ರಾಚಪ್ಪಾಜಿ ನಾಯ್ಕ್ ಆದ ನಾನು ಮೂಲತಃ ಚಾಮರಾಜನಗರ ಜಿಲ್ಲೆ ಹನೂರು ತಾಲೂಕಿನ ಗೊಲ್ಲರದಿಂಬ ಗ್ರಾಮದವನು ಕಳೆದ 2 ವರ್ಷ 11 ತಿಂಗಳಿನಿಂದ ಟಿವಿ9 ಬೆಂಗಳೂರು ಕ್ರೈಂ ಬ್ಯೂರೊ ವರದಿಗಾರನಾಗಿ ಕೆಲಸ ಮಾಡುತ್ತಿದ್ದು.ರಾಜ್ಯದಲ್ಲಿ ನಡೆದ ಪ್ರಮುಖ ಅಪಾರಧ ವಿಷಯಗಳ ಮೇಲಿನ ವರದಿ ಮಾಡಿದ್ದೇನೆ.ಬೆಂಗಳೂರು ಮಾತ್ರವಲ್ಲದೆ ರಾಜ್ಯದ ಬೇರೆ ಬೇರೆ ಭಾಗಗಳಲ್ಲಿ ನಡೆದ ಪ್ರಮುಖ ಬೆಳವಣಿಗೆಯ ವರದಿ ಮಾಡಿದ್ದೇನೆ.
ಬೆಂಗಳೂರಿನ ಖಾಸಗಿ ಶಾಲೆಯಲ್ಲಿ ಅಗ್ನಿ ಅವಘಡ: ತಪ್ಪಿದ ಭಾರಿ ದುರಂತ!
ನಗರದ ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯ ವಿಶ್ವೇಶ್ವರಯ್ಯ ಲೇಔಟ್‌ನಲ್ಲಿರುವ ಖಾಸಗಿ ಕೌಶಲ್ಯ ಶಾಲೆಯಲ್ಲಿ ಇಂದು (ಮೇ 30) ಬೆಳಗ್ಗೆ ಹಠಾತ್ ಅಗ್ನಿ ಅವಘಡ ಸಂಭವಿಸಿದೆ. ಶಾಲೆಯ ಆಡಿಟೋರಿಯಂನಲ್ಲಿ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಬೆಂಕಿ ಹೊತ್ತಿಕೊಂಡಿದೆ ಎಂದು ಶಂಕಿಸಲಾಗಿದೆ. ಅದೃಷ್ಟವಶಾತ್ ಇಂದು ಶಾಲೆಗೆ ರಜೆ ಇದ್ದಿದ್ದರಿಂದ ಯಾವುದೇ ಪ್ರಾಣಾಪಾಯ ಅಥವಾ ಮಕ್ಕಳಿಗೆ ತೊಂದರೆ ಸಂಭವಿಸಿಲ್ಲ. ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸದ್ಯ ಜ್ಞಾನಭಾರತಿ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
- Rachappaji Naik S
- Updated on: May 30, 2026
- 12:58 pm
ಸ್ನೇಹಿತನ ಮನೆಯಲ್ಲೇ ರಾಬರಿ ಮಾಡಿಸಿ ಸಿಕ್ಕಿಬಿದ್ದ ಮೇಸ್ತ್ರಿ: ದರೋಡೆ ವೇಳೆಯೂ ಮಾನವೀಯತೆ ತೋರಿದ್ದ ಆರೋಪಿಗಳು!
ಬೆಂಗಳೂರಿನ ಚಿಕ್ಕಜಾಲದಲ್ಲಿ ಕಿರಿಕ್ ಮಾಡಿದ ಸ್ನೇಹಿತನ ಮನೆಯಲ್ಲೇ ಇಬ್ಬರು ಕಾರ್ಮಿಕರಿಂದ 12 ಲಕ್ಷ ನಗದು, ಚಿನ್ನ ದರೋಡೆ ಮಾಡಿಸಿದ್ದ ಮೇಸ್ತ್ರಿ ಹಾಗೂ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಮುಖ ಆರೋಪಿ ಸಂತ್ರಸ್ತ ಸ್ನೇಹಿತ ಮನೆಯ ಕಟ್ಟಡ ಕಾಮಗಾರಿ ಮಾಡುತ್ತಿದ್ದ. ಈ ವೇಳೆ ಅವರ ಕುಟುಂಬದ ಕಿರಿ ಕಿರಿಗೆ ರೋಸಿ ಹೋಗಿದ್ದ ಎಂಬುದು ಕೂಡ ತನಿಖೆ ವೇಳೆ ಗೊತ್ತಾಗಿದೆ.
- Rachappaji Naik S
- Updated on: May 22, 2026
- 12:17 pm
ಬೆಂಗಳೂರಿನ ಲಾಡ್ಜ್ನಲ್ಲಿ ಸಿಕ್ತು ಜೀವಂತ ಗುಂಡುಗಳಿದ್ದ ಮ್ಯಾಗಜೀನ್! ಅಮೇರಿಕ ನಿರ್ಮಿತ ಬುಲೆಟ್ಸ್ ತಂದಿದ್ದ ಯುವಕ ಅಂದರ್
ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ ಒಂದರಲ್ಲಿ ಯುವತಿಯೊಂದಿಗೆ ತಂಗಿದ್ದ ಅರ್ಮಾನ್ ಮುತಾಹರ್ ಎಂಬಾತ ಅಮೆರಿಕ ನಿರ್ಮಿತ ಜೀವಂತ ಗುಂಡುಗಳಿದ್ದ ಮ್ಯಾಗಜೀನ್ ಬಿಟ್ಟು ಹೋಗಿದ್ದ. ಹೋಟೆಲ್ ಮ್ಯಾನೇಜರ್ ನೀಡಿದ ದೂರಿನ ಮೇರೆಗೆ ಜೆ.ಸಿ. ನಗರ ಪೊಲೀಸರು ಆರೋಪಿಯನ್ನು ಬಂಧಿಸಿ ಪರಪ್ಪನ ಅಗ್ರಹಾರ ಜೈಲಿಗೆ ರವಾನಿಸಿದ್ದಾರೆ.
- Rachappaji Naik S
- Updated on: May 19, 2026
- 12:41 pm
ಬೆಂಗಳೂರಲ್ಲಿ ಲೇಡಿ ಡಾನ್ ಹಾವಳಿ? ರಿಯಲ್ ಎಸ್ಟೇಟ್ ಉದ್ಯಮಿ ಕಚೇರಿಗೆ ನುಗ್ಗಿ ಬೆದರಿಕೆ ಹಾಕಿ 10 ಲಕ್ಷ ರೂ. ಹಫ್ತಾಗೆ ಬೇಡಿಕೆ ಇಟ್ಟ ಮಹಿಳೆ
ಬೆಂಗಳೂರಿನ ಕೊಡಿಗೆಹಳ್ಳಿಯಲ್ಲಿ ತಾನು ಸಂಘಟನೆಯೊಂದರ ಮುಖ್ಯಸ್ಥೆ ಎಂದು ಹೇಳಿಕೊಂಡು ಸಂಗೀತ ರಾಮ್ ಎಂಬ ಮಹಿಳೆ ಇಬ್ಬರು ಸಹಚರರೊಂದಿಗೆ ರಿಯಲ್ ಎಸ್ಟೇಟ್ ಉದ್ಯಮಿ ವೆಂಕಟರಾಜು ಕಚೇರಿಗೆ ನುಗ್ಗಿ ಜೀವ ಬೆದರಿಕೆ ಹಾಕಿದ್ದಾಳೆ. ಸೈಟ್ ವಿವಾದಕ್ಕೆ ಸಂಬಂಧಿಸಿ 10 ಲಕ್ಷ ರೂ. ಹಫ್ತಾ ಕೇಳಿರುವ ಬಗ್ಗೆ ಆಕೆಯ ವಿರುದ್ಧ ಪ್ರಕರಣ ದಾಖಲಾಗಿದೆ.
- Rachappaji Naik S
- Updated on: May 18, 2026
- 2:32 pm
ಲಾಕಪ್ ಡೆತ್, ಪೊಲೀಸ್ ದೌರ್ಜನ್ಯಕ್ಕೆ ಬ್ರೇಕ್: ಐತಿಹಾಸಿಕ ‘ಸ್ಟ್ಯಾಂಡಿಂಗ್ ಆರ್ಡರ್-1060’ ಜಾರಿಗೊಳಿಸಿದ ಡಿಜಿಪಿ ಡಾ ಎಂಎ ಸಲೀಂ
ರಾಜ್ಯದಲ್ಲಿ ಲಾಕಪ್ ಡೆತ್ ಹಾಗೂ ಪೊಲೀಸ್ ದೌರ್ಜನ್ಯಗಳನ್ನು ತಡೆಗಟ್ಟಲು ಡಿಜಿ-ಐಜಿಪಿ ಡಾ. ಎಂ.ಎ. ಸಲೀಂ ಬಿಎನ್‌ಎಸ್ಎಸ್ ಕಾಯ್ದೆಯಡಿ ‘ಸ್ಟ್ಯಾಂಡಿಂಗ್ ಆರ್ಡರ್-1060’ ಜಾರಿಗೊಳಿಸಿದ್ದಾರೆ. ನಿಯಮ ಮೀರಿ ಸಾಕ್ಷ್ಯನಾಶಕ್ಕೆ ಯತ್ನಿಸುವ ಅಧಿಕಾರಿಗಳ್ನೇ ನೇರ ಹೊಣೆ ಮಾಡಲಾಗುವುದು ಮತ್ತು ಕಠಿಣ ಶಿಕ್ಷೆ ನೀಡಲಾಗುವುದು ಎಂದು ಡಿಜಿಪಿ ಎಚ್ಚರಿಕೆ ನೀಡಿದ್ದಾರೆ.
- Rachappaji Naik S
- Updated on: May 18, 2026
- 10:21 am
ಡಿಕೆ ಶಿವಕುಮಾರ್ಗೆ 64ನೇ ಹುಟ್ಟುಹಬ್ಬದ ಸಂಭ್ರಮ: ಅಭಿಮಾನಿಗಳ ಜತೆ ಕೇಕ್ ಕಟ್ ಮಾಡಿ ಜನ್ಮದಿನ ಆಚರಿಸಿಕೊಂಡ ಡಿಸಿಎಂ
DK Shivakumar Birthday; ಕರ್ನಾಟಕದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ 64ನೇ ಹುಟ್ಟುಹಬ್ಬದ ಸಂಭ್ರಮಾಚರಣೆ ಬೆಂಗಳೂರಿನ ಸದಾಶಿವನಗರದ ನಿವಾಸದಲ್ಲಿ ಅದ್ಧೂರಿಯಾಗಿ ನಡೆಯಿತು. ಅಭಿಮಾನಿಗಳು, ಕಾರ್ಯಕರ್ತರು ಹಾಗೂ ಮಠಾಧೀಶರು ಭೇಟಿ ನೀಡಿ ಶುಭ ಹಾರೈಸಿದರು. ಡಿಕೆಶಿ ನಿವಾಸದ ಮುಂದೆ ಕೇಕ್ ಕಟ್ಟಿಂಗ್ ವಿಡಿಯೋ ಇಲ್ಲಿದೆ.
- Rachappaji Naik S
- Updated on: May 15, 2026
- 9:17 am
ರಸ್ತೆ ಬದಿ ಕಾರು ಪಾರ್ಕ್ ಮಾಡಿ ಹೋಗುವಾಗ ಬೆಲೆಬಾಳುವ ವಸ್ತು ಬಿಟ್ಟು ಹೋಗ್ತೀರಾ? ಹಾಗಿದ್ರೆ ಈ ಸಿಸಿಟಿವಿ ವಿಡಿಯೋ ನೋಡಲೇಬೇಕು
ಬೆಂಗಳೂರಿನ ಅಶೋಕನಗರದಲ್ಲಿ ರಸ್ತೆ ಪಕ್ಕ ನಿಲ್ಲಿಸಿದ್ದ ಕಾರಿನ ಗ್ಲಾಸ್ ಒಡೆದು ಅದರಲ್ಲಿದ್ದ ಟಿವಿ ಮತ್ತು ಎಲೆಕ್ಟ್ರಾನಿಕ್ ವಸ್ತುಗಳನ್ನು ಕಳ್ಳರು ದೋಚಿದ್ದಾರೆ. ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಬೆಂಗಳೂರಿನ ರಸ್ತೆಗಳಲ್ಲಿ ಕಾರು ಪಾರ್ಕ್ ಮಾಡಿ ಹೋಗುವಾಗ ಬೆಲೆಬಾಳುವ ವಸ್ತುಗಳನ್ನು ಅದರಲ್ಲಿ ಬಿಟ್ಟುಹೋಗುವ ಮುನ್ನ ಈ ಸಿಸಿಟಿವಿ ವಿಡಿಯೋ ಒಮ್ಮೆ ನೋಡಿ.
- Rachappaji Naik S
- Updated on: May 7, 2026
- 9:02 am
ಮೆಜೆಸ್ಟಿಕ್‌ನಲ್ಲಿ ತನ್ನ 2 ವರ್ಷದ ಮಗುವನ್ನೇ ಮಾರಿದಳಾ ತಾಯಿ? ತಂದೆಯಿಂದಲೇ ಗಂಭೀರ ಆರೋಪ
ಗಂಡನೊಂದಿಗೆ ಜಗಳವಾಡಿ ಮನೆಬಿಟ್ಟ ಪತ್ನಿ, ತನ್ನ ಎರಡೂವರೆ ವರ್ಷದ ಮಗುವನ್ನು 5 ಲಕ್ಷ ರೂಪಾಯಿಗೆ ಮಾರಾಟ ಮಾಡಿದ್ದಾಳೆಂದು ಪತಿ ಗಂಭೀರ ಆರೋಪ ಮಾಡಿದ್ದಾರೆ. ಮೆಜೆಸ್ಟಿಕ್‌ನಲ್ಲಿ ಇಬ್ಬರು ಮಕ್ಕಳನ್ನು ಅನಾಥವಾಗಿ ಬಿಟ್ಟು ಮಗುವನ್ನು ಮಾರಿದ ದೂರು ದಾಖಲಾಗಿದ್ದರೂ, ಪೊಲೀಸರು ನಿರ್ಲಕ್ಷ್ಯ ವಹಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಪತ್ನಿಯ ಪೋಷಕರು ಈ ಕೃತ್ಯಕ್ಕೆ ಸಾಥ್ ನೀಡಿದ್ದಾರೆ ಎನ್ನಲಾಗಿದ್ದು, ತನಿಖೆ ಮುಂದುವರಿದಿದೆ.
- Rachappaji Naik S
- Updated on: May 4, 2026
- 10:53 am
ಹನಿಯೂರು ಚಂದ್ರೇಗೌಡ ಒಬ್ಬರಿಗೆ ನಟ, ಇನ್ನೊಬ್ಬರಿಗೆ ಪ್ರೊಫೆಸರ್: ತನಿಖೆ ವೇಳೆ ಸ್ಫೋಟಕ ಸತ್ಯ ಬಯಲು
ಮದುವೆಯಾಗುವುದಾಗಿ ನಂಬಿಸಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಹಣ ಸುಲಿಗೆ ಮಾಡುತ್ತಿದ್ದ ಹನಿಯೂರು ಚಂದ್ರೇಗೌಡನ ಅಸಲಿ ಮುಖ ಆರ್.ಆರ್.ನಗರ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ. ತಾನು ಪ್ರೊಫೆಸರ್, ನಟ ಎಂದು ಪರಿಚಯಿಸಿಕೊಂಡು ಗಂಡನಿಂದ ದೂರವಾದ ಮಹಿಳೆಯರನ್ನು ಗುರಿಮಾಡುತ್ತಿದ್ದ ಈತ, ಅವರ ಖಾಸಗಿ ಕ್ಷಣಗಳನ್ನು ರೆಕಾರ್ಡ್ ಮಾಡಿ ಬ್ಲಾಕ್ ಮೇಲ್ ಮಾಡುತ್ತಿದ್ದ. 20ಕ್ಕೂ ಹೆಚ್ಚು ಮಹಿಳೆಯರ ಫೋಟೋ, ವಿಡಿಯೋಗಳು ಆರೋಪಿಯ ಮೊಬೈಲ್‌ನಲ್ಲಿ ಪತ್ತೆಯಾಗಿವೆ.
- Rachappaji Naik S
- Updated on: May 3, 2026
- 8:33 am
ಯಾರಿಗಾದರೂ ಹೇಳಿದ್ರೆ ಗಂಡ-ಮಗ ರಕ್ತ ಕಾರಿ ಸಾಯ್ತಾರೆ: ಮಾಟ-ಮಂತ್ರದ ಹೆಸರಲ್ಲಿ ಬ್ಯೂಟಿಷಿಯನ್ ಮೇಲೆ ಜ್ಯೋತಿಷಿಯಿಂದ ನಿರಂತರ ಅತ್ಯಾಚಾರ!
ಜ್ಯೋತಿಷಿ ಮೋಹನ್ ಕುಮಾರ್ ಪೂಜೆ ಮತ್ತು ದೀಕ್ಷೆಯ ನೆಪದಲ್ಲಿ ಬೆಂಗಳೂರಿನ ಬ್ಯೂಟಿಷಿಯನ್ ಮೇಲೆ ನಿರಂತರವಾಗಿ ಅತ್ಯಾಚಾರ ಎಸಗಿದ್ದಾನೆ. ಕುಟುಂಬದವರಿಗೆ ವಾಮಾಚಾರ ಮಾಡಿಸುವುದಾಗಿ ಬೆದರಿಸಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ರಾಮನಗರ ಮತ್ತು ಮೈಸೂರಿನಲ್ಲಿಯೂ ಈ ಕೃತ್ಯ ನಡೆದಿದೆ. ಆರೋಪಿಯ ಕಾಟ ತಾಳಲಾರದೆ ಸಂತ್ರಸ್ತೆ ಸಿ.ಕೆ. ಅಚ್ಚುಕಟ್ಟು ಪೊಲೀಸರಿಗೆ ದೂರು ನೀಡಿದ್ದು, ಆರೋಪಿ ಪರಾರಿಯಾಗಿದ್ದಾನೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.
- Rachappaji Naik S
- Updated on: May 3, 2026
- 8:00 am
ಬೆಂಗಳೂರು: ತಂದೆಗೆ ಔಷಧಿ ತರಲು ಹೋಗಿದ್ದ ಬಾಲಕನ ಮೇಲೆ ಹರಿದ ಖಾಸಗಿ ಬಸ್; ದುರಂತ ಅಂತ್ಯ
ಬೆಂಗಳೂರಿನ ಹೆಣ್ಣೂರಿನಲ್ಲಿ ಹೃದಯವಿದ್ರಾವಕ ಘಟನೆಯೊಂದು ನಡೆದಿದೆ. ತಂದೆಗೆ ಔಷಧಿ ತರಲು ಹೋಗಿದ್ದ ಬಾಲಕ ರಸ್ತೆ ದಾಟುವಾಗ ಇದ್ದಕ್ಕಿದ್ದಂತೆ ತಲೆಸುತ್ತಿ ಬಿದ್ದು, ಹಿಂಬದಿಯಿಂದ ಬಂದ ಖಾಸಗಿ ಬಸ್ ಹರಿದು ದಾರುಣವಾಗಿ ಸಾವನ್ನಪ್ಪಿದ್ದಾನೆ. ರಸ್ತೆ ಕಾಮಗಾರಿಯೇ ಮಗನ ಸಾವಿಗೆ ಕಾರಣವೆಂದು ಪೋಷಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸದ್ಯ ಹೆಣ್ಣೂರು ಸಂಚಾರಿ ಪೊಲೀಸರು ಚಾಲಕನನ್ನು ಬಂಧಿಸಿದ್ದಾರೆ.
- Rachappaji Naik S
- Updated on: May 2, 2026
- 7:56 pm
ಬೆಂಗಳೂರು: ಗೃಹಿಣಿ ಅನುಮಾನಾಸ್ಪದ ಸಾವು, ವರದಕ್ಷಿಣೆ ಕಿರುಕುಳ ಕೊಟ್ಟು ಕೊಲೆ ಮಾಡಿದ್ದಾರೆಂದು ಕುಟುಂಬಸ್ಥರ ಆರೋಪ
ಬೆಂಗಳೂರಿನಲ್ಲಿ ವರದಕ್ಷಿಣೆ ಕಿರುಕುಳದಿಂದ ಗೃಹಿಣಿ ವಂದನಾ ಸಾವನ್ನಪ್ಪಿದ್ದಾರೆ ಎಂದು ಆರೋಪಿಸಲಾಗಿದೆ. ಮದುವೆಯಾದ ಮೂರು ವರ್ಷಗಳಿಂದ ಪತಿ ಕುಟುಂಬದಿಂದ ಕಿರುಕುಳ ಎದುರಿಸುತ್ತಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ. ಪೊಲೀಸರು ಮಧ್ಯಸ್ಥಿಕೆ ವಹಿಸಿದ್ದರೂ ಕಿರುಕುಳ ನಿಂತಿರಲಿಲ್ಲ. ವಂದನಾ ಆತ್ಮಹತ್ಯೆ ಮಾಡಿಕೊಂಡಿಲ್ಲ. ಕೊಲೆ ಮಾಡಲಾಗಿದೆ ಎಂದು ಕುಟುಂಬದವರು ಗಂಭೀರ ಆರೋಪ ಮಾಡಿ ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.
- Rachappaji Naik S
- Updated on: May 2, 2026
- 2:36 pm