AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಬೆಂಗಳೂರಿನಲ್ಲಿ ಟೆಕ್ ಉದ್ಯೋಗಗಳಿಗೆ ಮುಗಿಬೀಳುತ್ತಿದ್ದಾರೆ ಜನ! ರಿಕ್ರೂಟರ್ ಎಕ್ಸ್ ಪೋಸ್ಟ್ ವೈರಲ್

ಬೆಂಗಳೂರು ಐಟಿ ಉದ್ಯೋಗ ಮಾರುಕಟ್ಟೆಯಲ್ಲಿ ತೀವ್ರ ಸ್ಪರ್ಧೆ ಏರ್ಪಟ್ಟಿದೆ. MERN ಮತ್ತು React ಡೆವಲಪರ್ ಹುದ್ದೆಗಳಿಗೆ 15 ದಿನಗಳಲ್ಲಿ 34,742 ಅರ್ಜಿಗಳು ಬಂದಿರುವ ಕುರಿತು ರಿಕ್ರೂಟರ್ ನಾರಾಯಣಿ ಗುರುನಾಥನ್ ಹಂಚಿಕೊಂಡಿದ್ದಾರೆ. ಅವಕಾಶಗಳು ಹೆಚ್ಚಿದ್ದರೂ, ಅಭ್ಯರ್ಥಿಗಳ ಗುಣಮಟ್ಟ ಮತ್ತು ಸೂಕ್ತ ಕೌಶಲ್ಯಗಳ ಕೊರತೆ ಒಂದು ಸವಾಲಾಗಿದೆ. ಇದು ನಗರದ ಉದ್ಯೋಗ ಸ್ಪರ್ಧೆಯ ನೈಜ ಚಿತ್ರಣವನ್ನು ಅನಾವರಣಗೊಳಿಸುತ್ತದೆ ಎಂದು ನೆಟ್ಟಿಗರು ಅಭಿಪ್ರಾಯಪಟ್ಟಿದ್ದಾರೆ.

ಬೆಂಗಳೂರಿನಲ್ಲಿ ಟೆಕ್ ಉದ್ಯೋಗಗಳಿಗೆ ಮುಗಿಬೀಳುತ್ತಿದ್ದಾರೆ ಜನ! ರಿಕ್ರೂಟರ್ ಎಕ್ಸ್ ಪೋಸ್ಟ್ ವೈರಲ್
ಬೆಂಗಳೂರಿನಲ್ಲಿ ಟೆಕ್ ಉದ್ಯೋಗಗಳಿಗೆ ಮುಗಿಬೀಳುತ್ತಿದ್ದಾರೆ ಜನ! ರಿಕ್ರೂಟರ್ ಎಕ್ಸ್ ಪೋಸ್ಟ್ ವೈರಲ್
ಭಾವನಾ ಹೆಗಡೆ
|

Updated on: Mar 16, 2026 | 1:12 PM

Share

ಬೆಂಗಳೂರು, ಮಾರ್ಚ್​ 16: ಐಟಿ ಸಿಟಿಗೆ ಉದ್ಯೋಗ ಹುಡುಕಿ ಬರುವವರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಆದರೆ ಕೆಲಸ ಅರಸಿ ಬರುವ ಆಕಾಂಕ್ಷಿಗಳ ಮಧ್ಯೆ ಸ್ಪರ್ಧೆ ತೀವ್ರವಾಗಿದ್ದು, ಈ ಬಗ್ಗೆ ಬೆಂಗಳೂರಿನ (Bengaluru) ರಿಕ್ರೂಟರ್ ಒಬ್ಬರು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. 15 ದಿನಗಳಲ್ಲಿ ಸಾವಿರಾರು ಮಂದಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ್ದರ ಕುರಿತು ಪೋಸ್ಟ್ ಮಾಡಿರುವ ಅವರು, ಒಂದು ಕೆಲಸ ದಕ್ಕಿಸಿಕೊಳ್ಳಲು ಎದುರಾಗುವ ಸ್ಪರ್ಧೆ ಇದುವೇ ಎಂದು ಬರೆದುಕೊಂಡಿದ್ದಾರೆ.

15 ದಿನಗಳಲ್ಲಿ 30 ಸಾವಿರಕ್ಕೂ ಹೆಚ್ಚು ಅರ್ಜಿಗಳು

ನಗರದಲ್ಲಿ ಟೆಕ್ ಉದ್ಯೋಗಗಳಿಗಾಗಿ ಸ್ಪರ್ಧೆ ದಿನೇ ದಿನೇ ಹೆಚ್ಚುತ್ತಿದ್ದು, ವಿಶೇಷವಾಗಿ MERN ಮತ್ತು ರಿಯಾಕ್ಟ್ ಡೆವಲಪರ್ ಹುದ್ದೆಗಳಿಗೆ ಭಾರೀ ಪ್ರಮಾಣದಲ್ಲಿ ಅಭ್ಯರ್ಥಿಗಳು ಅರ್ಜಿ ಹಾಕುತ್ತಿರುವುದು ಗಮನಕ್ಕೆ ಬಂದಿದೆ. ಕಳೆದ 15 ದಿನಗಳಲ್ಲಿ ಮಾತ್ರ ಸುಮಾರು 34,742 ಮಂದಿ ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿರುವ ಕುರಿತು ಮಾಹಿತಿ ಹಂಚಿಕೊಂಡಿರುವ ರಿಕ್ರೂಟರ್ ನಾರಾಯಣಿ ಗುರುನಾಥನ್ ಎಕ್ಸ್ ಪೋಸ್ಟ್ ಮಾಡಿ, ಕೇವಲ 15 ದಿನಗಳಲ್ಲಿ MERN ಮತ್ತು React ಉದ್ಯೋಗಗಳಿಗೆ 34 ಸಾವಿರಕ್ಕೂ ಹೆಚ್ಚು ಮಂದಿ ಅರ್ಜಿ ಹಾಕಿದ್ದಾರೆ. ಉದ್ಯೋಗಕ್ಕೆ ಅರ್ಜಿ ಹಾಕುವಾಗ ಎದುರಾಗುವ ಸ್ಪರ್ಧೆ ಇದುವೆ ಎಂದು ಹೇಳಿದ್ದಾರೆ.

ವೈರಲ್ ಪೋಸ್ಟ್ ಇಲ್ಲಿದೆ

ನೆಟ್ಟಿಗರ ರಿಯಾಕ್ಷನ್ ಹೇಗಿತ್ತು?

ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಚರ್ಚೆಗೆ ಕಾರಣವಾಗಿದ್ದು, ಹಲವರು ಬೆಂಗಳೂರು ಟೆಕ್ ಉದ್ಯೋಗ ಮಾರುಕಟ್ಟೆಯಲ್ಲಿ ಸ್ಪರ್ಧೆ ಎಷ್ಟು ಹೆಚ್ಚಾಗಿದೆ ಎಂಬುದನ್ನು ತಮ್ಮ ಅನುಭವಗಳ ಮೂಲಕ ಹಂಚಿಕೊಂಡಿದ್ದಾರೆ. ಕೆಲವರು ಉದ್ಯೋಗ ಸುಳ್ಳು ಅರ್ಜಿ ಹಾಕುವವರ ಸಂಖ್ಯೆಯೂ ಹೆಚ್ಚು ಎಂದು ಅಭಿಪ್ರಾಯಪಟ್ಟಿದ್ದಾರೆ. ಒಬ್ಬ ಬಳಕೆದಾರ ನಮ್ಮ ಕಂಪನಿಯಲ್ಲಿ 500ಕ್ಕೂ ಹೆಚ್ಚು ರೆಸ್ಯೂಮ್ ಬಂದರೂ, ಕೆಲಸಕ್ಕೆ ಬೇಕಾದ ಅರ್ಹ ತಿಳುವಳಿಕೆ ಹಲವರಲ್ಲಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ. ಒಟ್ಟಾರೆ, ಟೆಕ್ ಕ್ಷೇತ್ರದಲ್ಲಿ ಅವಕಾಶಗಳು ಹೆಚ್ಚಿದ್ದರೂ, ಅದೇ ಮಟ್ಟದಲ್ಲಿ ಸ್ಪರ್ಧೆಯೂ ಹೆಚ್ಚುತ್ತಿರುವುದು ಈ ಅಂಕಿ-ಅಂಶಗಳಿಂದ ಸ್ಪಷ್ಟವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us