AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Shah Rukh Khan

Shah Rukh Khan

ಶಾರುಖ್ ಖಾನ್ ಅವರು ಬಾಲಿವುಡ್ನ ಬೇಡಿಕೆಯ ಹೀರೋ. ಅವರಿಗೆ ದೊಡ್ಡ ಅಭಿಮಾನಿ ಬಳಗ ಸೃಷ್ಟಿ ಆಗಿದೆ. ಶಾರುಖ್ ಖಾನ್ ಜನಿಸಿದ್ದು 1965ರ ನವೆಂಬರ್ 2ರಂದು. ಅವರ ಆಸ್ತಿ ಮೌಲ್ಯ 6500 ಕೋಟಿ ರೂಪಾಯಿಗೂ ಮೀರಿದೆ. ಭಾರತದ ಅತ್ಯಂತ ಶ್ರೀಮಂತ ನಟ ಎನ್ನುವ ಹೆಗ್ಗಳಿಕೆ ಇವರಿಗೆ ಇದೆ.

ಶಾರುಖ್ ಖಾನ್ ಅವರು ಕಿರುತೆರೆ ಮೂಲಕ ಬಣ್ಣದ ಬದುಕು ಆರಂಭಿಸಿದರು. ಆ ಬಳಿಕ ಅವರು ಚಿತ್ರರಂಗಕ್ಕೆ ಕಾಲಿಟ್ಟರು. ನಂತರ ಸಾಲು ಸಾಲು ಸಿನಿಮಾ ಮಾಡಿ ಫೇಮಸ್ ಆದರು. ಶಾರುಖ್ ಖಾನ್ ‘ಡಿಡಿಎಲ್ಜೆ’, ‘ಡಾನ್’, ‘ಡಾನ್ 2’, ‘ಚೆನ್ನೈ ಎಕ್ಸ್ಪ್ರೆಸ್’ ಸೇರಿ ಹಲವು ಸೂಪರ್ ಹಿಟ್ ಚಿತ್ರ ನೀಡಿದ್ದಾರೆ.

2023ರಲ್ಲಿ ರಿಲೀಸ್ ಆದ ‘ಪಠಾಣ್’, ‘ಜವಾನ್’ ಹಿಟ್ ಆಗಿವೆ. ಗೌರಿ ಖಾನ್ ಅವರನ್ನು ಶಾರುಖ್ ಮದುವೆ ಆಗಿದ್ದು, ಸುಹಾನಾ ಖಾನ್, ಆರ್ಯನ್ ಖಾನ್ ಹಾಗೂ ಅಬ್ರಾಮ್ ಖಾನ್ ಹೆಸರಿನ ಮಕ್ಕಳು ಇವರಿಗೆ ಇದ್ದಾರೆ.

ಇನ್ನೂ ಹೆಚ್ಚು ಓದಿ

‘ನಾನು ಒಳ್ಳೆಯ ತಂದೆಯಲ್ಲ’; ಶಾರುಖ್ ಖಾನ್ ಬೇಸರ

ಶಾರುಖ್ ಖಾನ್ ತಮ್ಮ ಮಕ್ಕಳಿಗೆ ತುಂಬಾ ಪ್ರೀತಿಸುತ್ತಾರೆ ಆದರೆ ವೃತ್ತಿಪರ ಜೀವನದ ಒತ್ತಡದಿಂದಾಗಿ ಅವರು ಒಳ್ಳೆಯ ತಂದೆಯಲ್ಲ ಎಂದು ಭಾವಿಸಿದ್ದರು. ಅಬ್ರಾಮ್ ಜೊತೆಗಿನ ಒಂದು ಘಟನೆಯ ನಂತರ ಈ ಭಾವನೆ ಹೆಚ್ಚಾಯಿತು. ಅನೇಕ ನಟರು ತಮ್ಮ ಮಕ್ಕಳಿಗೆ ಸಮಯ ಕೊಡಲು ಸಾಧ್ಯವಾಗದಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ. ಶಾರುಖ್ ಅವರ ಮುಂದಿನ ಚಿತ್ರ "ಕಿಂಗ್" ನಲ್ಲಿ ಅವರ ಮಗಳು ಸುಹಾನಾ ಕೂಡ ನಟಿಸಲಿದ್ದಾರೆ.

ಶಾರುಖ್​ ಖಾನ್​ಗೆ ಪೆಟ್ಟಾಗಿದ್ದು ಸುಳ್ಳಾ? ಶೂಟಿಂಗ್ ಬಿಟ್ಟು ಅಮೆರಿಕಕ್ಕೆ ಹೋಗಿದ್ದು ಯಾಕೆ?

ಬಾಲಿವುಡ್ ನಟ ಶಾರುಖ್ ಖಾನ್ ಅವರಿಗೆ ಪೆಟ್ಟಾಗಿದೆ ಎಂಬ ಸುದ್ದಿ ತಿಳಿದ ಅಭಿಮಾನಿಗಳಿಗೆ ಆತಂಕ ಆಗಿತ್ತು. ಆದರೆ ಈಗ ಆ ಬಗ್ಗೆ ಸ್ಪಷ್ಟನೆ ಸಿಕ್ಕಿದೆ. ಶಾರುಖ್ ಖಾನ್ ಅವರು ಸುರಕ್ಷಿತವಾಗಿದ್ದಾರೆ ಎಂಬ ಮಾಹಿತಿ ಕೇಳಿಬಂದಿದೆ. ಸದ್ಯ ಅಮೆರಿಕಕ್ಕೆ ತೆರಳಿರುವ ಶಾರುಖ್ ಖಾನ್ ಅವರು ಶೀಘ್ರದಲ್ಲೇ ಭಾರತಕ್ಕೆ ವಾಪಸ್ ಬರಲಿದ್ದಾರೆ.

ಸದ್ದಿಲ್ಲದೆ ಸಿನಿಮಾ ಶೂಟ್ ಮಾಡಲು ಹೋಗಿ ತೀವ್ರ ಗಾಯ ಮಾಡಿಕೊಂಡ ಶಾರುಖ್ ಖಾನ್  

ಶಾರುಖ್ ಖಾನ್ ಅವರು ತಮ್ಮ ಹೊಸ ಚಿತ್ರ 'ಕಿಂಗ್'ನ ಚಿತ್ರೀಕರಣದ ಸಮಯದಲ್ಲಿ ಗಾಯಗೊಂಡಿದ್ದಾರೆ. ಇದರಿಂದಾಗಿ ಚಿತ್ರೀಕರಣ ಮುಂದೂಡಲ್ಪಟ್ಟಿದೆ ಮತ್ತು ಅವರು ಅಮೆರಿಕಕ್ಕೆ ಹೆಚ್ಚಿನ ಚಿಕಿತ್ಸೆಗಾಗಿ ತೆರಳಲಿದ್ದಾರೆ ಎಂದು ವರದಿಯಾಗಿದೆ. 'ಪಠಾಣ್', 'ಜವಾನ್' ಮತ್ತು 'ಡಂಕಿ' ಚಿತ್ರಗಳ ಯಶಸ್ಸಿನ ನಂತರ ಈ ಘಟನೆ ನಡೆದಿರುವುದು ಅಭಿಮಾನಿಗಳ ಬೇಸರಕ್ಕೆ ಕಾರಣ ಆಗಿದೆ.

ಮನೆಯ ನಾಯಿಗೆ ಶಾರುಖ್ ಖಾನ್ ಎಂದು ಹೆಸರು ಇಟ್ಟಿದ್ದ ಆಮಿರ್ ಖಾನ್

ಈಗ ಆಮಿರ್ ಖಾನ್ ಮತ್ತು ಶಾರುಖ್ ಖಾನ್ ಅವರು ಬೆಸ್ಟ್ ಫ್ರೆಂಡ್ಸ್ ಆಗಿದ್ದಾರೆ. ಆದರೆ ಮೊದಲು ಹಾಗಿರಲಿಲ್ಲ. ಒಂದು ಕಾಲದಲ್ಲಿ ಆಮಿರ್ ಖಾನ್ ಬಗ್ಗೆ ಶಾರುಖ್ ಖಾನ್ ಅವರಿಗೆ ಅಸಮಾಧಾನ ಇತ್ತು. ಫ್ಯಾನ್ಸ್ ಕೂಡ ಗರಂ ಆಗಿದ್ದರು. ಆಮಿರ್ ಖಾನ್ ಅವರು ನಾಯಿಗೆ ಶಾರುಖ್ ಖಾನ್ ಎಂದು ಹೆಸರು ಇಟ್ಟಿದ್ದು ವಿವಾದಕ್ಕೆ ಕಾರಣ ಆಗಿತ್ತು.

‘ಆರ್ಯನ್ ಯಾವಾಗಲೂ ನಾನು ಮುಸ್ಲಿಂ ಎಂದೇ ಹೇಳುತ್ತಾನೆ’; ಗೌರಿ ಖಾನ್

ಶಾರುಖ್ ಖಾನ್ ಮತ್ತು ಗೌರಿ ಖಾನ್ ಎರಡೂ ಧರ್ಮಗಳನ್ನು ಗೌರವಿಸುತ್ತಿದ್ದಾರೆ. ಅವರು ತಮ್ಮ ಮಕ್ಕಳಿಗೆ ಧಾರ್ಮಿಕ ಸಹಿಷ್ಣುತೆಯನ್ನು ಬೋಧಿಸುತ್ತಿದ್ದಾರೆ. ಆರ್ಯನ್ ಖಾನ್ ತನ್ನ ಮುಸ್ಲಿಂ ಧರ್ಮವನ್ನು ಬಲವಾಗಿ ನಂಬುತ್ತಾನೆ ಎಂದು ಗೌರಿ ಖಾನ್ ಹಂಚಿಕೊಂಡಿದ್ದಾರೆ. ಶಾರುಖ್ ಅವರ ಧಾರ್ಮಿಕ ಸಹಿಷ್ಣುತೆ ಅವರ ಜೀವನದಲ್ಲಿ ಸ್ಪಷ್ಟವಾಗಿ ಕಾಣುತ್ತದೆ.

ಆಮಿರ್ ಖಾನ್ ಸಿನಿಮಾದ ಗೆಲುವಿಗಾಗಿ ಕೈ ಜೋಡಿಸಲಿದ್ದಾರೆ ಶಾರುಖ್, ಸಲ್ಮಾನ್

‘ಸಿತಾರೆ ಜಮೀನ್ ಪರ್’ ಸಿನಿಮಾವನ್ನು ಆಮಿರ್ ಖಾನ್ ನಿರ್ಮಾಣ ಮಾಡಿದ್ದಾರೆ. ಮುಖ್ಯ ಪಾತ್ರದಲ್ಲೂ ಅವರೇ ನಟಿಸಿದ್ದಾರೆ. ಈ ಚಿತ್ರ ಗೆಲ್ಲಲೇಬೇಕಾದ ಅನಿವಾರ್ಯತೆ ಅವರಿಗೆ ಇದೆ. ಅದಕ್ಕಾಗಿ ಅವರಿಗೆ ಸಲ್ಮಾನ್ ಖಾನ್ ಮತ್ತು ಶಾರುಖ್ ಖಾನ್ ಕೂಡ ಸಹಾಯ ಮಾಡಲಿದ್ದಾರೆ. ಪ್ರೀಮಿಯರ್ ಶೋಗೆ ಸ್ಟಾರ್ ನಟರು ಬರಲಿದ್ದಾರೆ.

ಶಾರುಖ್-ಅಮಿತಾಭ್ ಅಲ್ಲ; ಬಾಲಿವುಡ್​ನ ಈ ದಂಪತಿಗಳು ಅತ್ಯಂತ ದುಬಾರಿ ಮನೆಯ ಒಡೆಯರು

ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಅವರು ಮುಂಬೈನಲ್ಲಿ 250 ಕೋಟಿ ರೂಪಾಯಿ ಮೌಲ್ಯದ ಐಷಾರಾಮಿ ಬಂಗಲೆಯನ್ನು ಖರೀದಿಸಿದ್ದಾರೆ. ಈ ಬಂಗಲೆಯನ್ನು ಅವರ ಮಗಳು ರಾಹಾ ಕಪೂರ್ ಹೆಸರಿನಲ್ಲಿ ನೋಂದಾಯಿಸಲಾಗುವುದು. ಇದು ಶಾರುಖ್ ಖಾನ್ ಅವರ ಮನ್ನತ್ ಮತ್ತು ಅಮಿತಾಭ್ ಬಚ್ಚನ್ ಅವರ ಜಲ್ಸಾಕ್ಕಿಂತಲೂ ದುಬಾರಿಯಾಗಿದೆ.

ಮನೆ ಕೆಲಸದವರನ್ನು ಗೌರಿ ಖಾನ್ ಎಷ್ಟು ಉತ್ತಮವಾಗಿ ನೋಡಿಕೊಳ್ತಾರೆ ನೋಡಿ..

ಶಾರುಖ್ ಖಾನ್ ಅವರ ಮನ್ನತ್ ಬಂಗಲೆಯ ನವೀಕರಣ ಕಾರ್ಯದಿಂದಾಗಿ ಅವರ ಕುಟುಂಬವು ತಾತ್ಕಾಲಿಕವಾಗಿ ಬಾಡಿಗೆ ಮನೆಗೆ ಸ್ಥಳಾಂತರಗೊಂಡಿದೆ. ಗೌರಿ ಖಾನ್ ಮುಂಬೈನಲ್ಲಿ 1.35 ಲಕ್ಷ ರೂಪಾಯಿ ಮಾಸಿಕ ಬಾಡಿಗೆಯ ಎರಡು ಬಿಎಚ್‌ಕೆ ಅಪಾರ್ಟ್ಮೆಂಟ್ ಅನ್ನು ಬಾಡಿಗೆಗೆ ಪಡೆದಿದ್ದಾರೆ. ಮನೆಯಲ್ಲಿ ಕೆಲಸ ಮಾಡುವವರಿಗೆ ಈ ಮನೆಯನ್ನು ನೀಡಲಾಗಿದೆ.

ಶಾರುಖ್ ಖಾನ್​ಗೆ ಇರೋದು ಒಂದೇ ಕೆಟ್ಟ ಹವ್ಯಾಸ; ಏನದು?

ರಾಕೇಶ್ ರೋಷನ್ ಅವರು ಶಾರುಖ್ ಖಾನ್ ಜೊತೆಗಿನ ತಮ್ಮ ಅನುಭವಗಳನ್ನು ಹಂಚಿಕೊಂಡಿದ್ದಾರೆ. ‘ಕರಣ್ ಅರ್ಜುನ್’ ಮತ್ತು ‘ಕೊಯ್ಲಾ’ ಚಿತ್ರಗಳಲ್ಲಿ ಶಾರುಖ್ ಅವರೊಂದಿಗಿನ ಕೆಲಸದ ಬಗ್ಗೆ ಮಾತನಾಡಿದ್ದಾರೆ. ಶಾರುಖ್ ಖಾನ್ ಅವರ ಒಂದೇ ಒಂದು ಕೆಟ್ಟ ಅಭ್ಯಾಸದ ಬಗ್ಗೆ ರಾಕೇಶ್ ರೋಷನ್ ಮಾತನಾಡಿದ್ದಾರೆ.

ಶಾರುಖ್ ಖಾನ್ ತಂಡದಲ್ಲಿ ಪಾಕ್ ಕ್ರಿಕೆಟಿಗರು; ತಂಡದಿಂದ ಹೊರ ಹಾಕ್ತಾರಾ ಕಿಂಗ್ ಖಾನ್?

Shah Rukh Khan's T20 Teams: ಭಾರತ ಮತ್ತು ಪಾಕಿಸ್ತಾನದ ನಡುವಿನ ಉದ್ವಿಗ್ನತೆಯಿಂದಾಗಿ, ಶಾರುಖ್ ಖಾನ್ ಮಾಲೀಕತ್ವದ ಕ್ರಿಕೆಟ್ ತಂಡಗಳಲ್ಲಿ ಆಡುವ ಪಾಕಿಸ್ತಾನಿ ಮೂಲದ ಆಟಗಾರರ ಭವಿಷ್ಯ ಅನಿಶ್ಚಿತವಾಗಿದೆ. ಅಂತರರಾಷ್ಟ್ರೀಯ ಟಿ20 ಲೀಗ್ ಮತ್ತು ಮೇಜರ್ ಲೀಗ್ ಕ್ರಿಕೆಟ್‌ನಲ್ಲಿ ಆಡುವ ಅಲಿ ಖಾನ್, ಇಬ್ರಾರ್ ಅಹ್ಮದ್ ಮತ್ತು ಸೈಫ್ ಬಾದರ್ ಮುಂತಾದ ಆಟಗಾರರನ್ನು ತಂಡದಿಂದ ತೆಗೆದುಹಾಕುವ ಸಾಧ್ಯತೆಗಳ ಬಗ್ಗೆ ಚರ್ಚೆ ನಡೆಯುತ್ತಿದೆ.