ರೇಣುಕಾಸ್ವಾಮಿ ಅಲ್ಲ, ಶಿವಸ್ವಾಮಿ ಕೊಲೆ ಕೇಸ್; ‘ಬಾಸ್’ ಸಿನಿಮಾ ಕಥೆ ರಿವೀಲ್
‘ಬಾಸ್’ ಸಿನಿಮಾ ಸದ್ದು ಮಾಡುತ್ತಿದೆ. ಈ ಚಿತ್ರದ ಮೂಲಕ ರೇಣುಕಾಸ್ವಾಮಿ ಕೊಲೆ ಕೇಸ್ ಹೇಳಲಾಗುತ್ತಿದೆಯೇ. ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ರೇಣುಕಾಸ್ವಾಮಿ ಕೊಲೆ ಕೇಸ್ ಅಲ್ಲ, ಇದು ಶಿವಸ್ವಾಮಿ ಕೊಲೆ ಕೇಸ್ ಎಂದು ಹೇಳಿದ್ದಾರೆ ನಿರ್ದೇಶಕರು. ಈ ವಿಷಯ ಚರ್ಚೆಯನ್ನು ಹುಟ್ಟುಹಾಕುತ್ತಿದೆ. ಆ ಬಗ್ಗೆ ಇಲ್ಲಿದೆ ವಿವರ.
‘ಬಾಸ್’ ಸಿನಿಮಾ ವಿಷಯ ಚರ್ಚೆ ಹುಟ್ಟುಹಾಕಿದೆ. ಸಿನಿಮಾದ ಟೀಸರ್ ರಿಲೀಸ್ ಆಗಿದ್ದು, ಹೀರೋ ಓರ್ವ ಕೊಲೆ ಕೇಸ್ನಲ್ಲಿ ಸಿಕ್ಕಿ ಬೀಳೋ ಕಥೆ ಇದು. ಇದನ್ನು ನೋಡಿದ ಅನೇಕರಿಗೆ ಇದು ರೇಣುಕಾಸ್ವಾಮಿ ಕೊಲೆ ಕೇಸ್ ಪ್ರಕರಣವೇ ಎಂಬ ಪ್ರಶ್ನೆ ಮೂಡಿದೆ. ಇದಕ್ಕೆ ಉತ್ತರಿಸಿರೋ ನಿರ್ದೇಶಕರು ‘ಇದು ರೇಣುಕಾಸ್ವಾಮಿ ಅಲ್ಲ, ಶಿವಸ್ವಾಮಿ ಕೊಲೆ ಕೇಸ್’ ಎಂದು ಹೇಳಿದ್ದಾರೆ. ಟ್ರೇಲರ್ ರಿಲೀಸ್ ಆದ ಬಳಿಕ ಎಲ್ಲ ವಿಷಯ ಗೊತ್ತಾಗಲಿದೆ ಎಂದು ಅವರು ಹೇಳಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Follow Us

