AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಧರ್ಮಸ್ಥಳ ಕೇಸ್​ ಗೆ ಟ್ವಿಸ್ಟ್: ದೆಹಲಿ ನೋಡಿತ್ತು ಚಿನ್ನಯ್ಯ ತಂದಿದ್ದ ಬುರುಡೆ, ದಿಲ್ಲಿ ಗ್ಯಾಂಗ್ ಹೆಸರು ಬಿಚ್ಚಿಟ್ಟ ಜಯಂತ್

ಧರ್ಮಸ್ಥಳ ಕೇಸ್​ ಗೆ ಟ್ವಿಸ್ಟ್: ದೆಹಲಿ ನೋಡಿತ್ತು ಚಿನ್ನಯ್ಯ ತಂದಿದ್ದ ಬುರುಡೆ, ದಿಲ್ಲಿ ಗ್ಯಾಂಗ್ ಹೆಸರು ಬಿಚ್ಚಿಟ್ಟ ಜಯಂತ್

TV9 Web
| Updated By: ರಮೇಶ್ ಬಿ. ಜವಳಗೇರಾ|

Updated on: Aug 30, 2025 | 4:28 PM

Share

ಧರ್ಮಸ್ಥಳದಲ್ಲಿ (Dharmasthala) ನೂರಾರು ಶವಗಳನ್ನು ಹೂತಿಟ್ಟಿರುವ ಆರೋಪ ಮಾಡಿದ್ದ ಮಾಸ್ಕ್​ ಮ್ಯಾನ್ ಸಿ.ಎನ್. ಚಿನ್ನಯ್ಯನನ್ನು (Chinnayya) ಎಸ್​ಐಟಿ ಅಧಿಕಾರಿಗಳು (SIT Officers) ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಇದೀಗ ಈ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಚಿನ್ನಯ್ಯ ಧರ್ಮಸ್ಥಳ ಪೊಲೀಸ್ ಠಾಣೆಗೆ ಸಲ್ಲಿಸಿದ್ದ ಮಾನವ ಬುರುಡೆಯು ಆತನಿಗೆ ಸಂಕಷ್ಟ ತಂದೊಡ್ಡಿದೆ. ಚಿನ್ನಯ್ಯ ತಂದಿದ್ದ ಬುರುಡೆ ದೆಹಲಿಯವರೆಗೂ ಹೋಗಿದ್ದು, ಅಲ್ಲಿ ಬುರುಡೆ ಗ್ಯಾಂಗ್ ದೊಡ್ಡ ವ್ಯಕ್ತಿಯೋರ್ವರನ್ನು ಭೇಟಿ ಮಾಡಿದೆ ಎನ್ನುವ ಅಂತೆ ಕಂತೆ ಸುದ್ದಿಹರಿದಾಡಿತ್ತು. ಆದ್ರೆ, ಇದೀಗ ಇದು ಸತ್ಯ ಎನ್ನುವುದು ಬಯಲಾಗಿದೆ. ಈ ಸಂಬಂಧ ಆ ಬುರುಡೆ ಗ್ಯಾಂಗ್​​ ನಲ್ಲಿದ್ದ ಜಯಂತ್ ಸತ್ಯ ಒಪ್ಪಿಕೊಂಡಿದ್ದಾರೆ.

ಮಂಗಳೂರು, (ಆಗಸ್ಟ್ 30): ಧರ್ಮಸ್ಥಳದಲ್ಲಿ (Dharmasthala) ನೂರಾರು ಶವಗಳನ್ನು ಹೂತಿಟ್ಟಿರುವ ಆರೋಪ ಮಾಡಿದ್ದ ಮಾಸ್ಕ್​ ಮ್ಯಾನ್ ಸಿ.ಎನ್. ಚಿನ್ನಯ್ಯನನ್ನು (Chinnayya) ಎಸ್​ಐಟಿ ಅಧಿಕಾರಿಗಳು (SIT Officers) ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ. ಇದೀಗ ಈ ಪ್ರಕರಣ ಹೊಸ ತಿರುವು ಪಡೆದುಕೊಂಡಿದ್ದು, ಚಿನ್ನಯ್ಯ ಧರ್ಮಸ್ಥಳ ಪೊಲೀಸ್ ಠಾಣೆಗೆ ಸಲ್ಲಿಸಿದ್ದ ಮಾನವ ಬುರುಡೆಯು ಆತನಿಗೆ ಸಂಕಷ್ಟ ತಂದೊಡ್ಡಿದೆ. ಚಿನ್ನಯ್ಯ ತಂದಿದ್ದ ಬುರುಡೆ ದೆಹಲಿಯವರೆಗೂ ಹೋಗಿದ್ದು, ಅಲ್ಲಿ ಬುರುಡೆ ಗ್ಯಾಂಗ್ ದೊಡ್ಡ ವ್ಯಕ್ತಿಯೋರ್ವರನ್ನು ಭೇಟಿ ಮಾಡಿದೆ ಎನ್ನುವ ಅಂತೆ ಕಂತೆ ಸುದ್ದಿಹರಿದಾಡಿತ್ತು. ಆದ್ರೆ, ಇದೀಗ ಇದು ಸತ್ಯ ಎನ್ನುವುದು ಬಯಲಾಗಿದೆ. ಈ ಸಂಬಂಧ ಆ ಬುರುಡೆ ಗ್ಯಾಂಗ್​​ ನಲ್ಲಿದ್ದ ಜಯಂತ್ ಸತ್ಯ ಒಪ್ಪಿಕೊಂಡಿದ್ದಾರೆ.

ಈ ಬಗ್ಗೆ ಟಿವಿ9 ಜೊತೆ ಮಾತನಾಡಿದ ದೂರುದಾರ ಜಯಂತ್, ಮಾಸ್ಕ್ ಮ್ಯಾನ್ ಚಿನ್ನಯ್ಯ ದೂರು ನೀಡುವುದಕ್ಕೂ ಮುನ್ನ ದೆಹಲಿಗೆ ಕರೆದುಕೊಂಡು ಹೋಗಿದ್ದೇವು ಎಂದು ಮಾಹಿತಿ ನೀಡಿದ್ದಾರೆ. ಚಿನ್ನಯ್ಯ 3 ದಿನ ನನ್ನ ಬೆಂಗಳೂರಿನ ಮನೆಯಲ್ಲಿ ಇದ್ದಿದ್ದು ನಿಜ. ನಾವು ನಮ್ಮ ಮನೆಯವರೊಂದಿಗೆ ಊಟ ಹಾಕಿದ್ದೇವೆ.ಪ್ರಕರಣ ಇಲ್ಲಿವರೆಗೆ ಬರುತ್ತೆ ಎಂದು ನನಗೆ ಗೊತ್ತಿದ್ದಿಲ್ಲ. ದೆಹಲಿಗೆ ಬುರಡೆ ತೆಗೆದುಕೊಂಡು ಹೋಗಿದ್ದು ನಿಜ . ನಾವು ನಾಲ್ಕು ಜನರು ಕಾರಿನಲ್ಲಿ ಬೆಂಗಳೂರಿನಿಂದ ದೆಹಲಿಗೆ ಹೋಗಿದ್ದೆವು. ನಾನು, ಚಿನ್ನಯ್ಯ, ಸುಜಾತಾ,​ ಮಟ್ಟಣ್ಣನವರ್ ದೆಹಲಿಗೆ ಹೋಗಿದ್ದೆವು. ದೆಹಲಿಯಿಂದ ಮಂಗಳೂರಿಗೆ ಬುರುಡೆ ತಂದಿದ್ದೇವೆ. ಒಂದು ವರ್ಷದ ಹಿಂದೆ ಚಿನ್ನಯ್ಯ ಜೊತೆಗೆ ಇದ್ದವರೆಲ್ಲ ಓರ್ವ ಸ್ವಾಮೀಜಿಯನ್ನು ಭೇಟಿ ಆಗಿದ್ದಾರೆ. ಯಾವ ಮಠ, ಯಾವ ಸ್ವಾಮೀಜಿ ಎಂದು ಚಿನ್ನಯ್ಯ ಜತೆಗಿದ್ದವರೇ ಹೇಳಲಿ. ಈ ಪ್ರಕರಣದಲ್ಲಿ ನಾನು ಯಾವುದೇ ಶಿಕ್ಷೆಯನ್ನು ಅನುಭವಿಸಲು ಸಿದ್ಧ ಎಂದು ದೂರುದಾರ ಜಯಂತ್ ಸ್ಫೋಟಕ ಅಂಶವನ್ನು ಬಿಚ್ಚಿಟ್ಟಿದ್ದಾನೆ.