‘ಬಿಲ್ಲ ರಂಗ ಬಾಷ’ ತಡ ಆಗ್ತಿರೋದಕ್ಕೆ ರಿಯಲ್ ಕಾರಣ ತಿಳಿಸಿದ ಕಿಚ್ಚ ಸುದೀಪ್
ಕಳೆದ ಜುಲೈನಿಂದ ವರ್ಷಾಂತ್ಯದ ತನಕ ಕಿಚ್ಚ ಸುದೀಪ್ ಅವರು ಬ್ಯುಸಿ ಆಗಿದ್ದರು. ಆದ್ದರಿಂದ ಈಗ ಅವರು ಬ್ರೇಕ್ ತೆಗೆದುಕೊಂಡಿದ್ದಾರೆ. ಆ ಕಾರಣಕ್ಕಾಗಿ ‘ಬಿಲ್ಲ ರಂಗ ಬಾಷ’ ಸಿನಿಮಾದ ಕೆಲಸಗಳು ಆರಂಭ ಆಗಲು ಸಮಯ ಹಿಡಿಯುತ್ತಿದೆ. ಆ ಬಗ್ಗೆ ಸ್ವತಃ ಸುದೀಪ್ ಅವರು ಮಾತನಾಡಿದ್ದಾರೆ. ವಿಡಿಯೋ ನೋಡಿ..
ಕಿಚ್ಚ ಸುದೀಪ್ ಅವರು ಬೇರೆ ಬೇರೆ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ. ಬಿಗ್ ಬಾಸ್, ಸಿಸಿಎಲ್ ಮುಗಿಯಿತು. ‘ಬಿಲ್ಲ ರಂಗ ಬಾಷ’ (Billa Ranga Baasha) ಸಿನಿಮಾ ಸೆಟ್ಟೇರುವುದು ತಡ ಆಗುತ್ತಿದೆ. ಅದಕ್ಕೆ ಕಾರಣ ಏನು ಎಂಬುದನ್ನು ಸ್ವತಃ ಸುದೀಪ್ ಅವರು ವಿವರಿಸಿದ್ದಾರೆ. ‘ನಾನು ಮಾರ್ಕ್ ಸಿನಿಮಾಗಾಗಿ ಹಗಲು ರಾತ್ರಿ ಕೆಲಸ ಮಾಡಿದ್ದೆ. ಬಳಿಕ ಸಿಸಿಎಲ್ ನನಗೆ ಸ್ವಲ್ಪ ರಿಲೀಫ್ ನೀಡಿತು. ನಾನು ಕೂಡ ಮನುಷ್ಯ. ಸಿನಿಮಾ ಮಾಡಬೇಕು. ಆದರೆ ಯಾಂತ್ರಿಕವಾಗಿ ಸಿನಿಮಾ ಮಾಡೋಕೆ ನನ್ನಿಂದ ಆಗಲ್ಲ. ನನಗೆ ಒಂದು ಸಣ್ಣ ಬ್ರೇಕ್ ಬೇಕು. ಯಾವುದನ್ನಾದರೂ ನಾವು ತುಂಬಾ ಪ್ರೀತಿಸಿದರೆ ಅದರಿಂದ ನಾವು ಸ್ವಲ್ಪ ದೂರ ಇರಬೇಕು. ಆಗ ಮತ್ತೆ ಪ್ರೀತಿ ಬೆಳೆಯುತ್ತದೆ. ಒಮ್ಮೆ ಬಿಲ್ಲ ರಂಗ ಬಾಷ ಶುರುವಾದರೆ ಮತ್ತೆ ಈ ಕಡೆ ತಿರುಗಿ ನೋಡಲ್ಲ. 8-9 ತಿಂಗಳು ಅದರಲ್ಲೇ ಕಳೆಯುತ್ತದೆ’ ಎಂದು ಸುದೀಪ್ (Kichcha Sudeep) ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಬಾಂಗ್ಲಾದೇಶ ಸೇನೆಯ ಟ್ಯಾಂಕ್ ಫೈರಿಂಗ್ ಅಭ್ಯಾಸದ ವೇಳೆ ಸ್ಫೋಟ; ಇಬ್ಬರು ಸಾವು
ಅತಿಯಾಗಿ ಮಾತನಾಡುವ ಬಿಗ್ ಬಾಸ್ ಸ್ಪರ್ಧಿಗಳಿಗೆ ವಾರ್ನಿಂಗ್ ಕೊಟ್ಟ ಅವಿನಾಶ್
ಚರ್ಚೆಗೆ ಗ್ರಾಸವಾಯ್ತು ಬಿಜೆಪಿ ಎಂಎಲ್ಗೆ ಸಚಿವ ಮಲ್ಲಿಕಾರ್ಜುನ್ ಬೈದ ಬೈಗುಳ
ಒಂದೇ ಗೋರಿಗೆ ಹಿಂದೂ-ಮುಸ್ಲಿಂ ಪೂಜೆ: ಬೀದರ್ನಲ್ಲೊಂದು ಭಾವೈಕ್ಯತೆಯ ಜಾತ್ರೆ

