AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Cancer day: ಕ್ಯಾನ್ಸರ್ ರೋಗಕ್ಕೆ ಯಾವ ಅಂಶಗಳು ಕಾರಣವಾಗುತ್ತೆ ಗೊತ್ತಾ?

ಫೆಬ್ರವರಿ 4 ರಂದು ವಿಶ್ವದಾದ್ಯಂತ ವಿಶ್ವ ಕ್ಯಾನ್ಸರ್ ದಿನವನ್ನು ಆಚರಿಸಲಾಗುತ್ತಿದೆ. ಜನರಲ್ಲಿ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವುದು ಇದರ ಉದ್ದೇಶವಾಗಿದೆ. ಅಷ್ಟು ಮಾತ್ರವಲ್ಲ, ಜನರಲ್ಲಿ ಈ ಬಗ್ಗೆ ಇರುವ ತಪ್ಪು ಕಲ್ಪನೆಗಳನ್ನು ತೆಗೆದು ಹಾಕಿ, ಕಾಯಿಲೆಗೆ ಯಾವ ರೀತಿಯ ಚಿಕಿತ್ಸೆಗಳು ಸಿಗುತ್ತವೆ ಎಂಬುದರ ಬಗ್ಗೆ ಅರಿವು ಮೂಡಿಸುವುದು ಮುಖ್ಯವಾಗುತ್ತದೆ. ಕ್ಯಾನ್ಸರ್ ರೋಗಕ್ಕೆ ಹಲವು ಅಂಶಗಳು ಕಾರಣವಾಗಿದ್ದರೂ ಕೂಡ ಅದನ್ನು ತಿಳಿದು ಈ ಮಹಾಮಾರಿ ಕಾಯಿಲೆಯನ್ನು ತಡೆಗಟ್ಟುವ ಬಗ್ಗೆ ತಿಳಿಯುವುದು ಈ ಸಮಯದಲ್ಲಿ ಬಹಳ ಮಹತ್ವದ್ದಾಗಿದೆ.

World Cancer day: ಕ್ಯಾನ್ಸರ್ ರೋಗಕ್ಕೆ ಯಾವ ಅಂಶಗಳು ಕಾರಣವಾಗುತ್ತೆ ಗೊತ್ತಾ?
World Cancer DayImage Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on:Feb 03, 2026 | 6:32 PM

Share

ಕ್ಯಾನ್ಸರ್ (Cancer) ಎಂಬ ಮಹಾಮಾರಿ ದೇಶಾದ್ಯಂತ ಹರಡಿದೆ. ಗಾಳಿಯಿಂದ ನೀರು, ಆಹಾರ ಎಲ್ಲವೂ ಕಲುಷಿತವಾಗಿದ್ದು, ಕ್ಯಾನ್ಸರ್‌ಗೆ ಕಾರಣವಾಗುತ್ತಿದೆ. ಈ ರೋಗಕ್ಕೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡದಿದ್ದರೆ, ಅದು ರೋಗಿಯ ಜೀವಕ್ಕೆ ಅಪಾಯಕಾರಿಯಾಗಬಲ್ಲದು ಎಂಬುದು ತಿಳಿದ ವಿಚಾರ. ಅದಕ್ಕಾಗಿಯೇ ಈ ಕಾಯಿಲೆಯ ಬಗ್ಗೆ ಜಾಗೃತಿ ಮೂಡಿಸಲು ವಿಶ್ವ ಕ್ಯಾನ್ಸರ್ ದಿನವನ್ನು ಪ್ರತಿ ವರ್ಷ ಫೆಬ್ರವರಿ 4 ರಂದು ಆಚರಿಸಲಾಗುತ್ತದೆ. ಯೂನಿಯನ್ ಫಾರ್ ಇಂಟರ್ನ್ಯಾಷನಲ್ ಕ್ಯಾನ್ಸರ್ ಕಂಟ್ರೋಲ್ (UICC) ನೇತೃತ್ವದಲ್ಲಿ, ಜಾಗತಿಕ ಕ್ಯಾನ್ಸರ್ ಪ್ರಕರಣಗಳನ್ನು ಕಡಿಮೆ ಮಾಡಲು ಮತ್ತು ರೋಗಿಗಳಿಗೆ ಬೆಂಬಲ ನೀಡಲು ಈ ದಿನದಂದು ಜಾಗತಿಕ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

ವಿಶ್ವ ಕ್ಯಾನ್ಸರ್ ದಿನದ ಇತಿಹಾಸ

ಸಾಮಾನ್ಯವಾಗಿ ಈ ದಿನವನ್ನು ಪ್ರತಿ ವರ್ಷ ಫೆಬ್ರವರಿ 4 ರಂದು ಆಚರಿಕೊಂಡು ಬರಲಾಗುತ್ತಿದೆ. 2000 ಫೆಬ್ರವರಿ 4 ರಂದು ವಿಶ್ವ ಶೃಂಗಸಭೆಯಲ್ಲಿ ವಿಶ್ವ ಕ್ಯಾನ್ಸರ್ ದಿನವು ಅಸ್ತಿತ್ವಕ್ಕೆ ಬಂದಿತು. ಪ್ಯಾರಿಸ್ ನಲ್ಲಿ ನಡೆದ ಶೃಂಗಸಭೆಯಲ್ಲಿ ಯುನಿಯನ್ ಫಾರ್ ಇಂಟರ್ ನ್ಯಾಷನಲ್ ಕ್ಯಾನ್ಸರ್ ಕಂಟ್ರೋಲ್ (ಯುಐಸಿ) ಮೂಲಕ ವಿಶ್ವ ಕ್ಯಾನ್ಸರ್​ ದಿನ ಆಚರಣೆಯನ್ನು ಜಾರಿಗೆ ತರಲಾಯಿತು. ಈ ದಿನದ ಆಚರಣೆ ರೋಗದ ಬಗ್ಗೆ ಜಾಗೃತಿ ಮೂಡಿಸಿ, ಅದನ್ನು ಸರಿಯಾದ ಸಮಯದಲ್ಲಿ ಪತ್ತೆ ಹಚ್ಚಿ, ತಡೆಗಟ್ಟುವ ಕ್ರಮಗಳ ಬಗ್ಗೆ ತಿಳಿದುಕೊಳ್ಳುವ ಉದ್ದೇಶವನ್ನು ಹೊಂದಿದೆ.

ಇದನ್ನೂ ಓದಿ: World Leprosy Day 2026: ಜನವರಿ 30 ರಂದೇ ವಿಶ್ವ ಕುಷ್ಠ ರೋಗ ದಿನವನ್ನು ಆಚರಿಸುವುದು ಏಕೆ?

ಕ್ಯಾನ್ಸರ್ ರೋಗಕ್ಕೆ ಈ ಅಂಶಗಳು ಕಾರಣವಾಗಬಹುದು:

ಮಹಾಮಾರಿ ಕ್ಯಾನ್ಸರ್ ರೋಗ ಬರಲು ಇಂತಹದ್ದೆ ನಿರ್ದಿಷ್ಟವಾದ ಕಾರಣವಿಲ್ಲವಾದರೂ ಕೂಡ ಬದಲಾಗುತ್ತಿರುವ ನಮ್ಮ ಜೀವನಶೈಲಿ, ಆಹಾರ ಪದ್ಧತಿ ಇದಕ್ಕೆ ಕಾರಣವಾಗಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ತಂಬಾಕಿನ ಸೇವನೆ, ಧೂಮಪಾನ, ಮದ್ಯಪಾನ, ಆಹಾರಪದ್ಧತಿ, ಎ ಹಾಗೂ ಸಿ ವಿಟಮಿನ್‌ ಕೊರತೆ, ಹಾರ್ಮೋನು ಅಸಮತೋಲನ ರಾಸಾಯನಿಕ ಸೌಂದರ್ಯ ವರ್ಧಕಗಳ ಅತಿಯಾದ ಬಳಕೆ, ಇದೆಲ್ಲದರ ಜೊತೆಗೆ ಅನುವಂಶಿಕವಾಗಿ ಕ್ಯಾನ್ಸರ್ ರೋಗ ಬರುವ ಸಾಧ್ಯತೆಯೂ ಹೆಚ್ಚು ಎನ್ನಲಾಗುತ್ತದೆ. ಆದರೆ ಪ್ರಾರಂಭದಲ್ಲಿ ಕ್ಯಾನ್ಸರ್ ರೋಗ ಲಕ್ಷಣಗಳನ್ನು ಪತ್ತೆ ಹಚ್ಚಿ, ಸರಿಯಾದ ಚಿಕಿತ್ಸೆ ನೀಡಿದರೆ ಮಹಾಮಾರಿ ರೋಗದಿಂದ ಸ್ವಲ್ಪ ಮಟ್ಟಿಗೆ ಪಾರಾಗಬಹುದು. ಹಾಗಾಗಿ ಇವುಗಳ ಬಗ್ಗೆ ತಿಳಿದು, ಆರಂಭದಲ್ಲಿಯೇ ಲಕ್ಷಣಗಳನ್ನು ಪತ್ತೆ ಮಾಡಿ ಇದರಿಂದ ಪಾರಾಗುವುದು ಉತ್ತಮ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:32 pm, Tue, 3 February 26

ರೆಸಾರ್ಟ್​​ಗಾಗಿ ವೈದ್ಯನಿಂದ 2 ಎಕ್ರೆ ಪ್ರದೇಶದಲ್ಲಿದ್ದ ಮರಗಳ ಮಾರಣಹೋಮ!
ರೆಸಾರ್ಟ್​​ಗಾಗಿ ವೈದ್ಯನಿಂದ 2 ಎಕ್ರೆ ಪ್ರದೇಶದಲ್ಲಿದ್ದ ಮರಗಳ ಮಾರಣಹೋಮ!
ಮಹಿಳೆ ಅಕ್ರಮ ಸಂಬಂಧ ಪ್ರಕರಣದ ಬಗ್ಗೆ ಬಿಗ್​​​ ಅಪ್ಡೇಟ್​​ ನೀಡಿದ ಪೊಲೀಸರು
ಮಹಿಳೆ ಅಕ್ರಮ ಸಂಬಂಧ ಪ್ರಕರಣದ ಬಗ್ಗೆ ಬಿಗ್​​​ ಅಪ್ಡೇಟ್​​ ನೀಡಿದ ಪೊಲೀಸರು
ತಾಯಿ ಜತೆ ಓಡಿ ಹೋಗಿದ್ದವನನ್ನ ಕೊಲೆಗೈದ ಪುತ್ರ, ಶವದ ಮೇಲೆ ಕಾಲಿಟ್ಟು ಕರೆ
ತಾಯಿ ಜತೆ ಓಡಿ ಹೋಗಿದ್ದವನನ್ನ ಕೊಲೆಗೈದ ಪುತ್ರ, ಶವದ ಮೇಲೆ ಕಾಲಿಟ್ಟು ಕರೆ
ಸೈಟ್ ವಿವಾದ: ಯಶ್ ತಾಯಿ ಪುಷ್ಪಾ ಮೇಲೆ ಮಾನನಷ್ಟ ಕೇಸ್ ಹಾಕಲು ಪಿಡಿಒ ನಿರ್ಧಾರ
ಸೈಟ್ ವಿವಾದ: ಯಶ್ ತಾಯಿ ಪುಷ್ಪಾ ಮೇಲೆ ಮಾನನಷ್ಟ ಕೇಸ್ ಹಾಕಲು ಪಿಡಿಒ ನಿರ್ಧಾರ
ಸಾಗರ ಮಾರಿಕಾಂಬೆ ದರ್ಶನದ ವೇಳೆ ಕುಸಿದು ಬಿದ್ದ ಕಾಗೋಡು ತಿಮ್ಮಪ್ಪ
ಸಾಗರ ಮಾರಿಕಾಂಬೆ ದರ್ಶನದ ವೇಳೆ ಕುಸಿದು ಬಿದ್ದ ಕಾಗೋಡು ತಿಮ್ಮಪ್ಪ
ಐತಿಹಾಸಿಕ ದೇವರ ನಕ್ಲೇಸ್ ಕದ್ದುಕೊಂಡು ಹೋದ್ರಾ ಮುಜರಾಯಿ ಇಲಾಖೆ ಅಧಿಕಾರಿ?
ಐತಿಹಾಸಿಕ ದೇವರ ನಕ್ಲೇಸ್ ಕದ್ದುಕೊಂಡು ಹೋದ್ರಾ ಮುಜರಾಯಿ ಇಲಾಖೆ ಅಧಿಕಾರಿ?
ಪಾಕ್ ಸ್ಪಿನ್ನರ್​ನ ಬೌಲಿಂಗ್ ಆ್ಯಕ್ಷನ್ ಕಾನೂನು ಬದ್ಧವೇ?
ಪಾಕ್ ಸ್ಪಿನ್ನರ್​ನ ಬೌಲಿಂಗ್ ಆ್ಯಕ್ಷನ್ ಕಾನೂನು ಬದ್ಧವೇ?
ವಿಧಾನಸಭೆಯಲ್ಲಿ ಪೆನ್​ಡ್ರೈವ್ ಪ್ರದರ್ಶಿಸಿ ಅಶೋಕ್ ಗಂಭೀರ ಆರೋಪ
ವಿಧಾನಸಭೆಯಲ್ಲಿ ಪೆನ್​ಡ್ರೈವ್ ಪ್ರದರ್ಶಿಸಿ ಅಶೋಕ್ ಗಂಭೀರ ಆರೋಪ
ಕಹಿ ಬೇವಿನ ಮರದಲ್ಲಿ ಬರುತ್ತಿದೆ ಸಿಹಿಯಾದ ನೀರು! ಏನಿದು ವಿಸ್ಮಯ?
ಕಹಿ ಬೇವಿನ ಮರದಲ್ಲಿ ಬರುತ್ತಿದೆ ಸಿಹಿಯಾದ ನೀರು! ಏನಿದು ವಿಸ್ಮಯ?
ಬೆಂಚ್​​ ಮೇಲೆ ಕಾಲಿಟ್ಟು ರಾಜ್ಯಸಭೆಯಲ್ಲಿ ಮಾತಾಡಿದ ಸದಸ್ಯ!:  ವಿಡಿಯೋ ನೋಡಿ
ಬೆಂಚ್​​ ಮೇಲೆ ಕಾಲಿಟ್ಟು ರಾಜ್ಯಸಭೆಯಲ್ಲಿ ಮಾತಾಡಿದ ಸದಸ್ಯ!:  ವಿಡಿಯೋ ನೋಡಿ