- TV9 Kannada Kannada News Photos Cricket Photos India A Dominates Nepal: Prince Yadav's Fifer in Asia Cup Rising Stars Opener
5 ಓವರ್‌ಗಳಲ್ಲಿ 6 ರನ್, 5 ವಿಕೆಟ್ ಬೇಟೆ; ಪ್ರಿನ್ಸ್ ಯಾದವ್ ಮಾರಕ ದಾಳಿ
2026ರ ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ ಟೂರ್ನಿಯ ಮೊದಲ ಪಂದ್ಯದಲ್ಲಿ ಭಾರತ ಎ ತಂಡ ನೇಪಾಳವನ್ನು 306 ರನ್‌ಗಳಿಂದ ಭರ್ಜರಿಯಾಗಿ ಮಣಿಸಿದೆ. ಪ್ರಿನ್ಸ್ ಯಾದವ್ ಕೇವಲ 6 ರನ್ ನೀಡಿ 5 ವಿಕೆಟ್ ಕಬಳಿಸಿ ಮಿಂಚಿದರು, ನೇಪಾಳ ತಂಡವನ್ನು 26 ರನ್‌ಗಳಿಗೆ ಆಲೌಟ್ ಮಾಡಿದರು. ಇದು ಅವರ ಮೊದಲ ಲಿಸ್ಟ್ ಎ 5 ವಿಕೆಟ್ ಸಾಧನೆಯಾಗಿದೆ. ಭಾರತ ತಂಡ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ.
Updated on: Nov 20, 2026 | 11:04 PM

2026ರ ಏಷ್ಯಾಕಪ್ ರೈಸಿಂಗ್ ಸ್ಟಾರ್ಸ್ ಟೂರ್ನಿಯ ಮೊದಲ ಪಂದ್ಯದಲ್ಲೇ ಭಾರತ ಎ ತಂಡ ಭರ್ಜರಿ ಪ್ರದರ್ಶನ ನೀಡಿದೆ. ನೇಪಾಳ ತಂಡವನ್ನು ಬರೋಬ್ಬರಿ 306 ರನ್‌ಗಳಿಂದ ಮಣಿಸುವ ಮೂಲಕ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತ ಎ ತಂಡ 332 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತ್ತು. ಈ ಗುರಿ ಬೆನ್ನಟ್ಟಿದ ನೇಪಾಳ ತಂಡ ಕೇವಲ 26 ರನ್‌ಗಳಿಗೆ ಆಲೌಟ್ ಆಯಿತು(PC-PTI).

ನೇಪಾಳ ತಂಡವನ್ನು ಕೇವಲ 11.3 ಓವರ್‌ಗಳಲ್ಲಿ ಕಟ್ಟಿಹಾಕುವಲ್ಲಿ ಭಾರತದ ವೇಗದ ಬೌಲರ್ ಪ್ರಿನ್ಸ್ ಯಾದವ್ ಪ್ರಮುಖ ಪಾತ್ರ ವಹಿಸಿದರು. ತಮ್ಮ 5 ಓವರ್‌ಗಳಲ್ಲಿ ಕೇವಲ 6 ರನ್ ನೀಡಿ 5 ವಿಕೆಟ್ ಕಬಳಿಸುವ ಮೂಲಕ ಎದುರಾಳಿ ತಂಡದ ಬ್ಯಾಟಿಂಗ್ ಬೆನ್ನೆಲುಬನ್ನೇ ಮುರಿದರು(PC-PTI).

ನೇಪಾಳ ವಿರುದ್ಧದ ಮೊದಲ ಓವರ್‌ನಲ್ಲೇ ಪ್ರಿನ್ಸ್ ಯಾದವ್ ತಮ್ಮ ಬೌಲಿಂಗ್ ಸಾಮರ್ಥ್ಯ ಪ್ರದರ್ಶಿಸಿದರು. ದೋಹಾದ ಮೈದಾನದಲ್ಲಿ ಮಾರಕ ದಾಳಿ ನಡೆಸಿದ ಅವರು ಮೊದಲ ಓವರ್‌ನ ನಾಲ್ಕನೇ ಎಸೆತದಲ್ಲಿ ದೀಪಕ್ ಡುಮ್ರೆಯನ್ನು ಔಟ್ ಮಾಡುವ ಮೂಲಕ ಭಾರತಕ್ಕೆ ಮೊದಲ ಯಶಸ್ಸು ತಂದುಕೊಟ್ಟರು(PC-PTI).

ಇದೇ ಓವರ್‌ನಲ್ಲಿ ಬಸೀರ್ ಅಹ್ಮದ್ ಅವರನ್ನೂ ಬೌಲ್ಡ್ ಮಾಡುವ ಮೂಲಕ ಡಬಲ್ ವಿಕೆಟ್ ಮೇಡನ್ ಓವರ್ ಎಸೆದರು. ಬಳಿಕ ಪಂದ್ಯದ ಎಂಟನೇ ಓವರ್‌ನಲ್ಲಿ ಪವನ್ ಸರಾಫ್ ಅವರನ್ನು ನಿಖರ ಯಾರ್ಕರ್ ಮೂಲಕ ಕ್ಲೀನ್ ಬೌಲ್ಡ್ ಮಾಡಿದರು(PC-PTI).

10ನೇ ಓವರ್‌ನಲ್ಲಿ ಮತ್ತಷ್ಟು ಆಕ್ರಮಣಕಾರಿ ಬೌಲಿಂಗ್ ಮಾಡಿದ ಪ್ರಿನ್ಸ್, ಪ್ರತೀಶ್ ಅವರನ್ನು ಬೌಲ್ಡ್ ಮಾಡಿದರು. ಇದೇ ಓವರ್‌ನ ಮೊದಲ ಎಸೆತದಲ್ಲಿ ನೇಪಾಳದ ನಾಯಕ ಸಂದೀಪ್ ಲಾಮಿಚಾನೆ ಅವರನ್ನು ಪೆವಿಲಿಯನ್‌ಗೆ ಕಳುಹಿಸಿ ತಮ್ಮ ಐದು ವಿಕೆಟ್‌ಗಳ ಸಾಧನೆ ಪೂರ್ಣಗೊಳಿಸಿದರು(PC-PTI).

ಇದು ಪ್ರಿನ್ಸ್ ಯಾದವ್ ಅವರ ಲಿಸ್ಟ್ ಎ ಕ್ರಿಕೆಟ್ ವೃತ್ತಿಜೀವನದ ಮೊದಲ ಐದು ವಿಕೆಟ್‌ಗಳ ಸಾಧನೆಯಾಗಿದೆ. ಅಲ್ಲದೆ, ಅವರ ವೃತ್ತಿಜೀವನದ ಅತ್ಯುತ್ತಮ ಬೌಲಿಂಗ್ ಪ್ರದರ್ಶನವೂ ಆಗಿದೆ. ನೇಪಾಳ ವಿರುದ್ಧ ಪ್ರಿನ್ಸ್ ಯಾದವ್ ಐದು ವಿಕೆಟ್ ಕಬಳಿಸಿ ಮಿಂಚಿದರೂ, ಪಂದ್ಯಶ್ರೇಷ್ಠ ಪ್ರಶಸ್ತಿ ಮಾತ್ರ ಬ್ಯಾಟಿಂಗ್‌ನಲ್ಲಿ ಶತಕ ಸಿಡಿಸಿದ ಕುಮಾರ್ ಕುಶಾಗ್ರ ಪಾಲಾಯಿತು(PC-PTI).

ಪೃಥ್ವಿಶಂಕರ ಅವರ ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ. ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ಕೆಲಸ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ಇವರು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ಇವರ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್ ಪ್ರೊಡ್ಯೂಸರ್ ಆಗಿ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.
Read More



