ಹಬ್ಬಕ್ಕೆ ಊರಿಗೆ ಹೊರಟ ಜನ: ಬೆಂಗಳೂರಿನಲ್ಲಿ ರಾತ್ರಿಯೆಲ್ಲ ಟ್ರಾಫಿಕ್ ಜಾಮ್, ಮೆಜೆಸ್ಟಿಕ್ನಲ್ಲಿ ಜನವೋ ಜನ
ಯುಗಾದಿ ಮತ್ತು ರಂಜಾನ್ ಹಬ್ಬಗಳ ನಿಮಿತ್ತ ಊರಿನತ್ತ ಪ್ರಯಾಣ ಬೆಳೆಸಿರುವ ಜನರಿಂದ ಬುಧವಾರ ರಾತ್ರಿ ಮೆಜೆಸ್ಟಿಕ್ ಬಸ್ ನಿಲ್ದಾಣ ಕಿಕ್ಕಿರಿದು ತುಂಬಿತು. ಬಸ್ಸುಗಳಲ್ಲಿ ಸೀಟು ಸಿಗದೆ, ಖಾಸಗಿ ಬಸ್ಸುಗಳಲ್ಲಿ ದುಪ್ಪಟ್ಟು ಹಣ ತೆತ್ತು ಪ್ರಯಾಣಿಕರು ಪರದಾಡಿದರು. ರಾತ್ರಿಯಿಡೀ ನಿಲ್ದಾಣದಲ್ಲೇ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದ್ದು, ಬೆಂಗಳೂರು ನಗರದ ವಿವಿಧೆಡೆ ಟ್ರಾಫಿಕ್ ಜಾಮ್ ಉಂಟಾಗಿ ಜನ ಒದ್ದಾಡುವಂತಾಯಿತು.
ಬೆಂಗಳೂರು, ಮಾರ್ಚ್ 19: ಯುಗಾದಿ, ರಂಜಾನ್ ಹಬ್ಬ ಮತ್ತು ಸುದೀರ್ಘ ವಾರಾಂತ್ಯ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಊರಿನತ್ತ ತೆರಳುವ ಪ್ರಯಾಣಿಕರಿಂದ ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಬುಧವಾರ ರಾತ್ರಿ ಭಾರಿ ಜನಸಂದಣಿ ಕಂಡುಬಂದಿದೆ. ಬಸ್ಸುಗಳು ಕೂಡ ಪ್ರಯಾಣಿಕರಿಂದ ತುಂಬಿ ತುಳುಕುತ್ತಿರುವುದು ಕಂಡುಬಂದಿದೆ. ಸೀಟು ಸಿಗದೆ ಪರದಾಡುತ್ತಿರುವ ಜನರು, ಲಗೇಜ್ ಸಮೇತವಾಗಿ ರಾತ್ರಿಯಿಡೀ ನಿಲ್ದಾಣದಲ್ಲೇ ಜಾಗರಣೆ ಮಾಡುವಂತಾಯಿತು.
ಜನರು ಊರಿಗೆ ಹೋಗಲು ಮೆಜೆಸ್ಟಿಕ್ನತ್ತ ಧಾವಿಸಿದ್ದರಿಂದ ಕಾರ್ಪೊರೇಷನ್ ರಸ್ತೆ, ಮೈಸೂರು ಬ್ಯಾಂಕ್ ರಸ್ತೆ ಮತ್ತು ಕೆ.ಆರ್. ಮಾರ್ಕೆಟ್ ರಸ್ತೆ ಸೇರಿದಂತೆ ಹಲವೆಡೆ ಟ್ರಾಫಿಕ್ ಜಾಮ್ ಉಂಟಾಯಿತು. ಹೆಚ್ಚುವರಿ ವಾಹನಗಳು ರಸ್ತೆಗಿಳಿದಿದ್ದರ ನಡುವೆ ಸಂಜೆ ಸುರಿದ ಮಳೆಯೂ ಟ್ರಾಫಿಕ್ ಸಮಸ್ಯೆ ಹೆಚ್ಚಿಸಿತು.
Follow Us
Latest Videos
ಪೇಜಾವರಶ್ರೀ ಹೇಳಿಕೆ ಉದಾಹರಣೆ ನೀಡಿ ಬಿಜೆಪಿ ನಾಯಕರಿಗೆ ಹರಿಪ್ರಸಾದ್ ಟಾಂಗ್
RSS ವಿರುದ್ಧ ಅವಹೇಳನಕಾರಿ ಪೋಸ್ಟ್: ಪ್ರಿಯಾಂಕ್ ಖರ್ಗೆ, ನಲಪಾಡ್ಗೆ ಸಮನ್ಸ್
ಸಿಎಂ ಸ್ಥಾನದಿಂದ ಕೆಳಗಿಳಿದ ಬಳಿಕ ಮೊದಲ ಬಾರಿಗೆ ತವರಿಗೆ ಸಿದ್ದರಾಮಯ್ಯ ಭೇಟಿ
ಪೊಲೀಸರ ಮೇಲೆ ಹಲ್ಲೆ ಮಾಡಿ ಆರೋಪಿ ಪರಾರಿ: ಸಿಸಿಟಿವಿಯಲ್ಲಿ ದೃಶ್ಯ ಸೆರೆ

