ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.
Mercedes Maybach: 34 ಕಿ.ಮೀ. ಮೈಲೇಜ್: 3.35 ಕೋಟಿ ಬೆಲೆಗೆ ಮರ್ಸಿಡಿಸ್-ಮೇಬ್ಯಾಕ್ ಎಸ್ 580ಇ ಬಿಡುಗಡೆ
ಮರ್ಸಿಡಿಸ್-ಬೆಂಝ್ ಭಾರತದಲ್ಲಿ ಹೊಸ ಮೇಬ್ಯಾಕ್ ಎಸ್ 580ಇ ಪ್ಲಗ್-ಇನ್ ಹೈಬ್ರಿಡ್ ಕಾರನ್ನು 3.35 ಕೋಟಿ ಬೆಲೆಗೆ ಬಿಡುಗಡೆ ಮಾಡಿದೆ. 3.0 ಲೀಟರ್ ಪೆಟ್ರೋಲ್ ಎಂಜಿನ್ ಮತ್ತು ಎಲೆಕ್ಟ್ರಿಕ್ ಮೋಟಾರ್ ಹೊಂದಿರುವ ಈ ಕಾರು 585 ಎಚ್‌ಪಿ ಶಕ್ತಿ ನೀಡುತ್ತದೆ. ಒಂದೇ ಚಾರ್ಜ್‌ನಲ್ಲಿ 98 ಕಿ.ಮೀ.ವರೆಗೆ ಎಲೆಕ್ಟ್ರಿಕ್ ಮೋಡ್‌ನಲ್ಲಿ ಚಲಿಸುವ ಸಾಮರ್ಥ್ಯ ಇದರ ಪ್ರಮುಖ ಆಕರ್ಷಣೆ.
- Malashree anchan
- Updated on: Oct 6, 2026
- 5:04 pm
Vivo X Fold 6: ವಿವೋದ ಅತ್ಯಂತ ದುಬಾರಿ ಫೋನ್ ಬಿಡುಗಡೆ; ಇದರ ಬೆಲೆ 2 ಲಕ್ಷಕ್ಕೂ ಹೆಚ್ಚು
ವಿವೋ ಭಾರತದಲ್ಲಿ ಎಕ್ಸ್ ಫೋಲ್ಡ್ 6, ವಿ80 ಮತ್ತು ಎಸ್2 ಎಫ್ಇ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದೆ. ಎಕ್ಸ್ ಫೋಲ್ಡ್ 6 ಬೆಲೆ ಬೆಲೆ 2 ಲಕ್ಷಕ್ಕೂ ಹೆಚ್ಚಿದೆ. ಫೋನ್‌ನಲ್ಲಿ 6,900mAh ಸಾಮರ್ಥ್ಯದ ಬ್ಯಾಟರಿ ನೀಡಲಾಗಿದೆ. ಎಕ್ಸ್ ಫೋಲ್ಡ್ 6 ಮತ್ತು ವಿ80 ಅಕ್ಟೋಬರ್ 13ರಿಂದ, ಎಸ್2 ಎಫ್ಇ ಅಕ್ಟೋಬರ್ 20ರಿಂದ ಮಾರಾಟವಾಗಲಿದೆ. ಇದರ ಬೆಲೆ, ಫೀಚರ್ಸ್ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
- Malashree anchan
- Updated on: Oct 6, 2026
- 5:02 pm
ಔಷಧಿ ತೆಗೆದುಕೊಳ್ಳುವಾಗ ಎಷ್ಟು ನೀರು ಕುಡಿಯಬೇಕು? ಈ ಸಣ್ಣ ತಪ್ಪುಗಳಿಂದ ಸಮಸ್ಯೆಯಾಗಬಹುದು
ಔಷಧಿ ಸೇವಿಸುವಾಗ ಮಾತ್ರೆ ನುಂಗಿದರೆ ಸಾಕು ಎಂದುಕೊಳ್ಳಬೇಡಿ. ಅದರೊಂದಿಗೆ ಎಷ್ಟು ನೀರು ಕುಡಿಯಬೇಕು, ಚಹಾ ಅಥವಾ ಹಾಲಿನೊಂದಿಗೆ ತೆಗೆದುಕೊಳ್ಳಬಹುದೇ ಎಂಬುದೂ ಮುಖ್ಯ. ಕಡಿಮೆ ನೀರಿನೊಂದಿಗೆ ಮಾತ್ರೆ ಸೇವಿಸುವುದರಿಂದ ಗಂಟಲು ಅಥವಾ ಅನ್ನನಾಳದಲ್ಲಿ ಉರಿ ಉಂಟಾಗಬಹುದು. ಔಷಧಿ ಸೇವಿಸುವ ಸರಿಯಾದ ವಿಧಾನ ಮತ್ತು ತಪ್ಪಿಸಬೇಕಾದ ಸಾಮಾನ್ಯ ತಪ್ಪುಗಳ ಬಗ್ಗೆ ತಜ್ಞರು ನೀಡಿರುವ ಸಲಹೆಗಳು ಇಲ್ಲಿವೆ.
- Malashree anchan
- Updated on: Oct 6, 2026
- 4:37 pm
ಡೋರ್, ಗ್ಯಾಸ್ ಮತ್ತೆ ಮತ್ತೆ ಪರಿಶೀಲಿಸುತ್ತೀರಾ?: ನಿಮಗೂ ಒಸಿಡಿ ಇದ್ದರೆ ಇಲ್ಲಿ ಒಮ್ಮೆ ಗಮನಿಸಿ
ಬಾಗಿಲು ಲಾಕ್ ಮಾಡಿದ್ದರೂ ಮತ್ತೆ ಮತ್ತೆ ಪರಿಶೀಲಿಸುತ್ತೀರಾ? ಗ್ಯಾಸ್ ಆರಿಸಿದ್ದೀರಾ ಎಂದು ಪದೇಪದೇ ಖಚಿತಪಡಿಸಿಕೊಳ್ಳುತ್ತೀರಾ? ಇಂತಹ ಅಭ್ಯಾಸಗಳು ದೈನಂದಿನ ಜೀವನಕ್ಕೆ ಅಡ್ಡಿಯಾಗುತ್ತಿದ್ದರೆ ಗಮನಿಸುವುದು ಮುಖ್ಯ. ಪದೇಪದೇ ಪರಿಶೀಲಿಸುವುದು, ಅನುಮಾನ, ಆತಂಕ ಮತ್ತು ಇತರರ ಬಳಿ ಮತ್ತೆ ಮತ್ತೆ ಖಚಿತಪಡಿಸಿಕೊಳ್ಳುವಂತಹ ವರ್ತನೆಗಳು ಒಸಿಡಿಯ ಕೆಲವು ಲಕ್ಷಣಗಳಾಗಿರಬಹುದು.
- Malashree anchan
- Updated on: Oct 6, 2026
- 4:03 pm
7 ದಿನಗಳವರೆಗೆ ತಪ್ಪದೇ ಜೀರಿಗೆ ನೀರು ಕುಡಿಯಿರಿ, ಈ ಎಲ್ಲಾ ಪ್ರಯೋಜನಗಳನ್ನು ನಿಮ್ಮದಾಗಿಸಿಕೊಳ್ಳಿ
ನಾವು ದಿನನಿತ್ಯ ಅಡುಗೆಗೆ ಬಳಸುವ ಮಸಾಲೆ ಪದಾರ್ಥಗಳಲ್ಲಿ ಒಂದಾದ ಜೀರಿಗೆ ಆರೋಗ್ಯಕ್ಕೂ ತುಂಬಾನೇ ಪ್ರಯೋಜನಕಾರಿ. ಅದರಲ್ಲೂ ಪ್ರತಿದಿನ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಜೀರಿಗೆ ನೀರು ಕುಡಿಯುವುದು ಆರೋಗ್ಯಕ್ಕೆ ಅತ್ಯಂತ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ನೀವು ಕೇವಲ ಏಳು ದಿನಗಳ ಕಾಲ ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಜೀರಿಗೆ ನೀರನ್ನು ಸೇವಿಸಿದರೆ, ಕೆಲವೇ ದಿನಗಳಲ್ಲಿ ದೇಹದಲ್ಲಿ ಅನೇಕ ಸಕಾರಾತ್ಮಕ ಬದಲಾವಣೆಗಳು ಕಾಣಿಸಿಕೊಳ್ಳುತ್ತವೆ. ಒಟ್ಟಾರೆಯಾಗಿ ಜೀರಿಗೆ ನೀರು ಕುಡಿಯುವುದರಿಂದ ಲಭಿಸುವ ಪ್ರಯೋಜನಗಳು ಯಾವುವು ಎಂಂಬುದರ ಸಂಪೂರ್ಣ ವಿವರ ಇಲ್ಲಿದೆ.
- Malashree anchan
- Updated on: Oct 5, 2026
- 8:41 pm
ಹಣಕಾಸಿನ ಸಮಸ್ಯೆಯಿಂದ ಪಾರಾಗಲು ಸಂಬಳವಾದ ತಕ್ಷಣವೇ ಈ ಕೆಲಸಗಳನ್ನು ಮಾಡಬೇಕು
ಸಾಮಾನ್ಯವಾಗಿ ಅನೇಕ ಜನರು ತಿಂಗಳ ಕೊನೆಯಲ್ಲಿ ಸಾಕಷ್ಟು ಹಣದ ಸಮಸ್ಯೆಯನ್ನು ಎದುರಿಸುತ್ತಾರೆ. ತಿಂಗಳ ಕೊನೆಯಲ್ಲಿ ಉದ್ಬವಿಸುವ ಆರ್ಥಿಕ ಸಂಕಷ್ಟವನ್ನು ಸರಿದೂಗಿಸಲು ಸ್ನೇಹಿತರು, ಪರಿಚಯಸ್ಥರಿಂದ ಸಾಲವನ್ನು ಸಹ ಪಡೆಯುತ್ತಾರೆ. ಈ ಸಾಲ ಪಡೆಯುವ ಅಭ್ಯಾಸ ಹಣದ ಸಮಸ್ಯೆಯನ್ನು ಮತ್ತಷ್ಟು ಹೆಚ್ಚು ಮಾಡುತ್ತದೆ. ಹೀಗಿರುವಾಗ ಸಂಬಳ ಬಂದ ತಕ್ಷಣ ಆರ್ಥಿಕ ವಿಷಯಕ್ಕೆ ಸಂಬಂಧಿಸಿದ ಒಂದಷ್ಟು ಅಗತ್ಯ ಕೆಲಸಗಳನ್ನು ಮಾಡಿದರೆ ತಿಂಗಳ ಕೊನೆಯಲ್ಲಿ ಯಾವುದೇ ಹಣದ ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ. ಈ ಕುರಿತ ಸಂಕ್ಷಿಪ್ತ ವರದಿ ಇಲ್ಲಿದೆ.
- Malashree anchan
- Updated on: Oct 5, 2026
- 7:44 pm
ಈ ಆಹಾರ ಪದಾರ್ಥಗಳನ್ನು ಪ್ಲಾಸ್ಟಿಕ್ ಡಬ್ಬದಲ್ಲಿ ಸಂಗ್ರಹಿಸುವ ತಪ್ಪನ್ನು ಎಂದಿಗೂ ಮಾಡದಿರಿ
ಸಾಮಾನ್ಯವಾಗಿ ಹೆಚ್ಚಿನ ಮನೆಗಳಲ್ಲಿ ಆಹಾರ ಪದಾರ್ಥ, ಕಾಳುಗಳು, ತಿಂಡಿ ತಿನಿಸುಗಳನ್ನು ಸಂಗ್ರಹಿಸಿಡಲು ಪ್ಲಾಸ್ಟಿಕ್ ಡಬ್ಬಗಳನ್ನೇ ಬಳಸಲಾಗುತ್ತದೆ. ಪ್ಲಾಸ್ಟಿಕ್ ಡಬ್ಬಗಳು ಬಜೆಟ್ ಫ್ರೆಂಡ್ಲಿ ಆಗಿದ್ದರೂ, ಇವು ಅರೋಗ್ಯ ಸ್ನೇಹಿಯಲ್ಲ. ಹೌದು ಪ್ಲಾಸ್ಟಿಕ್ ಡಬ್ಬ ಅಥವಾ ಪಾತ್ರೆಗಳಲ್ಲಿ ಸಂಗ್ರಹಿಸಿಟ್ಟ ಕೆಲವೊಂದು ಆಹಾರ ಪದಾರ್ಥಗಳ ಸೇವನೆ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮವನ್ನು ಬೀರುತ್ತವೆ. ಆರೋಗ್ಯದ ದೃಷ್ಟಿಯಿಂದ ಯಾವೆಲ್ಲಾ ಆಹಾರ ಪದಾರ್ಥಗಳನ್ನು ಪ್ಲಾಸ್ಟಿಕ್ ಡಬ್ಬದಲ್ಲಿ ಸಂಗ್ರಹಿಸಿಡಬಾರದು ಎಂಬುದನ್ನು ನೋಡೋಣ ಬನ್ನಿ.
- Malashree anchan
- Updated on: Oct 5, 2026
- 5:18 pm
Chanakya Niti: ಚಾಣಕ್ಯರ ಪ್ರಕಾರ ಹುಡುಗಿಯರಿಗೆ ಈ ರೀತಿಯ ಹುಡುಗ್ರು ಇಷ್ಟವಾಗೋದಂತೆ
ಆಚಾರ್ಯ ಚಾಣಕ್ಯರು ರಾಜಕೀಯ ವಿಷಯಗಳು ಮಾತ್ರವಲ್ಲ ನಮ್ಮ ಜೀವನಕ್ಕೆ ಬೇಕಾಗಿರುವಂತಹ ಅಗತ್ಯ ಉಪದೇಶಗಳನ್ನು ತಮ್ಮ ನೀತಿಶಾಸ್ತ್ರದಲ್ಲಿ ತಿಳಿಸಿಕೊಟ್ಟಿದ್ದಾರೆ. ಸ್ನೇಹ, ದಾಂಪತ್ಯ ಜೀವನ, ಹಣ ಗಳಿಕೆಯ ದಾರಿ, ಶ್ರೀಮಂತಿಕೆ ಹೀಗೆ ಪ್ರತಿಯೊಂದು ವಿಚಾರಗಳ ಬಗ್ಗೆ ಹೇಳಿದ್ದಾರೆ. ಅದೇ ರೀತಿ ಅವರು ಹೆಣ್ಣು ಮಕ್ಕಳಿಗೆ ಯಾವ ರೀತಿಯ ಹುಡುಗರು ಇಷ್ಟವಾಗ್ತಾರೆ, ಹೆಣ್ಮಕ್ಳಿಗೆ ಹುಡುಗರ ಯಾವ ಗುಣ ಇಷ್ಟವಾಗುತ್ತದೆ ಎಂಬ ಸೀಕ್ರೆಟ್ ವಿಚಾರಗಳ ಬಗ್ಗೆಯೂ ಹೇಳಿದ್ದಾರೆ. ಈ ವಿಷಯದ ಕುರಿತ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
- Malashree anchan
- Updated on: Oct 4, 2026
- 7:56 pm
ಕೊಳಕು ಪಾತ್ರೆಗಳನ್ನು ತೊಳೆಯದೆ ರಾತ್ರಿಯಿಡಿ ಸಿಂಕ್‌ನಲ್ಲಿಟ್ಟರೆ ಆಗುವ ತೊಂದರೆಗಳೇನು ಗೊತ್ತೇ?
ಸಾಮಾನ್ಯವಾಗಿ ಕೆಲವರು ರಾತ್ರಿ ಊಟದ ಬಳಿಕ ಪಾತ್ರೆಗಳನ್ನು ತೊಳೆಯದೆ ಸಿಂಕ್‌ನಲ್ಲಿ ಹಾಗೆಯೇ ಇಟ್ಟು ಬಿಡುತ್ತಾರೆ ಮತ್ತು ಆ ಕೊಳಕು ಪಾತ್ರೆಗಳನ್ನು ಬೆಳಗ್ಗಿನ ಹೊತ್ತಿನಲ್ಲಿ ತೊಳೆದು ಬಿಡುತ್ತಾರೆ. ಊಟದ ನಂತರ ಪಾತ್ರೆ ತೊಳೆಯುವುದು ತುಂಬಾ ಕಷ್ಟಕರವಾದ ಕೆಲಸ ಎಂದು ಅನೇಕರು ಈ ರೀತಿ ಮಾಡ್ತಾರೆ. ತೀರಾ ಸಾಮಾನ್ಯದಂತೆ ಕಾಣುವ ಈ ಅಭ್ಯಾಸವು ಅರೋಗ್ಯ ಮತ್ತು ಅಡುಗೆ ಮನೆಯ ನೈರ್ಮಲ್ಯದ ಮೇಲೆ ಎಷ್ಟೆಲ್ಲಾ ಪರಿಣಾಮಗಳನ್ನು ಬೀರುತ್ತವೆ ಗೊತ್ತಾ? ಈ ಕುರಿತ ಸಂಕ್ಷಿಪ್ತ ಮಾಹಿತಿ ಇಲ್ಲಿದೆ.
- Malashree anchan
- Updated on: Oct 4, 2026
- 7:01 pm
ಸುರಕ್ಷತೆಯ ದೃಷ್ಟಿಯಿಂದ ಮಹಿಳೆಯರು ತಮ್ಮ ಬ್ಯಾಗ್‌ನಲ್ಲಿ ಈ ವಸ್ತುಗಳನ್ನು ಇಟ್ಟುಕೊಳ್ಳುವುದು ಅತ್ಯಗತ್ಯ
Women Safety Tools: ಸಾಮಾನ್ಯವಾಗಿ ಹೆಣ್ಮಕ್ಳು ಹೊರಗಡೆ ಎಲ್ಲಾದ್ರೂ ಹೋಗುವ ಸಂದರ್ಭದಲ್ಲಿ ತಮ್ಮ ಬ್ಯಾಗ್‌ನಲ್ಲಿ ಲಿಪ್‌ಸ್ಟಿಕ್, ಕನ್ನಡಿ ಸೇರಿದಂತೆ ಒಂದಷ್ಟು ಮೇಕಪ್ ಉತ್ಪನ್ನಗಳನ್ನು ತೆಗೆದುಕೊಂಡು ಹೋಗ್ತಾರೆ. ಆದರೆ ಸುರಕ್ಷತಾ ಸಾಧನಗಳ ಬಗ್ಗೆ ಗಮನವೇ ಹರಿಸುವುದಿಲ್ಲ. ಇಂದಿನ ಈ ಕಾಲಘಟ್ಟದಲ್ಲಿ ಮೇಕಪ್ ಉತ್ಪನ್ನಗಳಿಗಿಂತ ಹೆಚ್ಚಾಗಿ ಪ್ರತಿಯೊಬ್ಬ ಮಹಿಳೆಯೂ ಸಹ ಕಷ್ಟದ ಸಮಯದಲ್ಲಿ ಉಪಯುಕ್ತವಾಗುವಂತಹ ಕೆಲವೊಂದು ವಸ್ತುಗಳನ್ನು ಯಾವಾಗಲೂ ಬ್ಯಾಗ್‌ನಲ್ಲಿ ಇಟ್ಟಿರಲೇಬೇಕು. ಅ ಸುರಕ್ಷತಾ ಸಾಧನಗಳು ಯಾವುವು ಎಂಬ ಸಂಪೂರ್ಣ ವಿವರ ಇಲ್ಲಿದೆ.
- Malashree anchan
- Updated on: Oct 4, 2026
- 5:30 pm
ಪ್ರತಿದಿನ ಬೆಳಗ್ಗೆ 10 ನಿಮಿಷಗಳ ಕಾಲ ಓಂಕಾರ ಪಠಿಸುವುದು ಎಷ್ಟು ಪ್ರಯೋಜನಕಾರಿ ಗೊತ್ತೇ?
ಇಂದಿನ ಈ ಡಿಜಿಟಲ್ ಯುಗದಲ್ಲಿ ಅನೇಕರ ದಿನ ಆರಂಭವಾಗುವುದೇ ಮೊಬೈಲ್ ಫೋನ್‌ನೊಂದಿಗೆ. ಹೀಗೆ ಮೊಬೈಲ್ ನೋಡ್ತಾ, ಗಂಟೆಗಟ್ಟಲೆ ಸೋಷಿಯಲ್ ಮೀಡಿಯಾದಲ್ಲಿ ಸಮಯ ಕಳೆದರೆ ಒತ್ತಡ ಮತ್ತಷ್ಟು ಹೆಚ್ಚಾಗುತ್ತದೆ. ಆದ್ದರಿಂದ ಮೊಬೈಲ್ ನೋಡುವ ಬದಲು ಬೆಳಗ್ಗೆ ಎದ್ದ ಬಳಿಕ 10 ನಿಮಿಷಗಳ ಕಾಲ ಓಂಕಾರ ಧ್ಯಾನ ಮಾಡುವ ಧನಾತ್ಮಕ ಅಭ್ಯಾಸವನ್ನು ಬೆಳೆಸಿಕೊಳ್ಳಿ. ಈ ಸರಳ ಅಭ್ಯಾಸ ದಿನವನ್ನು ಸಕಾರಾತ್ಮಕ ರೀತಿಯಲ್ಲಿ ಪ್ರಾರಂಭಿಸಲು ಸಹಾಯ ಮಾಡುವುದು ಮಾತ್ರವಲ್ಲ, ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೂ ಸಾಕಷ್ಟು ಪ್ರಯೋಜನಗಳನ್ನು ಒದಗಿಸುತ್ತವೆ.
- Malashree anchan
- Updated on: Oct 3, 2026
- 7:50 pm
ಫೋನ್ ಖರೀದಿಸುವ ಮುನ್ನ ಒಮ್ಮೆ ಯೋಚಿಸಿ; ಶೀಘ್ರದಲ್ಲೇ ಬರಲಿವೆ ಈ 4 ಹೊಸ ಸ್ಮಾರ್ಟ್‌ಫೋನ್‌ಗಳು
Upcoming Smartphones 2026: ಹೊಸ ಸ್ಮಾರ್ಟ್‌ಫೋನ್ ಖರೀದಿಸಲು ಕಾಯುತ್ತಿದ್ದೀರಾ? 2026ರ ಕೊನೆಯ ತಿಂಗಳುಗಳಲ್ಲಿ ಐಫೋನ್ ಡ್ಯುವೋ, ಮೊಟೊರೊಲಾ ಸಿಗ್ನೇಚರ್ 27, ಒನ್‌ಪ್ಲಸ್ 16 ಮತ್ತು ಒಪ್ಪೊ ಫೈಂಡ್ ಎಕ್ಸ್10 ಸರಣಿಯಂತಹ ಹೊಸ ಫೋನ್‌ಗಳು ಮಾರುಕಟ್ಟೆಗೆ ಬರಲಿವೆ. ಫೋಲ್ಡೆಬಲ್ ಡಿಸ್‌ಪ್ಲೇ, 200MP ಕ್ಯಾಮೆರಾ, ಹೊಸ ಪ್ರೊಸೆಸರ್ ಮತ್ತು ದೊಡ್ಡ ಬ್ಯಾಟರಿಯಂತಹ ವೈಶಿಷ್ಟ್ಯಗಳು ಗಮನ ಸೆಳೆಯಲಿವೆ.
- Malashree anchan
- Updated on: Oct 3, 2026
- 7:45 pm