AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸೇಡು ತೀರಿಸಿಕೊಂಡ ಯಶಸ್; ಇಡೀ ಸೀಸನ್ ನಾಮಿನೇಟ್ ಆದ ಗಗನ್

ಬಿಗ್ ಬಾಸ್ ಮನೆಯಲ್ಲಿ ಯಶಸ್ ಭರ್ಜರಿ ಸೇಡು ತೀರಿಸಿಕೊಂಡಿದ್ದಾರೆ. ಗುಳ್ಳೆನರಿ ಸೀಕ್ರೆಟ್ ಟಾಸ್ಕ್ ಗೆದ್ದು ವಿಶೇಷ ಅಧಿಕಾರ ಪಡೆದ ಯಶಸ್, ತಮ್ಮ ಮೇಲಿದ್ದ ಇಡೀ ಸೀಸನ್ ನಾಮಿನೇಷನ್ ಅನ್ನು ಗಗನ್ ಅವರಿಗೆ ವರ್ಗಾಯಿಸಿದ್ದಾರೆ. ಕಿಚ್ಚ ಸುದೀಪ್ ಮುಂದೆ ಯಶಸ್ ತೆಗೆದುಕೊಂಡ ಈ ದಿಢೀರ್ ನಿರ್ಧಾರದಿಂದ ಗಗನ್ ಪೆಚ್ಚಾಗಿದ್ದಾರೆ.

ಸೇಡು ತೀರಿಸಿಕೊಂಡ ಯಶಸ್; ಇಡೀ ಸೀಸನ್ ನಾಮಿನೇಟ್ ಆದ ಗಗನ್
ಬಿಗ್ ಬಾಸ್ ಕನ್ನಡ
ರಾಜೇಶ್ ದುಗ್ಗುಮನೆ
|

Updated on:Nov 29, 2026 | 7:15 AM

Share

ಮುಖ್ಯಾಂಶಗಳು

  • ಗುಳ್ಳೆನರಿ ಸೀಕ್ರೆಟ್ ಟಾಸ್ಕ್ ಗೆದ್ದು ವಿಶೇಷ ಅಧಿಕಾರ ಪಡೆದ ಯಶಸ್
  • ಕಿಚ್ಚ ಸುದೀಪ್ ಮುಂದೆ ಕ್ಷಣಾರ್ಧದಲ್ಲೇ ನಿರ್ಧಾರ ಪ್ರಕಟಿಸಿದ ಸ್ಪರ್ಧಿ
  • ಇಡೀ ಸೀಸನ್ ನಾಮಿನೇಟ್ ಆಗಿ ತೀವ್ರ ಪೆಚ್ಚಾದ ಗಗನ್ ಚಿನ್ನಪ್ಪ

ಬಿಗ್ ಬಾಸ್ ಮನೆಯಲ್ಲಿ ಯಾವಾಗ ಏನಾಗುತ್ತದೆ ಎಂದು ತಿಳಿಯೋದಿಲ್ಲ. ಅಲ್ಲಿ ಕರ್ಮ ಅನ್ನೋದು ಬಹುಬೇಗ ಕೆಲಸ ಮಾಡುತ್ತದೆ. ಯಾರಿಗಾದರೂ ಕೆಟ್ಟದ್ದು ಮಾಡಿದರೆ ಅಥವಾ ಬಯಸಿದರೆ ಅದು ಕೆಲವೇ ಸಮಯದಲ್ಲಿ ಹಿಂದಿರುಗಿ ಬರುತ್ತದೆ. ಅದಕ್ಕೆ ಈಗ ಬಿಗ್ ಬಾಸ್​ ಮನೆಯಲ್ಲಿ ನಡೆದ ಅಚ್ಚರಿಯ ಬೆಳವಣಿಗೆಯೊಂದು ಉತ್ತಮ ಉದಾಹರಣೆ. ಇಡೀ ಸೀಸನ್ ನಾಮಿನೇಟ್ ಆಗಿದ್ದ ಯಶಸ್, ಇದೀಗ ತಮ್ಮ ಮೇಲಿದ್ದ ಆ ಕಂಟಕವನ್ನು ಗಗನ್ ಅವರಿಗೆ ವರ್ಗಾಯಿಸುವ ಮೂಲಕ ಸೇಡು ತೀರಿಸಿಕೊಂಡಿದ್ದಾರೆ.

ಹಿನ್ನೆಲೆ ಏನು?

ಈ ಮೊದಲು ಬಿಗ್ ಬಾಸ್ ಗಗನ್ ಅವರಿಗೆ ಒಂದು ವಿಶೇಷ ಅಧಿಕಾರ ನೀಡಿದ್ದರು. ಮನೆಯ ಒಬ್ಬ ಸದಸ್ಯರನ್ನು ಇಡೀ ಸೀಸನ್ ನಾಮಿನೇಟ್ ಮಾಡುವ ಅವಕಾಶ ಅದಾಗಿತ್ತು. ಈ ಅಧಿಕಾರವನ್ನು ಬಳಸಿಕೊಂಡಿದ್ದ ಗಗನ್, ಯಶಸ್ ಅವರನ್ನು ಇಡೀ ಸೀಸನ್‌ಗೆ ನಾಮಿನೇಟ್ ಮಾಡಿದ್ದರು. ಇದರಿಂದ ಯಶಸ್ ತೀವ್ರ ಕಂಗಾಲಾಗಿದ್ದರು.

ತಿರುಗೇಟು ನೀಡಿದ ಯಶಸ್

ಈ ವಾರ ನಡೆದ ‘ಗುಳ್ಳೆನರಿ’ ಸೀಕ್ರೆಟ್ ಟಾಸ್ಕ್‌ನಲ್ಲಿ ಯಶಸ್ ಗೆಲುವು ಸಾಧಿಸಿದ್ದಾರೆ. ಈ ಗೆಲುವಿನ ಫಲವಾಗಿ ಅವರಿಗೆ ವಿಶೇಷ ಅಧಿಕಾರವೊಂದು ಸಿಕ್ಕಿದೆ. ತಮ್ಮ ಮೇಲಿರುವ ಇಡೀ ಸೀಸನ್ ನಾಮಿನೇಷನ್ ಶಿಕ್ಷೆಯನ್ನು ಬೇರೊಬ್ಬರಿಗೆ ಹಸ್ತಾಂತರಿಸುವ ಅಥವಾ ತಾವೇ ಉಳಿಸಿಕೊಳ್ಳುವ ಆಯ್ಕೆಯನ್ನು ಬಿಗ್ ಬಾಸ್ ನೀಡಿದ್ದರು.

ಸುದೀಪ್ ಮಾತಿಗೆ ಕ್ಷಣಾರ್ಧದಲ್ಲೇ ಉತ್ತರ

ವೀಕೆಂಡ್ ಎಪಿಸೋಡ್‌ನಲ್ಲಿ ಕಿಚ್ಚ ಸುದೀಪ್ ಅವರು ಈ ವಿಚಾರವನ್ನು ಪ್ರಸ್ತಾಪಿಸಿದರು. ‘ನೀವು ಈ ನಾಮಿನೇಷನ್ ಅನ್ನು ಬೇರೊಬ್ಬರಿಗೆ ಹಸ್ತಾಂತರಿಸಬಹುದು ಅಥವಾ ಒಳ್ಳೆಯವರು ಅಂತಾದರೆ ನೀವೇ ಇಟ್ಟುಕೊಳ್ಳಬಹುದು. ನಿಮ್ಮ ನಿರ್ಧಾರ ತಿಳಿಸಲು 30 ಸೆಕೆಂಡ್ ಅವಕಾಶ ಇದೆ’ ಎಂದು ಸುದೀಪ್ ಹೇಳಿದರು.

ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಗಗನ್ ಚಿನ್ನಪ್ಪ ಹೊಸ ವಿವಾದ; ವಿಕೆಂಡ್​ನಲ್ಲಿ ಚರ್ಚೆ ಆಗಬೇಕು ಎಂದ ನೆಟ್ಟಿಗರು

ಪೆಚ್ಚಾದ ಗಗನ್

ಸುದೀಪ್ ಮಾತು ಮುಗಿಯುತ್ತಿದ್ದಂತೆಯೇ ಯಶಸ್ ಸ್ವಲ್ಪವೂ ಯೋಚಿಸಲಿಲ್ಲ. ‘ನಾನು ಇದನ್ನು ಗಗನ್ ಅವರಿಗೆ ಹಸ್ತಾಂತರ ಮಾಡುತ್ತೇನೆ. ನನಗೆ ಇದನ್ನು ಕೊಟ್ಟಿದ್ದು ಅವರೇ. ಹಾಗಾಗಿ, ಇದನ್ನು ಅವರಿಗೇ ಮರಳಿಸುತ್ತಿದ್ದೇನೆ. ಅವರು ನೀಡಿದ ಕಾರಣಗಳೇ ನನ್ನವು ಕೂಡ’ ಎಂದು ಖಡಕ್ ಆಗಿ ಹೇಳಿದರು. ಯಶಸ್ ಅವರ ಈ ಅನಿರೀಕ್ಷಿತ ನಿರ್ಧಾರದಿಂದ ಗಗನ್ ಪೆಚ್ಚಾದರು. ಗಗನ್ ಅವರು ಯಶಸ್​​ನ ಹೆಣ್ಣು ಎಂಬ ರೀತಿ ಕರೆದಿದ್ದರು. ಇದಕ್ಕೂ ಯಶಸ್ ಸೇಡುತೀರಿಸಿಕೊಂಡಂತೆ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:13 am, Sun, 29 November 26

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More
ಹೋರಾಟ ಮುಂದುವರಿಯುತ್ತೆ ಎಂದ ನಾಗಲಕ್ಷ್ಮೀ
ಹೋರಾಟ ಮುಂದುವರಿಯುತ್ತೆ ಎಂದ ನಾಗಲಕ್ಷ್ಮೀ
ವಿರಾಜಪೇಟೆ: ಹುಲಿ ಸೆರೆಗೆ ಅರಣ್ಯ ಇಲಾಖೆಯಿಂದ ಹಗಲು-ರಾತ್ರಿ ಕಾರ್ಯಾಚರಣೆ
ವಿರಾಜಪೇಟೆ: ಹುಲಿ ಸೆರೆಗೆ ಅರಣ್ಯ ಇಲಾಖೆಯಿಂದ ಹಗಲು-ರಾತ್ರಿ ಕಾರ್ಯಾಚರಣೆ
ಆಶಾ ಕಾರ್ಯಕರ್ತೆಯರು ಮತ್ತು ಸರ್ಕಾರದ ನಡುವೆ ಕೊಂಡಿಯಾದವರು ಇವರೇ
ಆಶಾ ಕಾರ್ಯಕರ್ತೆಯರು ಮತ್ತು ಸರ್ಕಾರದ ನಡುವೆ ಕೊಂಡಿಯಾದವರು ಇವರೇ
ತಿರುಪ್ಪರಣಕುಂದ್ರಮ್ ಬೆಟ್ಟದಲ್ಲಿ ದೀಪ ಬೆಳಗುತ್ತಿದ್ದಂತೆ ಭಾವುಕರಾದ ಭಕ್ತರು
ತಿರುಪ್ಪರಣಕುಂದ್ರಮ್ ಬೆಟ್ಟದಲ್ಲಿ ದೀಪ ಬೆಳಗುತ್ತಿದ್ದಂತೆ ಭಾವುಕರಾದ ಭಕ್ತರು
ಕ್ಷೇತ್ರ ಮರುವಿಂಗಡಣೆ ವಿಧೇಯಕ​ ಕುರಿತು ರಾಹುಲ್ ಗಾಂಧಿ ಸುದ್ದಿಗೋಷ್ಠಿ
ಕ್ಷೇತ್ರ ಮರುವಿಂಗಡಣೆ ವಿಧೇಯಕ​ ಕುರಿತು ರಾಹುಲ್ ಗಾಂಧಿ ಸುದ್ದಿಗೋಷ್ಠಿ
ಆಶಾ ಕಾರ್ಯಕರ್ತೆಯರಿಗೆ ಗುಡ್‌ನ್ಯೂಸ್‌: ಸಿಎಂ ಸಂಧಾನ ಸಕ್ಸಸ್‌
ಆಶಾ ಕಾರ್ಯಕರ್ತೆಯರಿಗೆ ಗುಡ್‌ನ್ಯೂಸ್‌: ಸಿಎಂ ಸಂಧಾನ ಸಕ್ಸಸ್‌
ಬಿಗ್​​ಬಾಸ್ ಸ್ಪರ್ಧಿಯ ಅನುಕರಣೆ ಮಾಡಿದ ಕಿಚ್ಚ ಸುದೀಪ್: ವಿಡಿಯೋ ನೋಡಿ
ಬಿಗ್​​ಬಾಸ್ ಸ್ಪರ್ಧಿಯ ಅನುಕರಣೆ ಮಾಡಿದ ಕಿಚ್ಚ ಸುದೀಪ್: ವಿಡಿಯೋ ನೋಡಿ
ಧರ್ಮ ದಂಗಲ್: ಕಾರ್ಯಕ್ರಮದಿಂದ ಅರ್ಧಕ್ಕೆ ಎದ್ದು ಹೋದ ವಿಜಯೇಂದ್ರ
ಧರ್ಮ ದಂಗಲ್: ಕಾರ್ಯಕ್ರಮದಿಂದ ಅರ್ಧಕ್ಕೆ ಎದ್ದು ಹೋದ ವಿಜಯೇಂದ್ರ
ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್ ಹೆದ್ದಾರಿಯಲ್ಲಿ ಭೀಕರ ಅಪಘಾತ: ಮೂವರು ಸಾವು
ಬೆಂಗಳೂರು-ಮೈಸೂರು ಎಕ್ಸ್​ಪ್ರೆಸ್ ಹೆದ್ದಾರಿಯಲ್ಲಿ ಭೀಕರ ಅಪಘಾತ: ಮೂವರು ಸಾವು
ಯಶಸ್ ಚಾಣಾಕ್ಷತೆಗೆ ಮೆಚ್ಚಿದ ಸುದೀಪ್; ಕಿಚ್ಚನ ಚಪ್ಪಾಳೆ ಫಿಕ್ಸ್?
ಯಶಸ್ ಚಾಣಾಕ್ಷತೆಗೆ ಮೆಚ್ಚಿದ ಸುದೀಪ್; ಕಿಚ್ಚನ ಚಪ್ಪಾಳೆ ಫಿಕ್ಸ್?