AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಆಗಸ್ಟ್ 16ರಿಂದ ‘ಬಿಗ್ ಬಾಸ್ ಕನ್ನಡ’ ಹೊಸ ಸೀಸನ್ ಶುರು; ಈ ಬಾರಿ ಅಗ್ನಿಪರೀಕ್ಷೆ

ಈ ಬಾರಿ ‘ಬಿಗ್ ಬಾಸ್ ಕನ್ನಡ’ ರಿಯಾಲಿಟಿ ಶೋ ಬಹಳ ಡಿಫರೆಂಟ್ ಆಗಿರಲಿದೆ. ದೊಡ್ಮನೆ ಒಳಗೆ ಕಾಲಿಡಲು ಜನಸಾಮಾನ್ಯರಿಗೂ ಅವಕಾಶ ಸಿಗುತ್ತಿದೆ. ಆದರೆ ಅದಕ್ಕೂ ಮುನ್ನ ದೊಡ್ಡ ಅಗ್ನಿಪರೀಕ್ಷೆ ನಡೆಯಲಿದೆ. ಈ ಅಗ್ನಿಪರೀಕ್ಷೆಯಲ್ಲಿ ಯಶಸ್ವಿ ಆದವರಿಗೆ ಬಿಗ್ ಬಾಸ್ ಶೋನಲ್ಲಿ ಸ್ಪರ್ಧಿಸುವ ಅವಕಾಶ ಸಿಗಲಿದೆ.

ಆಗಸ್ಟ್ 16ರಿಂದ ‘ಬಿಗ್ ಬಾಸ್ ಕನ್ನಡ’ ಹೊಸ ಸೀಸನ್ ಶುರು; ಈ ಬಾರಿ ಅಗ್ನಿಪರೀಕ್ಷೆ
Bigg Boss
ಮದನ್​ ಕುಮಾರ್​
|

Updated on: Aug 04, 2026 | 9:41 PM

Share

ಮುಖ್ಯಾಂಶಗಳು

  • ‘ಬಿಗ್ ಬಾಸ್ ಕನ್ನಡ ಸೀಸನ್ 13’ ಶೋನಲ್ಲಿ ಇರಲಿದೆ ಹೊಸ ಕಾನ್ಸೆಪ್ಟ್.
  • ಅಗ್ನಿಪರೀಕ್ಷೆ ಎದುರಿಸುವ ಜನಸಾಮಾನ್ಯರಿಗೆ ಸಿಗಲಿದೆ ದೊಡ್ಡ ಅವಕಾಶ.
  • ಆ.16ರಿಂದ ಬಿಗ್ ಬಾಸ್ ಅಗ್ನಿಪರೀಕ್ಷೆಯ ಸಂಚಿಕೆಗಳು ಪ್ರಸಾರ ಆಗಲಿವೆ.

ಕಿರುತೆರೆಯಲ್ಲಿ ಬಿಗ್ ಬಾಸ್ ರಿಯಾಲಿಟಿ ಶೋಗೆ ಇರುವ ಜನಪ್ರಿಯತೆ ಅಪಾರ. ಕನ್ನಡದಲ್ಲಿ ಈಗಾಗಲೇ 12 ಸೀಸನ್​ಗಳು ಯಶಸ್ವಿಯಾಗಿ ಮುಗಿದಿವೆ. 13ನೇ ಸೀಸನ್ ಆರಂಭಕ್ಕೆ ಸಕಲ ಸಿದ್ಧತೆ ನಡೆದಿದೆ. ‘ಬಿಗ್ ಬಾಸ್ ಕನ್ನಡ ಸೀಸನ್ 13’ (Bigg Boss Kannada Season 13) ಆರಂಭಕ್ಕಾಗಿ ಕಾದಿದ್ದ ವೀಕ್ಷಕರಿಗೆ ಗುಡ್ ನ್ಯೂಸ್ ಸಿಕ್ಕಿದೆ. ಈ ಬಾರಿ ಬಿಗ್ ಬಾಸ್ ಯಾವಾಗ ಪ್ರಾರಂಭ ಆಗಲಿದೆ ಎಂಬ ಪ್ರಶ್ನೆಗೆ ‘ಕಲರ್ಸ್ ಕನ್ನಡ’ (Colors Kannada) ವಾಹಿನಿ ಉತ್ತರ ನೀಡಿದೆ. ಹೊಸ ಪ್ರೋಮೋ ಮೂಲಕ ಮಾಹಿತಿ ಹಂಚಿಕೊಳ್ಳಲಾಗಿದೆ. ಆಗಸ್ಟ್ 16ರಿಂದ ‘ಬಿಗ್ ಬಾಸ್’ ಶುರು ಆಗಲಿದೆ.

ಈ ಬಾರಿ ‘ಬಿಗ್ ಬಾಸ್ ಕನ್ನಡ’ ರಿಯಾಲಿಟಿ ಶೋ ಸಂಪೂರ್ಣ ಭಿನ್ನವಾಗಿ ಇರಲಿದೆ. ಸೆಲೆಬ್ರಿಟಿಗಳು ಮಾತ್ರವಲ್ಲದೇ ಸಾಮಾನ್ಯ ಜನರಿಗೂ ದೊಡ್ಮನೆಗೆ ಕಾಲಿಡುವ ಅವಕಾಶವನ್ನು ನೀಡಲಾಗುತ್ತಿದೆ. ತಮ್ಮ ಪ್ರತಿಭೆಯನ್ನು ತೋರಿಸುವ ಮೂಲಕ ಆಡಿಷನ್ ನೀಡುವಂತೆ ಈ ಹಿಂದೆ ಜನರಿಗೆ ಅವಕಾಶ ಕಲ್ಪಿಸಲಾಗಿತ್ತು. ಲಕ್ಷಾಂತರ ಜನರು ಆಸಕ್ತಿ ತೋರಿಸಿದ್ದಾರೆ.

ಆಗಸ್ಟ್ 16ರಿಂದ ಬಿಗ್ ಬಾಸ್ ಅಗ್ನಿಪರೀಕ್ಷೆ:

ಬಿಗ್ ಬಾಸ್ ಮನೆಗೆ ಬರುವ ಉತ್ಸಾಹದಲ್ಲಿ ಇರುವವರಿಗೆ ವೇದಿಕೆ ಸಜ್ಜುಗೊಳಿಸಲಾಗಿದೆ. ಆಡಿಷನ್ ನೀಡಿರುವವರಿಗೆ ಅಗ್ನಿಪರೀಕ್ಷೆ ಏರ್ಪಡಿಸಲಾಗುತ್ತದೆ. ಯಶಸ್ವಿಯಾಗಿ ಅಗ್ನಿಪರೀಕ್ಷೆ ಎದುರಿಸುವವರಿಗೆ ಬಿಗ್ ಬಾಸ್ ಮನೆಯೊಳಗೆ ಕಾಲಿಡುವ ಅವಕಾಶ ಸಿಗಲಿದೆ. ಈ ಅಗ್ನಿಪರೀಕ್ಷೆಯ ಸಂಚಿಕೆಗಳು ಆಗಸ್ಟ್ 16ರಿಂದ ಪ್ರಸಾರ ಆಗಲಿವೆ. ಅಂದು ರಾತ್ರಿ 9 ಗಂಟೆಗೆ ಕಾರ್ಯಕ್ರಮಕ್ಕೆ ಚಾಲನೆ ಸಿಗಲಿದೆ. ಬಳಿಕ ಪ್ರತಿ ಸೋಮವಾರದಿಂದ ಶುಕ್ರವಾರ ರಾತ್ರಿ 9.30ಕ್ಕೆ ಎಪಿಸೋಡ್​ಗಳು ಪ್ರಸಾರವಾಗಲಿದೆ.

ಬಿಗ್ ಬಾಸ್ ಕನ್ನಡ ಹೊಸ ಪ್ರೋಮೋ:

ವೀಕ್ಷಕರಿಗೂ ಇದು ಹೊಸ ಅನುಭವ:

ಈ ರೀತಿ ಅಗ್ನಿಪರೀಕ್ಷೆ ಮಾಡುವ ಮೂಲಕ ಸ್ಪರ್ಧಿಗಳನ್ನು ಆಯ್ಕೆ ಮಾಡುತ್ತಿರುವುದು ಬಿಗ್ ಬಾಸ್ ಶೋನಲ್ಲಿ ಹೊಸ ಕಾನ್ಸೆಪ್ಟ್. ಹಾಗಾಗಿ ವೀಕ್ಷಕರಿಗೆ ಸಖತ್ ಕುತೂಹಲ ಇದೆ. ಈ ಸಂಚಿಕೆಗಳು ಹೇಗಿರಲಿವೆ? ನಿರೂಪಣೆ ಯಾರು ಮಾಡಲಿದ್ದಾರೆ? ವಿಡಿಯೋ ಕಳಿಸಿದ ಎಷ್ಟು ಮಂದಿಗೆ ಅಗ್ನಿಪರೀಕ್ಷೆಯಲ್ಲಿ ಭಾಗವಹಿಸುವ ಅವಕಾಶ ಸಿಗಲಿದೆ? ಅಂತಿಮವಾಗಿ ಯಾರು ಬಿಗ್ ಬಾಸ್ ಮನೆಗೆ ಕಾಲಿಡುತ್ತಾರೆ ಎಂಬುದನ್ನು ನೋಡಲು ಜನರು ಉತ್ಸುಕರಾಗಿದ್ದಾರೆ.

ಇದನ್ನೂ ಓದಿ: ‘ಬಿಗ್ ಬಾಸ್’ ಭಾವಿ ಸ್ಪರ್ಧಿಗಳಿಗೆ ‘ಅಗ್ನಿಪರೀಕ್ಷೆ’; ಜಡ್ಜ್​ ಸ್ಥಾನದಲ್ಲಿ ಗಿಲ್ಲಿ, ಸಂಗೀತಾ?

ಇತ್ತೀಚೆಗಷ್ಟೇ ‘ಬಿಗ್ ಬಾಸ್ ಕನ್ನಡ ಸೀಸನ್ 13’ರ ಹೊಸ ಪ್ರೋಮೋ ಬಿಡುಗಡೆ ಮಾಡಲಾಗಿತ್ತು. ಕಿಚ್ಚ ಸುದೀಪ್ ಅವರು ಎಂದಿನ ಗತ್ತಿನಲ್ಲಿ ಕಾಣಿಸಿಕೊಂಡು ಅಭಿಮಾನಿಗಳಿಗೆ ಥ್ರಿಲ್ ನೀಡಿದ್ದರು. ಆ ಪ್ರೋಮೋದ ಬೆನ್ನಲ್ಲೇ ‘ಅಗ್ನಿಪರೀಕ್ಷೆ’ಯ ಪ್ರೋಮೋ ಅನಾವರಣ ಮಾಡಲಾಗಿದೆ. ‘ಕಲರ್ಸ್ ಕನ್ನಡ’ ವಾಹಿನಿಯ ಸೋಶಿಯಲ್ ಮೀಡಿಯಾ ಖಾತೆಗಳಲ್ಲಿ ಪ್ರೋಮೋ ರಿಲೀಸ್ ಆಗಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Follow Us
ಮದನ್​ ಕುಮಾರ್​
ಮದನ್​ ಕುಮಾರ್​

ಮಾಧ್ಯಮ ಲೋಕದಲ್ಲಿ ಕಳೆದ 10 ವರ್ಷಗಳಿಂದ ಸಕ್ರಿಯವಾಗಿದ್ದೇನೆ. ಕನ್ನಡದ ವಿವಿಧ ಪ್ರತಿಷ್ಠಿತ ಮಾಧ್ಯಮಗಳಲ್ಲಿ ಕೆಲಸ ಮಾಡಿದ ಅನುಭವ ಹೊಂದಿದ್ದೇನೆ. ಸಿನಿಮಾ ವರದಿಗಾರಿಕೆ ಮತ್ತು ವಿಮರ್ಶೆಯಲ್ಲಿ ಪರಿಣತಿ ಇದೆ. 2014ರಿಂದ 2019ರ ತನಕ ವಿಜಯವಾಣಿ ದಿನ ಪತ್ರಿಕೆಯಲ್ಲಿ ಸಿನಿಮಾ ವರದಿಗಾರನಾಗಿ ಕೆಲಸ ಮಾಡಿ ಅನುಭವ ಪಡೆದಿದ್ದೇನೆ. ಬಳಿಕ ವಿಜಯ ಕರ್ನಾಟಕ ಡಿಜಿಟಲ್ (ಟೈಮ್ಸ್​ ಇಂಟರ್​ನೆಟ್​) ಸಂಸ್ಥೆಯಲ್ಲಿ ಕಂಟೆಂಟ್​ ಪ್ರೊಡ್ಯೂಸರ್​ ಆಗಿ ಕೆಲಸ ಮಾಡಿದ್ದೇನೆ. ಪ್ರಸ್ತುತ ‘ಟಿವಿ9 ಕನ್ನಡ ಡಿಜಿಟಲ್​’ನ ಸಿನಿಮಾ/ಮನರಂಜನೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಎಲ್ಲ ಭಾಷೆಯ ಸಿನಿಮಾಗಳ ವೀಕ್ಷಣೆಯಲ್ಲಿ ಆಸಕ್ತಿ ಇದೆ. ಸದಾ ಕನ್ನಡ-ಇಂಗ್ಲಿಷ್​ ಸಾಹಿತ್ಯದ ವಿದ್ಯಾರ್ಥಿ.

Read More