ನಿರ್ದೇಶಕ ಸಿಂಗೀತಂ ಶ್ರೀನಿವಾಸ್ ಮಾಡಿದ್ದರು ಅಪರೂಪದ ಪ್ರಯೋಗ: ಮಾಹಿತಿ ಇಲ್ಲಿದೆ
ಭಾರತ ಚಿತ್ರರಂಗದ ಲಿಜೆಂಡರಿ ಸಿನಿಮಾ ನಿರ್ದೇಶಕ ಸಿಂಗೀತಂ ಶ್ರೀನಿವಾಸ್ ರಾವ್ ನಿಧನ ಹೊಂದಿದ್ದಾರೆ. ಅವರಿಗೆ 95 ವರ್ಷ ವಯಸ್ಸಾಗಿತ್ತು. 80-90ರ ದಶಕದ ಅತ್ಯಂತ ಪ್ರತಿಭಾವಂತ ನಿರ್ದೇಶಕರಾಗಿದ್ದರು ಸಿಂಗೀತಂ. ಹಲವಾರು ರೀತಿಯ ಪ್ರಯೋಗಗಳನ್ನು ಸಿಂಗೀತಂ ಶ್ರೀನಿವಾಸ್ ಮಾಡಿದ್ದರು. ಕನ್ನಡದಲ್ಲಿ ಹಲವು ಅದ್ಭುತ ಸಿನಿಮಾಗಳನ್ನು ಸಿಂಗೀತಂ ನೀಡಿದ್ದಾರೆ. (ಅವುಗಳ ಪಟ್ಟಿ ಇಲ್ಲಿದೆ). ಸಿಂಗೀತಂ ಅವರು ಮಾಡಿದ ಅದ್ಭುತ ಪ್ರಯೋಗಗಳ ಬಗ್ಗೆ ಕಿರು ಮಾಹಿತಿ ಇಲ್ಲಿದೆ...
Updated on:Oct 04, 2026 | 6:04 PM

ಬೆಂಗಳೂರಿನಲ್ಲಿ ಚಿತ್ರೀಕರಣಗೊಂಡ ‘ಪುಷ್ಪಕ ವಿಮಾನ’ ಹಲವು ಕಾರಣಗಳಿಗೆ ಒಂದು ಅದ್ಭುತ ಸಿನಿಮಾ. ಸಂಭಾಷಣೆಗಳೇ ಇಲ್ಲದೆ ಸಿಂಗೀತಂ ಶ್ರೀನಿವಾಸ್ ಅವರು ಅದ್ಭುತವಾಗಿ ಕತೆ ಹೇಳಿದ್ದಾರೆ ಈ ಸಿನಿಮಾನಲ್ಲಿ. ಸಂಭಾಷಣೆಗಳೇ ಸಿನಿಮಾಗಳಲ್ಲಿ ಪ್ರಮುಖವಾಗಿದ್ದ ಕಾಲದಲ್ಲಿ ಸಂಭಾಷಣೆಗಳಿಲ್ಲದೆ ಕತೆ ಹೇಳಿದ್ದರು ಸಿಂಗೀತಂ. ಈ ಸಿನಿಮಾ ಯೂಟ್ಯೂಬ್ ಮತ್ತು ಅಮೆಜಾನ್ ಪ್ರೈಂನಲ್ಲಿ ಲಭ್ಯವಿದೆ.

‘ಅಪ್ಪು ರಾಜ’ ಅಥವಾ ‘ಅಪೂರ್ವ ಸೋದರಂಗಳ್’ ಸಿನಿಮಾನಲ್ಲಿ ಸಿಂಗೀತಂ ಅವರು ಮಾಡಿರುವ ಪ್ರಯೋಗಗಳ ಬಗ್ಗೆ ಒಂದು ಪುಸ್ತಕವೇ ಬರೆಯಬಹುದು. ಕಮಲ್ ಹಾಸನ್ ಅವರನ್ನು ವಿಎಫ್ಎಕ್ಸ್ ಇಲ್ಲದೆ, ಕೇವಲ ಕ್ಯಾಮೆರಾ ಮತ್ತು ಸೆಟ್ ಟ್ರಿಕ್ಸ್ ಬಳಸಿ ಕುಳ್ಳ ವ್ಯಕ್ತಿಯಾಗಿ ಅವರು ತೋರಿಸಿದ್ದಾರೆ. ಈ ಸಿನಿಮಾ ಯೂಟ್ಯೂಬ್ನಲ್ಲಿ ಲಭ್ಯವಿದೆ.

ತೆಲುಗಿನಲ್ಲಿ ಸಿಂಗೀತಂ ನಿರ್ದೇಶನ ಮಾಡಿದ ‘ಆದಿತ್ಯ 369’ ಸಿನಿಮಾ. ‘ಟೈಂ ಟ್ರಾವೆಲ್’ ವಿಷಯದ ಮೇಲೆ ಆಧರಿತವಾದ ಭಾರತದ ಮೊಟ್ಟ ಮೊದಲ ಸಿನಿಮಾ ಎನ್ನಲಾಗುತ್ತದೆ. 1991 ರಲ್ಲಿ ಬಿಡುಗಡೆ ಆದ ಈ ಸೈನ್ಸ್ ಫಿಕ್ಷನ್ ಕತೆಯಲ್ಲೂ ಸಹ ಸಿಂಗೀತಂ ಅವರು ಹಲವು ಹೊಸ ಪ್ರಯೋಗಗಳನ್ನು ಮಾಡಿದ್ದರು. ಈ ಸಿನಿಮಾ ಅಮೆಜಾನ್ ಪ್ರೈಂ ವಿಡಿಯೋನಲ್ಲಿ ಲಭ್ಯವಿದೆ.

Michel Madanಕಮಲ್ ಹಾಸನ್ ನಟನೆ ಮಾಡಿರುವ ‘ಮೈಖಲ್ ಮದನ ಕಾಮ ರಾಜ’ ಹೆಸರಿನ ಸಿನಿಮಾನಲ್ಲಿಯೂ ಸಹ ಸಿಂಗೀತಂ ಶ್ರೀನಿವಾಸ್ ಅವರು ಹಲವಾರು ಭಿನ್ನ-ಭಿನ್ನ ಪ್ರಯೋಗಗಳನ್ನು ಮಾಡಿದ್ದರು. ಆ ಸಿನಿಮಾನಲ್ಲಿ ಕಮಲ್ ಹಾಸನ್ ನಾಲ್ಕು ಪಾತ್ರಗಳಲ್ಲಿ ನಟನೆ ಮಾಡಿದ್ದರು. ಈ ಸಿನಿಮಾ ಸಹ ಯೂಟ್ಯೂಬಿನಲ್ಲಿ ಲಭ್ಯವಿದೆ.a Kamarja

ಸಿಂಗೀತಂ ಶ್ರೀನಿವಾಸ್ ಅವರು ಅದ್ಭುತ ನಿರ್ದೇಶಕರು ಮಾತ್ರವೇ ಅಲ್ಲದೆ ಅದ್ಭುತವಾದ ಸಂಗೀತ ನಿರ್ದೇಶಕ ಸಹ. ಕನ್ನಡದಲ್ಲಿ ಅವರು ನಿರ್ದೇಶನ ಮಾಡಿದ ಸೂಪರ್ ಹಿಟ್ ‘ಭಾಗ್ಯದ ಲಕ್ಷ್ಮಿ ಬಾರಮ್ಮ’, ‘ಸಂಯುಕ್ತ’ ಸಿನಿಮಾಗಳಿಗೆ ಅವರೇ ಸಂಗೀತ ನೀಡಿದ್ದರು. ಬೇರೆ ಕೆಲ ಸಿನಿಮಾಗಳಿಗೂ ಸಂಗೀತ ನೀಡಿದ್ದರು.

2013 ರಲ್ಲಿ ಸಿಂಗೀತಂ ಅವರು ‘ವೆಲ್ಕಮ್ ಒಬಾಮ’ ಹೆಸರಿನ ಸಿನಿಮಾ ನಿರ್ದೇಶನ ಮಾಡಿದ್ದರು. ಆ ಸಿನಿಮಾ ಅನ್ನು ಅವರು ಹಳೆಯ ಈಸ್ಟ್ಮನ್ ಕಲರ್ ತಂತ್ರಜ್ಞಾನ ಬಳಸಿ ಚಿತ್ರೀಕರಿಸಿದ್ದರು. ಸಿನಿಮಾದ ಎಲ್ಲ ಕಲಾವಿದರು ಮೇಕಪ್ ಇಲ್ಲದೇ ನಟಿಸಿದ್ದು ವಿಶೇಷ. ಈ ಸಿನಿಮಾ ಜಿಯೋ ಹಾಟ್ಸ್ಟಾರ್ನಲ್ಲಿ ವೀಕ್ಷಣೆಗೆ ಸಿಗುತ್ತದೆ.

ಸಿಂಗೀತಂ ಶ್ರೀನಿವಾಸ್ ಅವರು ತಮ್ಮ 94ನೇ ವಯಸ್ಸಿನಲ್ಲಿ ನಿರ್ದೇಶಿಸಿದ ‘ಸಿಂಗ್ ಗೀತಂ’ ಸಿನಿಮಾ ಇದೇ ವರ್ಷ ರಿಲೀಸ್ ಆಯ್ತು. ಆ ಸಿನಿಮಾನಲ್ಲಿ ಆರಂಭದಿಂದ ಅಂತ್ಯದ ವರೆಗೆ ಬರೀ ಹಾಡುಗಳಷ್ಟೆ ಇವೆ. ಸಂಭಾಷಣೆಗಳು ಸಹ ಹಾಡುಗಳೇ. ಈ ಸಿನಿಮಾ ನೆಟ್ಫ್ಲಿಕ್ಸ್ನಲ್ಲಿ ವೀಕ್ಷಣೆಗೆ ಲಭ್ಯ.
Published On - 6:02 pm, Sun, 4 October 26

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.
Read More



