- TV9 Kannada Photo gallery Cricket photos KL Rahul's Record Century: 129 vs WI, 10,000 Int. Runs Milestone!
10000 ರನ್ಗಳ ಸರದಾರ ಕನ್ನಡಿಗ ಕೆಎಲ್ ರಾಹುಲ್..!
ಕೆಎಲ್ ರಾಹುಲ್ ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ 80 ಎಸೆತಗಳಲ್ಲಿ ಶತಕ (129 ರನ್) ಸಿಡಿಸಿ ಭಾರತಕ್ಕೆ 351 ರನ್ ಗಳಿಸಲು ನೆರವಾದರು. ಇದು ಅವರ 9ನೇ ODI ಶತಕ ಹಾಗೂ ವೈಯಕ್ತಿಕ ಗರಿಷ್ಠ ಸ್ಕೋರ್. ಈ ಸಾಧನೆಯೊಂದಿಗೆ, ರಾಹುಲ್ 10,000 ಅಂತರರಾಷ್ಟ್ರೀಯ ರನ್ ಪೂರೈಸಿದ 15ನೇ ಭಾರತೀಯ ಬ್ಯಾಟ್ಸ್‌ಮನ್ ಆಗಿ ಇತಿಹಾಸ ನಿರ್ಮಿಸಿದ್ದಾರೆ. ಸಂಕಷ್ಟದಲ್ಲಿದ್ದ ತಂಡಕ್ಕೆ ಅವರ ಆಟ ನೆರವಾಯಿತು.
Updated on: Oct 03, 2026 | 9:52 PM

ವೆಸ್ಟ್ ಇಂಡೀಸ್ ವಿರುದ್ಧದ ಮೂರನೇ ಏಕದಿನ ಪಂದ್ಯದಲ್ಲಿ ಕೆಎಲ್ ರಾಹುಲ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿ ಶತಕ ಬಾರಿಸಿದರು. ಕೇವಲ 80 ಎಸೆತಗಳಲ್ಲಿ ಶತಕ ಪೂರೈಸಿದ ರಾಹುಲ್ಗೆ ಇದು ಏಕದಿನ ಕ್ರಿಕೆಟ್‌ನಲ್ಲಿ 9 ನೇ ಶತಕವಾಗಿದೆ. ರಾಹುಲ್ ಅವರ ಶತಕದ ನೆರವಿನಿಂದ ಮೊದಲು ಬ್ಯಾಟಿಂಗ್ ಮಾಡಿದ ಭಾರತ 351 ರನ್ ಕಲೆಹಾಕಿತು(PC-BCCI x).

80 ಎಸೆತಗಳಲ್ಲಿ ಶತಕ ಬಾರಿಸಿದ ರಾಹುಲ್ಗೆ ಇದು ಅವರ ಏಕದಿನ ಕ್ರಿಕೆಟ್‌ನಲ್ಲಿ ಎರಡನೇ ಅತ್ಯಂತ ವೇಗದ ಶತಕವಾಗಿದೆ. 2023 ರ ವಿಶ್ವಕಪ್‌ನಲ್ಲಿ ಬೆಂಗಳೂರಿನಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯದಲ್ಲಿ ಅವರು ಕೇವಲ 62 ಎಸೆತಗಳಲ್ಲಿ ಶತಕ ಬಾರಿಸಿದ್ದರು(PC-BCCI x).

ಈ ಪಂದ್ಯದಲ್ಲಿ ರಾಹುಲ್ 10 ಬೌಂಡರಿ ಮತ್ತು 6 ಸಿಕ್ಸರ್‌ಗಳ ಸಹಿತ 129 ರನ್ ಬಾರಿಸಿದರು. ಇದು ಏಕದಿನ ಕ್ರಿಕೆಟ್‌ನಲ್ಲಿ ರಾಹುಲ್ ಅವರ ಅತ್ಯಧಿಕ ಸ್ಕೋರ್ ಆಗಿದೆ. ಈ ಶತಕದೊಂದಿಗೆ ರಾಹುಲ್ ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ತಮ್ಮ 10,000 ರನ್‌ಗಳನ್ನು ಸಹ ಪೂರ್ಣಗೊಳಿಸಿದರು(PC-BCCI x).

2014 ರಲ್ಲಿ ತಮ್ಮ ಅಂತರರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನವನ್ನು ಪ್ರಾರಂಭಿಸಿದ ರಾಹುಲ್ ಭಾರತದ ಪರ 10,000 ಅಂತರರಾಷ್ಟ್ರೀಯ ರನ್ ಕಲೆಹಾಕಿದ 15 ನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 243 ಪಂದ್ಯಗಳ 281 ಇನ್ನಿಂಗ್ಸ್‌ಗಳಲ್ಲಿ ಈ ಮೈಲಿಗಲ್ಲು ಸಾಧಿಸಿರುವ ರಾಹುಲ್ ಒಟ್ಟು 23 ಶತಕಗಳನ್ನು ಬಾರಿಸಿದ್ದಾರೆ(PC-BCCI x).

ಇನ್ನು ಈ ಪಂದ್ಯದಲ್ಲಿ ರಾಹುಲ್ ಐದನೇ ಕ್ರಮಾಂಕದಲ್ಲಿ ಬ್ಯಾಟಿಂಗ್‌ಗೆ ಬಂದಾಗ, ಭಾರತ 141 ರನ್‌ಗಳಿಗೆ 3 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದಲ್ಲಿತ್ತು. ಪಂದ್ಯದಲ್ಲಿ ಇನ್ನೂ 25 ಓವರ್‌ಗಳು ಬಾಕಿ ಇರುವಾಗ ಬುದ್ಧಿವಂತಿಕೆಯಿಂದ ಆಟವಾಡಲು ಪ್ರಾರಂಭಿಸಿದ ರಾಹುಲ್ ಕೊನೆಯ 5 ಓವರ್‌ಗಳಲ್ಲಿ ಆಕ್ರಮಣಕಾರಿಯಾಗಿ ಬ್ಯಾಟಿಂಗ್ ಮಾಡಿ ಸ್ಕೋರ್ ಅನ್ನು 350 ರ ಗಡಿ ದಾಟಿಸಿದರು(PC-BCCI x).

ಹುಟ್ಟೂರು ಹಾಸನದ ಕೊಣನೂರು ಸಮೀಪದ ಲಕ್ಷ್ಮೀಪುರ, ಕಳೆದ 8 ವರ್ಷಗಳಿಂದ ಪತ್ರಿಕಾರಂಗದಲ್ಲಿ ನೆಲೆ. ಟಿವಿ9 ಕನ್ನಡದಲ್ಲೇ ವೃತ್ತಿ ಜೀವನ ಆರಂಭಿಸಿದ ನಾನು, ಮೊದಲ 3 ವರ್ಷ ವಿಡಿಯೋ ಎಡಿಟರ್ ಆಗಿ ಕೆಲಸ ಮಾಡಿದ ಬಳಿಕ ನನ್ನ ಆಸಕ್ತಿಯ ವಿಷಯವಾದ ಕ್ರೀಡೆಯಲ್ಲಿ ಕಂಟೆಂಟ್ ಪ್ರೊಡ್ಯೂಸರ್ ಆಗಿ ನನ್ನ ವೃತ್ತಿ ಬದುಕಿನ ಎರಡನೇ ಇನ್ನಿಂಗ್ಸ್ ಆರಂಭಿಸಿದ್ದೇನೆ.
Read More



