ವಂದೇ ಮಾತರಂ ಎರಡೇ ಚರಣ ಹಾಡಿದ್ದಕ್ಕೆ ಸಿಎಂ ಇದ್ದ ವೇದಿಕೆ ಮೇಲೆಯೇ ಬಿಜೆಪಿ ಅಸಮಾಧಾನ: ಕೆಲಕಾಲ ಗೊಂದಲ
ತೀರ್ಥಹಳ್ಳಿಯಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ವಂದೇ ಮಾತರಂ ಹಾಡನ್ನು ಎರಡು ಚರಣ ಹಾಡಲಾಗಿದೆ. ಇದಕ್ಕೆ ಬಿಜೆಪಿ ಶಾಸಕ ಚನ್ನಬಸಪ್ಪ ಆಕ್ಷೇಪ ವ್ಯಕ್ತಪಡಿಸಿದ್ದು, ಪೂರ್ಣ ಹಾಡು ಅವಕಾಶ ಮಾಡಿಕೊಡಿ ಎಂದು ವೇದಿಕೆ ಮೇಲೆಯೇ ಮೈಕ್ನಲ್ಲೇ ಸಿಎಂ ಡಿಕೆ ಶಿವಕುಮಾರ್ ಬಳಿ ಮನವಿ ಮಾಡಿಕೊಂಡಿರುವ ಪ್ರಸಂಗ ನಡೆಯಿತು. ಈ ವೇಳೆ ಕಾರ್ಯಕ್ರಮದಲ್ಲಿ ಕೆಲಕಾಲ ಗೊಂದಲ ನಿರ್ಮಾಣವಾಗಿತ್ತು. ಬಳಿಕ ಮುಖಂಡರು ಬಂದು ಚನ್ನಬಸಪ್ಪ ಅವರನ್ನು ಮನವೊಲಿಸಿ ಕರೆದುಕೊಂಡು ಹೋದರು. ಈ ವೇಳೆ ವೇದಿಕೆ ಮುಂಭಾಗದಲ್ಲಿ ಕುಳಿತ್ತಿದ್ದ ಜನರು, ಯಾಕೆ ರಾಜಕೀಯ ಮಾಡ್ತೀರಾ ಎಂದು ಡಿಕೆ ಡಿಕೆ ಎಂದು ಕೂಗಿದರು.
ಶಿವಮೊಗ್ಗ, (ಸೆಪ್ಟೆಂಬರ್ 19): ತೀರ್ಥಹಳ್ಳಿಯಲ್ಲಿ ನಡೆದ ಸರ್ಕಾರಿ ಕಾರ್ಯಕ್ರಮದಲ್ಲಿ ವಂದೇ ಮಾತರಂ ಹಾಡನ್ನು ಎರಡು ಚರಣ ಹಾಡಲಾಗಿದೆ. ಇದಕ್ಕೆ ಬಿಜೆಪಿ ಶಾಸಕ ಚನ್ನಬಸಪ್ಪ ಆಕ್ಷೇಪ ವ್ಯಕ್ತಪಡಿಸಿದ್ದು, ಪೂರ್ಣ ಹಾಡು ಅವಕಾಶ ಮಾಡಿಕೊಡಿ ಎಂದು ವೇದಿಕೆ ಮೇಲೆಯೇ ಮೈಕ್ನಲ್ಲೇ ಸಿಎಂ ಡಿಕೆ ಶಿವಕುಮಾರ್ ಬಳಿ ಮನವಿ ಮಾಡಿಕೊಂಡಿರುವ ಪ್ರಸಂಗ ನಡೆಯಿತು. ಈ ವೇಳೆ ಕಾರ್ಯಕ್ರಮದಲ್ಲಿ ಕೆಲಕಾಲ ಗೊಂದಲ ನಿರ್ಮಾಣವಾಗಿತ್ತು. ಬಳಿಕ ಮುಖಂಡರು ಬಂದು ಚನ್ನಬಸಪ್ಪ ಅವರನ್ನು ಮನವೊಲಿಸಿ ಕರೆದುಕೊಂಡು ಹೋದರು. ಈ ವೇಳೆ ವೇದಿಕೆ ಮುಂಭಾಗದಲ್ಲಿ ಕುಳಿತ್ತಿದ್ದ ಜನರು, ಯಾಕೆ ರಾಜಕೀಯ ಮಾಡ್ತೀರಾ ಎಂದು ಡಿಕೆ ಡಿಕೆ ಎಂದು ಕೂಗಿದರು.
ಬಳಿಕ ಸಿಎಂ ಡಿಕೆ ಶಿವಕುಮಾರ್ ಮಾತನಾಡಿ, ನಾನು ಭಾವನೆ ಮೇಲೆ ರಾಜಕಾರಣ ಮಾಡುವುದಿಲ್ಲ. ನಿಮ್ಮ ಪಕ್ಷದ ಸಿದ್ಧಾಂತ ನಿಮ್ಮದು, ನಮ್ಮ ಪಕ್ಷದ ಸಿದ್ಧಾಂತ ನಮ್ಮದು. ಇಂತಹ ವೇದಿಕೆಯಲ್ಲಿ ರಾಜಕಾರಣ ಬೇಡ ಎಂದು ಶಾಸಕ ಚನ್ನಬಸಪ್ಪಗೆ ತಿರಗೇಟು ನೀಡಿದರು.
