AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Kichcha Sudeep

Kichcha Sudeep

ಕಿಚ್ಚ ಸುದೀಪ್​ ಅವರು ಕನ್ನಡ ಚಿತ್ರರಂಗದಲ್ಲಿ ಬಹುಬೇಡಿಕೆಯ ನಟನಾಗಿ ಗುರುತಿಸಿಕೊಂಡಿದ್ದಾರೆ. ಅವರು ಮೂಲತಃ ಶಿವಮೊಗ್ಗದವರು. ಹಲವು ವರ್ಷಗಳಿಂದ ಅವರು ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ. ಕನ್ನಡ ಮಾತ್ರವಲ್ಲದೇ ತೆಲುಗು, ಹಿಂದಿ ಸಿನಿಮಾಗಳಲ್ಲೂ ನಟಿಸಿ ಅವರು ಫೇಮಸ್​ ಆಗಿದ್ದಾರೆ.

ಕಿಚ್ಚ ಸುದೀಪ್​ ಅವರು ನಟನೆ ಮಾತ್ರವಲ್ಲದೇ ನಿರ್ದೇಶನದ ಮೂಲಕವೂ ಜನಮನ ಗೆದ್ದಿದ್ದಾರೆ. ಅವರು ಮೊದಲು ನಿರ್ದೇಶನ ಮಾಡಿದ ಸಿನಿಮಾ ‘ಮೈ ಆಟೋಗ್ರಾಫ್​’ ಸೂಪರ್​ ಹಿಟ್​ ಆಯಿತು. ಬಿಗ್​ ಬಾಸ್​ ಕಾರ್ಯಕ್ರಮದ ನಿರೂಪಕನಾಗಿಯೂ ಸುದೀಪ್ ಅವರು ಜನರಿಗೆ ಹತ್ತಿರ ಆಗಿದ್ದಾರೆ. ಕನ್ನಡದಲ್ಲಿ 2023ರವರೆಗೆ ಎಲ್ಲ 10 ಸೀಸನ್​ಗಳ ಬಿಗ್​ ಬಾಸ್​ ಕಾರ್ಯಕ್ರಮದ ನಿರೂಪಣೆಯನ್ನು ಅವರು ಮಾಡಿದ್ದಾರೆ.

ಕಿಚ್ಚ ಸುದೀಪ್​ ಅವರ ಪತ್ನಿಯ ಹೆಸರು ಪ್ರಿಯಾ. ಈ ದಂಪತಿಗೆ ಶಾನ್ವಿ ಎಂಬ ಮಗಳು ಇದ್ದಾರೆ. ಬೆಂಗಳೂರಿನ ಜೆಪಿ ನಗರದಲ್ಲಿ ಸುದೀಪ್​ ಅವರ ಮನೆ ಇದೆ. ‘ಸ್ಪರ್ಶ’, ‘ಹುಚ್ಚ’, ‘ವೀರ ಮದಕರಿ’, ‘ಕೆಂಪೇಗೌಡ’, ‘ಮಾಣಿಕ್ಯ’, ‘ವಿಕ್ರಾಂತ್​ ರೋಣ’, ‘ದಬಂಗ್​ 3’ ಮುಂತಾದವು ಸುದೀಪ್​ ನಟನೆಯ ಪ್ರಮುಖ ಸಿನಿಮಾಗಳು. ಗಾಯನದಲ್ಲೂ ಆಸಕ್ತಿ ಹೊಂದಿರುವ ಅವರು ಕೆಲವು ಸಿನಿಮಾದ ಗೀತೆಗಳಿಗೆ ಧ್ವನಿ ನೀಡಿದ್ದಾರೆ.

ಇನ್ನೂ ಹೆಚ್ಚು ಓದಿ

ಹೊಸ ವರ್ಷದಂದು ಬಾಕ್ಸ್ ಆಫೀಸ್​ನಲ್ಲಿ ಕೋಟಿ ಕೋಟಿ ಬಾಚಿದ ‘ಮಾರ್ಕ್’ ಸಿನಿಮಾ

ಹೊಸ ವರ್ಷದಂದು 'ಮಾರ್ಕ್' ಸಿನಿಮಾ ಭರ್ಜರಿ ಯಶಸ್ಸು ಕಂಡಿದೆ. ಡಿಸೆಂಬರ್ 25ರಂದು ಬಿಡುಗಡೆಯಾದ ಈ ಚಿತ್ರ 9 ದಿನಗಳಲ್ಲಿ 50 ಕೋಟಿ ರೂಪಾಯಿ ದಾಟಿರುವ ನಿರೀಕ್ಷೆ ಇದೆ. ಜನವರಿ 1ರಂದು ಚಿತ್ರ ಉತ್ತಮ ಕಲೆಕ್ಷನ್ ಮಾಡಿದೆ. ಹೊಸ ವರ್ಷವನ್ನು ದೊಡ್ಡ ಗಳಿಕೆಯೊಂದಿಗೆ ಪ್ರಾರಂಭಿಸಿದೆ. ಸುದೀಪ್ ನಟನೆಯ ಈ ಚಿತ್ರವು ಪ್ರೇಕ್ಷಕರು ಮತ್ತು ಅಭಿಮಾನಿಗಳಿಂದ ಉತ್ತಮ ಪ್ರತಿಕ್ರಿಯೆ ಪಡೆಯುತ್ತಿದೆ.

‘ಮಾರ್ಕ್’ ಹಾಗೂ ‘45’ ಸಿನಿಮಾಗಳು ಒಂದು ವಾರಕ್ಕೆ ಗಳಿಸಿದ್ದು ಎಷ್ಟು?

45 And Mark Movie Collection: ಮಾರ್ಕ್ ಹಾಗೂ 45 ಚಿತ್ರಗಳು ಬಿಡುಗಡೆಯಾಗಿ ಒಂದು ವಾರ ಕಳೆದಿದ್ದು, ಬಾಕ್ಸ್ ಆಫೀಸ್‌ನಲ್ಲಿ ಉತ್ತಮ ಗಳಿಕೆ ಮಾಡಿವೆ. ಎರಡೂ ಸಿನಿಮಾಗಳು ದೊಡ್ಡ ಬಜೆಟ್‌ನವಾಗಿದ್ದು, ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ. ಒಟ್ಟಾರೆ, ಈ ಚಿತ್ರಗಳು ನಿರ್ಮಾಪಕರಿಗೆ ಲಾಭ ತಂದಿವೆ ಎನ್ನಲಾಗಿದೆ. ಆ ಬಗ್ಗೆ ಇಲ್ಲಿದೆ ವಿವರ.

ಪಕ್ಕದಮನೆಯವರ ಬಗ್ಗೆ ಮಾತನಾಡಲ್ಲ; ವಿಜಯಲಕ್ಷ್ಮೀ ಕುರಿತ ಪ್ರಶ್ನೆಗೆ ಕಿಚ್ಚನ ರಿಯಾಕ್ಷನ್

ವಿಜಯಲಕ್ಷ್ಮೀ ಅವರು ಇತ್ತೀಚೆಗೆ ಸಾಕಷ್ಟು ಸುದ್ದಿಯಲ್ಲಿ ಇದ್ದಾರೆ. ಅವರು ಕೊಟ್ಟ ದೂರಿನ ವಿಷಯ ಚರ್ಚೆಗೆ ಕಾರಣ ಆಗಿದೆ. ಈಗ ವಿಜಯಲಕ್ಷ್ಮೀ ಅವರ ಬಗ್ಗೆ ಸುದೀಪ್ ಬಳಿ ಕೇಳಲಾಯಿತು ಮತ್ತು ಅವರು ಇದಕ್ಕೆ ಉತ್ತರಿಸಲು ನಿರಾಕರಿಸಿದರು. ಆ ಸಂದರ್ಭದ ವಿಡಿಯೋ ಇಲ್ಲಿದೆ ನೋಡಿ.

ಜೀವನದಲ್ಲಿ ಸುದೀಪ್ ಅವರಂತಹ ವ್ಯಕ್ತಿ ಸಿಕ್ಕಿದ್ದು ನನ್ನ ಪುಣ್ಯ; ನವೀನ್ ಚಂದ್ರ

ನವೀನ್ ಚಂದ್ರ 'ಮಾರ್ಕ್' ಚಿತ್ರದ ಮೂಲಕ ಕನ್ನಡಕ್ಕೆ ಪರಿಚಿತರಾಗಿ, ಸುದೀಪ್ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಹುಬ್ಬಳ್ಳಿ ಕಾರ್ಯಕ್ರಮಕ್ಕೆ ಸುದೀಪ್ ನೀಡಿದ ಸಹಾಯವನ್ನು ಸ್ಮರಿಸಿದ್ದಾರೆ. ಬಳ್ಳಾರಿಯಲ್ಲಿ ಹುಟ್ಟಿ ಬೆಳೆದ ನವೀನ್, ಸ್ಪಷ್ಟ ಕನ್ನಡ ಮಾತನಾಡುತ್ತಾರೆ. ತೆಲುಗು-ತಮಿಳು ಚಿತ್ರರಂಗದಲ್ಲಿ ಹೆಚ್ಚು ಸಕ್ರಿಯರಾಗಿದ್ದರೂ, ಕನ್ನಡದೊಂದಿಗಿನ ತಮ್ಮ ನಂಟನ್ನು ಮರೆತಿಲ್ಲ ಎಂದು ಹೇಳಿದ್ದಾರೆ.

‘ಮಾರ್ಕ್’ ವೀಕ್ಷಿಸುವಾಗ ಕಿಚ್ಚನ ಎದುರೇ ಗಿಲ್ಲಿ ಗೆಲ್ಲಬೇಕು ಎಂದ ಫ್ಯಾನ್ಸ್; ಸುದೀಪ್ ರಿಯಾಕ್ಷನ್ ಏನು?

ಕಿಚ್ಚ ಸುದೀಪ್ ಬಿಗ್ ಬಾಸ್ ನಿರೂಪಣೆಯಲ್ಲಿ ನಿಷ್ಪಕ್ಷಪಾತಕ್ಕೆ ಹೆಸರಾಗಿದ್ದಾರೆ. ಇತ್ತೀಚೆಗೆ ಅವರ 'ಮಾರ್ಕ್' ಸಿನಿಮಾ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, 50 ಕೋಟಿ ಗಳಿಕೆಯತ್ತ ಸಾಗುತ್ತಿದೆ. ಅಭಿಮಾನಿಗಳೊಡನೆ ಸಿನಿಮಾ ವೀಕ್ಷಿಸುವಾಗ, 'ಗಿಲ್ಲಿ ಗೆಲ್ಲಬೇಕು' ಎಂಬ ಘೋಷಣೆ ಕೇಳಿಬಂದಿವೆ. ಇದಕ್ಕೆ ಕಿಚ್ಚ ಯಾವ ರೀತಿ ನಡೆದುಕೊಂಡರು ಎಂಬುದು ಚರ್ಚೆಯಾಗಿದೆ.

2025ರಲ್ಲಿ ಕನ್ನಡ ಸಿನಿಮಾಗಳು ಸೋತಿದ್ದೇ ಜಾಸ್ತಿ; ಬುದ್ಧಿ ಕಲಿಯಬೇಕಾಗಿದ್ದು ಯಾರು?

2025ರ ವರ್ಷ ಮುಗಿದಿದೆ. ಈ ವರ್ಷ ಕನ್ನಡ ಚಿತ್ರರಂಗಕ್ಕೆ ಅಷ್ಟೇನೂ ಆಶಾದಾಯಕ ಆಗಿರಲಿಲ್ಲ. ಬೆರಳೆಣಿಕೆಯ ಸಿನಿಮಾಗಳು ಮಾತ್ರ ಗೆದ್ದಿವೆ. ಉಳಿದ ಸಿನಿಮಾಗಳು ಸೋತಿವೆ. ಸ್ಟಾರ್ ಸಿನಿಮಾಗಳು ಕೂಡ ಬಾಕ್ಸ್ ಆಫೀಸ್​​ನಲ್ಲಿ ನೆಲಕಚ್ಚಿದ ಉದಾಹರಣೆ ಇದೆ. ಈ ಎಲ್ಲ ಸಂಗತಿಗಳಿಂದ ಕನ್ನಡ ಚಿತ್ರರಂಗಕ್ಕೆ ನಷ್ಟ ಆಗಿದೆ.

ಸುದೀಪ್ ಬಳಿಕ ಪೈರಸಿ ವಿರುದ್ಧ ಧ್ವನಿ ಎತ್ತಿದ ಜಗ್ಗೇಶ್; ಕಾರಣ ಏನು?

ಇತ್ತೀಚೆಗೆ ಅನೇಕ ಸೆಲೆಬ್ರಿಟಿಗಳು ಪೈರಸಿ ಬಗ್ಗೆ ಧ್ವನಿ ಎತ್ತುತ್ತಾ ಇದ್ದಾರೆ. ಈಗ ಜಗ್ಗೇಶ್ ಅವರು ಪೈರಸಿ ಬಗ್ಗೆ ಮಾತನಾಡಿದ್ದಾರೆ. ಅವರು ಈ ಬಗ್ಗೆ ಮಾತನಾಡಲು ಕಾರಣವೂ ಇದೆ ಎಂದೇ ಹೇಳಬಹುದು. ಆ ಕಾರಣ ಏನು? ಏಕಾಏಕಿ ಜಗ್ಗೇಶ್ ಅವರು ಈ ಬಗ್ಗೆ ಧ್ವನಿ ಎತ್ತಿದ್ದು ಏಕೆ? ಆ ಬಗ್ಗೆ ಇಲ್ಲಿದೆ ವಿವರ.

ಬೆಂಗಳೂರು, ಮೈಸೂರಲ್ಲಿ ಅಭಿಮಾನಿಗಳ ಜೊತೆ ‘ಮಾರ್ಕ್​’ ನೋಡ್ತಾರೆ ಸುದೀಪ್; ಇಲ್ಲಿದೆ ವಿವರ

ಕಿಚ್ಚ ಸುದೀಪ್ ಅವರು 'ಮಾರ್ಕ್' ಸಿನಿಮಾ ಹಿಟ್ ಆದ ಹಿನ್ನೆಲೆಯಲ್ಲಿ ಡಿಸೆಂಬರ್ 31ರಂದು ಅಭಿಮಾನಿಗಳ ಜೊತೆ ಬೆಂಗಳೂರು ಹಾಗೂ ಮೈಸೂರಿನಲ್ಲಿ ಸಿನಿಮಾ ವೀಕ್ಷಿಸಲಿದ್ದಾರೆ. ಸಾಮಾನ್ಯವಾಗಿ ನೂಕುನುಗ್ಗಲು ತಪ್ಪಿಸಲು ಅವರು ಮೊದಲ ದಿನದ ಶೋಗಳನ್ನು ತಪ್ಪಿಸಿಕೊಳ್ಳುತ್ತಾರೆ. ಆದರೆ, 35 ಕೋಟಿ ಗಳಿಸಿ ಸೂಪರ್ ಹಿಟ್ ಆಗಿರುವ 'ಮಾರ್ಕ್' ಚಿತ್ರದ ಯಶಸ್ಸನ್ನು ಫ್ಯಾನ್ಸ್ ಜೊತೆ ಆಚರಿಸಲು ಈ ನಿರ್ಧಾರ ಕೈಗೊಂಡಿದ್ದಾರೆ.

ಸೋಮವಾರವೂ ‘ಮಾರ್ಕ್’, ‘45’ ಅಬ್ಬರದ ಕಲೆಕ್ಷನ್; ‘ಡೆವಿಲ್’ ಕಥೆ ಏನು?

ಕ್ರಿಸ್​ಮಸ್ ಪ್ರಯುಕ್ತ ತೆರೆಕಂಡ 'ಮಾರ್ಕ್' ಹಾಗೂ '45' ಸಿನಿಮಾಗಳು ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿವೆ. ಸಕಾರಾತ್ಮಕ ವಿಮರ್ಶೆ ಪಡೆದ ಈ ಚಿತ್ರಗಳು ಸೋಮವಾರವೂ ಉತ್ತಮ ಗಳಿಕೆ ಕಂಡಿವೆ. ಆದರೆ, ಈ ಎರಡು ಚಿತ್ರಗಳ ಅಬ್ಬರದ ನಡುವೆ 'ಡೆವಿಲ್' ಸಿನಿಮಾ ಗಳಿಕೆ ಕುಗ್ಗಿದ್ದು, ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಕಾಣುತ್ತಿಲ್ಲ.

ನಾಲ್ಕು ದಿನಕ್ಕೆ 35 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದ ‘ಮಾರ್ಕ್’; ದಾಖಲೆ ನಿರ್ಮಾಣ

ಕಿಚ್ಚ ಸುದೀಪ್ ನಟನೆಯ 'ಮ್ಯಾಕ್ಸ್' ಸಿನಿಮಾ ನಾಲ್ಕು ದಿನಗಳಲ್ಲಿ ಬರೋಬ್ಬರಿ 35 ಕೋಟಿ ರೂಪಾಯಿ ಗಳಿಸಿದೆ. ಕ್ರಿಸ್‌ಮಸ್ ರಜೆಗಳ ಲಾಭ ಪಡೆದು, ಮೊದಲ ದಿನ 15 ಕೋಟಿ ಕಲೆಕ್ಷನ್ ಮಾಡಿತ್ತು. ವಿತರಕರು ಇದನ್ನು ಕಮರ್ಷಿಯಲ್ ಹಿಟ್ ಎಂದು ಘೋಷಿಸಿದ್ದು, ಕರ್ನಾಟಕದಾದ್ಯಂತ ಹೌಸ್‌ಫುಲ್ ಪ್ರದರ್ಶನ ಕಾಣುತ್ತಿದೆ. ಸುದೀಪ್ ಅವರ ಅಭಿಮಾನಿಗಳು ಚಿತ್ರವನ್ನು ಮೆಚ್ಚಿ, ಇದು ಕ್ರಿಸ್‌ಮಸ್ ಬ್ಲಾಕ್‌ಬಸ್ಟರ್ ಎಂದು ಸಂಭ್ರಮಿಸಿದ್ದಾರೆ.

ನಾಲ್ಕು ದಿನಕ್ಕೆ ‘ಮಾರ್ಕ್’, ‘45’ ಮಾಡಿದ ಕಲೆಕ್ಷನ್ ಎಷ್ಟು ಕೋಟಿ?

ಡಿಸೆಂಬರ್‌ 25ರಂದು ತೆರೆಕಂಡ ಕನ್ನಡ ಸಿನಿಮಾಗಳಾದ ‘ಮಾರ್ಕ್’ ಮತ್ತು ‘45’ ಚಿತ್ರಗಳು ಬಾಕ್ಸ್ ಆಫೀಸ್​ನಲ್ಲಿ ಉತ್ತಮ ಕಲೆಕ್ಷನ್ ಮಾಡುತ್ತಿವೆ. ಹೊಸ ವರ್ಷದ ರಜಾದಿನಗಳಲ್ಲಿ ಎರಡೂ ಚಿತ್ರಗಳ ಗಳಿಕೆ ಹೆಚ್ಚುವ ನಿರೀಕ್ಷೆ ಇದೆ. ‘ಮಾರ್ಕ್’ ಚಿತ್ರದಲ್ಲಿ ಸುದೀಪ್ ನಟಿಸಿದರೆ, ‘45’ ಸಿನಿಮಾದಲ್ಲಿ ರಾಜ್ ಬಿ ಶೆಟ್ಟಿ, ಉಪೇಂದ್ರ ಹಾಗೂ ಶಿವಣ್ಣ ನಟಿಸಿದ್ದಾರೆ.

ನಾನು ಸಿನಿಮಾ ಡೈಲಾಗ್ ಮೂಲಕ ಟಾಂಟ್ ಕೊಡಲ್ಲ ಎಂದ ಸುದೀಪ್

ಸುದೀಪ್ ಅವರು ಸಿನಿಮಾ ಮೂಲಕ ಫೇಮಸ್ ಆದವರು. ಅವರ ಸಿನಿಮಾಗಳಲ್ಲಿ ಬರುವ ಡೈಲಾಗ್ ಅವರ ಸಿನಿಮಾಗೆ ಟಾಂಟ್ ಕೊಡುವ ರೀತಿಯಲ್ಲಿ ಇರುತ್ತದೆ ಎಂದು ಹೇಳಲಾಗಿತ್ತು. ಆದರೆ, ಹಾಗೆ ಎಂದಿಗೂ ಹೇಳಲ್ಲ ಎಂದು ಸುದೀಪ್ ಅವರು ಹೇಳಿದ್ದಾರೆ. ಈ ಬಗ್ಗೆ ಅವರು ಸುದ್ದಿಗೋಷ್ಠಿಯಲ್ಲಿ ಮಾತನ್ನು ಹೇಳಿದರು.