AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

World Sleep Day 2026: ಆಹಾರ, ವ್ಯಾಯಾಮದಷ್ಟೇ ಉತ್ತಮ ನಿದ್ರೆಯೂ ನಮ್ಮ ಆರೋಗ್ಯಕ್ಕೆ ಅತ್ಯಗತ್ಯ

ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸರಿಯಾದ ನಿದ್ರೆಯೂ ತುಂಬಾನೇ ಮುಖ್ಯ. ಆದರೆ ಇಂದಿನ ಬ್ಯುಸಿ ಜೀವನಶೈಲಿಯ ಕಾರಣ ಅನೇಕರಿಗೆ ಸರಿಯಾಗಿ ನಿದ್ರೆ ಮಾಡಲು ಸಹ ಸಮಯವಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ನಿದ್ರೆಯ ಮಹತ್ವವನ್ನು ತಿಳಿಸಲು ಮತ್ತು ಉತ್ತಮ ನಿದ್ರೆ ಪಡೆಯುವುದು ಏಕೆ ಮುಖ್ಯ ಎಂಬುದರ ಕುರಿತು ಜನರಿಗೆ ಅರಿವು ಮೂಡಿಸಲು ಪ್ರತಿ ವರ್ಷ ಮಾರ್ಚ್ ತಿಂಗಳ ಮೂರನೇ ಶುಕ್ರವಾರದಂದು ವಿಶ್ವ ನಿದ್ರಾ ದಿನವನ್ನು ಆಚರಿಸಲಾಗುತ್ತದೆ.

World Sleep Day 2026: ಆಹಾರ, ವ್ಯಾಯಾಮದಷ್ಟೇ ಉತ್ತಮ ನಿದ್ರೆಯೂ ನಮ್ಮ ಆರೋಗ್ಯಕ್ಕೆ ಅತ್ಯಗತ್ಯ
ವಿಶ್ವ ನಿದ್ರಾ ದಿನImage Credit source: vecteezy
ಮಾಲಾಶ್ರೀ ಅಂಚನ್​
|

Updated on: Mar 13, 2026 | 10:22 AM

Share

ನಮ್ಮ ಆರೋಗ್ಯಕ್ಕೆ ಊಟ, ನೀರು, ವ್ಯಾಯಾಮ ಎಷ್ಟು ಮುಖ್ಯವೋ ಅದೇ ರೀತಿ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸರಿಯಾದ ನಿದ್ರೆಯೂ (Sleep) ಅಷ್ಟೇ ಮುಖ್ಯ. ಆದ್ರೆ ಇಂದಿನ ಈ ಸ್ಮಾರ್ಟ್‌ ಫೋನ್‌ ಯುಗದಲ್ಲಿ ಜನ ಸರಿಯಾಗಿ ನಿದ್ರೆ ಮಾಡುತ್ತಿಲ್ಲ, ಇಡೀ ದಿನ ಮೊಬೈಲ್‌ ಫೋನ್‌ ನೋಡುತ್ತಾ ಸಮಯ ಕಳೆಯುತ್ತಾರೆ. ಹೀಗೆ ಸರಿಯಾಗಿ ನಿದ್ರೆ ಮಾಡದಿದ್ದರೆ ಸಾಕಷ್ಟು ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಆದ್ದರಿಂದ ನಿದ್ರೆಯ ಮಹತ್ವವನ್ನು ತಿಳಿಸಲು ಮತ್ತು ಉತ್ತಮ ನಿದ್ರೆ ಪಡೆಯುವುದು ಏಕೆ ಮುಖ್ಯ ಎಂಬುದರ ಕುರಿತು ಜನರಿಗೆ ಅರಿವು ಮೂಡಿಸಲು ಪ್ರತಿ ವರ್ಷ ಮಾರ್ಚ್ ತಿಂಗಳ ಮೂರನೇ ಶುಕ್ರವಾರದಂದು ವಿಶ್ವ ನಿದ್ರಾ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ ಮತ್ತು ಮಹತ್ವದ ಬಗ್ಗೆ ತಿಳಿಯೋಣ ಬನ್ನಿ.

ವಿಶ್ವ ನಿದ್ರಾ ದಿನದ ಇತಿಹಾಸವೇನು?

ವಿಶ್ವ ನಿದ್ರಾ ದಿನವನ್ನು  ವರ್ಲ್ಡ್ ಸ್ಲೀಪ್ ಸೊಸೈಟಿ ಪ್ರಾರಂಭಿಸಿತು. ಇದನ್ನು ಮೊದಲು 2008 ರಲ್ಲಿ ಆಚರಿಸಲಾಯಿತು. ಸಾಕಷ್ಟು ನಿದ್ರೆಯ ಪ್ರಯೋಜನಗಳ ಬಗ್ಗೆ ಜಾಗೃತಿ ಮೂಡಿಸುವುದು, ಆರೋಗ್ಯ, ಶಿಕ್ಷಣ ಮತ್ತು ಸಾಮಾಜಿಕ ಜೀವನದ ಮೇಲೆ ನಿದ್ರಾಹೀನತೆಯ ಋಣಾತ್ಮಕ ಪರಿಣಾಮವನ್ನು ಎತ್ತಿ ತೋರಿಸುವುದು ಮತ್ತು ನಿದ್ರಾಹೀನತೆಯ ನಿರ್ವಹಣೆ ಮತ್ತು ತಡೆಗಟ್ಟುವಿಕೆಯನ್ನು ಉತ್ತೇಜಿಸುವುದು ಇದರ ಉದ್ದೇಶವಾಗಿದೆ.

ವಿಶ್ವ ನಿದ್ರಾ ದಿನದ ಮಹತ್ವವೇನು?

  • ವಿಶ್ವ ನಿದ್ರಾ ದಿನದ ಪ್ರಮುಖ ಉದ್ದೇಶವೆಂದರೆ ನಿದ್ರೆಗೆ ಸಂಬಂಧಿಸಿದ ಸಮಸ್ಯೆಗಳು ಮತ್ತು ನಿದ್ರೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದು.
  • ನಿದ್ರಾ ಹೀನತೆಯು ಆಯಾಸ, ಕಿರಿಕಿರಿ, ದುರ್ಬಲಗೊಂಡ ರೋಗನಿರೋಧಕ ಶಕ್ತಿ ಮತ್ತು ಮಾನಸಿಕ ಒತ್ತಡದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಆದ್ದರಿಂದ, ಈ ದಿನದಂದು, ಆರೋಗ್ಯಕರ ಜೀವನಕ್ಕಾಗಿ ಜನರು ಸಾಕಷ್ಟು ನಿದ್ರೆ ಪಡೆಯುವಂತೆ ಪ್ರೋತ್ಸಾಹಿಸಲಾಗುತ್ತದೆ.

ಒಳ್ಳೆಯ ನಿದ್ರೆ ಏಕೆ ಮುಖ್ಯ?

ನಿದ್ರೆ ಎಂದರೆ ಕೇವಲ ವಿಶ್ರಾಂತಿ ಪಡೆಯುವುದು ಮಾತ್ರವಲ್ಲ, ಇದು ದೇಹವನ್ನು ಪುನರ್ಭರ್ತಿ ಮಾಡುವ ಒಂದು ರೂಪ. ನಾವು ನಿದ್ರಿಸುವಾಗ, ದೇಹವು ಸ್ನಾಯುಗಳ ದುರಸ್ತಿ, ಮೆದುಳಿನ ವಿಶ್ರಾಂತಿ ಮತ್ತು ಹಾರ್ಮೋನುಗಳ ಸಮತೋಲನದಂತಹ ಅನೇಕ ಪ್ರಮುಖ ಕಾರ್ಯಗಳನ್ನು ನಿರ್ವಹಿಸುತ್ತದೆ. ಸಾಕಷ್ಟು ನಿದ್ರೆ ಪಡೆಯುವುದು ಶಕ್ತಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ ಮತ್ತು ಮೆದುಳಿನ ಕಾರ್ಯವನ್ನು ಸುಧಾರಿಸುತ್ತದೆ. ಉತ್ತಮ ನಿದ್ರೆ ಸ್ಮರಣೆಯನ್ನು ಬಲಪಡಿಸುತ್ತದೆ, ಮನಸ್ಥಿತಿಯನ್ನು ಸುಧಾರಿಸುತ್ತದೆ ಮತ್ತು ಅನೇಕ ರೋಗಗಳ ಅಪಾಯವನ್ನು ಕಡಿಮೆ ಮಾಡುತ್ತದೆ. ಆದ್ದರಿಂದ ದಿನಕ್ಕೆ ಕನಿಷ್ಟ 8 ರಿಂದ 9 ಗಂಟೆಗಳ ಉತ್ತಮ ನಿದ್ರೆ ಪಡೆಯುವುದು ತುಂಬಾನೇ ಮುಖ್ಯ.

 ಇದನ್ನೂ ಓದಿ: ಧೂಮಪಾನ ತ್ಯಜಿಸಿ, ಆರೋಗ್ಯಕರ ಜೀವನವನ್ನು ನಡೆಸಿ

ಉತ್ತಮ ನಿದ್ರೆ ಪಡೆಯುವುದು ಹೇಗೆ?

ಮಲಗುವ ಸಮಯವನ್ನು ನಿಗದಿಪಡಿಸಿ: ಪ್ರತಿದಿನ ಒಂದೇ ಸಮಯದಲ್ಲಿ ಮಲಗುವುದು ಮತ್ತು ಏಳುವುದನ್ನು ಅಭ್ಯಾಸ ಮಾಡಿಕೊಳ್ಳಿ. ಇದು ನಿಮ್ಮ ದೇಹದ ಜೈವಿಕ ಗಡಿಯಾರವನ್ನು ಸಮತೋಲನಗೊಳಿಸಲು ಸಹಾಯ ಮಾಡುತ್ತದೆ.

ಮಲಗುವ ಮುನ್ನ ಮೊಬೈಲ್‌ನಿಂದ ದೂರವಿರಿ: ಮಲಗುವ ಮುನ್ನ ಮೊಬೈಲ್ ಫೋನ್, ಲ್ಯಾಪ್‌ಟಾಪ್ ಅಥವಾ ಟಿವಿಗಳ ಬಳಕೆಯನ್ನು ಮಿತಿಗೊಳಿಸಿ. ಅವುಗಳ ನೀಲಿ ಬೆಳಕು ನಿದ್ರೆಯ ಮೇಲೆ ಪರಿಣಾಮ ಬೀರುತ್ತದೆ.

ಹಗುರವಾದ ಮತ್ತು ಆರೋಗ್ಯಕರ ಊಟವನ್ನು ಸೇವಿಸಿ: ರಾತ್ರಿಯಲ್ಲಿ ಭಾರವಾದ ಅಥವಾ ತುಂಬಾ ಖಾರವಾದ ಆಹಾರವನ್ನು ಸೇವಿಸುವುದರಿಂದ ನಿದ್ರೆ ಕಷ್ಟವಾಗಬಹುದು. ಆದ್ದರಿಂದ, ಹಗುರವಾದ ಆಹಾರವನ್ನು ಸೇವಿಸುವುದು ಉತ್ತಮ.

ಶಾಂತ ಮತ್ತು ಆರಾಮದಾಯಕ ವಾತಾವರಣವನ್ನು ರಚಿಸಿ: ಮಲಗುವ ಮುನ್ನ ಕೋಣೆಯಲ್ಲಿನ ದೀಪಗಳನ್ನು ಮಂದಗೊಳಿಸಿ ಮತ್ತು ಶಾಂತ ವಾತಾವರಣವನ್ನು ಕಾಪಾಡಿಕೊಳ್ಳಿ. ಇದು ಮನಸ್ಸನ್ನು ಶಾಂತಗೊಳಿಸಲು ಮತ್ತು ವೇಗವಾಗಿ ನಿದ್ರೆ ಮಾಡಲು ಸಹಾಯ ಮಾಡುತ್ತದೆ.

ನಿಯಮಿತವಾಗಿ ವ್ಯಾಯಾಮ ಮಾಡಿ: ಪ್ರತಿದಿನ ಲಘು ವ್ಯಾಯಾಮ ಅಥವಾ ಯೋಗ ಮಾಡುವುದರಿಂದ ದೇಹವು ದಣಿದ ಅನುಭವವಾಗುತ್ತದೆ ಮತ್ತು ರಾತ್ರಿಯಲ್ಲಿ ಉತ್ತಮ ನಿದ್ರೆ ಪಡೆಯಲು ಇದು ಸಹಾಯ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us