ಭಾವನಾ ಹೆಗಡೆ ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನವರು. ಬಿಎಸ್ಸಿ ಪದವಿ ಮುಗಿಸಿ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ ಡಿಪ್ಲೊಮಾ ಮಾಡಿದ್ದಾರೆ ಪತ್ರಿಕೋದ್ಯಮ ಇವರು ಇಷ್ಟ ಪಟ್ಟು ಆಯ್ದುಕೊಂಡ ಕ್ಷೇತ್ರ. ಟಿವಿ 9 ಡಿಜಿಟಲ್ನಲ್ಲಿ ವೃತ್ತಿ ಜೀವನದ ಆರಂಭಿಸಿದ್ದಾರೆ. ರಾಜ್ಯ, ರಾಷ್ಟ್ರಕ್ಕೆ ಸಂಬಂಧಿಸಿದ ಕ್ಷಣಕ್ಷಣದ ಮಾಹಿತಿಗಳನ್ನು ಓದುಗರಿಗೆ ಒದಗಿಸುವ ಆಶಯ ಹೊಂದಿದ್ದಾರೆ.
ಕರ್ನಾಟಕ ಹವಾಮಾನ ವರದಿ: ರಾಜ್ಯಯದ ಹಲವು ಭಾಗಗಳಲ್ಲಿ ಒಣ ಹವೆ; ಬೆಂಗಳೂರಿನಲ್ಲಿ ಮಂಜು ಕವಿದ ವಾತಾವರಣ
Karnataka Weather: ಉಡುಪಿ, ದಕ್ಷಿಣ ಕನ್ನಡ ಸೇರಿದಂತೆ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮತ್ತು ಕರಾವಳಿ ಪ್ರದೇಶದಲ್ಲಿ ಇಂದು ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉತ್ತರ ಒಳನಾಡಿನಲ್ಲಿ ಒಣ ಹವೆ ವಾತಾವರಣ ಮುಂದುವರೆಯಲಿದ್ದು, ಬೆಂಗಳೂರಿನಲ್ಲಿಯೂ ಮಂಜು ಮುಸುಕಿದ ವಾತಾವರಣದ ಮುನ್ಸೂಚನೆ ಇದೆ.
- Bhavana Hegde
- Updated on: Dec 5, 2025
- 7:26 am
Daily Devotional: ಜಾತಕ ಇಲ್ಲದವರು ಏನು ಮಾಡಬೇಕು? ಏನೆಲ್ಲಾ ಪರಿಹಾರಗಳಿವೆ ಗೊತ್ತಾ?
ಜನ್ಮ ದಿನಾಂಕ ಅಥವಾ ಜಾತಕ ಇಲ್ಲದವರು ತಮ್ಮ ಭವಿಷ್ಯದ ಬಗ್ಗೆ ಆತಂಕ ಪಡಬೇಕಾಗಿಲ್ಲ. ಅಂತಹವರಿಗೆ ಧರ್ಮಶಾಸ್ತ್ರಗಳಲ್ಲಿ ಹಲವು ಪರಿಹಾರಗಳನ್ನು ಸೂಚಿಸಲಾಗಿದೆ. ಸೂರ್ಯ ನಮಸ್ಕಾರ, ಆದಿತ್ಯ ಹೃದಯಂ, ಋಣ ವಿಮೋಚಕ ಅಂಗಾರಕ ಸ್ತೋತ್ರ, ವಿಷ್ಣು ಸಹಸ್ರನಾಮ ಮತ್ತು ಹನುಮಾನ್ ಚಾಲೀಸಾದಂತಹ ಆಚರಣೆಗಳು ಶುಭ ಫಲಗಳನ್ನು ತರಬಲ್ಲವು.
- Bhavana Hegde
- Updated on: Dec 5, 2025
- 6:53 am
Horoscope Today 05 December: ಇಂದು ಈ ರಾಶಿಯವರು ಮಾರ್ಗ ಬದಲಿಸುವುದು ಉತ್ತಮ
ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು 2025ರ ಡಿಸೆಂಬರ್ 5ರ ಶುಕ್ರವಾರದ ದೈನಂದಿನ ರಾಶಿ ಭವಿಷ್ಯವನ್ನು ನೀಡಿದ್ದಾರೆ. ಈ ದಿನ ಗುರು ಗ್ರಹದ ಮಿಥುನ ರಾಶಿಗೆ ಸಂಚಾರ, ರೋಹಿಣಿ ನಕ್ಷತ್ರದ ಪ್ರಭಾವ ಮತ್ತು ಪ್ರಮುಖ ಯೋಗಗಳು ದ್ವಾದಶ ರಾಶಿಗಳ ಮೇಲೆ ಬೀರುವ ಪ್ರಭಾವವನ್ನು ವಿವರಿಸಿದ್ದಾರೆ. ಆರ್ಥಿಕ, ಆರೋಗ್ಯ, ಕೌಟುಂಬಿಕ ಮತ್ತು ವೃತ್ತಿ ಜೀವನದ ಕುರಿತು ವಿವರವಾದ ಫಲಗಳನ್ನು ತಿಳಿಸಿದ್ದಾರೆ.
- Bhavana Hegde
- Updated on: Dec 5, 2025
- 6:48 am
ನಿನ್ನೆ ನಾಟಿ ಕೋಳಿ ಸಾರು, ಇಂದು ಕರಾವಳಿ ಫಿಶ್! ಮಂಗಳೂರಿಗೆ ಬಂದ ಸಿದ್ದರಾಮಯ್ಯಗೆ ಬಗೆ ಬಗೆ ಖಾದ್ಯ
ಸಿಎಂ ಸಿದ್ದರಾಮಯ್ಯ ನಿವಾಸದ ಬ್ರೇಕ್ಫಾಸ್ಟ್ ಮೀಟಿಂಗ್ನಲ್ಲಿ ಸಿಎಂ ಡಿಸಿಎಂ ಇಬ್ಬರೂ ಸೇರಿ ಮೈಸೂರು ಶೈಲಿಯ ನಾಟಿಕೋಳಿ ಸಾರು ಸವಿದಿದ್ದರು. ಇದೀಗ ಮಂಗಳೂರಿಗೆ ಭೇಟಿ ನೀಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಓಷನ್ ಪರ್ಲ್ ಹೋಟೆಲ್ನಲ್ಲಿ ವಿಶೇಷ ಕರಾವಳಿ ಶೈಲಿಯ ಊಟವನ್ನು ಮಾಡಿದ್ದಾರೆ. ಮಂಗಳೂರಿನ ಪ್ರಸಿದ್ಧ ಅಂಜಲ್ ಫಿಶ್ ಫ್ರೈ, ಪಾಂಪ್ಲೆಟ್ ರವಾ ಫ್ರೈ, ಕಾನೆ ಫಿಶ್ ಕರಿ, ನೀರು ದೋಸೆ, ಆಪ್ಪಂ, ಗೀ ರೋಸ್ಟ್, ಬಾಯ್ಲ್ಡ್ ರೈಸ್ ಸೇರಿ ವಿವಿಧ ಖಾದ್ಯಗಳನ್ನು ಸಿಎಂ ಸೇವಿಸಿ ಆನಂದಿಸಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನಾಟಿ ಕೋಳಿ ಸಾರನ್ನು ಇಷ್ಟಪಡುತ್ತಾರೆ ಎಂದು ತಿಳಿದು ಅದನ್ನೂ ಸಹ ವಿಶೇಷವಾಗಿ ತಯಾರಿಸಲಾಗಿತ್ತು.
- Bhavana Hegde
- Updated on: Dec 3, 2025
- 3:33 pm
ನುಗ್ಗೆಕಾಯಿ, ನುಗ್ಗೆಸೊಪ್ಪು ತಿನ್ನೋದ್ರಿಂದ ಏನೆಲ್ಲಾ ಉಪಯೋಗ? ಆಹಾರ ತಜ್ಞೆ ಹೇಳಿದ್ದೇನು?
ಚಳಿಗಾಲದ ಆರಂಭದೊಂದಿಗೆ ತರಕಾರಿಗಳ ಬೆಲೆ ಏರಿಕೆ ಜನಸಾಮಾನ್ಯರಿಗೆ ಮತ್ತಷ್ಟು ಕಿರಿಕಿರಿ ಉಂಟುಮಾಡಿದೆ. ನುಗ್ಗೆಕಾಯಿ ಕೆಜಿಗೆ 300 ರಿಂದ 500 ರೂಪಾಯಿ ತಲುಪಿದ್ದು, ಜನರು ಅದರ ಸೇವನೆಯನ್ನೇ ನಿಲ್ಲಿಸುವ ಪರಿಸ್ಥಿತಿಗೆ ತಲುಪಿದ್ದಾರೆ. ಈ ಬಗ್ಗೆ ಮಾತನಾಡಿರುವ ಆಹಾರ ತಜ್ಞೆ ಪಾವನ, ಬೆಲೆ ಏರಿಕೆ ಕಾರಣಕ್ಕೆ ತರಕಾರಿಗಳನ್ನು ದೂರವಿಡುವುದು ನಮ್ಮ ದೇಹದಲ್ಲಿ ಪೋಷಕಾಂಶಗಳ ಕೊರತೆಗೆ ಕಾರಣವಾಗಬಹುದು ಎಂದಿದ್ದಾರೆ.
- Bhavana Hegde
- Updated on: Dec 3, 2025
- 2:44 pm
ಹೊಸ ವರ್ಷ ಹಿನ್ನೆಲೆ ಬೆಂಗಳೂರಲ್ಲಿ ಭರ್ಜರಿ ಡ್ರಗ್ಸ್ ಬೇಟೆ; 2 ಪ್ರತ್ಯೇಕ ಪ್ರಕರಣಗಳಲ್ಲಿ 28 ಕೋಟಿ ರೂ.ಮೌಲ್ಯದ ಗಾಂಜಾ ಸೀಜ್
ಹೊಸ ವರ್ಷದ ಮುನ್ನ ಬೆಂಗಳೂರಲ್ಲಿ ಸಿಸಿಬಿ ಮಾದಕ ವಸ್ತು ನಿಗ್ರಹ ದಳ ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಒಟ್ಟು 28 ಕೋಟಿ ರೂ. ಮೌಲ್ಯದ MDMA ಮತ್ತು ಹೈಡ್ರೋಗಾಂಜಾ ವಶಪಡಿಸಿಕೊಂಡಿದೆ. ಈ ವೇಳೆ ಇಬ್ಬರು ವಿದೇಶಿ ಪೆಡ್ಲರ್ಗಳನ್ನು ಬಂಧಿಸಿದ್ದು, ಚಾಮರಾಜಪೇಟೆಯಲ್ಲಿಯೂ ಡ್ರಗ್ಸ್ ಸೀಜ್ ಆಗಿದೆ. ಹೊಸ ವರ್ಷಕ್ಕೆ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಹೊಂಚಿಗೆ ಬ್ರೇಕ್ ಬಿದ್ದಿದೆ.
- Bhavana Hegde
- Updated on: Dec 3, 2025
- 12:24 pm
ಕರ್ನಾಟಕ ಹವಾಮಾನ ವರದಿ: ಬೆಂಗಳೂರು ಸೇರಿ ರಾಜ್ಯದ ಹಲವು ಭಾಗಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ
Karnataka Weather: ಬೆಂಗಳೂರು ತುಮಕೂರು ಸೇರಿದಂತೆ ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮತ್ತು ಕರಾವಳಿ ಪ್ರದೇಶದಲ್ಲಿ ಇಂದು ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉತ್ತರ ಒಳನಾಡಿನಲ್ಲಿ ಒಣ ಹವೆ ವಾತಾವರಣ ಮುಂದುವರೆಯಲಿದ್ದು, ಬೆಂಗಳೂರಿನಲ್ಲಿಯೂ ಲಘು ಮಳೆಯಾಗುವ ಮುನ್ಸೂಚನೆ ಇದೆ.
- Bhavana Hegde
- Updated on: Dec 3, 2025
- 7:34 am
Daily Devotional: ಪೂಜಾಫಲ ತಕ್ಷಣಕ್ಕೆ ಸಿಗುವುದಿಲ್ಲಾ ಯಾಕೆ
ನಿತ್ಯ ಪೂಜೆ, ಜಪ, ತಪ ಮತ್ತು ದಾನಗಳ ಫಲಗಳು ತಕ್ಷಣಕ್ಕೆ ಸಿಗುವುದಿಲ್ಲ ಎಂಬ ಪ್ರಶ್ನೆ ಅನೇಕರನ್ನು ಕಾಡುತ್ತದೆ. ಹಿಂದಿನ ಜನ್ಮದ ಕರ್ಮಗಳ ತೀವ್ರತೆಯನ್ನು ಕಡಿಮೆ ಮಾಡಲು ಪ್ರಸ್ತುತ ಸತ್ಕರ್ಮಗಳು ಸಹಕಾರಿ. ಈ ಆಚರಣೆಗಳು ವ್ಯರ್ಥವಾಗುವುದಿಲ್ಲ; ಅವು ಭವಿಷ್ಯದಲ್ಲಿ ಅಥವಾ ಈ ಜನ್ಮದ ಮುಂದಿನ ಹಂತದಲ್ಲಿ ಶುಭ ಫಲಗಳನ್ನು ತಂದುಕೊಡುತ್ತವೆ, ಮನಸ್ಸಿಗೆ ಶಾಂತಿ ನೀಡುತ್ತವೆ. ತಾಳ್ಮೆ ಮತ್ತು ಸಹನೆಯಿಂದ ಮುಂದುವರೆಯುವುದು ಮುಖ್ಯ.
- Bhavana Hegde
- Updated on: Dec 3, 2025
- 7:10 am
Horoscope Today 03 December: ಇಂದು ಈ ರಾಶಿಯವರ ದೂರದ ಪ್ರಯಾಣ ಫಲದಾಯಕ
ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು 03-12-2025ರ ದಿನ ಭವಿಷ್ಯವನ್ನು ನೀಡಿದ್ದಾರೆ. ಬುಧವಾರದ ವಿಶೇಷತೆ, ಗ್ರಹಗಳ ಸಂಚಾರ ಹಾಗೂ ಮೇಷ, ವೃಷಭ, ಮಿಥುನ ಮತ್ತು ಕರ್ಕಾಟಕ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ದಿನದ ಶುಭ-ಅಶುಭ, ಅದೃಷ್ಟ ಸಂಖ್ಯೆಗಳು, ಬಣ್ಣಗಳು ಮತ್ತು ಮಂತ್ರಗಳ ಕುರಿತು ಮಾಹಿತಿ ಲಭ್ಯವಿದೆ.
- Bhavana Hegde
- Updated on: Dec 3, 2025
- 7:06 am
Anganwadi Workers Protest: ಅಂಗನವಾಡಿ ಮತ್ತು ಬಿಸಿಯೂಟ ಕಾರ್ಯಕರ್ತೆಯರ ಅನಿರ್ದಿಷ್ಟಾವಧಿ ಮುಷ್ಕರ
ಅಂಗನವಾಡಿ ಕಾರ್ಯಕರ್ತೆಯರ ಮುಷ್ಕರ: ಕರ್ನಾಟಕದಲ್ಲಿ ಲಕ್ಷಾಂತರ ಅಂಗನವಾಡಿ, ಆಶಾ ಮತ್ತು ಬಿಸಿಯೂಟ ಕಾರ್ಯಕರ್ತೆಯರು ಪಿಎಫ್, ಇಎಸ್ಐ ಮತ್ತು ವೇತನ ಹೆಚ್ಚಳಕ್ಕಾಗಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದಾರೆ. ಕಾರ್ಮಿಕ ಸಂಹಿತೆಗಳಲ್ಲಿ ಸೇರ್ಪಡೆ, ಉದ್ಯೋಗ ಭದ್ರತೆ ಮತ್ತು ಸಾಮಾಜಿಕ ಭದ್ರತಾ ಸೌಲಭ್ಯಗಳನ್ನು ನೀಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಿದ್ದಾರೆ. ಅದರೊಂದಿಗೆ ತಮಗೆ ನೀಡುತ್ತಿರುವ ಕಡಿಮೆ ವೇತನಕ್ಕೂ ಪರಿಹಾರ ಕೋರಿದ್ದಾರೆ.
- Bhavana Hegde
- Updated on: Dec 2, 2025
- 12:51 pm
ವಿದ್ಯಾರ್ಥಿಗಳಿಗೆ 15 ದಿನಗಳ ಒಳಗೆ ಟಿಸಿ ನೀಡುವಂತೆ ಶಾಲೆಗಳಿಗೆ ಶಿಕ್ಷಣ ಇಲಾಖೆ ಸೂಚನೆ
ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ಆಯೋಗದ ನಿರ್ದೇಶನದಂತೆ, ರಾಜ್ಯದ ಎಲ್ಲಾ ಶಾಲೆಗಳು ಅರ್ಜಿ ಸ್ವೀಕರಿಸಿದ 15 ದಿನಗಳಲ್ಲಿ ವರ್ಗಾವಣೆ ಪ್ರಮಾಣಪತ್ರ (TC) ನೀಡಬೇಕು. ವಿಫಲವಾದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಶಿಕ್ಷಣ ಇಲಾಖೆ ಸೂಚಿಸಿದೆ. ಶುಲ್ಕ ಬಾಕಿ ಇದ್ದರೂ TC ವಿಳಂಬ ಮಾಡುವಂತಿಲ್ಲವೆಂದಿರುವ ಇಲಾಖೆ, ಪೋಷಕರು TC ವಿಳಂಬವಾದರೆ ಕ್ಷೇತ್ರ ಶಿಕ್ಷಣಾಧಿಕಾರಿಗೆ ದೂರು ನೀಡಬಹುದು ಎಂದು ಹೇಳಿದೆ.
- Bhavana Hegde
- Updated on: Dec 2, 2025
- 11:50 am
ಕರ್ನಾಟಕ ಹವಾಮಾನ ವರದಿ: ರಾಜ್ಯದ ಕೆಲವೆಡೆ ಸಾಧಾರಣ ಮಳೆ; ಬೆಂಗಳೂರಿನಲ್ಲಿ ಮಂಜು ಕವಿದ ವಾತಾವರಣ
Karnataka Weather: ದಕ್ಷಿಣ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಇಂದು ಸಾಧಾರಣ ಮಳೆಯಾಗಲಿದ್ದು,ಉಳಿದ ಜಿಲ್ಲೆಗಳಲ್ಲಿ ಒಣ ಹವೆಯ ವಾತಾವರಣವಿರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉತ್ತರ ಒಳನಾಡು ಮತ್ತು ಕರಾವಳಿಯ ಜಿಲ್ಲೆಗಳಲ್ಲಿ ಒಣ ಹವೆ ವಾತಾವರಣ ಮುಂದುವರೆಯಲಿದ್ದು, ಬೆಂಗಳೂರಿನಲ್ಲಿಯೂ ಮಂಜು ಕವಿದ ವಾತಾವರಣದ ಮುನ್ಸೂಚನೆ ಇದೆ.
- Bhavana Hegde
- Updated on: Dec 2, 2025
- 7:43 am