AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಮೈಸೂರು ದಸರಾ 2026: ಅಭಿಮನ್ಯು ನಿವೃತ್ತಿ ಬೆನ್ನಲ್ಲೇ ಚಿನ್ನದ ಅಂಬಾರಿ ಹೊರಲು ಈ ಆನೆ ಬಹುತೇಕ ಫೈನಲ್!

ಮೈಸೂರು ದಸರಾ 2026: ಅಭಿಮನ್ಯು ನಿವೃತ್ತಿ ಬೆನ್ನಲ್ಲೇ ಚಿನ್ನದ ಅಂಬಾರಿ ಹೊರಲು ಈ ಆನೆ ಬಹುತೇಕ ಫೈನಲ್!

ರಾಮ್​, ಮೈಸೂರು
| Edited By: |

Updated on:Oct 04, 2026 | 11:48 AM

Share

ಮೈಸೂರು ದಸರಾ 2026 ಮಹೋತ್ಸವದಲ್ಲಿ ಚಿನ್ನದ ಅಂಬಾರಿ ಹೊರಲು ಧನಂಜಯ ಆನೆ ಪ್ರಮುಖ ಸ್ಪರ್ಧಿಯಾಗಿ ಹೊರಹೊಮ್ಮಿದೆ. ಅಭಿಮನ್ಯು ನಿವೃತ್ತಿಯ ನಂತರ, 750 ಕೆಜಿ ಅಂಬಾರಿ ಹೊರುವ ಜವಾಬ್ದಾರಿಯನ್ನು ಹೊರುವ ಸಾಮರ್ಥ್ಯ, ಗಾಂಭೀರ್ಯ ಮತ್ತು ತಾಲೀಮಿನ ಆಧಾರದ ಮೇಲೆ ಅರಣ್ಯ ಇಲಾಖೆ ಧನಂಜಯವನ್ನು ಪರಿಗಣಿಸಿದೆ. ಅಂತಿಮ ನಿರ್ಧಾರ ಸರ್ಕಾರಿ ಮಟ್ಟದಲ್ಲಿ ಚರ್ಚೆಯಲ್ಲಿದೆ.

ಮೈಸೂರು, ಅಕ್ಟೋಬರ್ 04: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವ 2026ರ ಚಿನ್ನದ ಅಂಬಾರಿ ಹೊರುವ ಆನೆ ಯಾವುದು ಎಂಬ ಕುತೂಹಲ ಮನೆ ಮಾಡಿದೆ. ಪ್ರತಿಷ್ಠಿತ ಅಭಿಮನ್ಯು ಆನೆ ನಿವೃತ್ತಿಯ ನಂತರ, ಅರಣ್ಯ ಇಲಾಖೆಯ ಚಿತ್ತ ಈಗ ಧನಂಜಯ ಆನೆಯತ್ತ ಹರಿದಿದೆ. 750 ಕೆಜಿ ತೂಕದ ಚಿನ್ನದ ಅಂಬಾರಿಯನ್ನು ಹೊರುವ ಆನೆಯ ಆಯ್ಕೆ ಪ್ರಕ್ರಿಯೆ ಬಹುತೇಕ ಅಂತಿಮ ಹಂತ ತಲುಪಿದೆ.

ಮಹೇಂದ್ರ, ಪ್ರಶಾಂತ ಮತ್ತು ಏಕಲವ್ಯ ಆನೆಗಳು ರೇಸ್‌ನಲ್ಲಿದ್ದರೂ ಸಹ, ಧನಂಜಯ ಆನೆಯು ಸ್ಪರ್ಧೆಯಲ್ಲಿ ಮುನ್ನಡೆ ಸಾಧಿಸಿದೆ. ನಡೆಸಲಾದ ತಾಲೀಮು ಮತ್ತು ಪರಿಶೀಲನೆಗಳಲ್ಲೂ ಧನಂಜಯನ ಹೆಸರು ಮುನ್ನೆಲೆಗೆ ಬಂದಿದೆ. ಅಂಬಾರಿ ಹೊರುವ ಆನೆಯ ಸಾಮರ್ಥ್ಯ, ಗಾಂಭೀರ್ಯ, ತಾಲೀಮು ಮತ್ತು ಬೆನ್ನು ಸಮತಟ್ಟಾಗಿರುವಿಕೆಯು ಪ್ರಮುಖ ಮಾನದಂಡಗಳಾಗಿವೆ. ಈ ಎಲ್ಲ ಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿ ಅರಣ್ಯ ಇಲಾಖೆ ಅಂತಿಮ ನಿರ್ಧಾರ ಪ್ರಕಟಿಸಬೇಕಿದೆ.

ಇದಲ್ಲದೆ, ಅಂಬಾರಿ ಹೊರಲು ಆನೆ ಆಯ್ಕೆ ಕುರಿತು ಸರ್ಕಾರಿ ಮಟ್ಟದಲ್ಲೂ ಗಂಭೀರ ಚರ್ಚೆಗಳು ನಡೆಯುತ್ತಿವೆ. ಸಾಂಪ್ರದಾಯಿಕ ಮತ್ತು ಭದ್ರತಾ ದೃಷ್ಟಿಯಿಂದ ಸೂಕ್ತ ಆನೆಯನ್ನು ಆಯ್ಕೆ ಮಾಡುವುದು ನಿರ್ಣಾಯಕ. ಮೈಸೂರು ದಸರಾ 2026ಕ್ಕೆ ಯಾವ ಆನೆ ಅಂಬಾರಿ ಹೊತ್ತು ಸಾಗಲಿದೆ ಎಂಬುದಕ್ಕೆ ಅಧಿಕೃತ ಪ್ರಕಟಣೆಯ ನಿರೀಕ್ಷೆಯಿದೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published on: Oct 04, 2026 11:17 AM

Follow Us
ರಾಮ್​, ಮೈಸೂರು
ರಾಮ್​, ಮೈಸೂರು

ರಾಮ್ ಮೈಸೂರು ಪತ್ರಕರ್ತನಾಗಿ 20 ವರ್ಷದ ಅನುಭವ. ಕಳೆದ 14 ವರ್ಷಗಳಿಂದ ಟಿವಿ9 ಕನ್ನಡದ ಮೈಸೂರು ಜಿಲ್ಲಾ ಪ್ರತಿನಿಧಿಯಾಗಿ ಕೆಲಸ ನಿರ್ವಹಣೆ. ರಾಜ್ಯದ ವಿಧಾನಸಭಾ ಲೋಕಸಭಾ ಚುನಾವಣೆಯ ವಿಶೇಷ ವರದಿ ಹಾಗೂ ರಾಜ್ಯದ ವಿವಿಧ ಕ್ಷೇತ್ರಗಳ ಉಪಚುನಾವಣಾ ವರದಿ, ಕೇರಳದ ವಯನಾಡು ಲೋಕಸಭಾ ಕ್ಷೇತ್ರದ ರಾಹುಲ್ ಗಾಂಧಿ ಸ್ಪರ್ಧೆ ಮಾಡಿದ್ದ ಚುನಾವಣಾ ವರದಿ ಸೇರಿದಂತೆ ಹಲವು ಚುನಾವಣೆಯ ವರದಿಯ ಅನುಭವ. ಮುಂಬೈ ಮಹಾಮಳೆಯ ಕವರೇಜ್, ಕೊಡಗು ಜಿಲ್ಲೆಯ ಗುಡ್ಡ ಕುಸಿತ, ಸೇರಿದಂತೆ ಹಲವು ಸ್ಟಿಂಗ್ ಕಾರ್ಯಾಚರಣೆ, ಸಾಮಾಜಿಕ‌ ಸಮಸ್ಯೆ ಹಾಗೂ ಮಾನವೀಯ ಕಳಕಳಿಯುಳ್ಳ ವರದಿ ಮಾಡಿದ ಅನುಭವ.

Read More