ಸಿಸಿಎಲ್ ಗೆಲುವನ್ನು ತಮ್ಮದೇ ಸ್ಟೈಲ್ನಲ್ಲಿ ಸೆಲೆಬ್ರೇಟ್ ಮಾಡಿದ ಸುದೀಪ್
ಕಿಚ್ಚ ಸುದೀಪ್ ನೇತೃತ್ವದ ಕರ್ನಾಟಕ ಬುಲ್ಡೋಜರ್ಸ್ ತಂಡ ಸಿಸಿಎಲ್ ಫೈನಲ್ ಅಲ್ಲಿ ಗೆಲುವು ಕಂಡಿದೆ. ಇದು ಅವರ ತಂಡ ಸಾಧಿಸಿರೋ ಮೂರನೇ ಗೆಲುವಾಗಿದೆ. ಫೆಬ್ರವರಿ 1ರಂದು ಈ ಪಂದ್ಯ ನಡೆದಿದೆ. ಈ ಪಂದ್ಯದಲ್ಲಿ ಎಲ್ಲರ ಸಂಘಟಿತ ಆಟದಿಂದ ಗೆಲುವು ಸಿಕ್ಕಿದೆ ಅನ್ನೋದು ವಿಶೇಷ.
ಫೆಬ್ರವರಿ 1ರಂದು ನಡೆದ ಬೆಂಗಾಲ್ ಟೈಗರ್ಸ್ vs ಕರ್ನಾಟಕ ಬುಲ್ಡೋಜರ್ಸ್ ನಡುವಿನ ಪಂದ್ಯದಲ್ಲಿ ಸುದೀಪ್ ಅವರ ತಂಡ ಗೆಲುವು ಕಂಡಿದೆ. ಎಲ್ಲರ ಸಂಘಟಿತ ಪ್ರದರ್ಶನದಿಂದ ಗೆಲುವು ನಮ್ಮದಾಗಿದೆ. ಗೆಲುವಿನ ಬಳಿಕ ಕಿಚ್ಚ ಸುದೀಪ್ ಅವರು ಕಪ್ ಎತ್ತಲು ತಮ್ಮದೇ ಸ್ಟೈಲ್ನಲ್ಲಿ ಬಂದರು. ಆ ಸಂದರ್ಭದ ವಿಡಿಯೋ ವೈರಲ್ ಆಗಿದೆ. ಕರ್ನಾಟಕ ಬುಲ್ಡೋಜರ್ಸ್ ತಂಡ ಸಿಸಿಎಲ್ ಇತಿಹಾಸದಲ್ಲಿ ಮೂರನೇ ಬಾರಿಗೆ ಕಪ್ ಎತ್ತಿದೆ. ಕಳೆದ ವರ್ಷ ಫಿನಾಲೆಗೆ ಏರಿದ್ದರೂ ಗೆಲುವು ಸಿಕ್ಕಿರಲಿಲ್ಲ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Feb 02, 2026 07:49 AM
Follow Us

