AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೌದೆ ಒಲೆ ಬಳಸುವ ಮುನ್ನ ಹುಷಾರ್​​: ಇವು ಕ್ಯಾನ್ಸರ್​​ ತವರು ಮನೆ ಎಂದ ಡಾಕ್ಟರ್ಸ್​​!

ಸೌದೆ ಒಲೆ ಬಳಸುವ ಮುನ್ನ ಹುಷಾರ್​​: ಇವು ಕ್ಯಾನ್ಸರ್​​ ತವರು ಮನೆ ಎಂದ ಡಾಕ್ಟರ್ಸ್​​!

Vinay Kashappanavar
| Edited By: |

Updated on:Mar 16, 2026 | 12:35 PM

Share

ಮಧ್ಯಪ್ರಾಚ್ಯದಲ್ಲಿನ ಯುದ್ಧದ ಪರಿಣಾಮವಅಗಿ ಎಲ್​​ಪಿಜಿ ಸಿಲಿಂಡರ್​​ಗಳ ಅಭಾವ ತೀವ್ರವಾಗಿ ಕಾಡಿದೆ. ಹೀಗಾಗಿ ಆಹಾರ ತಯಾರಿಕೆ ನಿಟ್ಟಿನಲ್ಲಿ ಅನಿವಾರ್ಯವಾಗಿ ಹಲವೆಡೆ ಜನ ಸಾಮಾನ್ಯರು, ಹೋಟೆಲ್​​ಗಳು ಸಾಂಪ್ರದಾಯಿಕ ಕಟ್ಟಿಗೆ ಒಲೆಯ ಮೊರೆ ಹೋಗಿವೆ. ಆದ್ರೆ ಕಟ್ಟಿಗೆ ಉರಿಸಿದಾಗ ಹೊರಬರುವ ಹೊಗೆ ಅನೇಕ ಮಾರಕ ರೋಗಗಳಿಗೆ ಕಾರಣವಾಗಬಹುದೆಂಬ ಎಚ್ಚರಿಕೆಯನ್ನು ವೈದ್ಯರು ನೀಡಿದ್ದಾರೆ. 

ಬೆಂಗಳೂರು, ಮಾರ್ಚ್​​ 16: ಎಲ್​​ಪಿಜಿ ಸಿಲಿಂಡರ್​​ಗಳ ಅಭಾವದಿಂದ ಜನರೀಗ ಮತ್ತೆ ಸಾಂಪ್ರದಾಯಿಕ ಸೌದೆ ಒಲೆಗಳತ್ತ ಮುಖ ಮಾಡುತ್ತಿದ್ದಾರೆ. ಆದರೆ ವೈದ್ಯರು ಈ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು, ಕ್ಯಾನ್ಸರ್, ಟಿಬಿ, ಅಸ್ತಮಾ ಸೇರಿದಂತೆ ನೂರಾರು ರೋಗಗಳಿಗೆ ಇವೇ ತವರುಮನೆ ಎಂದು ಎಚ್ಚರಿಸಿದ್ದಾರೆ. ಸೌದೆಯಿಂದ ಹೊರ ಬರುವ ಹೊಗೆ ಲಂಗ್ಸ್ ಕ್ಯಾನ್ಸರ್, ಟಿಬಿ, ಬ್ರೆಸ್ಟ್ ಕ್ಯಾನ್ಸರ್, ಶ್ವಾಸಕೋಶದ ಕ್ಯಾನ್ಸರ್​​ಗೆ ಕಾರಣವಾಗುತ್ತದೆ. ಈ ಹೊಗೆಯಲ್ಲಿ ಬೆಂಜೀನ್ ಮತ್ತು ಪಾಲಿ ಸೈಕ್ಲಿಕ್ ಆರೋಮ್ಯಾಟಿಕ್ ಹೈಡ್ರೋಕಾರ್ಬನ್​​ಗಳು ಹೊರ ಹೊಮ್ಮುತ್ತವೆ ಎಂದು ತಿಳಿಸಿದ್ದಾರೆ. ಆದರೆ ಇವು ಅಲ್ಪ ಕಾಲದಲ್ಲಿ ದೊಡ್ಡ ಪರಿಣಾಮ ಬೀರಲ್ಲ. ಬದಲಾಗಿ ದೀರ್ಘ ಕಾಲದಲ್ಲಿ ಸೌದೆ ಒಲೆಗಳ ಬಳಕೆ ಮಾರಕ ರೋಗಗಳಿಗೆ ಕಾರಣವಾಗಬಹುದು. ಹೀಗಾಗಿ ಅಡುಗೆ ಮಾಡಲು ಸಾಧ್ಯವಾದಷ್ಟು ಒಣ ಸೌದೆ ಬಳಸಿ, ಹಸಿ ಸೌದೆಗಳ ಬಳಕೆ ಬೇಡ. ಇದರಿಂದ ಸಂಭಾವ್ಯ ಅಪಾಯವನ್ನು ಕಡಿಮೆ ಮಾಡಬಹುದು ಎಂದು ಸಲಹೆ ನೀಡಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Published on: Mar 16, 2026 12:31 PM
Follow Us