನಾಯಕ ಮತ್ತು ರಾಜಕೀಯ ಜ್ಞಾನ ಚೆನ್ನಾಗಿದೆ: ಪರಮೇಶ್ವರ್
ಪರಮೇಶ್ವರ್ ಉತ್ತರದಿಂದ ಸಮಾಧಾನಗೊಳ್ಳದ ಮಾಧ್ಯಮದವರು ಪುನಃ ಅದೇ ವಿಷಯಕ್ಕೆ ಸಂಬಂಧಿಸಿದ ಪ್ರಶ್ನೆ ಕೇಳಿದಾಗ, ಸಿಡಿಮಿಡಿಗೊಳ್ಳುವ ಅವರು ಬೇರೆ ಏನಾದರೂ ಇದ್ದರೆ ಕೇಳಿ ಅನ್ನುತ್ತಾ ದುರ್ದಾನ ತೆಗೆದುಕೊಂಡವರಂತೆ ಅಲ್ಲಿಂದ ಹೊರಡುತ್ತಾರೆ. ಸಾಮಾನ್ಯವಾಗಿ ಮಾಧ್ಯಮದವರು ಇಕ್ಕಟ್ಟಿನ ಪ್ರಶ್ನೆ ಕೇಳಿದರೂ ಸಮಾಧಾನ ಚಿತ್ತದಿಂದ ಉತ್ತರ ನೀಡುವ ಪರಮೇಶ್ವರ್ ಇವತ್ತು ಪತ್ರಕರ್ತರಿಗೆ ಬೆನ್ನುಹಾಕಿ ಹೋಗಿದ್ದು ಆಶ್ಚರ್ಯ ಹುಟ್ಟಿಸುತ್ತದೆ.
- Arun Belly
- Updated on: Aug 30, 2025
- 12:59 pm
ಮಗಳ ಮರ್ಯಾದಾ ಹತ್ಯೆ ಹೆತ್ತತಂದೆ ನಡೆಸಿದರೂ ಹೆತ್ತಮ್ಮನ ಕಣ್ಣಲ್ಲಿ ಒಂದೇಒಂದು ಹನಿ ನೀರಿಲ್ಲ!
ಫರಹತಾಬಾದ್ ಪೊಲೀಸರು ಸುವೋ ಮೊಟೋ ಕೇಸ್ ದಾಖಲಿಸಿಕೊಂಡು ಶಂಕರ್ ಮತ್ತು ಅವನ ಸಹಚರರನ್ನು ದಸ್ತಗಿರಿ ಮಾಡಿದ್ದಾರೆ. ಅದಿರಲಿ, ಕೊಲೆಯಾದ ಯುವತಿ ತಾಯಿಯ ನಿರುದ್ವಿಗ್ನತೆ, ಸಮಚಿತ್ತ, ಒಂದಿಷ್ಟೂ ನೋವು, ಯಾತನೆ, ದುಃಖವಿಲ್ಲದ ಮಾತು ಆಶ್ಚರ್ಯ ಹುಟ್ಟಿಸುತ್ತದೆ. ಪ್ರೀತಿಸುವುದು ಘೋರ ಅಪರಾಧವಾಗಿಬಿಟ್ಟಿತೇ? ನಮ್ಮ ಮಗಳನ್ನು ನಾವು ಕೊಂದಿದ್ದೇವೆ ಎಂದು ಆಕೆ ನಿರ್ವಿಕಾರ ಭಾವದಿಂದ ಹೇಳುತ್ತಾಳೆ!
- Arun Belly
- Updated on: Aug 30, 2025
- 12:04 pm
ತುಂಬಿ ಹರಿಯುತ್ತಿರುವ ನೇತ್ರಾವತಿ ನದಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್, ಶಾಲೆಗಳಿಗೆ ರಜೆ
ಇವತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಳೆಸುರಿಯುತ್ತಿಲ್ಲ, ಬಿಸಿಲು ಮೂಡಿರುವ ವಾತಾವರಣವಿದ್ದರೂ ಮೀನುಗಾರರು ಸಮುದ್ರಕ್ಕಿಳಿಯದಂತೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ. ಉಳ್ಳಾಲ ಭಾಗದಿಂದ ಅರಬ್ಬೀಸಮುದ್ರ ಕೊಂಚವೇ ದೂರದಲ್ಲಿದೆ ಮತ್ತು ನದಿಗಳ ನೀರು ಹರಿದು ಸಮುದ್ರ ಸೇರುತ್ತದೆ. ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವ ಕಾರಣ ನದಿಪಾತ್ರದ ಕೃಷಿ ಭೂಮಿಗಳಿಗೂ ನೀರು ನುಗ್ಗುತ್ತಿದೆ.
- Arun Belly
- Updated on: Aug 30, 2025
- 11:03 am
ಎಸ್ಐಟಿ ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದೆ, ಅವರ ತನಿಖೆ ವೈಜ್ಞಾನಿಕವಾಗಿದೆ: ಗಿರೀಶ್ ಮಟ್ಟಣ್ಣನವರ್
ನನ್ನನ್ನೊಬ್ಬ ಕ್ರಿಮಿನಲ್ ಅಂತ ಎಸ್ಐಟಿಯವರು ವಿಚಾರಣೆಗೆ ಕರೆಸಿರಲಿಲ್ಲ, ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನಲ್ಲಿ ಒಂದಿಷ್ಟು ಮಾಹಿತಿ ಇದೆ, ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳಬಯಸುತ್ತೇನೆ ಅಂತ ಎಸ್ಐಟಿಗೆ ಪತ್ರ ಬರೆದಿದ್ದೆ, ಅದೇ ಕಾರಣಕ್ಕೆ ಅವರು ಕರೆಸಿದ್ದರು ಎಂದು ಮಟ್ಟಣ್ಣನವರ್ ಹೇಳಿದರು. ಎಸ್ಐಟಿ ಕಚೇರಿ ಮೆಟ್ಟಿಲು ಹತ್ತುವಾಗ ಎದೆ ಡವಡವ ಹೊಡೆದುಕೊಳ್ಳಲಾರಂಭಿಸಿತು ಅಂತ ಅವರು ಯಾಕೆ ಹೇಳಿದರೆಂದು ಗೊತ್ತಾಗಲಿಲ್ಲ.
- Arun Belly
- Updated on: Aug 29, 2025
- 7:23 pm
ಗಣೇಶನಿಗೆ 108 ಕೆಜಿ ತೂಕದ ಲಡ್ಡು ಸಮರ್ಪಿಸಿದ ಎನ್ಟಿಐ ಸೆಕೆಂಡ್ ಫೇಸ್ ಬಡಾವಣೆಯ ನಿವಾಸಿಗಳು
ಗಣಪನ ವಿಸರ್ಜನೆ ನಡೆಯುವ ರವಿವಾರದಂದು ಇಲ್ಲಿ ಅನೇಕ ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ ಹಾಗೂ ಅದೇ ದಿನ ಬಹುಮಾನ ವಿತರಣೆ ಕೂಡ ನಡೆಯಲಿದೆ. ಶನಿವಾರ ಕನ್ನಡ ಖ್ಯಾತ ಸ್ಟ್ಯಾಂಡ್ ಅಪ್ ಕಮೇಡಿಯನ್ ಸುಧಾ ಬರಗೂರು ಹಾಸ್ಯ ಸಂಜೆಯ ಮೂಲಕ ಎಲ್ಲರನ್ನು ರಂಜಿಸಲಿದ್ದಾರೆ.
- Arun Belly
- Updated on: Aug 29, 2025
- 6:25 pm
ಬಾನು ಮುಷ್ತಾಕ್ ತಮ್ಮ 2023ರ ಹೇಳಿಕೆಗೆ ಸ್ಪಷ್ಟನೆ ನೀಡಲಿ ಅಂತ ಹೇಳಿ ಗೊಂದಲ ಮೂಡಿಸಿದ ಯದುವೀರ್
ಮುಸ್ಲಿಂ ಧರ್ಮದ ಆಚಾರ ವಿಚಾರಗಳ ಬಗ್ಗೆ ತಾನು ಮಾತಾಡುವುದಿಲ್ಲ, ಅದರೆ ಬಾನು ಮುಷ್ತಾಕ್ ಅವರು ಕನ್ನಡ ತಾಯಿ ಭುವನೇಶ್ವರಿ ಬಗ್ಗೆ ವೇದಿಕೆಯೊಂದರ ಮೇಲೆ ಮಾತಾಡಿದ್ದು ಹಿಂದೂಗಳ ಸೆಂಟಿಮೆಂಟ್ಸ್ಗೆ ಧಕ್ಕೆಯಾಗಿದೆ, ಅದನ್ನು ಅವರು ಅರ್ಥಮಾಡಿಕೊಳ್ಳಬೇಕು, ಪಕ್ಷದ ನಿಲುವು ಮತ್ತು ತನ್ನ ನಿಲುವು ಒಂದೇ ಆಗಿದೆ, ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂದು ಯದುವೀರ್ ಹೇಳಿದರು.
- Arun Belly
- Updated on: Aug 29, 2025
- 5:26 pm