ಬಿಗ್ ಬಾಸ್ ಮನೆಯಲ್ಲಿ ಗಗನ್ ಚಿನ್ನಪ್ಪ ಹೊಸ ವಿವಾದ; ವಿಕೆಂಡ್ನಲ್ಲಿ ಚರ್ಚೆ ಆಗಬೇಕು ಎಂದ ನೆಟ್ಟಿಗರು
ಬಿಗ್ ಬಾಸ್ ಮನೆಯಲ್ಲಿ ಗಗನ್ ಚಿನ್ನಪ್ಪ ಆಡಿದ ನಾಲ್ಕು ಹೆಣ್ಣುಮಕ್ಕಳು ಎಂಬ ಮಾತು ಹೊಸ ವಿವಾದಕ್ಕೆ ಕಾರಣವಾಗಿದೆ. ಗಾನವಿ, ಸೌಂದರ್ಯಾ ಮತ್ತು ಆಸಿಯಾ ಮಾತ್ರ ಇರುವಾಗ ಗಗನ್ ಹೀಗೆ ಹೇಳಿದ್ದಕ್ಕೆ ನೆಟ್ಟಿಗರು ನಾನಾ ರೀತಿ ವಾದ ಮಂಡಿಸುತ್ತಿದ್ದಾರೆ. ಯಶಸ್ ಕುರಿತು ಈ ಮಾತು ಬಂದಿದೆಯೇ ಎಂಬ ಪ್ರಶ್ನೆಯೂ ಎದ್ದಿದೆ. ವೀಕೆಂಡ್‌ನಲ್ಲಿ ಇದು ಚರ್ಚೆಯಾಗಲಿ ಎಂಬುದು ಒತ್ತಾಯ.

ಮುಖ್ಯಾಂಶಗಳು
- ಊಟದ ವೇಳೆ ಗಗನ್ ಮಾತಿಗೆ ಶುರುವಾಯ್ತು ಹೊಸ ಚರ್ಚೆ
- ತಕ್ಷಣ ಪ್ಲೇಟ್ ಬದಲಿಸಿದ ಗಗನ್
- ನಾಟಕೀಯತೆ ಬಗ್ಗೆ ಮಾತು
ಬಿಗ್ ಬಾಸ್ ಮನೆಯಲ್ಲಿ ಗಗನ್ ಚಿನ್ನಪ್ಪ ಸುತ್ತ ಮತ್ತೊಂದು ಹೊಸ ವಿವಾದ ಸುತ್ತಿಕೊಂಡಿದೆ. ಮನೆಯಲ್ಲಿ ಸದ್ಯ ಇರುವ ಮಹಿಳಾ ಸ್ಪರ್ಧಿಗಳ ಸಂಖ್ಯೆಯ ವಿಚಾರವಾಗಿ ಗಗನ್ ಆಡಿದ ಮಾತುಗಳು ಇದೀಗ ಚರ್ಚೆಗೆ ಗ್ರಾಸವಾಗಿವೆ. ವೀಕೆಂಡ್‌ನಲ್ಲಿ ಈ ವಿಷಯ ಚರ್ಚೆಗೆ ಬರಬೇಕು ಎಂದು ಅಭಿಮಾನಿಗಳು ಆಗ್ರಹಿಸುತ್ತಿದ್ದಾರೆ. ಈ ವಿಷಯವಾಗಿ ಗಗನ್ಗೆ ವೀಕೆಂಡ್‌ನಲ್ಲಿ ಪ್ರಶ್ನೆಗಳು ಎದುರಾಗುತ್ತವೆಯೇ ಎನ್ನುವ ಪ್ರಶ್ನೆ ಮೂಡಿದೆ.
ಸದ್ಯ ಬಿಗ್ ಬಾಸ್ ಮನೆಯಲ್ಲಿರುವ ಮಹಿಳಾ ಸ್ಪರ್ಧಿಗಳು ಎಂದರೆ ಗಾನವಿ, ಸೌಂದರ್ಯಾ ಮತ್ತು ಆಸಿಯಾ . ಆದರೆ ಗಗನ್ ಚಿನ್ನಪ್ಪ ಮಾತ್ರ ಮನೆಯಲ್ಲಿ ನಾಲ್ಕು ಮಹಿಳಾ ಸ್ಪರ್ಧಿಗಳಿದ್ದಾರೆ ಎಂದು ಹೇಳಿರುವುದು ಗೊಂದಲ ಮತ್ತು ಚರ್ಚೆಗೆ ಕಾರಣವಾಗಿದೆ.
ತಾಂಡವ್, ಪ್ರಶಾಂತ್ ಜೊತೆ ಕುಳಿತು ಗಗನ್ ಊಟ ಮಾಡುತ್ತಿದ್ದ ವೇಳೆ ಈ ಮಾತುಕತೆ ನಡೆದಿದೆ. ಆಗ ತಾಂಡವ್, ಮನೆಯಲ್ಲಿ ಮೂರು ಹೆಣ್ಣುಮಕ್ಕಳಿದ್ದಾರೆ ಮತ್ತು ಅವರು ಬಹಳ ಡೇಂಜರ್ ಎಂದು ಹೇಳಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿದ ಗಗನ್, ನಾಲ್ಕು ಹೆಣ್ಣುಮಕ್ಕಳು ಇರೋದಲ್ವ ಎಂದು ಹೇಳಿ ಮುಗುಳುನಗೆ ನಕ್ಕಿದ್ದಾರೆ.
ಮನೇಲಿ ನಾಲ್ಕು ಜನ ಹೆಣ್ಣುಮಕ್ಳು ಇದ್ದರೆ
want to who is this 4th lady clown mentioned He is talking nonsense day by day And this will also be edited from the episode for sure #BBK13 https://t.co/8FV6gJ9jf3
— kichcha’s die hard fan (@preetamtxd) November 26, 2026
GAGAN: “Four women in the house,” apparently.
@KicchaSudeep should ask him to name all four. Let’s see! 🗣️
And where’s the same Prasanth Pioneer’s fight for women’s dignity now? Why is he silent when it’s his friend?🤔
@ColorsKannada @JHSKannada #BBK13 https://t.co/skxWDABaPj
— GROYPER (@PrithviRPatil) November 26, 2026
ಆ ಬಳಿಕ ತಾಂಡವ್ ಏನನ್ನೋ ಎಚ್ಚರಿಕೆ ಕೊಡುವಂತೆ ಮಾತನಾಡಿದ್ದಾರೆ. ತಕ್ಷಣವೇ ನಾಟಕೀಯವಾಗಿ ಹೌದು, ಮೂವರೇ ಇದ್ದಿದ್ದು ಎಂದು ಗಗನ್ ಮಾತು ಬದಲಿಸಿದ್ದಾರೆ. ಸೋನಿಕಾ ಕೂಡ ಇದ್ದಾರೆ ಎಂದುಕೊಂಡೆ ಎಂದು ಸಮಜಾಯಿಷಿ ನೀಡಿದ್ದಾರೆ. ಆದರೆ ಗಗನ್ ಮಾತಿನಲ್ಲಿ ನಾಟಕೀಯತೆ ಎದ್ದು ಕಾಣುತ್ತಿತ್ತು ಎಂಬುದು ವೀಕ್ಷಕರ ಅಭಿಪ್ರಾಯವಾಗಿದೆ.
ಇದನ್ನೂ ಓದಿ: ಬಿಗ್ ಬಾಸ್ ಫಿನಾಲೆ ಹೊಸ್ತಿಲಲ್ಲಿ ಯಶಸ್ ಆಟಕ್ಕೆ ಭರ್ಜರಿ ಮೈಲೇಜ್; ಬಿಗ್ ಬಾಸ್ ಕಡೆಯಿಂದಲೇ ಮೆಚ್ಚುಗೆ
ಇನ್ನೊಂದೆಡೆ, ಯಶಸ್ ಅವರನ್ನು ಉದ್ದೇಶಿಸಿ ಹೆಣ್ಣು ಎಂಬರ್ಥದಲ್ಲಿ ಗಗನ್ ಹೀಗೆ ಹೇಳಿರಬಹುದು ಎಂದು ನೆಟ್ಟಿಗರು ವಾದ ಮಂಡಿಸುತ್ತಿದ್ದಾರೆ. ಯಶಸ್ ಸದಾ ಮಹಿಳಾ ಸ್ಪರ್ಧಿಗಳ ಜೊತೆ ಇರುತ್ತಾರೆ ಎಂಬ ಆರೋಪ ಇರುವುದರಿಂದ, ಆ ಕಾರಣಕ್ಕೂ ಗಗನ್ ಈ ರೀತಿ ಹೇಳಿರಬಹುದು ಎನ್ನಲಾಗುತ್ತಿದೆ. ಹಾಗೊಂದು ವೇಳೆ ಇಲ್ಲದಿದ್ದರೆ, ಎರಡು ವಾರದ ಹಿಂದೆಯೇ ಮನೆಯಿಂದ ಹೊರಹೋದ ಸೋನಿಕಾ ಅವರನ್ನು ಯಾಕೆ ಪರಿಗಣಿಸುತ್ತಾರೆ ಎಂಬ ಪ್ರಶ್ನೆಯೂ ಮೂಡಿದೆ. ಈ ವಿವಾದ ವೀಕೆಂಡ್ ಪಂಚಾಯಿತಿಯಲ್ಲಿ ಚರ್ಚೆಯಾಗಲಿ ಎಂಬುದು ಅಭಿಮಾನಿಗಳ ಒತ್ತಾಯವಾಗಿದೆ. ಫಿನಾಲೆ ಸಮೀಪಿಸುವ ಈ ಸಮಯದಲ್ಲಿ ಈ ರೀತಿ ಮಾತಿನ ಲಯ ತಪ್ಪುವುದು ಸ್ಪರ್ಧಿಗಳ ಆಟಕ್ಕೆ ದೊಡ್ಡ ಮಟ್ಟದಲ್ಲಿ ಮುಳುವಾಗುವ ಸಾಧ್ಯತೆ ಇರುತ್ತದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




