AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವೈರಲ್ ವಿಡಿಯೋ ವಿವಾದ: ಇನ್‌ಫ್ಲುಯೆನ್ಸರ್‌ಗೆ ಮಾನನಷ್ಟ ನೋಟಿಸ್ ಕಳುಹಿಸಿಲ್ಲ ಎಂದ ಶಾರುಖ್ ಖಾನ್ ಟೀಮ್

ಅನಂತ್ ಅಂಬಾನಿ ಜೊತೆಗಿನ ವೈರಲ್ ವಿಡಿಯೋ ವಿಚಾರವಾಗಿ ಇನ್‌ಫ್ಲುಯೆನ್ಸರ್ ಸುವಿಜ್ಞಾ ಶರ್ಮಾ ಅವರಿಗೆ ಶಾರುಖ್ ಖಾನ್ ಮಾನನಷ್ಟ ನೋಟಿಸ್ ಕಳುಹಿಸಿದ್ದಾರೆ ಎಂಬ ಸುದ್ದಿ ಸುಳ್ಳು. ಈ ಕುರಿತು ಶಾರುಖ್ ಕಾನೂನು ತಂಡ ಸ್ಪಷ್ಟನೆ ನೀಡಿದೆ. ವೈರಲ್ ಆಗುತ್ತಿರುವ ಲೀಗಲ್ ನೋಟಿಸ್ ಸಂಪೂರ್ಣ ನಕಲಿ ಎಂದು ವಕೀಲರು ತಿಳಿಸಿದ್ದಾರೆ.

ವೈರಲ್ ವಿಡಿಯೋ ವಿವಾದ: ಇನ್‌ಫ್ಲುಯೆನ್ಸರ್‌ಗೆ ಮಾನನಷ್ಟ ನೋಟಿಸ್ ಕಳುಹಿಸಿಲ್ಲ ಎಂದ ಶಾರುಖ್ ಖಾನ್ ಟೀಮ್
ಶಾರುಖ್
ರಾಜೇಶ್ ದುಗ್ಗುಮನೆ
|

Updated on:Nov 27, 2026 | 7:33 AM

Share

ಮುಖ್ಯಾಂಶಗಳು

  • ನಕಲಿ ನೋಟಿಸ್ ಅಸಲಿಯತ್ತು ಬಿಚ್ಚಿಟ್ಟ ಶಾರುಖ್ ವಕೀಲರು
  • ಅನಂತ್ ಅಂಬಾನಿ ವಿಡಿಯೋಗೆ ತಪ್ಪು ಅರ್ಥ ಕಲ್ಪಿಸಿದ ಇನ್‌ಫ್ಲುಯೆನ್ಸರ್
  • ಡಿಸೆಂಬರ್ 24ರಂದು ತೆರೆಗೆ ಬರಲಿದೆ ಶಾರುಖ್ ನಟನೆಯ 'ಕಿಂಗ್

ಬಾಲಿವುಡ್ ಬಾದ್‌ಶಾ ಶಾರುಖ್ ಖಾನ್ ಹೆಸರಿನಲ್ಲಿ ನಕಲಿ ಲೀಗಲ್ ನೋಟಿಸ್ ಒಂದು ಸಾಮಾಜಿಕ ಜಾಲತಾಣದಲ್ಲಿ ಭಾರಿ ಸದ್ದು ಮಾಡುತ್ತಿದೆ. ಸೋಶಿಯಲ್ ಮೀಡಿಯಾ ಇನ್‌ಫ್ಲುಯೆನ್ಸರ್ ಸುವಿಜ್ಞಾ ಶರ್ಮಾ ಅವರಿಗೆ ಶಾರುಖ್ ಖಾನ್ ಮಾನನಷ್ಟ ನೋಟಿಸ್ ಕಳುಹಿಸಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಆದರೆ ಈ ವರದಿಗಳನ್ನು ಶಾರುಖ್ ಖಾನ್ ಅವರ ಅಧಿಕೃತ ಕಾನೂನು ತಂಡ ಸಂಪೂರ್ಣವಾಗಿ ತಳ್ಳಿಹಾಕಿದೆ.

ಶಾರುಖ್ ಖಾನ್ ಅವರ ಅಧಿಕೃತ ಕಾನೂನು ಸಂಸ್ಥೆ ‘ಹಿರಾನಿ ಆ್ಯಂಡ್ ಅಸೋಸಿಯೇಟ್ಸ್’ ಈ ಕುರಿತು ಇನ್‌ಸ್ಟಾಗ್ರಾಮ್‌ನಲ್ಲಿ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ. ‘ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ನೋಟಿಸ್ ಅನ್ನು ತಾವು ಕಳುಹಿಸಿಲ್ಲ. ಶಾರುಖ್ ಖಾನ್ ಕೂಡ ಯಾರಿಗೂ ನೋಟಿಸ್ ನೀಡುವಂತೆ ಸೂಚಿಸಿಲ್ಲ. ಸುದ್ದಿ ಪ್ರಕಟಿಸುವ ಮುನ್ನ ದಾಖಲೆಗಳ ಸತ್ಯಾಸತ್ಯತೆ ಪರಿಶೀಲಿಸುವಂತೆ ಮಾಧ್ಯಮಗಳಿಗೆ ಮನವಿ ಮಾಡುತ್ತೇವೆ’ ಎಂದು ತಿಳಿಸಿದ್ದಾರೆ.

ಈ ವಿವಾದ ಶುರುವಾಗಿದ್ದು ಇತ್ತೀಚೆಗೆ ನಡೆದ ‘ಗ್ಲೋಬಲ್ ಪೀಸ್ ಆನರ್ಸ್ 2026’ ಕಾರ್ಯಕ್ರಮದ ವಿಡಿಯೋದಿಂದ. ಆ ಕಾರ್ಯಕ್ರಮದಲ್ಲಿ ಅನಂತ್ ಅಂಬಾನಿ, ಸದ್ಗುರು ಮತ್ತು ಶಾರುಖ್ ಖಾನ್ ಮಾತನಾಡುತ್ತಿದ್ದ ದೃಶ್ಯವಿತ್ತು. ಆ ವಿಡಿಯೋಗೆ ಆಡಿಯೋ ಇರಲಿಲ್ಲ. ಆದರೂ ಅನಂತ್ ಅಂಬಾನಿ ಶಾರುಖ್ ಖಾನ್‌ಗೆ ಸುಮ್ಮನಿರಲು ಹೇಳಿದ್ದಾರೆ ಎಂದು ಸುವಿಜ್ಞಾ ಶರ್ಮಾ ರೀಲ್ಸ್ ಮೂಲಕ ವ್ಯಾಖ್ಯಾನಿಸಿದ್ದರು. ಈ ವಿಡಿಯೋ ಭಾರಿ ವೈರಲ್ ಆಗಿ ಚರ್ಚೆಗೆ ಗ್ರಾಸವಾಗಿತ್ತು.

ತಮ್ಮ ವಿಡಿಯೋಗೆ ಪ್ರತಿಯಾಗಿ ಶಾರುಖ್ ಖಾನ್ ಕಾನೂನು ತಂಡದಿಂದ ನೋಟಿಸ್ ಬಂದಿದೆ ಎಂದು ಸುವಿಜ್ಞಾ ಮಂಗಳವಾರ ಹೇಳಿಕೊಂಡಿದ್ದರು. 48 ಗಂಟೆಯೊಳಗೆ ವಿಡಿಯೋ ತೆಗೆದುಹಾಕುವಂತೆ ನೋಟಿಸ್‌ನಲ್ಲಿ ಸೂಚಿಸಲಾಗಿದೆ ಎಂದು ಅವರು ಪೋಸ್ಟ್ ಹಾಕಿದ್ದರು. ಆದರೆ ಸುವಿಜ್ಞಾ ಪೋಸ್ಟ್‌ಗೆ ಕಾಮೆಂಟ್ ಮಾಡಿರುವ ಶಾರುಖ್ ವಕೀಲರು, ಆ ನೋಟಿಸ್ ನಕಲಿ ಮತ್ತು ದಾರಿತಪ್ಪಿಸುವಂತಿದೆ ಎಂದು ನೇರವಾಗಿಯೇ ತಿರುಗೇಟು ನೀಡಿದ್ದಾರೆ.

ಇದನ್ನೂ ಓದಿ: ಅವಕಾಶಕ್ಕಾಗಿ ಅಂಗಲಾಚಿದ ಸಹ ನಟನ ಸಹಾಯಕ್ಕೆ ಧಾವಿಸಿದ ಶಾರುಖ್ ಖಾನ್

ಸಿನಿಮಾ ವಿಚಾರಕ್ಕೆ ಬರುವುದಾದರೆ ಶಾರುಖ್ ಖಾನ್ ಸದ್ಯ ‘ಕಿಂಗ್’ ಚಿತ್ರದ ಬಿಡುಗಡೆಗೆ ಸಜ್ಜಾಗುತ್ತಿದ್ದಾರೆ. ಸಿದ್ಧಾರ್ಥ್ ಆನಂದ್ ನಿರ್ದೇಶನದ ಈ ಆಕ್ಷನ್ ಸಿನಿಮಾ ಡಿಸೆಂಬರ್ 24ರಂದು ಚಿತ್ರಮಂದಿರಗಳಿಗೆ ಲಗ್ಗೆ ಇಡಲಿದೆ. ‘ಡಂಕಿ’ ಬಳಿಕ ತೆರೆಗೆ ಬರುತ್ತಿರುವ ಶಾರುಖ್ ಅವರ ಮೊದಲ ಸಿನಿಮಾ ಇದಾಗಿದೆ. ಈ ಚಿತ್ರದಲ್ಲಿ ಸುಹಾನಾ ಖಾನ್, ದೀಪಿಕಾ ಪಡುಕೋಣೆ ಮತ್ತು ಅಭಿಷೇಕ್ ಬಚ್ಚನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On - 7:30 am, Fri, 27 November 26

Follow Us
ರಾಜೇಶ್ ದುಗ್ಗುಮನೆ
ರಾಜೇಶ್ ದುಗ್ಗುಮನೆ

ರಾಜೇಶ್ ದುಗ್ಗುಮನೆಯವರು ಮೂಲತಃ ಉತ್ತರ ಕನ್ನಡದ ಶಿರಸಿಯವರು. ಇವರು ಪತ್ರಿಕಾ ರಂಗಕ್ಕೆ ಕಾಲಿಟ್ಟು 10 ವರ್ಷಗಳಾಗಿವೆ. ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡದಲ್ಲಿ ಕೆಲಸ ಮಾಡಿದ ಅನುಭವ ಇದೆ. ಈಗ ಟಿವಿ9 ಕನ್ನಡ ಡಿಜಿಟಲ್ನಲ್ಲಿ ಬರಹ ಕೃಷಿ ಮುಂದುವರಿಸಿದ್ದಾರೆ. ಸಿನಿಮಾ ರಂಗದ ಬಗ್ಗೆ ಮೊದಲಿನಿಂದಲೂ ಆಸಕ್ತಿ. ಅದರ ಜೊತೆ ಬರವಣಿಗೆಯೂ ಸೇರಿತು. ಈಗ ಅದುವೇ ಕಾಯಕ. ಸಿನಿಮಾ ವಿಮರ್ಶೆ, ಚಿತ್ರರಂಗದ ಗಾಸಿಪ್, ಹೊಸ ಸಿನಿಮಾ ಬಗ್ಗೆ ಅಪ್ಡೇಟ್ ಇವರ ಕಡೆಯಿಂದ. ಟ್ರಾವೆಲಿಂಗ್ ಕಡೆ ಹೆಚ್ಚು ಆಸಕ್ತಿ. ಓದುವುದು ಎಂದರೆ ಹುಚ್ಚು. ಸಿನಿಮಾ ನೋಡುವುದೂ ಆಸಕ್ತಿಗಳಲ್ಲಿ ಒಂದು. ಹಲವು ಸಿನಿಮಾ ನೋಡಿ ಈಗಾಗಲೇ ವಿಮರ್ಶೆ ಮಾಡಿ ನಿಮ್ಮ ಮುಂದಿಟ್ಟಿದ್ದಾರೆ.

Read More