ಫ್ಲೈದುಬೈ ವಿಮಾನದಲ್ಲಿ ಮುಖ್ಯ ಪೈಲೆಟ್ ಮೇಲೆ ದಾಳಿ ಪ್ರಕರಣ: ಸಹ ಪೈಲಟ್ ಕೃತ್ಯವನ್ನು ಶ್ಲಾಘಿಸಿದ ಅಲ್-ಖೈದಾ!
ಫ್ಲೈದುಬೈ ವಿಮಾನದಲ್ಲಿ ಮುಖ್ಯ ಪೈಲಟ್ ಮೇಲೆ ಸಹ ಪೈಲಟ್ ನಡೆಸಿದ ದಾಳಿಯನ್ನು ಅಲ್-ಖೈದಾ ಶ್ಲಾಘಿಸಿದೆ. 181 ಮಂದಿಯನ್ನು ಕೊಲ್ಲುವ ಉದ್ದೇಶಪೂರ್ವಕ ಸಂಚು ಇದಾಗಿತ್ತು ಎಂದು ನ್ಯೂಯಾರ್ಕ್ ಪೋಸ್ಟ್ ವರದಿ ಮಾಡಿದೆ. ಈ ಕೃತ್ಯದ ಹಿಂದೆ ಭಯೋತ್ಪಾದಕ ಸಂಘಟನೆಗಳ ಕೈವಾಡದ ಬಗ್ಗೆ ತನಿಖೆ ನಡೆಯುತ್ತಿದ್ದು, ಜಾಗತಿಕ ವಾಯುಯಾನ ಭದ್ರತೆ ಕುರಿತು ತೀವ್ರ ಆತಂಕ ಮೂಡಿಸಿದೆ.
ಅಬುಧಾಬಿ, ಅಕ್ಟೋಬರ್ 4: ಫ್ಲೈದುಬೈ ವಿಮಾನದಲ್ಲಿ ಮುಖ್ಯ ಪೈಲಟ್ ಸ್ಮಿತ್ ಮಚ್ಚರ್ ಅವರ ಮೇಲೆ ಸಹ ಪೈಲಟ್ ಹಮಾಮ್ ನಡೆಸಿದ ದಾಳಿ ವಿಚಾರಕ್ಕೆ ಅಲ್-ಖೈದಾ ಭಯೋತ್ಪಾದಕ ಸಂಘಟನೆ ಎಂಟ್ರಿ ಇಕೊಟ್ಟಿದೆ. ಈ ಕೃತ್ಯವನ್ನು ಅಲ್-ಖೈದಾ ಶ್ಲಾಘಿಸಿದ್ದು, ವಿಮಾನದಲ್ಲಿದ್ದವರನ್ನು ಕೊಲ್ಲುವ ಉದ್ದೇಶದಿಂದ ನಡೆಸಿದ ಸಂಚು ಇದಾಗಿತ್ತು ಎಂಬುದು ಅಲ್-ಖೈದಾಗೆ ಸಂಬಂಧಿಸಿದ ಪ್ರಕಟಣೆಯಲ್ಲಿ ಬಹಿರಂಗವಾಗಿದೆ. ನ್ಯೂಯಾರ್ಕ್ ಪೋಸ್ಟ್ ಈ ಬಗ್ಗೆ ತನಿಖಾ ವರದಿ ಮಾಡಿದ್ದು, ಅಲ್-ಖೈದಾ ಟೆಲಿಗ್ರಾಂನಲ್ಲಿ ಪೋಸ್ಟ್ ಒಂದನ್ನು ಹಂಚಿಕೊಂಡಿತ್ತು. ಅದರಲ್ಲಿ ಇಸ್ರೇಲ್ ಮತ್ತು ಅಮೆರಿಕವನ್ನು ನಾಶಪಡಿಸಲಾಗುವುದು ಎಂದು ಉಲ್ಲೇಖಿಸಿ ನಂತರ ಡಿಲೀಟ್ ಮಾಡಲಾಗಿದೆ. ಈ ಪೋಸ್ಟ್ 9/11 ದಾಳಿಯಂತೆ ಮತ್ತಷ್ಟು ದಾಳಿಗಳನ್ನು ನಡೆಸುವ ಬಗ್ಗೆಯೂ ಸೂಚಿಸಿತ್ತು. ಸಹ ಪೈಲಟ್ ಹಮಾಮ್ ಮುಖ್ಯ ಪೈಲಟ್ ಸ್ಮಿತ್ ಮೇಲೆ ಹಲ್ಲೆ ನಡೆಸಿ, ವಿಮಾನವನ್ನು ಹೈಜಾಕ್ ಮಾಡಲು ಪ್ರಯತ್ನಿಸಿದ್ದ. ಆದರೆ ಸ್ಮಿತ್ ಅವರ ಸಮಯಪ್ರಜ್ಞೆಯಿಂದ ದೊಡ್ಡ ದುರಂತ ತಪ್ಪಿದೆ ಎನ್ನಲಾಗಿದೆ. ಆದರೆ ಈ ಘಟನೆ ಜಾಗತಿಕ ವಾಯುಯಾನ ಭದ್ರತೆಯ ಬಗ್ಗೆ ಹೊಸ ಪ್ರಶ್ನೆಗಳನ್ನು ಹುಟ್ಟುಹಾಕಿದೆ.
ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್ ಮಾಡಿ.

