ಗಗನ್ ಮಾತಿನಿಂದ ಬೇಸರ; ಸುದೀಪ್ ಎದುರು ಕಣ್ಣೀರು ಹಾಕಿದ ತಾಂಡವ್ ರಾಮ್
ಗಗನ್ ಚಿನ್ನಪ್ಪ ಮತ್ತು ತಾಂಡವ್ ರಾಮ್ ಅವರು ಆಪ್ತ ಸ್ನೇಹಿತರು. ‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸುತ್ತಿರುವ ಅವರಿಬ್ಬರ ನಡುವೆ ಕೆಲವು ಸಂದರ್ಭಗಳಲ್ಲಿ ಮನಸ್ತಾಪ ಆಗಿದ್ದುಂಟು. ಆ ವಿಚಾರವನ್ನು ನಿರೂಪಕ ಕಿಚ್ಚ ಸುದೀಪ್ ಎದುರಲ್ಲಿ ತಾಂಡವ್ ರಾಮ್ ಅವರು ಹೇಳಿದ್ದಾರೆ.
ಗಗನ್ ಚಿನ್ನಪ್ಪ ಮತ್ತು ತಾಂಡವ್ ರಾಮ್ ಅವರು ಆಪ್ತ ಸ್ನೇಹಿತರು. ಆದರೆ ಬಿಗ್ ಬಾಸ್ ಮನೆಯಲ್ಲಿ ಸ್ನೇಹ ಕಾಪಾಡಿಕೊಳ್ಳುವುದು ಕಷ್ಟ. ‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋನಲ್ಲಿ ಸ್ಪರ್ಧಿಸುತ್ತಿರುವ ಅವರಿಬ್ಬರ ನಡುವೆ ಕೆಲವು ಸಂದರ್ಭಗಳಲ್ಲಿ ಮನಸ್ತಾಪ ಆಗಿದ್ದುಂಟು. ಆ ವಿಚಾರವನ್ನು ಸುದೀಪ್ ಎದುರಲ್ಲಿ ತಾಂಡವ್ ರಾಮ್ ಅವರು ಹೇಳಿದ್ದಾರೆ. ಈ ಮೊದಲು ಟಾಸ್ಕ್ ವೇಳೆ ಗಗನ್ ಚಿನ್ನಪ್ಪ ಅವರು ಅವಹೇಳನಕಾರಿ ಪದಗಳನ್ನು ಬಳಸಿ ತಾಂಡವ್ ರಾಮ್ ವಿರುದ್ಧ ಕೂಗಾಡಿದ್ದರು. ಆ ಬಗ್ಗೆ ತಮಗೆ ಇರುವ ನೋವನ್ನು ತೋಡಿಕೊಂಡಿರುವ ತಾಂಡವ್ ರಾಮ್ ಅವರು ಈಗ ಕಣ್ಣೀರು ಹಾಕಿದ್ದಾರೆ. ನವೆಂಬರ್ 29ರ ಸಂಚಿಕೆಯಲ್ಲಿ ಈ ಬಗ್ಗೆ ಚರ್ಚೆ ಆಗಿದೆ. ಈ ಸಂಚಿಕೆಯ ಪ್ರೋಮೋವನ್ನು ‘ಕಲರ್ಸ್ ಕನ್ನಡ’ ವಾಹಿನಿ ಹಂಚಿಕೊಂಡಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Follow Us

