ಆಗಲ್ಲ ಅಂದ್ರೆ ಹೋಗ್ರಾ ಇರು; ಅಮುಕು ಡುಮುಕುಗೆ ಗೆಟೌಟ್ ಎಂದ ವಿನಯ್ ಗೌಡ
ಕಲರ್ಸ್ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ‘ಬಿಗ್ ಬಾಸ್ ಅಗ್ನಿಪರೀಕ್ಷೆ’ ಕಾರ್ಯಕ್ರಮದಲ್ಲಿ ದಿನದಿಂದ ದಿನಕ್ಕೆ ಕಾಂಪೇಟಿಷನ್ ತೀವ್ರಗೊಳ್ಳುತ್ತಿದ್ದು, ತೀರ್ಪುಗಾರರು ಮತ್ತು ಸ್ಪರ್ಧಿಗಳ ನಡುವಿನ ವಾಗ್ವಾದಗಳು ಕಾವು ಪಡೆದುಕೊಳ್ಳುತ್ತಿವೆ. ಇದಕ್ಕೆ ಸಾಕ್ಷಿ ಎಂಬಂತೆ ಕಲರ್ಸ್ ಕನ್ನಡದ ಹೊಸ ಪ್ರೋಮೋ ಗಮನ ಸೆಳೆದಿದೆ. ಆ ವಿಡಿಯೋ ಇಲ್ಲಿದೆ.
ಬಿಗ್ ಬಾಸ್ ಅಗ್ನಿಪರೀಕ್ಷೆ ಗಮನ ಸೆಳೆದಿದೆ. ಸೋಶಿಯಲ್ ಮೀಡಿಯಾ ಖ್ಯಾತಿಯ ‘ಅಮುಕು ಡುಮುಕು’ ಕಾರ್ಯಕ್ರಮದ ವೇದಿಕೆಯಲ್ಲಿ ಪ್ರದರ್ಶನ ನೀಡಲು ಆಗಮಿಸಿದ್ದರು. ತೀರ್ಪುಗಾರರ ಪೀಠದಲ್ಲಿದ್ದ ಸಂಗೀತ ಶೃಂಗೇರಿ ಅವರು, ‘ಸಂಗೀತಾ ಅವರು ನಿಮ್ಮನ್ನು ಕಂಡರೆ ಇಷ್ಟ ಎಂದು ಹೇಳಿಸಬೇಕು’ ಎಂದು ಒಂದು ಟಾಸ್ಕ್ ನೀಡುತ್ತಾರೆ.
ಆದರೆ ಇದಕ್ಕೆ ಉತ್ತರಿಸಿದ ಅಮುಕು ಡುಮುಕು, ‘ನಾನು ಯಾರನ್ನೂ ಇಂಪ್ರೆಸ್ ಮಾಡಲು ಬಂದಿಲ್ಲ. ನಾನು ಹೇಗಿದ್ದೇನೋ ಹಾಗೆಯೇ ಇರುತ್ತೇನೆ, ಹೀಗೆಯೇ ಹೋಗುವುದು’ ಎಂದು ತಮ್ಮದೇ ಶೈಲಿಯಲ್ಲಿ ನೇರವಾಗಿ ಹೇಳುತ್ತಾರೆ.
ಈ ಮಾತಿನಿಂದ ಅಸಮಾಧಾನಗೊಂಡ ಮತ್ತೊಬ್ಬ ತೀರ್ಪುಗಾರ ವಿನಯ್ ಗೌಡ, ‘ಆಗಲ್ಲ ಅಂದರೆ ಹೋಗ್ತಾ ಇರು… ಗೆಟ್‌ಔಟ್! ಹೋಗ್ತಾ ಇರು’ ಎಂದು ವೇದಿಕೆಯಲ್ಲೇ ಖಡಕ್ ಆಗಿ ಗದರಿ ಹೊರಗೆ ಕಳುಹಿಸುತ್ತಾರೆ. ವಿನಯ್ ಅವರ ತೀಕ್ಷ್ಣ ಮಾತು ಕೇಳಿ, ಅಮುಕು ಡುಮುಕು ಅವರು ತಮ್ಮ ಸೂಟ್ ಸರಿಮಾಡಿಕೊಳ್ಳುತ್ತಾ ನಿಶ್ಯಬ್ದವಾಗಿ ವೇದಿಕೆಯಿಂದ ನಿರ್ಗಮಿಸುತ್ತಾರೆ.
ಬಿಗ್ ಬಾಸ್ ಮನೆ ಪ್ರವೇಶಿಸಲು 60 ಜನ ಸ್ಪರ್ಧಿಗಳ ನಡುವೆ ಕಠಿಣ ಸವಾಲುಗಳು ನಡೆಯುತ್ತಿದ್ದು, ತೀರ್ಪುಗಾರರ ಕಟ್ಟುನಿಟ್ಟಿನ ನಿರ್ಧಾರಗಳು ಈ ‘ಅಗ್ನಿಪರೀಕ್ಷೆ’ಯ ತಾಪವನ್ನು ಹೆಚ್ಚಿಸಿವೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
Published on: Aug 09, 2026 09:09 PM
ಪ್ರತಿಯೊಬ್ಬ ವಿದ್ಯಾರ್ಥಿಯ ಆಕಾಂಕ್ಷೆ ಆಲಿಸಲು ಅಧಿಕಾರಿಗಳಿಗೆ ಜೋಶಿ ಸೂಚನೆ
ಶಾಸಕರ ಅಸಮಾಧಾನದ ನಡುವೆ ದೆಹಲಿಗೆ ಹಾರಿದ ಸಿಎಂ ಡಿ.ಕೆ ಶಿವಕುಮಾರ್
ಚಲಿಸುತ್ತಿದ್ದಾಗಲೇ ಟೈರ್ ಬ್ಲಾಸ್ಟ್: ಗದ್ದೆಗೆ ನುಗ್ಗಿದ KSRTC ಬಸ್
ಸಚಿವರ ಪಟ್ಟಿ ಬದಲಾಗಿದ್ದು ಕಾಂಗ್ರೆಸ್ ಇತಿಹಾಸದಲ್ಲಿ ಇದೇ ಮೊದಲು: ರಾಜಣ್ಣ

