AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮತ್ತೊಂದು ವರದಕ್ಷಿಣೆ ಕಿರುಕುಳ ಪ್ರಕರಣ, ಮದುವೆಯಾದ ನಾಲ್ಕನೇ ದಿನದಿಂದಲೇ ಹಿಂಸೆ ಶುರು ಎನ್ನುವ ಯುವತಿ

ಮತ್ತೊಂದು ವರದಕ್ಷಿಣೆ ಕಿರುಕುಳ ಪ್ರಕರಣ, ಮದುವೆಯಾದ ನಾಲ್ಕನೇ ದಿನದಿಂದಲೇ ಹಿಂಸೆ ಶುರು ಎನ್ನುವ ಯುವತಿ

ಅರುಣ್​ ಕುಮಾರ್​ ಬೆಳ್ಳಿ
|

Updated on: Aug 30, 2025 | 2:02 PM

Share

ಪ್ರಜ್ವಲ್ ಶಂಕರ್​ನ ತಂದೆ ತಾಯಿ ಇಬ್ಬರೂ ಸರ್ಕಾರೀ ಶಾಲಾ ಶಿಕ್ಷಕರಂತೆ ಮತ್ತು ತನ್ನ ಗಂಡ ಕೆಪಿಎಸ್​ಸಿ ಪರೀಕ್ಷೆ ಬರೆದಿದ್ದಾರೆ ಅಂತ ಸೌಮ್ಯ ಹೇಳುತ್ತಾರೆ. ಪೊಲೀಸರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ, ಅತ್ತೆ-ಮಾವ ಮತ್ತು ಗಂಡ ತಮ್ಮ ಪ್ರಭಾವ ಬಳಸಿ ಪೊಲೀಸರು ಕ್ರಮ ತೆಗೆದುಕೊಳ್ಳದಂತೆ ಮಾಡಿದ್ದಾರೆ, ಗಂಡನಿಗೆ ಕೆಲಸವಿಲ್ಲ, ತಾನು ತವರುಮನೆಗೆ ಹೋಗಿ 5 ತಿಂಗಳಾದರೂ ಅವರಿಂದ ಫೋನ್, ಮೆಸೇಜ್ ಇಲ್ಲ ಎಂದು ಸುಪ್ರಿಯ ಹೇಳುತ್ತಾರೆ.

ತುಮಕೂರು, ಆಗಸ್ಟ್ 30: ಈ ಯುವತಿ ಹೇಳೋ ಮಾತುಗಳೆಲ್ಲ ನಿಜವಾಗಿದ್ದರೆ ಇದು ಮತ್ತೊಂದು ವರದಕ್ಷಿಣೆ ಕಿರುಕುಳದ ಕತೆ ಮಾರಾಯ್ರೇ. ತುಮಕೂರು ನಗರದಲ್ಲಿರುವ ಗಂಡ ಪ್ರಜ್ವಲ್ ಶಂಕರ್ ಮನೆ ಮುಂದೆ ಸುಪ್ರಿಯರಾಣಿ (Supriya Rani) ಹೆಸರಿನ ಯುವತಿ ಕೂತು ನ್ಯಾಯ ಬೇಕು ಅಂತ ಪ್ರತಿಭಟನೆ ನಡೆಸುತ್ತಿದ್ದಾರೆ. 8 ತಿಂಗಳ ಹಿಂದೆ ಮದುವೆಯಾದ ಇವರಿಗೆ ಗಂಡನ ಮನೆಗೆ ಬಂದ ನಾಲ್ಕನೇ ದಿನದಿಂದಲೇ ವರದಕ್ಷಿಣೆ ಕಿರುಕುಳ ಶುರುವಾಗಿದೆ. ಒಂದು ಚಿಕ್ಕ ಹೋಟೆಲ್ ಇಟ್ಟುಕೊಂಡಿರುವ ಸುಪ್ರಿಯ ತಂದೆ-ತಾಯಿ $ 20 ಲಕ್ಷ ಖರ್ಚು ಮಾಡಿ ಮಗಳ ನಿಶ್ಚಿತಾರ್ಥ ಮಾಡಿದ್ದಾರೆ ಮತ್ತು ಮದುವೆಯ ಸಮಯದಲ್ಲಿ 130 ಗ್ರಾಂ ಚಿನ್ನ ಹಾಗೂ 2 ಕೆಜಿ ಬೆಳ್ಳಿಯನ್ನು ನೀಡಿದ್ದಾರಂತೆ. ಗಂಡ ತನ್ನನ್ನು ಬೇಡ ಅನ್ನುತ್ತಿರುವುದರಿಂದ ತನಗೆ ಸೇರಿದ ಒಡವೆ, ಬೇರೆ ವಸ್ತುಗಳು ಅವರ ಮನೆಯಲ್ಲೇ ಇವೆ, ವಾಪಸ್ಸು ಕೊಡಲಿ ಎಂದು ಸುಪ್ರಿಯ ಧರಣಿಗೆ ಕೂತಿದ್ದಾರೆ.

ಇದನ್ನೂ ಓದಿ:   ಧರ್ಮಸ್ಥಳ ಪಿಎಸ್​ಐ ಕಿಶೋರ್ ವಿರುದ್ಧ ಪತ್ನಿಯಿಂದ ವರದಕ್ಷಿಣೆ ಕಿರುಕುಳ ಆರೋಪ, ಬೆಂಗಳೂರಲ್ಲಿ ದೂರು

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
Arun Belly
Arun Belly

ಹುಟ್ಟೂರು ಯಾದಗಿರಿ ಜಿಲ್ಲೆಯ ಗುರುಮಠಕಲ್. ಓದಿದ್ದು ಬಿಎಸ್ಸಿಯಾದರೂ ಮೆಡಿಕಲ್ ರಿಪ್ರಸೆಂಟೇಟಿವ್ ಆಗಿ ಕೆಲಸ ಮಾಡಿಕೊಂಡಿದ್ದ ನನ್ನನ್ನು ಖ್ಯಾತ ಪತ್ರಕರ್ತ ದಿವಂಗತ ರವಿ ಬೆಳಗೆರೆಯವರು ಪತ್ರಿಕೋದ್ಯಮಕ್ಕೆ ಎಳೆತಂದರು. ಮೊದಲು ಅವರ ಓ ಮನಸೇ ಪಾಕ್ಷಿಕದಲ್ಲಿ ಉಪ ಸಂಪಾದಕನಾಗಿ ಕೆಲಸ ಮಾಡಿದ ಬಳಿಕ ಲಂಕೇಶ್ ಪತ್ರಿಕೆ (ಸಹಾಯಕ ಸಂಪಾದಕ), ದುನಿಯಾ (ಕಾರ್ಯನಿರ್ವಾಹಕ ಸಂಪಾದಕ) ಮತ್ತು ಕ್ರಿಕೆಟ್ ಪಾಕ್ಷಿಕ ಪತ್ರಿಕೆಯ ಸಂಪಾದಕನಾಗಿ ಕೆಲಸ ಮಾಡಿದೆ. 2012 ರಲ್ಲಿ ಟಿವಿ9 ಸಂಸ್ಥೆಯ ಇಂಗ್ಲಿಷ್ ಚ್ಯಾನೆಲ್ ನಲ್ಲಿ ಸಹಾಯಕ ಸಂಪಾದಕನಾಗಿ ಸೇರಿ 8 ವರ್ಷ ದುಡಿದ ಬಳಿಕ 2020 ರಿಂದ ಟಿವಿ9 ಕನ್ನಡ ಡಿಜಿಟಲ್ ಗೆ ಹಿರಿಯ ಉಪ ಸಂಪಾದಕನಾಗಿ (ವಿಡಿಯೋ ಸುದ್ದಿ ವಿಭಾಗ) ಕಾರ್ಯನಿರ್ವಹಿಸುತ್ತಿರುವೆ.

Read More