ಬಿಗ್ ಬಾಸ್ ಎಲಿಮಿನೇಷನ್: ಅಪಾಯದಲ್ಲಿ ಕಿರಣ್ ಶಾಸ್ತ್ರಿ, ಸಂಗೀತಾ ಭಟ್, ಲಿಖಿತ್
‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋನಲ್ಲಿ ಈ ವಾರ ಯಾರು ಎಲಿಮಿನೇಟ್ ಆಗುತ್ತಾರೆ ಎಂಬ ಕೌತುಕ ಹೆಚ್ಚಿದೆ. ಸಂಗೀತಾ ಭಟ್, ಕಿರಣ್ ಶಾಸ್ತ್ರಿ ಹಾಗೂ ಲಿಖಿತ್ ಅವರು ಡೇಂಜರ್ ಝೋನ್ನಲ್ಲಿ ಇದ್ದಾರೆ. ಆ ಪೈಕಿ ಒಬ್ಬರಿಗೆ ಈ ವಾರ ಗೇಟ್ ಪಾಸ್ ನೀಡಲಾಗುತ್ತದೆ. ಈ ಬಾರಿ ಎಲಿಮಿನೇಷನ್ ಸ್ವಲ್ಪ ಭಿನ್ನವಾಗಿ ಇರಲಿದೆ.
‘ಬಿಗ್ ಬಾಸ್ ಕನ್ನಡ ಸೀಸನ್ 13’ ರಿಯಾಲಿಟಿ ಶೋನಲ್ಲಿ ಈ ವಾರ ಯಾರು ಎಲಿಮಿನೇಟ್ ಆಗುತ್ತಾರೆ ಎಂಬ ಕೌತುಕ ಹೆಚ್ಚಿದೆ. ಸಂಗೀತಾ ಭಟ್, ಕಿರಣ್ ಶಾಸ್ತ್ರಿ ಹಾಗೂ ಲಿಖಿತ್ ಅವರು ಡೇಂಜರ್ ಝೋನ್ನಲ್ಲಿ ಇದ್ದಾರೆ. ಆ ಪೈಕಿ ಒಬ್ಬರಿಗೆ ಈ ವಾರ ಗೇಟ್ ಪಾಸ್ ನೀಡಲಾಗುತ್ತದೆ. ಈ ಬಾರಿ ಎಲಿಮಿನೇಷನ್ ಸ್ವಲ್ಪ ಭಿನ್ನವಾಗಿ ಇರಲಿದೆ. ಆ ಬಗ್ಗೆ ಪ್ರೋಮೋ ಮೂಲಕ ಸುಳಿವು ನೀಡಲಾಗಿದೆ. ಇದು ವಿಮಾನಯಾನದ ಕಾನ್ಸೆಪ್ಟ್ ಆಗಿರುವುದರಿಂದ ಕಮಾಂಡೋಗಳ ಮಾದರಿಯಲ್ಲಿ ವೇಷ ಧರಿಸಿದವರು ಬಿಗ್ ಬಾಸ್ ಮನೆಗೆ ಬಂದು, ಎಲಿಮಿನೇಟ್ ಆಗುವ ಸದಸ್ಯರನ್ನು ಹೊರಗೆ ಕರೆದುಕೊಂಡು ಹೋಗಲಿದ್ದಾರೆ. ಸಂಗೀತಾ ಭಟ್, ಲಿಖಿತ್ ಮತ್ತು ಕಿರಣ್ ಶಾಸ್ತ್ರಿಗೆ ಢವಢವ ಶುರುವಾಗಿದೆ. ಎಲಿಮಿನೇಟ್ ಆದವರು ವೇದಿಕೆಗೆ ಬಂದು ಕಿಚ್ಚ ಸುದೀಪ್ ಅವರನ್ನು ಭೇಟಿ ಮಾಡಲಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Follow Us

