AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Health Tips

Health Tips

ಇತ್ತೀಚಿಗೆ ನಮ್ಮ ಆರೋಗ್ಯವನ್ನು ಸರಿಯಾಗಿ ಕಾಪಾಡಿಕೊಳ್ಳುವುದು ಒಂದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಈಗಿನ ದಿನದಲ್ಲಿ ಆರೋಗ್ಯ ಚೆನ್ನಾಗಿದ್ದರೆ ಅದಕ್ಕಿಂತ ಬೇರೆ ಸಂಪತ್ತು ಬೇಕಾಗಿಲ್ಲ ಎನ್ನುವವರೇ ಹೆಚ್ಚಾಗಿದ್ದಾರೆ. ಹಾಗಾಗಿ ನಮ್ಮ ದೇಹವನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು ಎಂದರೆ ನಾವು ಸೇವಿಸುವ ಆಹಾರವೂ ಸರಿಯಾಗಿ ಇರಬೇಕಾಗುತ್ತದೆ. ಅನಾರೋಗ್ಯವನ್ನು ದೂರವಿಡುವುದು ಮತ್ತು ಬರಮಾಡಿಕೊಳ್ಳುವುದು ಎರಡು ನಮ್ಮ ಕೈಯಲ್ಲಿ ಇರುವುದರಿಂದ ನಮ್ಮ ದೈನಂದಿನ ಅಭ್ಯಾಸಗಳು ಆರೋಗ್ಯಕರವಾಗಿ ಇರುವುದು ಬಹಳ ಒಳಿತು. ಆದರೆ ಆರೋಗ್ಯ ಕಾಪಾಡಿಕೊಳ್ಳಲು ಮಾತ್ರೆ, ಮತ್ತಿಷ್ಟು ಔಷಧಿಗಳ ಮೊರೆ ಹೋಗುವ ಬದಲು ನಾವು ನೀಡುವ ಸರಳ ಆರೋಗ್ಯಕರ ಸಲಹೆಗಳನ್ನು ಪಾಲನೆ ಮಾಡಬಹುದು. ಇದರಿಂದ ನಿಮ್ಮ ದಿನನಿತ್ಯದ ಅಭ್ಯಾಸಗಳಲ್ಲಿ ಆರೋಗ್ಯಕರವಾದ ಸಲಹೆಗಳನ್ನು ರೂಢಿಸಿಕೊಳ್ಳಬಹುದು. ಇದು ನಿಮಗೆ ಅನಾರೋಗ್ಯದಿಂದ ದೂರವಿರಿಸುವುದು ಮಾತ್ರವಲ್ಲ. ನಾನಾ ರೀತಿಯ ಕಾಯಿಲೆಗಳು ಬರುವುದನ್ನು ಕೂಡ ತಡೆಯುತ್ತದೆ. ಮಾತ್ರವಲ್ಲ ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಕಾಯಿಲೆಗಳ ವಿರುದ್ಧ ನಿಮ್ಮನ್ನು ನೀವು ಬಲಪಡಿಸಿಕೊಳ್ಳಲು ಅನುವು ಮಾಡಿಕೊಡುತ್ತದೆ. ಈ ಆರೋಗ್ಯಕರ ಸಲಹೆಗಳು ರೋಗಿಗಳಿಗೆ ಮಾತ್ರವಲ್ಲ ಆರೋಗ್ಯವಂತರಿಗೂ ಇದು ಸಹಕಾರಿಯಾಗಿರುತ್ತದೆ ಎಂಬುದನ್ನು ಮರೆಯಬಾರದು

ಇನ್ನೂ ಹೆಚ್ಚು ಓದಿ

ಚಳಿಗಾಲದಲ್ಲಿ ಲೆಕ್ಕವಿಲ್ಲದಷ್ಟು ಚಹಾ ಅಥವಾ ಕಾಫಿ ಕುಡಿಯುವವರು ಈ ಸ್ಟೋರಿ ಮಿಸ್ ಮಾಡ್ದೆ ಓದಿ

ಹವಾಮಾನ ತಂಪಾಗಿರುವಾಗ, ಒಂದು ಕಪ್ ಬಿಸಿ ಬಿಸಿ ಕಾಫಿ ಅಥವಾ ಚಹಾ ಕುಡಿಯಬೇಕೆಂದು ಅನಿಸುವುದು ಸುಳ್ಳಲ್ಲ. ಚಳಿಯಲ್ಲಿ ಬಿಸಿ ಕಾಫಿ ಅಥವಾ ಚಹಾ ಹೀರುವುದು ಒಂದು ಅವರ್ಣನೀಯ ಅನುಭವ. ಆದರೆ ಚಳಿಯನ್ನು ತಡೆಯಲು ಮತ್ತು ಸೋಮಾರಿತನವನ್ನು ಹೋಗಲಾಡಿಸಲು ಅತಿಯಾಗಿ ಕಾಫಿ ಮತ್ತು ಚಹಾವನ್ನು ಕುಡಿಯುತ್ತಾರೆ. ಹೀಗೆ ಮಾಡುವುದರಿಂದ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾದರೆ ಚಳಿಗಾಲದಲ್ಲಿ ಹೆಚ್ಚು ಚಹಾ ಮತ್ತು ಕಾಫಿ ಕುಡಿಯುವ ಅಭ್ಯಾಸದಿಂದ ಯಾವ ರೀತಿ ಸಮಸ್ಯೆಗಳಾಗುತ್ತದೆ, ಯಾಕೆ ಈ ಅಭ್ಯಾಸ ಒಳ್ಳೆಯದಲ್ಲ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಈ ಹಣ್ಣು, ತರಕಾರಿಗಳನ್ನು ಎಂದಿಗೂ ಹಸಿಯಾಗಿ ಸೇವಿಸಬೇಡಿ ಇದು ಹಾವಿನ ವಿಷಕ್ಕಿಂತ ವಿಷಕಾರಿ!

ಹಸಿಯಾಗಿರುವ ಆಹಾರ ಸೇವನೆ ಆರೋಗ್ಯಕ್ಕೆ ಒಳ್ಳೆಯದು, ಆದರೆ ಯಾವುದನ್ನು ಹಸಿಯಾಗಿ ತಿನ್ನಬೇಕು ಮತ್ತು ಯಾವುದನ್ನು ತಿನ್ನಬಾರದು ಎಂಬುದನ್ನು ತಿಳಿದುಕೊಂಡಿರಬೇಕಾಗುತ್ತದೆ. ಏಕೆಂದರೆ ಕೆಲವು ಹಸಿಯಾಗಿ ತಿನ್ನುವ ಹಣ್ಣು ಮತ್ತು ತರಕಾರಿಗಳು ಹಾವು ಕಡಿತಕ್ಕಿಂತ ವೇಗವಾಗಿ ಜೀವವನ್ನು ತೆಗೆದುಕೊಳ್ಳಬಹುದು. ಹೌದು, ಆರೋಗ್ಯ ತಜ್ಞರು ಕೂಡ ಕೆಲವು ಆಹಾರಗಳಲ್ಲಿ ಹಾವಿನ ವಿಷಕ್ಕಿಂತ ಹೆಚ್ಚು ವಿಷವಿರುತ್ತದೆ ಎಂದು ಹೇಳುತ್ತಾರೆ. ಹಾಗಾದರೆ ಯಾವ ಹಣ್ಣು ಮತ್ತು ತರಕಾರಿಗಳನ್ನು ಹಸಿಯಾಗಿ ತಿನ್ನಬಾರದು, ಅದಕ್ಕೆ ಕಾರಣವೇನು ಎಂಬುದನ್ನು ತಿಳಿದುಕೊಳ್ಳಿ.

ಒಂದು ದಿನ ಹಲ್ಲುಜ್ಜದಿದ್ದರೆ ಏನಾಗುತ್ತೆ ಎಂದು ಅಸಡ್ಡೆ ಮಾಡಿದ್ರೆ ಬರುತ್ತೆ ಅಪಾಯಕಾರಿ ಕಾಯಿಲೆ!

ಹಲ್ಲುಜ್ಜದೇ ಇರುವುದು ಅಪಾಯಕಾರಿ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು ಎಂದರೆ ನಂಬುತ್ತೀರಾ? ಹೌದು, ಬಾಯಿಯಲ್ಲಿರುವ ಬ್ಯಾಕ್ಟೀರಿಯಾಗಳು ಹೃದಯ ಸಂಬಂಧಿ ಕಾಯಿಲೆ, ಶ್ವಾಸಕೋಶದ ಸೋಂಕು ಮತ್ತು ಬಾಯಿಯ ಕ್ಯಾನ್ಸರ್‌ನಂತಹ ಗಂಭೀರ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಈ ವಿಷಯ ಕೆಲವರಿಗೆ ಆಶ್ಚರ್ಯ ಹುಟ್ಟಿಸಬಹುದು. ಆದರೆ ಇದು ನಿಜ. ದಿನಕ್ಕೆ ಒಮ್ಮೆ ಹಲ್ಲುಜ್ಜದೇ ಇರುವುದು ಕೂಡ ಅಪಾಯಕಾರಿ. ಹಾಗಾದರೆ ಹಲ್ಲುಜ್ಜದಿದ್ದಾಗ ಬಾಯಲ್ಲಿ ಏನೆಲ್ಲಾ ಆಗುತ್ತೆ, ಇದೆಷ್ಟು ಅಪಾಯಕಾರಿ ಎಂಬುದನ್ನು ತಿಳಿದುಕೊಳ್ಳಿ.

ಗಂಟೆಗೊಮ್ಮೆ ಎದ್ದು 5 ನಿಮಿಷ ನಡೆಯುವುದರಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ನೋಡಿ

ಬೆಳಿಗ್ಗೆ ಎದ್ದು ವಾಕಿಂಗ್ ಮಾಡುವುದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಇಂದಿನ ಬ್ಯುಸಿ ಲೈಫ್ ನಲ್ಲಿ ಎಲ್ಲರಿಗೂ ಅದು ಸಾಧ್ಯವಾಗುವುದಿಲ್ಲ. ಅಷ್ಟೇ ಅಲ್ಲ, ಇಂತಹ ಕಾರಣಗಳಿಂದ ಎಷ್ಟೋ ಜನ ನಡೆಯುವುದನ್ನೇ ನಿಲ್ಲಿಸುತ್ತಾರೆ. ಆದರೆ ಇದು ದೈಹಿಕ ಆರೋಗ್ಯದ ಮೇಲೆ ಬಹಳ ಕೆಟ್ಟ ಪರಿಣಾಮ ಬೀರುತ್ತವೆ. ಬದಲಾಗಿ, ಗಂಟೆಗೆ ಒಮ್ಮೆ ಮಾಡುವ ಸಣ್ಣ ನಡಿಗೆ ಬಹಳ ವ್ಯತ್ಯಾಸವನ್ನುಂಟು ಮಾಡುತ್ತದೆ. ಹೌದು, ಆರೋಗ್ಯ ತಜ್ಞರು ಪ್ರತಿ ಗಂಟೆಗೊಮ್ಮೆ 5 ನಿಮಿಷ ನಡೆಯುವುದರಿಂದ ಹೆಚ್ಚು ಪ್ರಯೋಜನಗಳನ್ನು ಪಡೆಯಬಹುದು ಎನ್ನುತ್ತಾರೆ. ಹಾಗಾದರೆ ಇದರಿಂದ ಸಿಗುವ ಲಾಭಗಳೇನು, ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಆರೋಗ್ಯಕ್ಕೆ ಒಳ್ಳೆಯದು ಎಂದು ಚಿಯಾ ಸೀಡ್ಸ್ ಅತಿಯಾಗಿ ಸೇವನೆ ಮಾಡಿದ್ರೆ ಈ ಸಮಸ್ಯೆಗಳು ಬರುವುದು ನಿಶ್ಚಿತ!

ಚಿಯಾ ಸೀಡ್ಸ್ ಈಗ ಸೂಪರ್‌ಫುಡ್ ಆಗಿ ಮಾರ್ಪಟ್ಟಿವೆ. ಇವು ಆರೋಗ್ಯಕ್ಕೆ ಒಳ್ಳೆಯದು ಎಂದು ಹೆಚ್ಚೆಚ್ಚು ಸೇವನೆ ಮಾಡುತ್ತಾರೆ. ಹಾಗಾಗಿ ಇವುಗಳನ್ನು ಚಿಯಾ ಪುಡಿಂಗ್, ಸ್ಮೂಥಿ, ಓಟ್ಸ್‌ನೊಂದಿಗೆ ತಿನ್ನುತ್ತಾರೆ. ಇದು ಪೋಷಕಾಂಶಗಳಿಂದ ಸಮೃದ್ಧವಾಗಿರುವುದರಿಂದ ಇದರ ಮಿತ ಸೇವನೆ ದೇಹಕ್ಕೆ ಒಳ್ಳೆಯದು. ಆದರೆ ಪ್ರತಿದಿನ 40- 50 ಗ್ರಾಂ (3- 4 ಚಮಚ) ಕ್ಕಿಂತ ಹೆಚ್ಚು ಸೇವನೆ ಮಾಡಿದರೆ, ದೇಹವು ಅವುಗಳಲ್ಲಿರುವ ಎಲ್ಲಾ ಪೋಷಕಾಂಶಗಳನ್ನು ಹೀರಿಕೊಳ್ಳಲು ಸಾಧ್ಯವಾಗುವುದಿಲ್ಲ. ಹಾಗಾದರೆ ಅಗತ್ಯಕ್ಕಿಂತ ಹೆಚ್ಚು ಚಿಯಾ ಬೀಜಗಳನ್ನು ಸೇವಿಸಿದರೆ ಏನಾಗುತ್ತದೆ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಕಮಲದ ಬೇರು ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ ಎಂದು ತಿಳಿದರೆ ನಿಜವಾಗಿಯೂ ಆಶ್ಚರ್ಯವಾಗುತ್ತೆ!

ತಾವರೆ ಹೂವು ಹಾಗೂ ಅದರ ಗಿಡವನ್ನು ನೀವೆಲ್ಲರೂ ನೋಡಿರುತ್ತೀರಿ. ಅಷ್ಟೇ ಅಲ್ಲ, ಅವುಗಳ ಬೀಜಗಳು ಕೂಡ ಆರೋಗ್ಯಕ್ಕೆ ಪ್ರಯೋಜನಕಾರಿ ಎಂದು ತಿಳಿದಿದೆ. ಆದರೆ ಕಮಲದ ಬೇರನ್ನು ಔಷಧಿಗಾಗಿ ಬಳಸಲಾಗುತ್ತದೆ ಎನ್ನುವುದು ಹೆಚ್ಚಿನ ಜನರಿಗೆ ಗೊತ್ತೇ ಇಲ್ಲ. ತಾವರೆ ಗಿಡದ ಬೇರು ಫೈಬರ್ ಮತ್ತು ಪ್ರೋಟೀನ್, ವಿಟಮಿನ್ ಮತ್ತು ಮಿನರಲ್ ಗಳಿಂದ ಕೂಡಿದೆ. ಇದು ರಕ್ತಹೀನತೆಯಿಂದ ರಕ್ತದೊತ್ತಡಕ್ಕೆ ಸಂಬಂಧಿಸಿದ ಕಾಯಿಲೆಗಳನ್ನು ದೂರವಿಡಲು ಸಹಕಾರಿಯಾಗಿದೆ. ಮಾತ್ರವಲ್ಲ, ಲೋಟಸ್ ರೂಟ್ ನಿಂದ ಚಿಪ್ಸ್, ಸೂಪ್, ಟೀ ಕೂಡಾ ತಯಾರಿಸಬಹುದು. ಹಾಗಾದರೆ ಇದು ಯಾವ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಒಳ್ಳೆಯದು, ಯಾರು ಸೇವನೆ ಮಾಡಬೇಕು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಸ್ಟಾರ್ ಫ್ರೂಟ್ ಸೇವನೆ ಮಾಡುವುದರಿಂದ ಕಣ್ಣುಗಳಲ್ಲಿ ಪೊರೆ ಬರುವುದನ್ನು ತಡೆಯಬಹುದೇ!

ಸ್ಟಾರ್ ಫ್ರೂಟ್ ಬಗ್ಗೆ ನೀವು ಕೇಳಿರಬಹುದು ಇದು ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಈ ಹಣ್ಣನ್ನು ಧಾರೆಹುಳಿ (Star Fruit), ಕರಂಬಳ ಹಣ್ಣು, ಕರಂಬೋಲಾ, ಕರಬಲ, ಕರಿಮಾದಲ, ಕಮರದ್ರಾಕ್ಷಿ, ನಕ್ಷತ್ರ ಹುಳಿ ಇತ್ಯಾದಿ ಹೆಸರುಗಳಿಂದ ಕರೆಯಲಾಗುತ್ತದೆ. ಇದರ ರುಚಿ ಕೂಡ ಅದ್ಭುತವಾಗಿದ್ದು ಆರೋಗ್ಯಕ್ಕೂ ಅಷ್ಟೇ ಪ್ರಯೋಜನಕಾರಿಯಾಗಿದೆ. ಹಾಗಾದರೆ ಈ ಹಣ್ಣುಗಳು ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ, ಯಾವ ಸಮಸ್ಯೆಗೆ ಒಳ್ಳೆಯದು ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಆತ್ಮಹತ್ಯೆ ಯೋಚನೆ, ಖಿನ್ನತೆ; ತೂಕ ಇಳಿಸುವ ಔಷಧಿಗಳ ಅಡ್ಡಪರಿಣಾಮದ ಬಗ್ಗೆ WHO ಎಚ್ಚರಿಕೆ

ದೀರ್ಘಾವಧಿಯ ಬೊಜ್ಜು ನಿಯಂತ್ರಣಕ್ಕಾಗಿ GLP-1 ಔಷಧಿಗಳನ್ನು ಬಳಸುವಾಗ ಹೆಚ್ಚು ಜವಾಬ್ದಾರಿಯುತವಾಗಿರಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಕರೆ ನೀಡಿದೆ. ಬೊಜ್ಜು ನಿಯಂತ್ರಣಕ್ಕೆ GLP-1 ಔಷಧಿಗಳನ್ನು ತೆಗೆದುಕೊಳ್ಳುತ್ತಿರುವವರು ಮನಸ್ಥಿತಿ, ಖಿನ್ನತೆಯ ಆಲೋಚನೆಗಳನ್ನು ಹೊಂದುವ ಉದಾಹರಣೆಗಳು ಇತ್ತೀಚೆಗೆ ಹೆಚ್ಚುತ್ತಿದೆ. ಹೀಗಾಗಿ, ಈ ಔಷಧಿ ಪಡೆಯುವವರು ತಕ್ಷಣ ವೈದ್ಯಕೀಯ ಸಲಹೆಯನ್ನು ಪಡೆಯುವಂತೆ ವಿಶ್ವ ಆರೋಗ್ಯ ಸಂಸ್ಥೆ ಸಲಹೆ ನೀಡಿದೆ.

ಗರ್ಭಪಾತದ ನಂತರ ಆರೋಗ್ಯ ಕಾಪಾಡಿಕೊಳ್ಳಲು ತಪ್ಪದೆ ಈ ಆಹಾರಗಳ ಸೇವನೆ ಮಾಡಿ

ಜೀವನದಲ್ಲಿ ಪ್ರತಿಯೊಬ್ಬ ಹೆಣ್ಣಿಗೂ ತಾಯ್ತನ ಬಹಳ ವಿಶೇಷ ಘಟ್ಟ. ಆದರೆ ಇತ್ತೀಚಿನ ದಿನಗಳಲ್ಲಿ ಗರ್ಭಪಾತ ಪ್ರಕರಣಗಳು ಹೆಚ್ಚಾಗಿ ಕಂಡುಬರುತ್ತಿರುವುದು ಹಲವರಲ್ಲಿ ಕಳವಳ ಉಂಟು ಮಾಡಿದೆ. ಇದಕ್ಕೆ ಕಾರಣಗಳು ಹಲವು. ಆದರೆ ಈ ರೀತಿ ಸಮಸ್ಯೆ ಕಂಡು ಬಂದಾಗ ಯಾವ ರೀತಿ ಆರೈಕೆ ಮಾಡಬೇಕು, ಬಳಿಕ ಯಾವ ರೀತಿಯ ಆಹಾರಗಳ ಸೇವನೆ ಮಾಡಬೇಕು ಎಂಬುದು ಹಲವರಿಗೆ ತಿಳಿದಿರುವುದಿಲ್ಲ. ಇಂತಹ ಸಮಸ್ಯೆಗಳನ್ನು ತಪ್ಪಿಸಲು ಜೊತೆಗೆ ಆರೋಗ್ಯ ಕಾಪಾಡಲು ಕೆಲವು ಸಲಹೆಗಳನ್ನು ಪಾಲಿಸುವುದು ಬಹಳ ಮುಖ್ಯ. ಇದು ತ್ವರಿತ ಪರಿಹಾರ ನೀಡುವುದರ ಜೊತೆಗೆ ಒತ್ತಡವನ್ನು ಕೂಡ ನಿವಾರಣೆ ಮಾಡುತ್ತದೆ. ಹಾಗಾದರೆ ಯಾವ ರೀತಿಯ ಆಹಾರ ಒಳ್ಳೆಯದು, ಅವುಗಳ ಸೇವನೆಯಿಂದ ಸಿಗುವ ಪ್ರಯೋಜನಗಳೇನು ಎಂಬುದನ್ನು ತಿಳಿದುಕೊಳ್ಳಿ.

ಪದೇ ಪದೇ ಒಣ ಕೆಮ್ಮು ಬರುವುದಕ್ಕೆ ಈ ಮನೆಮದ್ದನ್ನು ಪ್ರಯತ್ನಿಸಿ

ಒಣ ಕೆಮ್ಮಿಗೆ ಮನೆಮದ್ದುಗಳು: ಹವಾಮಾನ ಬದಲಾದಂತೆ ಒಣ ಕೆಮ್ಮು ಕಂಡುಬರುವುದು ಸಹಜ. ಈ ರೀತಿ ಬರುವ ಕೆಮ್ಮು ಗಂಟಲು ನೋವನ್ನು ಉಂಟು ಮಾಡುವುದಲ್ಲದೆ, ನಿದ್ರೆ ಮಾಡುವುದಕ್ಕೂ ಕೂಡ ತೊಂದರೆಯನ್ನು ಉಂಟುಮಾಡುತ್ತದೆ. ಇವುಗಳಿಗೆ ನಾನಾ ರೀತಿಯ ಔಷಧಗಳ ಸೇವನೆ ಮಾಡುವ ಬದಲು ಕೆಲವು ಮನೆಮದ್ದುಗಳನ್ನು ಪ್ರಯತ್ನಿಸಿ. ಇವು ಕೆಮ್ಮಿನಿಂದ ಸಂಪೂರ್ಣ ಪರಿಹಾರ ನೀಡುತ್ತವೆ. ಹಾಗಾದರೆ ರಾತ್ರಿ ಸಮಯದಲ್ಲಿ ಒಣ ಕೆಮ್ಮ ಬರುವುದಕ್ಕೆ ಕಾರಣಗಳು, ಅದರ ಲಕ್ಷಣಗಳು ಮತ್ತು ಅದನ್ನು ಹೇಗೆ ತಡೆಗಟ್ಟುವುದು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.