AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಜಿಮ್ ಪ್ರಾರಂಭಿಸಿ ಮಧ್ಯದಲ್ಲಿಯೇ ಬಿಟ್ಟಿದ್ದೀರಾ? ಇದರಿಂದ ಆರೋಗ್ಯಕ್ಕೆ ಹಾನಿಯಾಗುತ್ತಾ ತಿಳಿದುಕೊಳ್ಳಿ

ಇಂದಿನ ಕಾಲದಲ್ಲಿ ಫಿಟ್ ಮತ್ತು ಆಕ್ಟಿವ್ ಆಗಿರಲು ಜಿಮ್‌ಗೆ ಹೋಗುವುದು ಜೀವನಶೈಲಿಯ ಒಂದು ಪ್ರಮುಖ ಭಾಗವಾಗಿದೆ. ಆದರೆ, ಅನೇಕರು ಕೆಲವು ಸಮಯದ ನಂತರ ನಾನಾ ಕಾರಣಗಳಿಂದ ಜಿಮ್ ಅನ್ನು ಮಧ್ಯದಲ್ಲೇ ಬಿಡುತ್ತಾರೆ. ಆದರೆ ಒಮ್ಮೆ ಜಿಮ್ ಪ್ರಾರಂಭಿಸಿ ಮಧ್ಯದಲ್ಲಿ ಬಿಡುವುದರಿಂದ ದೇಹಕ್ಕೆ ಯಾವ ರೀತಿಯ ತೊಂದರೆಯಾಗುತ್ತದೆ, ನಿಜವಾಗಿಯೂ ಈ ರೀತಿ ಮಾಡುವುದು ಆರೋಗ್ಯಕ್ಕೆ ಹಾನಿಕಾರಕವೇ ತಿಳಿದುಕೊಳ್ಳಿ. ಹೆಚ್ಚಿನ ಮಾಹಿತಿ ಸ್ಟೋರಿಯಲ್ಲಿದೆ.

ಜಿಮ್ ಪ್ರಾರಂಭಿಸಿ ಮಧ್ಯದಲ್ಲಿಯೇ ಬಿಟ್ಟಿದ್ದೀರಾ? ಇದರಿಂದ ಆರೋಗ್ಯಕ್ಕೆ ಹಾನಿಯಾಗುತ್ತಾ ತಿಳಿದುಕೊಳ್ಳಿ
What Happens When You Stop Going to the Gym Suddenly?Image Credit source: Getty Images
ಪ್ರೀತಿ ಭಟ್​, ಗುಣವಂತೆ
|

Updated on: Mar 19, 2026 | 4:13 PM

Share

ಇತ್ತೀಚಿನ ದಿನಗಳಲ್ಲಿ ಫಿಟ್ ಆಗಿರಲು ಜಿಮ್‌ಗೆ (Gym) ಹೋಗುವುದು ಸಾಮಾನ್ಯ. ಜಿಮ್ ಹೋಗುವ ಅಭ್ಯಾಸ ದೇಹವನ್ನು ಬಲಪಡಿಸುವುದರ ಜೊತೆಗೆ ಮಾನಸಿಕವಾಗಿಯೂ ಬಲಿಷ್ಠರನ್ನಾಗಿಸುತ್ತದೆ. ಈ ರೀತಿ ವ್ಯಾಯಾಮದಿಂದ ಸ್ನಾಯುಗಳು ಬಲವಾಗುತ್ತವೆ, ಸ್ಟಾಮಿನಾ ಹೆಚ್ಚುತ್ತದೆ. ಇದರೊಂದಿಗೆ ತೂಕ ಕೂಡ ನಿಯಂತ್ರಣದಲ್ಲಿರುತ್ತದೆ, ಹೃದಯ ಆರೋಗ್ಯಕರವಾಗಿರುತ್ತದೆ ಮತ್ತು ಜೀವನಶೈಲಿಗೆ ಸಂಬಂಧಿಸಿದ ಅನೇಕ ರೋಗಗಳ ಅಪಾಯ ಕಡಿಮೆಯಾಗುತ್ತದೆ. ಪ್ರತಿದಿನ ನಿಗದಿತ ಸಮಯದಲ್ಲಿ ವ್ಯಾಯಾಮ ಮಾಡುವುದರಿಂದ ದಿನಚರಿಯೂ ಚುರುಕಾಗಿರುತ್ತದೆ. ಜಿಮ್‌ನಲ್ಲಿ ವಿಭಿನ್ನ ರೀತಿಯ ವ್ಯಾಯಾಮಗಳನ್ನು ಮಾಡುವುದರಿಂದ ದೇಹದ ಪ್ರತಿಯೊಂದು ಭಾಗಕ್ಕೂ ಪ್ರಯೋಜನವಾಗುತ್ತದೆ, ಇದರಿಂದ ಒಟ್ಟಾರೆ ಫಿಟ್‌ನೆಸ್ ಚೆನ್ನಾಗಿರುತ್ತದೆ. ಆದರೆ ಅನೇಕರು ಪ್ರಾರಂಭದಲ್ಲಿ ಜಿಮ್ ಗೆ ಹೋಗುವುದಕ್ಕೆ ಬಹಳ ಉತ್ಸಾಹ ತೋರಿಸುತ್ತಾರೆ. ಆರಂಭದಲ್ಲಿ ನಿಯಮಿತವಾಗಿ ವ್ಯಾಯಾಮವನ್ನು ಕೂಡ ಮಾಡುತ್ತಾರೆ. ಅದೇ ರೀತಿ ಆಹಾರಕ್ರಮಗಳನ್ನು ಕೂಡ ಅನುಸರಿಸುತ್ತಾರೆ. ಬಳಿಕ ಸಮಯದ ಕೊರತೆ, ಸೋಮಾರಿತನದಿಂದ ಜಿಮ್ ಅನ್ನು ಮಧ್ಯದಲ್ಲೇ ಬಿಡುತ್ತಾರೆ. ಆದರೆ ಒಮ್ಮೆ ಜಿಮ್ ಪ್ರಾರಂಭಿಸಿ ಮಧ್ಯದಲ್ಲಿ ಬಿಡುವುದರಿಂದ ದೇಹಕ್ಕೆ ಯಾವ ರೀತಿಯ ತೊಂದರೆಯಾಗುತ್ತದೆ, ನಿಜವಾಗಿಯೂ ಈ ರೀತಿ ಮಾಡುವುದು ಆರೋಗ್ಯಕ್ಕೆ ಹಾನಿಕಾರಕವೇ ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಜಿಮ್ ಪ್ರಾರಂಭಿಸಿ ಮಧ್ಯದಲ್ಲಿ ಬಿಡುವುದರಿಂದಾಗುವ ಹಾನಿ?

ಸಾಮಾನ್ಯವಾಗಿ ಜಿಮ್ ಅನ್ನು ಮಧ್ಯದಲ್ಲಿ ಬಿಡುವುದರಿಂದ ದೇಹಕ್ಕೆ ಸಿಗುತ್ತಿದ್ದ ಪ್ರಯೋಜನಗಳು ನಿಧಾನವಾಗಿ ಕಡಿಮೆಯಾಗುತ್ತವೆ. ದೇಹದ ಫಿಟ್‌ನೆಸ್ ಮಟ್ಟ ಕುಸಿಯಬಹುದು ಮತ್ತು ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರಬಹುದು. ವೈದ್ಯರು ಹೇಳುವ ಪ್ರಕಾರ, ಜಿಮ್ ಪ್ರಾರಂಭಿಸಿ ಅದನ್ನು ಮಧ್ಯದಲ್ಲಿ ಬಿಡುವುದರಿಂದ ದೇಹದ ಮೇಲೆ ನಕಾರಾತ್ಮಕ ಪರಿಣಾಮ ಬೀಳಬಹುದು. ವ್ಯಕ್ತಿ ನಿಯಮಿತವಾಗಿ ವ್ಯಾಯಾಮ ಮಾಡಿದಾಗ ದೇಹವು ಅದಕ್ಕೆ ಹೊಂದಿಕೊಳ್ಳುತ್ತದೆ. ಆದರೆ ಅಚಾನಕ್ ಜಿಮ್ ಬಿಡುವುದರಿಂದ ಈ ಸಮತೋಲನಕ್ಕೆ ಅಡಿಯಾಗುತ್ತದೆ. ಅಷ್ಟೇಅಲ್ಲ ಸ್ನಾಯುಗಳ ಬಲ ನಿಧಾನವಾಗಿ ಕಡಿಮೆಯಾಗುತ್ತದೆ ಮತ್ತು ಸಹನಶಕ್ತಿಯೂ ಕುಗ್ಗುತ್ತದೆ.

ಇದನ್ನೂ ಓದಿ: Fitness Tips: ಜಿಮ್‌ಗೆ ಹೋಗದೆ ಫಿಟ್ ಆಗಿರುವುದು ಹೇಗೆ?

ಈ ರೀತಿಯಾಗುವುದನ್ನು ತಡೆಯಲು ಏನು ಮಾಡಬೇಕು?

ಜಿಮ್‌ಗೆ ಹೋಗಲು ಇಷ್ಟವಿಲ್ಲದವರು ಅಥವಾ ಯಾವುದೋ ಕಾರಣದಿಂದ ಅದನ್ನು ಬಿಟ್ಟಿದ್ದರೆ ಒಂದೇ ಬಾರಿಗೆ ನೀವು ಮಾಡುತ್ತಿದ್ದ ಚಟುವಟಿಕೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಡಿ. ದೈನಂದಿನ ದಿನಚರಿಯಲ್ಲಿ ಲಘು ವ್ಯಾಯಾಮ, ಯೋಗ ಅಥವಾ ಮನೆಯಲ್ಲಿಯೇ ವಾಕಿಂಗ್ ಮಾಡಿ. ಇದರಿಂದ ದೇಹ ಸದಾ ಚುರುಕಾಗಿರಲು ಸಹಾಯವಾಗುತ್ತದೆ. ಮಾತ್ರವಲ್ಲ, ಸಮತೋಲಿತ ಆಹಾರವನ್ನು ಸೇವನೆ ಮಾಡುವುದು ಬಹಳ ಮುಖ್ಯ. ಸಮಯದ ಕೊರತೆಯಿದ್ದರೆ, ಸ್ವಲ್ಪವಾದರೂ ವ್ಯಾಯಾಮ ಮಾಡುವುದನ್ನು ಮರೆಯಬೇಡಿ. ಎಲ್ಲಕ್ಕಿಂತ ಮುಖ್ಯವಾದುದು ಎಂದರೆ ದೇಹವನ್ನು ಅಚಾನಕ್ ಚಟುವಟಿಕೆಗಳಿಂದ ದೂರವಿಡಬಾರದು. ಯಾವುದಾದರೂ ರೂಪದಲ್ಲಿ ಫಿಟ್‌ನೆಸ್ ಅನ್ನು ನಿರಂತರವಾಗಿ ಮುಂದುವರಿಸುವುದು ಆರೋಗ್ಯಕರ ಜೀವನಕ್ಕೆ ಅತ್ಯಂತ ಅಗತ್ಯವಾಗಿದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us