AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಉಂಡ ಮನೆಗೆ ಕನ್ನ ಹಾಕಿದ ಕಾರು ಚಾಲಕ: ಮಾಲೀಕ ಗಿರವಿಟ್ಟಿದ್ದ 13 ಲಕ್ಷ ಚಿನ್ನವನ್ನೇ ಮಾರಿದ ಭೂಪ

ಕಾರು ಚಾಲಕನೋರ್ವ ಉಂಡ ಮನೆಗೆ ಕನ್ನ ಹಾಕಿರುವಂತಹ ಘಟನೆ ಒಂದು ಬೆಂಗಳೂರಿನ ಅಮೃತಹಳ್ಳಿಯಲ್ಲಿ ನಡೆದಿದೆ. ಚಾಲಕ ತಾನು ಕೆಲಸ ಮಾಡಿದ್ದ ಮಾಲೀಕರ ಮನೆಯಿಂದಲೇ 13 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿ ಪರಾರಿಯಾಗಿದ್ದ. ಸದ್ಯ ಅಮೃತಹಳ್ಳಿ ಪೊಲೀಸರು ಆರೋಪಿಯನ್ನು​ ಬಂಧಿಸಿ ಜೈಲಿಗಟ್ಟಿದ್ದಾರೆ.

ಉಂಡ ಮನೆಗೆ ಕನ್ನ ಹಾಕಿದ ಕಾರು ಚಾಲಕ: ಮಾಲೀಕ ಗಿರವಿಟ್ಟಿದ್ದ 13 ಲಕ್ಷ ಚಿನ್ನವನ್ನೇ ಮಾರಿದ ಭೂಪ
ಬಂಧಿತ ಕಾರು ಚಾಲಕ, ಚಿನ್ನದ ಗಟ್ಟಿImage Credit source: tv9 kannada
ರಾಚಪ್ಪಾಜಿ ನಾಯ್ಕ್
| Edited By: |

Updated on: Mar 11, 2026 | 10:06 PM

Share

ಬೆಂಗಳೂರು, ಮಾರ್ಚ್​​ 11: ಆತ ಚಾಲಕ (Driver). ಕಳೆದ ಹತ್ತು ವರ್ಷದಿಂದ ಒಂದೇ ಕಡೆ ಕೆಲಸ ಮಾಡುತ್ತಿದ್ದ. ಆತ ಮನೆ ಮಾಲೀಕರ ನಂಬಿಕೆ ಗಳಿಸಿದ್ದ. ಅವರು ಕೂಡ ಈತನನ್ನ ಬಹಳ ಆತ್ಮೀಯತೆಯಿಂದಲೇ ನೋಡಿಕೊಳ್ಳುತ್ತಿದ್ದರು. ಆದರೆ ಇದನ್ನೇ ಬಂಡವಾಳ ಮಾಡಿಕೊಂಡ ಆಸಾಮಿ ಮನೆಯಲ್ಲಿದ್ದ ಚಿನ್ನದ ಮೇಲೆಯೇ ಕಣ್ಣು ಹಾಕಿದ್ದ. ಆ ಮೂಲಕ ಉಂಡ ಮನೆಗೆ ಕನ್ನ ಹಾಕಿದ್ದ. ಚಾಲಕನ ಕಳ್ಳಾಟ ಬಯಲಾಗಿದ್ದೇ ನಿಜಕ್ಕೂ ರೋಚಕ.

ಉಂಡ ಮನೆಗೆ ದ್ರೋಹ

ಉಂಡ ಮನೆಗೆ ಕನ್ನ ಹಾಕಿದ ಕಾರು ಚಾಲಕನ ಹೆಸರು ಅಭಿಲಾಷ್. ಪ್ರತೀಕ್​​ ಎಂಬುವವರ ಪತ್ನಿ ಭುವನಾ ಅವರ ತಾಯಿಯ ಮನೆಯಲ್ಲಿ ಕಾರು ಚಾಲಕನಾಗಿ ಕೆಲಸ ಮಾಡಿಕೊಂಡಿದ್ದ. ಕಳೆದ 10 ವರ್ಷದಿಂದ ಇದ್ದ ಈತನನ್ನ ಮನೆಯವರು ಮನೆಮಗನಂತೆಯೇ ನೋಡಿಕೊಳ್ಳುತ್ತಿದ್ದರು. ಆದರೆ ಈತ ಮಾತ್ರ ಉಂಡ ಮನೆಗೆ ದ್ರೋಹ ಬಗೆದಿದ್ದ. 13 ಲಕ್ಷ ರೂ. ಮೌಲ್ಯದ ಚಿನ್ನದ ಗಟ್ಟಿ ಕದ್ದು ಪರಾರಿಯಾಗಿದ್ದ ಅಭಿಲಾಷ್​​ನನ್ನು ಬಂಧಿಸಿ ಪೊಲೀಸರು ಇದೀಗ ಜೈಲಿಗಟ್ಟಿದ್ದಾರೆ.

ನಡೆದಿದ್ದೇನು?

ಪ್ರತೀಕ್ ಪತ್ನಿ ಭುವನಾ ಕುಟುಂಬಸ್ಥರು ಎಮರ್ಜೆನ್ಸಿ ಇದೆ ಅಂತಾ ಚಿನ್ನವನ್ನು ಚಾಲಕ ಅಭಿಲಾಷ್​​ಗೆ ಕೊಟ್ಟು ಗಿರವಿ ಇಟ್ಟು ಬರುವಂತೆ ಹೇಳಿದ್ದಾರೆ. ಸ್ವಲ್ಪ ದಿನ ಕಳೆಯುತ್ತಿದ್ದಂತೆ ಚಿನ್ನ ಬಿಡಿಸಿಕೊಳ್ಳಲು ಮನೆಯವರು ಹೋಗಿದ್ದಾರೆ. ಆದರೆ ಅಲ್ಲಿ ಶಾಕ್ ಕಾದಿತ್ತು. ಏಕೆಂದರೆ ಗಿರವಿ ಅಂಗಡಿ ಸಿಬ್ಬಂದಿ ಈಗಾಗಲೇ ಚಾಲಕ ಅಭಿಲಾಷ್ ಚಿನ್ನವನ್ನು ಬಿಡಿಸಿಕೊಂಡು ಹೋಗಿರೋದಾಗಿ ಹೇಳಿದ್ದಾರೆ. ಅಲ್ಲಿಗೆ ಚಾಲಕನ ಅಸಲಿ ಕಹಾನಿ ಶುರುವಾಗಿದೆ.

ಇದನ್ನೂ ಓದಿ: ಚೀನಾ ಲಿಂಕ್ ಹೊಂದಿರುವ ಮಂಗಳೂರಿನ ಸೈಬರ್ ವಂಚಕರ ಬಂಧನ

ಮಾಲೀಕರು ನೀಡಿದ್ದ ಚಿನ್ನವನ್ನು ಗಿರವಿ ಇಟ್ಟಿದ್ದ ಆಸಾಮಿ ಬಳಿಕ ಅದನ್ನು ಬಿಡಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಿಬಿಟ್ಟಿದ್ದ. ಇದರಿಂದ ಅನುಮಾನಗೊಂಡ ಮನೆಯವರು ಮನೆಯಲ್ಲಿದ್ದ ಚಿನ್ನವನ್ನು ಪರಿಶೀಲನೆ ನಡೆಸಿದಾಗ ಮನೆಯಲ್ಲಿದ್ದ ಒಂದಷ್ಟು ಚಿನ್ನ ಕಡಿಮೆ ಆಗಿರುವುದು ಕೂಡ ಗೊತ್ತಾಗಿದೆ. ಚಾಲಕ ಹಂತ ಹಂತವಾಗಿ ಮನೆಯಲ್ಲಿಟ್ಟಿದ್ದ ಚಿನ್ನ ಕದ್ದು ಮಾರಾಟ ಮಾಡಿದ್ದ ಅನ್ನೋದು ಗೊತ್ತಾಗಿದೆ.

ಇದನ್ನೂ ಓದಿ: 6 ತಿಂಗಳ ಸ್ಕೆಚ್​​, ಪಕ್ಕಾ ಪ್ಲ್ಯಾನ್​​ ಮಾಡಿ ಕಳ್ಳತನ: 1.8 ಕೆಜಿ ಬಂಗಾರ, ಡೈಮಂಡ್​​ ಕದ್ದವ ಅರೆಸ್ಟ್​

ಇಂತಹ ವ್ಯಕ್ತಿಗಳಿರುವುದರಿಂದ ಪ್ರತಿ ಕೆಲಸದವರನ್ನು ಮನೆ ಮಾಲೀಕರು ಅನುಮಾನದಿಂದ ನೋಡುವಂತಾಗಿದೆ. ಸದ್ಯ ಆರೋಪಿಯನ್ನು ಬಂಧಿಸಿರುವ ಅಮೃತಹಳ್ಳಿ ಪೊಲೀಸರು ಜೈಲಿಗಟ್ಟಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ವ್ಯಾನ್ ಪುಡಿಪುಡಿ, ಮೈ ಜುಂ ಎನಿಸುವ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
ವ್ಯಾನ್ ಪುಡಿಪುಡಿ, ಮೈ ಜುಂ ಎನಿಸುವ ಅಪಘಾತದ ದೃಶ್ಯ ಸಿಸಿಟಿವಿಯಲ್ಲಿ ಸೆರೆ
SSLC ಹಿಂದಿ ಗೊಂದಲ: ಫಲಿತಾಂಶ ವಿಳಂಬ, ಸಚಿವರು ಹೇಳಿದ್ದೇನು?
SSLC ಹಿಂದಿ ಗೊಂದಲ: ಫಲಿತಾಂಶ ವಿಳಂಬ, ಸಚಿವರು ಹೇಳಿದ್ದೇನು?
ಡಿಎಂಕೆ ಪರ ನಿಂತ ಕಾಂಗ್ರೆಸ್ ವಿರುದ್ಧ ಜೆಡಿಎಸ್​​ ಕಿಡಿ: ಕಾರಣ ಇಲ್ಲಿದೆ
ಡಿಎಂಕೆ ಪರ ನಿಂತ ಕಾಂಗ್ರೆಸ್ ವಿರುದ್ಧ ಜೆಡಿಎಸ್​​ ಕಿಡಿ: ಕಾರಣ ಇಲ್ಲಿದೆ
ಟಿಪ್ಪರ್​ ಅಡಿಗೆ ಬಿದ್ದು ಯುವಕ ಆತ್ಮಹತ್ಯೆ: ಭಯಾನಕ ದೃಶ್ಯ ಇಲ್ಲಿದೆ
ಟಿಪ್ಪರ್​ ಅಡಿಗೆ ಬಿದ್ದು ಯುವಕ ಆತ್ಮಹತ್ಯೆ: ಭಯಾನಕ ದೃಶ್ಯ ಇಲ್ಲಿದೆ
HDK ಜತೆ ರಹಸ್ಯ ಮಾತುಕತೆ, ಜೆಡಿಎಸ್ ಸೇರ್ಪಡೆ ಬಗ್ಗೆ ಜಮೀರ್ ಹೇಳಿದ್ದೇನು?
HDK ಜತೆ ರಹಸ್ಯ ಮಾತುಕತೆ, ಜೆಡಿಎಸ್ ಸೇರ್ಪಡೆ ಬಗ್ಗೆ ಜಮೀರ್ ಹೇಳಿದ್ದೇನು?
ಜೋಧ್​ಪುರದ ಪಾರ್ಕ್​​ನಲ್ಲಿ ಜೇನು ನೊಣಗಳ ದಾಳಿ
ಜೋಧ್​ಪುರದ ಪಾರ್ಕ್​​ನಲ್ಲಿ ಜೇನು ನೊಣಗಳ ದಾಳಿ
ಅನಾಥವಾಗಿ ಪ್ರಾಣಬಿಟ್ಟ ತಾಯಿ: ಅಂತ್ಯಕ್ರಿಯೆಗೂ ಒಲ್ಲೆ ಎಂದ ಇವರೆಂಥ ಪುತ್ರರು?
ಅನಾಥವಾಗಿ ಪ್ರಾಣಬಿಟ್ಟ ತಾಯಿ: ಅಂತ್ಯಕ್ರಿಯೆಗೂ ಒಲ್ಲೆ ಎಂದ ಇವರೆಂಥ ಪುತ್ರರು?
KSRTC ಬಸ್ ಪಲ್ಟಿ: ತಪ್ಪಿದ ಭಾರಿ ದುರಂತ, 40 ಪ್ರಯಾಣಿಕರು ಪಾರು!
KSRTC ಬಸ್ ಪಲ್ಟಿ: ತಪ್ಪಿದ ಭಾರಿ ದುರಂತ, 40 ಪ್ರಯಾಣಿಕರು ಪಾರು!
ದೇವನಹಳ್ಳಿಯಲ್ಲಿ ಬೆಳ್ಳಂ ಬೆಳಿಗ್ಗೆ RTO ಅಧಿಕಾರಿಗಳ ಕಾರ್ಯಾಚರಣೆ
ದೇವನಹಳ್ಳಿಯಲ್ಲಿ ಬೆಳ್ಳಂ ಬೆಳಿಗ್ಗೆ RTO ಅಧಿಕಾರಿಗಳ ಕಾರ್ಯಾಚರಣೆ
ಲೆನ್ಸ್‌ಕಾರ್ಟ್ ಉದ್ಯೋಗಿಗಳಿಗೆ ತಿಲಕವಿಟ್ಟ ಬಿಜೆಪಿ ನಾಯಕಿ ನಾಜಿಯಾ ಇಲಾಹಿ
ಲೆನ್ಸ್‌ಕಾರ್ಟ್ ಉದ್ಯೋಗಿಗಳಿಗೆ ತಿಲಕವಿಟ್ಟ ಬಿಜೆಪಿ ನಾಯಕಿ ನಾಜಿಯಾ ಇಲಾಹಿ