AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೃದ್ಧಾಪ್ಯದಲ್ಲಿ ಸ್ನಾಯುಗಳ ಆರೋಗ್ಯ ಕಾಪಾಡಿಕೊಳ್ಳುವುದು ಏಕೆ ಮುಖ್ಯ? ವೈದ್ಯರು ಹೇಳಿರುವ ಮಹತ್ವದ ಸಲಹೆಗಳು

ವಯಸ್ಸಾಗುವುದು ಸಹಜ ಪ್ರಕ್ರಿಯೆ. ಆದರೆ ಸ್ನಾಯುಗಳ ಶಕ್ತಿ ಕಳೆದುಕೊಳ್ಳುವುದು ಅನಿವಾರ್ಯವಲ್ಲ. ಸಮತೋಲಿತ ಆಹಾರ, ನಿಯಮಿತ ವ್ಯಾಯಾಮ, ಸಾಕಷ್ಟು ಪ್ರೋಟೀನ್, ಉತ್ತಮ ನಿದ್ರೆ ಹಾಗೂ ಆರೋಗ್ಯಕರ ಜೀವನಶೈಲಿಯ ಮೂಲಕ ದೀರ್ಘಕಾಲ ಸ್ನಾಯುಗಳನ್ನು ಬಲವಾಗಿ ಕಾಪಾಡಿಕೊಳ್ಳಬಹುದು. 30–40 ವರ್ಷ ವಯಸ್ಸಿನ ನಂತರವೇ ಸ್ನಾಯುಗಳ ಆರೈಕೆಗೆ ಆದ್ಯತೆ ನೀಡುವುದು ಆರೋಗ್ಯಕರ ವೃದ್ಧಾಪ್ಯಕ್ಕೆ ಅತ್ಯಗತ್ಯ.

ವೃದ್ಧಾಪ್ಯದಲ್ಲಿ ಸ್ನಾಯುಗಳ ಆರೋಗ್ಯ ಕಾಪಾಡಿಕೊಳ್ಳುವುದು ಏಕೆ ಮುಖ್ಯ? ವೈದ್ಯರು ಹೇಳಿರುವ ಮಹತ್ವದ ಸಲಹೆಗಳು
Muscle Loss After 40Image Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: Aug 06, 2026 | 3:03 PM

Share

ಮುಖ್ಯಾಂಶಗಳು

  • Muscle Loss: ವಯಸ್ಸಿನೊಂದಿಗೆ ಸ್ನಾಯುಗಳು ದುರ್ಬಲವಾಗದಂತೆ ಕಾಪಾಡಿಕೊಳ್ಳುವುದು ಹೇಗೆ?
  • ಸ್ನಾಯುಗಳು ದುರ್ಬಲವಾಗುತ್ತಿರುವಾಗ ದೇಹದಲ್ಲಿ ಕಂಡುಬರುವ ಲಕ್ಷಣಗಳು
  • ಸ್ನಾಯುಗಳನ್ನು ಬಲವಾಗಿಡಲು ಅನುಸರಿಸಬೇಕಾದ ಸಲಹೆಗಳು

ವಯಸ್ಸು ಹೆಚ್ಚಾದಂತೆ ದೇಹದಲ್ಲಿ ಹಲವು ಸಹಜ ಬದಲಾವಣೆಗಳಾಗುತ್ತದೆ. ಅವುಗಳಲ್ಲಿ ಪ್ರಮುಖವಾದದ್ದು ಸ್ನಾಯುಗಳ (Muscles) ಶಕ್ತಿ ಮತ್ತು ಗಾತ್ರ ಕ್ರಮೇಣ ಕಡಿಮೆಯಾಗುವುದು. ಇದನ್ನು ಸಾಮಾನ್ಯ ವಯೋಸಹಜ ಪ್ರಕ್ರಿಯೆ ಎಂದು ಹಲವರು ನಿರ್ಲಕ್ಷಿಸುತ್ತಾರೆ. ಆದರೆ ಸ್ನಾಯುಗಳು ಕೇವಲ ದೇಹಕ್ಕೆ ಶಕ್ತಿ ನೀಡುವುದಲ್ಲ, ನಡೆಯುವುದು, ಮೆಟ್ಟಿಲು ಹತ್ತುವುದು, ವಸ್ತುಗಳನ್ನು ಎತ್ತುವುದು ಹಾಗೂ ದೈನಂದಿನ ಚಟುವಟಿಕೆಗಳನ್ನು ಸುಲಭವಾಗಿ ನಿರ್ವಹಿಸಲು ಅತ್ಯಗತ್ಯ. ಆದ್ದರಿಂದ 30–40 ವರ್ಷ ವಯಸ್ಸಿನ ನಂತರವೇ ಸ್ನಾಯುಗಳ ಆರೋಗ್ಯದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಮುಖ್ಯ ಎಂದು ಆರೋಗ್ಯ ತಜ್ಞರು ಸಲಹೆ ನೀಡುತ್ತಾರೆ.

ವಯಸ್ಸಿನೊಂದಿಗೆ ಸ್ನಾಯುಗಳು ಏಕೆ ದುರ್ಬಲವಾಗುತ್ತವೆ?

ಅಮೆರಿಕದ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆನ್ ಏಜಿಂಗ್ (NIA) ಪ್ರಕಾರ, ವಯಸ್ಸು ಹೆಚ್ಚಾದಂತೆ ಸ್ನಾಯುಗಳ ಪ್ರಮಾಣ ಮತ್ತು ಬಲ ಕ್ರಮೇಣ ಕಡಿಮೆಯಾಗುತ್ತದೆ. ಈ ಸ್ಥಿತಿಯನ್ನು ಸಾರ್ಕೋಪೀನಿಯಾ (Sarcopenia) ಎಂದು ಕರೆಯಲಾಗುತ್ತದೆ.

  • ಸ್ನಾಯುಗಳ ದುರ್ಬಲತೆಯಿಂದ, ನಡೆಯಲು ಕಷ್ಟವಾಗಬಹುದು
  • ಮೆಟ್ಟಿಲು ಹತ್ತುವುದು ಕಠಿಣವಾಗಬಹುದು
  • ಕುರ್ಚಿಯಿಂದ ಏಳಲು ತೊಂದರೆಯಾಗಬಹುದು
  • ಭಾರವಾದ ವಸ್ತುಗಳನ್ನು ಎತ್ತಲು ಸಾಧ್ಯವಾಗದೇ ಇರಬಹುದು
  • ಸ್ನಾಯುಗಳ ದುರ್ಬಲತೆಯಿಂದ ಮೂಳೆ ಮುರಿತ, ಆಸ್ಟಿಯೋಪೊರೋಸಿಸ್ (Osteoporosis) ಹಾಗೂ ದೀರ್ಘಕಾಲದ
  • ಅಂಗವೈಕಲ್ಯದ ಅಪಾಯವೂ ಹೆಚ್ಚಾಗಬಹುದು.

ಸ್ನಾಯುಗಳು ದುರ್ಬಲವಾಗುತ್ತಿರುವ ಸೂಚನೆಗಳು;

  • ದೇಹದಲ್ಲಿ ನಿರಂತರ ದೌರ್ಬಲ್ಯ
  • ಮೆಟ್ಟಿಲು ಹತ್ತಲು ಕಷ್ಟವಾಗುವುದು
  • ಭಾರ ಎತ್ತಲು ಶಕ್ತಿ ಕಡಿಮೆಯಾಗುವುದು
  • ನಡೆಯುವ ವೇಗ ನಿಧಾನವಾಗುವುದು
  • ಕುರ್ಚಿಯಿಂದ ಏಳಲು ಹೆಚ್ಚು ಪ್ರಯತ್ನ ಬೇಕಾಗುವುದು
  • ಆಗಾಗ ಸಮತೋಲನ ತಪ್ಪಿ ಬೀಳುವುದು
  • ದೈನಂದಿನ ಕೆಲಸಗಳನ್ನು ಮಾಡಲು ಕಷ್ಟವಾಗುವುದು

ಈ ಲಕ್ಷಣಗಳು ದೀರ್ಘಕಾಲ ಮುಂದುವರಿದರೆ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.

ಸ್ನಾಯುಗಳನ್ನು ಬಲವಾಗಿಡಲು ಏನು ಮಾಡಬೇಕು?

ನಿಯಮಿತ ಸ್ಟ್ರೆಂಗ್ತ್ ಟ್ರೈನಿಂಗ್ ಮಾಡಿ: ವಾರಕ್ಕೆ ಕನಿಷ್ಠ 2– 3 ದಿನ ಹಗುರವಾದ Strength Training ಅಥವಾ Resistance Exercise ಮಾಡುವುದು ಸ್ನಾಯುಗಳ ಬಲವನ್ನು ಹೆಚ್ಚಿಸಲು ಸಹಕಾರಿ.

ಸಾಕಷ್ಟು ಪ್ರೋಟೀನ್ ಸೇವಿಸಿ: ಆಹಾರದಲ್ಲಿ ಬೇಳೆಕಾಳುಗಳು, ಹಾಲು, ಮೊಸರು, ಪನೀರ್, ಮೊಟ್ಟೆ, ಮೀನು, ಸೋಯಾ ಕಾಳುಗಳು.

ದೈಹಿಕ ಚಟುವಟಿಕೆ ಹೆಚ್ಚಿಸಿ: ಒಂದೇ ಜಾಗದಲ್ಲಿ ಹೆಚ್ಚು ಸಮಯ ಕುಳಿತುಕೊಳ್ಳಬೇಡಿ. ಪ್ರತಿದಿನ 30–45 ನಿಮಿಷ ನಡೆಯುವುದು ಅಥವಾ ಸಣ್ಣ ವ್ಯಾಯಾಮ ಮಾಡುವುದು ಉತ್ತಮ. ಜೊತೆಗೆ ಸರಿಯಾಗಿ 7–8 ಗಂಟೆ ನಿದ್ರೆ ಮಾಡುವುದು ಕೂಡ ಅತ್ಯಗತ್ಯ.

ಸ್ನಾಯುಗಳ ಆರೋಗ್ಯ ಕೇವಲ ವ್ಯಾಯಾಮದಿಂದ ಮಾತ್ರವಲ್ಲ, ವಿಟಮಿನ್ ಡಿ, ಕ್ಯಾಲ್ಸಿಯಂ ಮತ್ತು ಪ್ರೋಟೀನ್ ಸಮರ್ಪಕ ಪ್ರಮಾಣದಲ್ಲಿ ದೊರಕುವುದರಿಂದಲೂ ಉತ್ತಮವಾಗಿರುತ್ತದೆ. ದೀರ್ಘಕಾಲ ಹಾಸಿಗೆಯಲ್ಲೇ ಇರುವವರು ಅಥವಾ ದೈಹಿಕ ಚಟುವಟಿಕೆ ಕಡಿಮೆ ಇರುವವರಲ್ಲಿ ಸ್ನಾಯು ಕ್ಷೀಣಿಸುವ ಅಪಾಯ ಹೆಚ್ಚು. ಇತ್ತೀಚಿನ ಅಧ್ಯಯನಗಳ ಪ್ರಕಾರ, 30 ವರ್ಷಗಳ ನಂತರ ಪ್ರತೀ ದಶಕದಲ್ಲಿ ಸ್ನಾಯುಗಳ ಪ್ರಮಾಣ ಕ್ರಮೇಣ ಕಡಿಮೆಯಾಗತೊಡಗುತ್ತದೆ. ಆದ್ದರಿಂದ ಮಧ್ಯವಯಸ್ಸಿನಿಂದಲೇ ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ಉತ್ತಮ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us