AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮಾನವೀಯತೆ ಮರೆತ್ರಾ ವೈದ್ಯರು?: ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗೆ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ಆರೋಪ

ಮಾನವೀಯತೆ ಮರೆತ್ರಾ ವೈದ್ಯರು?: ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ರೋಗಿಗೆ ಚಿಕಿತ್ಸೆ ನೀಡದೆ ನಿರ್ಲಕ್ಷ್ಯ ಆರೋಪ

ಶಿವಕುಮಾರ್ ಪತ್ತಾರ್
| Edited By: |

Updated on:Mar 05, 2026 | 12:36 PM

Share

ಕೊಪ್ಪಳ ಜಿಲ್ಲಾ ಆಸ್ಪತ್ರೆಯಲ್ಲಿ ಅಮಾನವೀಯ ಘಟನೆ ನಡೆದಿದೆ. ಚಿಕ್ಕಬೊಮ್ಮನಾಳದ ಹುಲಿಗೆಮ್ಮ ಎಂಬ ಗಾಯಗೊಂಡ ಮಹಿಳೆಯನ್ನು ರಾತ್ರಿ 11 ಗಂಟೆಗೆ ಕರೆತಂದರೂ, ಆಸ್ಪತ್ರೆ ಸಿಬ್ಬಂದಿ ಮತ್ತು ವೈದ್ಯರು ದಾಖಲಿಸಿಕೊಳ್ಳದೆ ನಿರ್ಲಕ್ಷ್ಯ ತೋರಿದ್ದಾರೆ. ಚಿಕಿತ್ಸೆಗಾಗಿ ಕಾದ ಮಹಿಳೆ ಸ್ಟ್ರೆಚರ್ ಮೇಲೆ ರಾತ್ರಿಯಿಡೀ ಮಲಗಿದ್ದರು. ಬೆಳಗ್ಗೆ 9 ಗಂಟೆಯವರೆಗೂ ಯಾವುದೇ ಆರೈಕೆ ಸಿಕ್ಕಿಲ್ಲವೆಂದು ಸಂಬಂಧಿಕರು ಆರೋಪಿಸಿದ್ದಾರೆ.

ಕೊಪ್ಪಳ, ಮಾರ್ಚ್​ 05: ಜಿಲ್ಲಾ ಆಸ್ಪತ್ರೆಯ ವೈದ್ಯರು ಮತ್ತು ಸಿಬ್ಬಂದಿಯ ನಿರ್ಲಕ್ಷ್ಯದ ಬಗ್ಗೆ ಗಂಭೀರ ಆರೋಪಗಳು ಕೇಳಿಬಂದಿವೆ. ಬಿದ್ದು ಗಾಯಗೊಂಡಿದ್ದ ಚಿಕ್ಕಬೊಮ್ಮನಾಳ ನಿವಾಸಿ ಹುಲಿಗೆಮ್ಮ ಎಂಬ ಮಹಿಳೆಯನ್ನು ರಾತ್ರಿ 11 ಗಂಟೆಗೆ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ, ವೈದ್ಯರು ಮಾನವೀಯತೆಯನ್ನು ಮರೆತು, ಅವರನ್ನು ಅಡ್ಮಿಟ್ ಮಾಡಿಕೊಳ್ಳದೆ ನಿರ್ಲಕ್ಷ್ಯ ತೋರಿದ್ದಾರೆ. ಗಾಯಾಳು ಹುಲಿಗೆಮ್ಮ ಚಿಕಿತ್ಸೆಗಾಗಿ ರಾತ್ರಿಯಿಡೀ ಸ್ಟ್ರೆಚರ್ ಮೇಲೆ ಮಲಗಿದ್ದರು. ಬೆನ್ನು ಮೂಳೆಗೆ ಪೆಟ್ಟಾಗಿ, ನರ ಬ್ಲಾಕ್ ಆಗಿದೆ ಎಂದು ವೈದ್ಯರು ಹೇಳಿದ್ದು, ಶಸ್ತ್ರಚಿಕಿತ್ಸೆ ಅಗತ್ಯವಿದೆ ಎಂದಿದ್ದಾರೆ. ಆದರೆ, ರಕ್ತದೊತ್ತಡ ಸಾಮಾನ್ಯ ಸ್ಥಿತಿಗೆ ಬರಲಿ, ಹಿಂದಿನ ಗಾಯ ವಾಸಿಯಾಗಲಿ, ಮೂತ್ರ ವಿಸರ್ಜನೆ ಸರಿಯಾಗಲಿ, ಊರಿಗೆ ಹೋಗಿ ಚಿಕಿತ್ಸೆ ಪಡೆದು ಬನ್ನಿ ಎಂದು ಹೇಳಿ ದಾಖಲಾತಿಯನ್ನು ನಿರಾಕರಿಸಿದ್ದಾರೆ. ಬೆಳಗ್ಗೆ 9 ಗಂಟೆಯಾದರೂ ಯಾವುದೇ ವೈದ್ಯರು ಅವರತ್ತ ತಿರುಗಿಯೂ ನೋಡಿಲ್ಲ ಎಂದು ಸಂಬಂಧಿಕರು ಆರೋಪಿಸಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

 

Published on: Mar 05, 2026 12:36 PM
Follow Us