Ramadan

Ramadan

ರಂಜಾನ್: ರಂಜಾನ್ ಮುಸ್ಲಿಮರ ಪವಿತ್ರ ಹಬ್ಬ. ಪ್ರಪಂಚದಾದ್ಯಂತದ ಮುಸ್ಲಿಮರು ಇಡೀ ರಂಜಾನ್ ತಿಂಗಳಲ್ಲಿ ಉಪವಾಸ ಮಾಡುತ್ತಾರೆ. ಬೆಳಗ್ಗೆ ಸೂರ್ಯೋದಯವಾಗಲಿಂದ ಸಂಜೆ ಸೂರ್ಯಾಸ್ತವಾಗುವವರೆಗೆ ಒಂದು ಹನಿ ನೀರು ಕುಡಿಯದೆ ಉಪವಾಸ ಮಾಡುತ್ತಾರೆ. ಇಸ್ಲಾಂನಲ್ಲಿ ಉಪವಾಸವು ನಂಬಿಕೆಯ ಐದು ಸ್ತಂಭಗಳಲ್ಲಿ ಒಂದಾಗಿದೆ. ಜೊತೆಗೆ ಇದರ ಜೊತೆಗೆ ನಂಬಿಕೆ, ಪ್ರಾರ್ಥನೆ, ದಾನ ಮತ್ತು ತೀರ್ಥಯಾತ್ರೆ ಮಾಡಲಾಗುತ್ತದೆ. ತೀರ್ಥಯಾತ್ರೆಯನ್ನು ಅರೇಬಿಕ್‌ನಲ್ಲಿ ಹಜ್ ಎಂದು ಕರೆಯಲಾಗುತ್ತದೆ.ಇಸ್ಲಾಮಿಕ್ ಕ್ಯಾಲೆಂಡರ್ ಚಂದ್ರನ ಹಂತಗಳನ್ನು ಅನುಸರಿಸುತ್ತದೆ, ಇದನ್ನು ಸಾಮಾನ್ಯವಾಗಿ ಚಂದ್ರನ ಚಕ್ರ ಎಂದು ಕರೆಯಲಾಗುತ್ತದೆ ಮತ್ತು ಇದರ ಪರಿಣಾಮವಾಗಿ, ಪವಿತ್ರ ರಂಜಾನ್ ತಿಂಗಳು ಗ್ರೆಗೋರಿಯನ್ ಕ್ಯಾಲೆಂಡರ್ನಲ್ಲಿ ಪ್ರತಿ ವರ್ಷ ಸುಮಾರು 10 ದಿನಗಳ ಮುಂಚಿತವಾಗಿ ಬರುತ್ತದೆ. ಈ ವರ್ಷ, ರಂಜಾನ್ ಸೋಮವಾರ ಮಾರ್ಚ್ 11 ಅಥವಾ ಮಂಗಳವಾರ ಮಾರ್ಚ್ 12, 2024 ರಂದು ಪ್ರಾರಂಭವಾಗುವ ನಿರೀಕ್ಷೆಯಿದೆ. ಸಾಮಾನ್ಯವಾಗಿ, ರಂಜಾನ್‌ನ ಅರ್ಧಚಂದ್ರಾಕೃತಿಯು ಸೌದಿ ಅರೇಬಿಯಾ ಮತ್ತು ಕೆಲವು ಪಾಶ್ಚಿಮಾತ್ಯ ದೇಶಗಳೊಂದಿಗೆ ಕೆಲವು ಭಾಗಗಳಲ್ಲಿ ಮೊದಲು ಕಂಡುಬರುತ್ತದೆ ಮತ್ತು ಸಾಮಾನ್ಯವಾಗಿ ಒಂದು ದಿನದ ನಂತರ ಉಳಿದ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಇತರ ದೇಶಗಳಲ್ಲಿ ಕಂಡುಬರುತ್ತದೆ.

ಇನ್ನೂ ಹೆಚ್ಚು ಓದಿ

ನಾಡಿನೆಲ್ಲೆಡೆ ಸಂಭ್ರಮದ ರಂಜಾನ್, ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಪ್ರಾರ್ಥನೆ ಸಲ್ಲಿಸಿದ ಸಚಿವ ಜಮೀರ್ ಅಹ್ಮದ್

ಸಚಿವನಿಗೆ ಕೆಲ ಅಭಿಮಾನಿಗಳ ಜೊತೆ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿ ಸಹ ಹಬ್ಬದ ಶುಭಾಷಯಗಳನ್ನು ಹೇಳಿದರು. ಈ ಬಾರಿ ರಂಜಾನ್ ಹಬ್ಬ ಕಡು ಬೇಸಿಗೆಯಲ್ಲಿ ಬಂದಿರುವುದರಿಂದ ಈದ್ಗಾ ಮೈದಾನದಲ್ಲಿ ಜನ ನೆರಳಿರುವ ಕಡೆ ಸೇರಲು ಪ್ರಯತ್ನಿಸುತ್ತಿದ್ದಿದ್ದು ಸಾಮಾನ್ಯ ದೃಶ್ಯವಾಗಿತ್ತು

ಮಂಗಳೂರು: ಮುಡಿಪು ಜಂಕ್ಷನ್​ ರಸ್ತೆಯಲ್ಲೇ ಸೌಹಾರ್ದ ಇಫ್ತಾರ್ ಕೂಟ; ವಿಡಿಯೋ ವೈರಲ್

ದಕ್ಷಿಣ ಕನ್ನಡ ಜಿಲ್ಲೆಯ ಮುಡಿಪು ಎಂಬಲ್ಲಿ ರಸ್ತೆ ಮಧ್ಯೆಯೇ ಸೌಹಾರ್ದ ಇಫ್ತಾರ್ ಕೂಟ ಆಯೋಜನೆ ಮಾಡಲಾಗಿದೆ. ಒಂದು ಬದಿ ರಸ್ತೆ ತಡೆದು ಸಹಭೋಜನ ಮಾಡುವ ಮೂಲಕ ವಾಹನಗಳ ಸುಗಮ ಸಂಚಾರಕ್ಕೆ ಅಡಚಣೆ ಉಂಟು ಮಾಡಿದ ಬಗ್ಗೆ ಸ್ಥಳೀಯರಿಂದ ಯಾವುದೇ ವಿರೋಧ ವ್ಯಕ್ತವಾಗದಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಟೀಕೆಗೆ ಕಾರಣವಾಗಿದೆ.

  • Ashok
  • Updated on: Mar 30, 2024
  • 7:10 pm

ಬಗೆ ಬಗೆಯ ಸಮೋಸ, ಮಾಂಸ ಖಾದ್ಯಗಳು, ಹಲೀಮ್, ಶರಬತ್; ಆಹಾರ ಪ್ರಿಯರನ್ನು ಕೈ ಬೀಸಿ ಕರೆಯುತ್ತಿದೆ ಶಿವಾಜಿನಗರ

Ramadan Food Fest: ಪ್ರತಿ ವರ್ಷ ರಂಜಾನ್ ಹಬ್ಬ ಬಂದ್ರೆ ಸಾಕು ಸಿಲಿಕಾನ್ ಸಿಟಿಯ ರೆಸೆಲ್ ಮಾರ್ಕೆಟ್ ನಲ್ಲಿ ಫುಡ್ ಫೆಸ್ಟ್ ಆರಂಭವಾಗುತ್ತೆ. ಈ ವರ್ಷವು ರೆಸೆಲ್ ಮಾರುಕಟ್ಟೆಯಲ್ಲಿ ಅದ್ದೂರಿಯಾಗಿ ಫುಡ್ ಫೆಸ್ಟ್ ನಡೆಯುತ್ತಿದ್ದು, ಫೆಸ್ಟ್ ನಲ್ಲಿ 50ಕ್ಕೂ ಹೆಚ್ಚು ಬಗೆಯ ವೈರೈಟಿ ವೆರೈಟಿ‌ ಖಾದ್ಯಗಳು ಜನರನ್ನ ಸೆಳೆಯುತ್ತಿವೆ.

Ramadan 2024: ರಂಜಾನ್ ಸೆಹ್ರಿ ವೇಳೆ ಮುಂಜಾನೆ ಈ 10 ಕೆಟ್ಟ ಆಹಾರಗಳನ್ನು ಸೇವಿಸಬೇಡಿ

Sehri: ಈ ವಾರದಿಂದ ಭಾರತದಲ್ಲೆಡೆ ರಂಜಾನ್ ತಿಂಗಳ ಆಚರಣೆ ಶುರುವಾಗಿದೆ. ರಂಜಾನ್ ಹಬ್ಬದ ಆಚರಣೆಯಲ್ಲಿ ಸುಹೂರ್ ಅಥವಾ ಸೆಹ್ರಿ ಹಾಗೂ ಇಫ್ತಾರ್ ಎರಡೂ ಭೋಜನದ ಪದ್ಧತಿಯಾಗಿದೆ. ಬೆಳಗ್ಗೆ ಸೆಹ್ರಿ ಅಥವಾ ಸುಹೂರ್ ಭೋಜನದಿಂದ ಮುಂಜಾನೆ ಉಪವಾಸವನ್ನು ಆರಂಭಿಸಲಾಗುತ್ತದೆ. ಇಫ್ತಾರ್ ಮೂಲಕ ರಾತ್ರಿ ಉಪವಾಸವನ್ನು ಮುರಿಯಲಾಗುತ್ತದೆ. ರಂಜಾನ್ ಉಪವಾಸಕ್ಕೂ ಮುನ್ನ ಯಾವ ರೀತಿಯ ಆಹಾರವನ್ನು ಸೇವಿಸಬೇಕು? ಯಾವುದನ್ನು ಸೇವಿಸಬಾರದು?

ರಂಜಾನ್ ಉಪವಾಸದ ಸಮಯದಲ್ಲಿ ಬಾಯಾರಿಕೆ ಕಡಿಮೆ ಮಾಡುವುದು ಹೇಗೆ?

ಈಗಾಗಲೇ ಭಾರತದಲ್ಲಿ ರಂಜಾನ್ ಹಬ್ಬ ಶುರುವಾಗಿದೆ. ಈ 1 ತಿಂಗಳ ಆಚರಣೆಯಲ್ಲಿ ಬೆಳಗ್ಗೆಯಿಂದ ರಾತ್ರಿಯವರೆಗೂ ಮುಸ್ಲಿಮರು ಉಪವಾಸ ಆಚರಿಸುತ್ತಾರೆ. ಬೇಸಿಗೆಯ ಸೆಖೆ ವಿಪರೀತ ಹೆಚ್ಚಾಗಿರುವುದರಿಂದ ಈ ಸಮಯದಲ್ಲಿ ಹಸಿವನ್ನಾದರೂ ತಡೆದುಕೊಳ್ಳಬಹುದು; ಆದರೆ ಬಾಯಾರಿಕೆಯನ್ನು ತಡೆದುಕೊಳ್ಳಲು ಸಾಧ್ಯವಿಲ್ಲ. ಹೀಗಾಗಿ, ಉಪವಾಸದ ಸಂದರ್ಭದಲ್ಲಿ ಬಾಯಾರಿಕೆಯನ್ನು ಕಂಟ್ರೋಲ್ ಮಾಡಲು ಕೆಲವು ಸಲಹೆಗಳು ಇಲ್ಲಿವೆ.

Ramadan 2024: ಇಂದಿನಿಂದ ರಂಜಾನ್; ಬೆಂಗಳೂರು ಸೇರಿ ಭಾರತದ ಪ್ರಮುಖ ನಗರಗಳ ಸೆಹ್ರಿ, ಇಫ್ತಾರ್ ಸಮಯ ಇಲ್ಲಿದೆ

ಇಂದಿನಿಂದ ಮುಸ್ಲಿಮರ ಪವಿತ್ರ ಹಬ್ಬವಾದ ರಂಜಾನ್ ಆಚರಣೆ ಶುರುವಾಗಿದೆ. ಸೌದಿ ಅರೇಬಿಯಾ ಮತ್ತು ಇತರ ಹಲವಾರು ಮಧ್ಯಪ್ರಾಚ್ಯ ದೇಶಗಳಲ್ಲಿ ಮಾರ್ಚ್ 11ರ ಭಾನುವಾರದಂದು ಅರ್ಧಚಂದ್ರನನ್ನು ನೋಡಿದ ನಂತರ ಸೋಮವಾರವೇ ಪವಿತ್ರ ರಂಜಾನ್ ತಿಂಗಳು ಪ್ರಾರಂಭವಾಗಿದೆ. ಸೋಮವಾರದಂದು ಹಲವಾರು ಭಾರತೀಯ ನಗರಗಳಲ್ಲಿ ಅರ್ಧಚಂದ್ರ ಗೋಚರವಾಗಿದ್ದ ಹಿನ್ನೆಲೆಯಲ್ಲಿ ಇಂದಿನಿಂದ (ಮಾರ್ಚ್ 12) ರಂಜಾನ್ ಆರಂಭವಾಗಿದೆ.

ಕರಾವಳಿಯಲ್ಲಿ ಚಂದ್ರನ ದರ್ಶನ: ನಾಳೆಯಿಂದ ರಂಜಾನ್ ಉಪವಾಸ ಆರಂಭ

Ramadan 2024: ಸೌದಿ ಅರೇಬಿಯಾದಲ್ಲಿ ನಿನ್ನೆ ಚಂದ್ರನ ದರ್ಶನವಾಗಿದ್ದು, ಇಂದಿನಿಂದ ರಂಜಾನ್ ತಿಂಗಳು ಆರಂಭಗೊಂಡಿದೆ. ಕರ್ನಾಟಕದ ಕರಾವಳಿ ಭಾಗದಲ್ಲಿ ಇಂದು ಚಂದ್ರನ ದರ್ಶನವಾಗಿದ್ದು, ನಾಳೆಯಿಂದ ಉಪವಾಸ ಆರಂಭವಾಗಲಿದೆ. ಈ ಬಗ್ಗೆ ಮಂಗಳೂರಿನ ಝೀನತ್ ಬಕ್ಷ್ ಕೇಂದ್ರ ಜುಮಾ ಮಸೀದಿ ಹಾಗೂ ಈದ್ಗಾ ಮಸೀದಿಯ ಕೋಶಾಧಿಕಾರಿ ಎಸ್.ಎಂ.ರಶೀದ್ ಹಾಜಿ ಮಾಹಿತಿ ನೀಡಿದ್ದಾರೆ.

ಚಂದ್ರ ಕಣ್ಣಿಗೆ ಬಿದ್ದರೆ ದಯವಿಟ್ಟು ತಿಳಿಸಿ: ಸೌದಿ ಅರೇಬಿಯಾದ ನ್ಯಾಯಾಲಯದಿಂದ ಸಾರ್ವಜನಿಕರಿಗೆ ಬಿನ್ನಹ

Crescent Moon and Ramazan in Islam: ರಂಜಾನ್ ಮಾಸದಂದು ಸೌದಿ ಅರೇಬಿಯಾದಲ್ಲಿ ಅರ್ಧಚಂದ್ರನ ದರ್ಶನವಾದ ಬಳಿಕ ಮುಸ್ಲಿಮರು ಉಪವಾಸ ಶುರು ಮಾಡಲಾಗುತ್ತದೆ. ಈ ಹಿನ್ನೆಲೆಯಲ್ಲಿ ಸೌದಿಯಲ್ಲಿ ಯಾರಿಗಾದರೂ ಕಣ್ಣಿಗೆ ಅರ್ಧಚಂದ್ರ ಬಿದ್ದರೆ ಸಮೀಪದ ಕೋರ್ಟ್​ಗೆ ಹೋಗಿ ಸಾಕ್ಷ್ಯ ತಿಳಿಸಿ ಎಂದು ಅಲ್ಲಿನ ಸುಪ್ರೀಂಕೋರ್ಟ್ ಸಾರ್ವಜನಿಕರಿಗೆ ಮನವಿ ಮಾಡಿದೆ. ಇವತ್ತು ಭಾನುವಾರ ಅರ್ಧಚಂದ್ರ ಕಾಣಿಸಿದರೆ ಸೌದಿಯಲ್ಲಿ ಸೋಮವಾರದಿಂದ ಉಪವಾಸ ಶುರುವಾಗುತ್ತದೆ. ಭಾರತದಲ್ಲಿ ಮಂಗಳವಾರ ಉಪವಾಸ ಆರಂಭವಾಗುತ್ತದೆ.

Ramadan 2024: ರಂಜಾನ್ ಹಬ್ಬ; ಭಾರತದಲ್ಲಿ ಚಂದ್ರನ ದರ್ಶನ ಯಾವಾಗ?

ಸೌದಿ ಅರೇಬಿಯಾದಲ್ಲಿ ಅರ್ಧಚಂದ್ರನ ದರ್ಶನವು ರಂಜಾನ್ ಆರಂಭ ಮತ್ತು ಅಂತ್ಯವನ್ನು ಸೂಚಿಸುತ್ತದೆ. ರಂಜಾನ್ ತಿಂಗಳನ್ನು ಮುಸ್ಲಿಮರು ಆಧ್ಯಾತ್ಮಿಕತೆ, ಹೆಚ್ಚಿದ ಭಕ್ತಿ ಮತ್ತು ಆರಾಧನೆಯಲ್ಲಿ ಕಳೆಯುತ್ತಾರೆ. ರಂಜಾನ್ ಹಿಂದಿನ ಪಾಪಗಳಿಗೆ ಕ್ಷಮೆಯನ್ನು ಪಡೆಯಲು ಮತ್ತು ಪ್ರಾಮಾಣಿಕವಾಗಿ ಪಶ್ಚಾತ್ತಾಪ ಪಡಲು ಸೂಕ್ತ ಸಮಯವಾಗಿದೆ. ಆದ್ದರಿಂದ ಮುಸ್ಲಿಮರು ಹೆಚ್ಚಿದ ಭಕ್ತಿ, ಹೃತ್ಪೂರ್ವಕ ಪ್ರಾರ್ಥನೆಗಳ ಮೂಲಕ ರಂಜಾನ್ ಮಾಸವನ್ನು ಆಚರಿಸುತ್ತಾರೆ. ಕುರಾನ್ ಅನ್ನು ಪಠಿಸಲು ಸಮಯವನ್ನು ಮೀಸಲಿಡುತ್ತಾರೆ.

Ramadan 2024: ರಂಜಾನ್ ಉಪವಾಸ ಮಾಡುತ್ತೀರಾ?; WHO ನೀಡಿರುವ ಸೂಚನೆಗಳಿವು

ಮಾರ್ಚ್ ತಿಂಗಳು ಹಬ್ಬಗಳ ತಿಂಗಳು. ಹಿಂದೂಗಳ ಪವಿತ್ರ ಹಬ್ಬಗಳಾದ ಮಹಾ ಶಿವರಾತ್ರಿ, ಹೋಳಿ ಹಬ್ಬದ ಜೊತೆಗೆ ಮುಸ್ಲಿಮರ ಹಬ್ಬವಾದ ರಂಜಾನ್ ಕೂಡ ಈ ಬಾರಿ ಮಾರ್ಚ್​ನಲ್ಲೇ ಬಂದಿದೆ. ಸಾಮಾನ್ಯವಾಗಿ ಇಸ್ಲಾಮಿಕ್ ಕ್ಯಾಲೆಂಡರ್‌ನ ಒಂಬತ್ತನೇ ತಿಂಗಳಲ್ಲಿ ರಂಜಾನ್ ಆಚರಿಸಲಾಗುತ್ತದೆ. ಈ ಬಾರಿ ರಂಜಾನ್ ಆಚರಿಸುವ ಮುಸ್ಲಿಮರಿಗೆ ವಿಶ್ವ ಆರೋಗ್ಯ ಸಂಸ್ಥೆ ನೀಡಿರುವ ಕೆಲವು ಮಾರ್ಗಸೂಚಿಗಳ ಬಗ್ಗೆ ಮಾಹಿತಿ ಇಲ್ಲಿದೆ.