AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

International Jaguar Day 2026: ಚಿರತೆಗಳಿಗಿಂತ ಜಾಗ್ವಾರ್‌ ಎಷ್ಟು ಭಿನ್ನವಾಗಿರುತ್ತವೆ? ಅವುಗಳನ್ನು ಗುರುತಿಸುವುದು ಹೇಗೆ?

ಪ್ಯಾಂಥೆರಾ ಓಂಕಾ ಎಂದೂ ಕರೆಯಲ್ಪಡುವ ಜಾಗ್ವಾರ್‌ ಕೂಡ ಹುಲಿ, ಸಿಂಹ, ಚಿರತೆಯಂತೆ ಬೆಕ್ಕಿನ ಸಂತತಿಗೆ ಸೇರಿದ ದೈತ್ಯ ಪ್ರಾಣಿಯಾಗಿದ್ದು, ಇದು ತನ್ನ ಶಕ್ತಿಶಾಲಿ ಗುಣಕ್ಕೆ ಹೆಸರುವಾಸಿಯಾಗಿದೆ. ನೋಡಲು ಚಿರತೆಯನ್ನು ಹೋಲುವ ಜಾಗ್ವಾರ್‌ಗಳನ್ನು ಅನೇಕರು ಅವು ಚಿರತೆಯೆಂದು ತಪ್ಪು ಭಾವಿಸುತ್ತಾರೆ. ನೋಡಲು ಥೇಟ್‌ ಒಂದೇ ರೀತಿ ಕಂಡರೂ ಈ ಎರಡು ಪ್ರಾಣಿಗಳ ನಡುವೆ ಸಾಕಷ್ಟು ಭಿನ್ನತೆಗಳಿಗೆ. ಅವುಗಳ ನಡುವಿರುವ ವ್ಯತ್ಯಾಸಗಳೇನು ಎಂಬುದನ್ನು ತಿಳಿಯಿರಿ.

International Jaguar Day 2026: ಚಿರತೆಗಳಿಗಿಂತ ಜಾಗ್ವಾರ್‌ ಎಷ್ಟು ಭಿನ್ನವಾಗಿರುತ್ತವೆ? ಅವುಗಳನ್ನು ಗುರುತಿಸುವುದು ಹೇಗೆ?
ಅಂತಾರಾಷ್ಟ್ರೀಯ ಜಾಗ್ವಾರ್‌ ದಿನImage Credit source: vecteezy
ಮಾಲಾಶ್ರೀ ಅಂಚನ್​
|

Updated on: Nov 29, 2026 | 11:00 AM

Share

ಜಾಗ್ವಾರ್‌ (jaguars) ನೋಡಲು ಚಿರತೆಯಂತೆಯೇ ಕಾಣುವ ಶಕ್ತಿಶಾಲಿ ಪ್ರಾಣಿ. ಹುಲಿ, ಸಿಂಹ, ಚಿರತೆಯಂತೆ  ಬೆಕ್ಕಿನ ಸಂತತಿಗೆ ಸೇರಿದ ಈ ಪ್ರಾಣಿ ಇದು ತನ್ನ ಶಕ್ತಿಶಾಲಿ ಗುಣಕ್ಕೆ ಹೆಸರುವಾಸಿಯಾಗಿದೆ. ಆದರೆ ಇಂದು ಹವಾಮಾನ ಬದಲಾವಣೆ, ಕಾಡಿನ ನಾಶ, ಆವಾಸಸ್ಥಾನದ ನಷ್ಟ, ಅಕ್ರಮ ಬೇಟೆ ಇವೆಲ್ಲದರ ಕಾರಣದಿಂದ ಜಾಗ್ವಾರ್‌ಗಳ ಸಂತತಿ ಅಳಿವಿನಂಚಿಗೆ ತಲುಪಿವೆ. ಇವುಗಳ ಸಂತತಿಯನ್ನು ಸಂರಕ್ಷಿಸಬೇಕು ಎನ್ನುವ ಸಲುವಾಗಿ ಪ್ರತಿವರ್ಷ ನವೆಂಬರ್‌ 29 ರಂದು ಅಂತಾರಾಷ್ಟ್ರೀಯ ಜಾಗ್ವಾರ್‌ ದಿನವನ್ನು ಆಚರಿಸಲಾಗುತ್ತದೆ. ಅಂತಾರಾಷ್ಟ್ರೀಯ ಜಾಗ್ವಾರ್‌ ದಿನದ ಈ ಸಂದರ್ಭದಲ್ಲಿ ಚಿರತೆ ಮತ್ತು ಜಾಗ್ವಾರ್‌ಗಳ ನಡುವಿನ ವ್ಯತ್ಯಾಸಗಳೇನು ಎಂಬುದನ್ನು ತಿಳಿದುಕೊಳ್ಳೋಣ ಬನ್ನಿ.

ಅಂತಾರಾಷ್ಟ್ರೀಯ ಜಾಗ್ವಾರ್‌ ದಿನದ ಇತಿಹಾಸವೇನು?

ಅಂತಾರಾಷ್ಟ್ರೀಯ ಜಾಗ್ವಾರ್ ದಿನವನ್ನು 2018 ರಲ್ಲಿ ಸ್ಥಾಪಿಸಲಾಯಿತು. ಇದು ಜಾಗ್ವಾರ್‌ಗಳನ್ನು ಸಂರಕ್ಷಿಸುವ ಜಾಗತಿಕ ಪ್ರಯತ್ನದ ಭಾಗವಾಗಿದೆ. ಈ ಉಪಕ್ರಮವನ್ನು ಬೆಕ್ಕಿನ ಜಾತಿಗೆ ಸೇರಿದ ಕಾಡುಪ್ರಾಣಿಗಳನ್ನು ರಕ್ಷಿಸಲು ಮೀಸಲಾಗಿರುವ ಪ್ಯಾಂಥೆರಾ ಎಂಬ ಸಂಸ್ಥೆಯು ಹಲವಾರು ಸರ್ಕಾರಗಳು ಮತ್ತು ಸಂರಕ್ಷಣಾ ಗುಂಪುಗಳ ಸಹಯೋಗದೊಂದಿಗೆ ಮುನ್ನಡೆಸಿತು. ಮೆಕ್ಸಿಕೋದಿಂದ ಅರ್ಜೆಂಟೀನಾವರೆಗಿನ 18 ದೇಶಗಳಲ್ಲಿ ಜಾಗ್ವಾರ್‌ಗಳ ನೈಸರ್ಗಿಕ ಆವಾಸಸ್ಥಾನವನ್ನು ರಕ್ಷಿಸಲು ವಿನ್ಯಾಸಗೊಳಿಸಲಾದ ʼಜಾಗ್ವಾರ್ ಕಾರಿಡಾರ್ ಇನಿಶಿಯೇಟಿವ್ʼ ಕಾರ್ಯಕ್ರಮವನ್ನು ಅಳವಡಿಸಿಕೊಂಡ ನೆನಪಿಗಾಗಿ ಈ ದಿನದ ಆಚರಣೆಗೆ  ನವೆಂಬರ್ 29 ಅನ್ನು ಆಯ್ಕೆ ಮಾಡಲಾಯಿತು.

ಚಿರತೆ ಮತ್ತು ಜಾಗ್ವಾರ್‌ಗಳ ನಡುವಿನ ವ್ಯತ್ಯಾವಸೇನು?

ಕಾಡಿನ ಅಪಾಯಕಾರಿ ಪ್ರಾಣಿಗಳಾದ ಚಿರತೆಗಳು ಮತ್ತು ಜಾಗ್ವಾರ್‌ ನೋಡಲು ಥೇಟ್‌ ಒಂದೇ ರೀತಿ ಕಾಣಿಸುತ್ತವೆ. ಅನೇಕರಿಗೆ ಚಿರತೆ ಯಾವುದು, ಜಾಗ್ವಾರ್‌ ಯಾವುದು ಎಂಬುದನ್ನು ಕಂಡುಹಿಡಿಯುವುದೇ ಕಷ್ಟಸಾಧ್ಯವಾಗುತ್ತವೆ. ಈ ಎರಡು ಪ್ರಾಣಿಗಳ ನಡುವೆ ಒಂದಷ್ಟು ಭಿನ್ನತೆಗಳಿದ್ದು, ಆ ಮೂಲಕ ನಾವು ಯಾವುವು ಚಿರತೆ, ಯಾವುದು ಜಾಗ್ವಾರ್‌ ಎಂಬುದನ್ನು ಕಂಡುಹಿಡಿಯಬಹುದು.

  • ಚಿರತೆ ದೇಹದ ಮೇಲೆ ಹೂವಿನ ಆಕಾರದ ಚುಕ್ಕೆಗಳೂ ಇರುತ್ತವೆ. ಈ ಚುಕ್ಕೆಗಳನ್ನು “ರೊಸೆಟ್‌ಗಳು” ಎಂದು ಕರೆಯಲಾಗುತ್ತದೆ. ಜಾಗ್ವಾರ್​ಗಳು ವಿಭಿನ್ನ ದುಂಡಗಿನ ಚುಕ್ಕೆಗಳನ್ನು ಹೊಂದಿದ್ದು, ಈ ಚುಕ್ಕೆಗಳನ್ನು “ಬ್ಲಾಕಿ ರೋಸೆಟ್” ಎಂದು ಕರೆಯಲಾಗುತ್ತದೆ.
  • ಚಿರತೆಯ ವೈಜ್ಞಾನಿಕ ಹೆಸರು ಪ್ಯಾಂಥೆರಾ ಪಾರ್ಡಸ್. ಇದರ ದೇಹ ರಚನೆ ತುಂಬಾ ಬಲಿಷ್ಠವಾಗಿದೆ. ಜಾಗ್ವಾರ್‌ನ ವೈಜ್ಞಾನಿಕ ಹೆಸರು ಪ್ಯಾಂಥೆರಾ ಓಂಕಾ. ಇದು ಚಿರತೆ ಮತ್ತು ಚಿರತೆಗಿಂತ ಬಲಶಾಲಿ ಮತ್ತು ಭಾರವಾಗಿರುತ್ತದೆ.
  • ಚಿರತೆಗಳನ್ನು ಹೋಲುವ ಜಾಗ್ವಾರ್‌ಗಳು ಸುಮಾರಯ 120 ಕಿಲೋಗ್ರಾಂಗಳಷ್ಟು ತೂಕವಿದ್ದರೆ ಚಿರತೆಗಳು ಸುಮಾರು 80 ಕಿಲೋಗ್ರಾಂಗಳಷ್ಟು ತೂಕವಿರುತ್ತವೆ.
  • ಚಿರತೆಗಳು ಮರಗಳ ಮೇಲೆ ಕುಳಿತುಕೊಳ್ಳಲು ಮತ್ತು ಪೊದೆಗಳಲ್ಲಿ ಹೆಚ್ಚಾಗಿ ಅಡಗಿ ಕುಳಿತುಕೊಳ್ಳುತ್ತವೆ. ಅದೇ ಜಾಗ್ವಾರ್‌ಗಳು ಹೆಚ್ಚಾಗಿ ತೆರೆದ ಪ್ರದೇಶದಲ್ಲಿ ಗಾಂಭೀರ್ಯದಿಂದ ಸಂಚರಿಸುತ್ತವೆ.
  • ಜಾಗ್ವಾರ್‌ಗಳು ಚಿರತೆಗಳಿಗಿಂತ ಚಿಕ್ಕದಾದ ದೇಹ ಮತ್ತು ಅಗಲವಾದ ದೊಡ್ಡದಾದ ತಲೆಯನ್ನು ಹೊಂದಿರುತ್ತವೆ. ಚಿರತೆಗಳು ಉದ್ದವಾದ ಬಾಲವನ್ನು ಹೊಂದಿರುತ್ತವೆ.
  • ಚಿರತೆ ತೆರೆದ ಪ್ರದೇಶಗಳಲ್ಲಿ ವೇಗವಾಗಿ ಓಡುವ ಮೂಲಕ ಬೇಟೆಯಾಡುತ್ತವೆ. ಜಾಗ್ವಾರ್‌ಗಳು ನೀರಿನಲ್ಲಿಯೂ ಸಹ ಬೇಟೆಯಾಡುತ್ತವೆ.
  • ಜಾಗ್ವಾರ್‌ಗಳು ಎತ್ತರದಲ್ಲಿ ಚಿರತೆಗಳಿಗಿಂತ ಚಿಕ್ಕದಾಗಿರುತ್ತವೆ. ಅವುಗಳ ಕಾಲುಗಳು ಚಿಕ್ಕದಾಗಿರುತ್ತವೆ ಮತ್ತು ಅವುಗಳ ಉಗುರುಗಳು ಚಪ್ಪಟೆಯಾಗಿರುತ್ತವೆ, ಇದು ಈಜಲು ಸಹಾಯ ಮಾಡುತ್ತದೆ. ಜಾಗ್ವಾರ್‌ಗಳು ಜಲಚರ ಪರಭಕ್ಷಕಗಳಾಗಿವೆ, ಚಿರತೆಗಳಿಗಿಂತ ಹೆಚ್ಚು ಅಪಾಯಕಾರಿ. ಚಿರತೆಗಳು ಭೂಮಿಯಲ್ಲಿ ಮತ್ತು ಹೆಚ್ಚಾಗಿ ಮರಗಳನ್ನು ಹತ್ತುವುದರ ಮೂಲಕ ಬೇಟೆಯಾಡುತ್ತವೆ. ಜಾಗ್ವಾರ್‌ ನೀರಿನಲ್ಲೂ ಸಹ ಬೇಟೆಯಾಡುತ್ತವೆ.
  • ಜಾಗ್ವಾರ್‌ಗಳು ಚಿರತೆಗಳಿಗಿಂತ ದೊಡ್ಡ ಬಾಯಿಯನ್ನು ಹೊಂದಿರುತ್ತವೆ, ಭಾರವಾಗಿರುತ್ತವೆ ಮತ್ತು ಹೆಚ್ಚು ಸ್ನಾಯುಗಳನ್ನು ಹೊಂದಿರುತ್ತವೆ, ಆದರೆ ಚಿರತೆಗಳು ತೆಳ್ಳಗಿರುತ್ತವೆ ಮತ್ತು ಚುರುಕಾಗಿರುತ್ತವೆ.
  • ಜಾಗ್ವಾರ್ ಚಿರತೆ ಮತ್ತು ಚೀತಾ ಎರಡಕ್ಕಿಂತ ಬಲಶಾಲಿ, ಭಾರ ಮತ್ತು ಹೆಚ್ಚು ಶಕ್ತಿಶಾಲಿಯಾಗಿದೆ. ಅದರ ದವಡೆಗಳು ಎಷ್ಟು ಬಲವಾಗಿರುತ್ತವೆ ಎಂದರೆ ಅದು ಆಮೆಯ ಚಿಪ್ಪನ್ನು ಸಹ ಸುಲಭವಾಗಿ ಮುರಿಯುತ್ತದೆ. ಜಾಗ್ವಾರ್‌ಗಳು ಯಾವಾಗಲೂ ತಾವು ಬೇಟೆಯಾಡುವ ಪ್ರಾಣಿಯ ತಲೆ ಬುರುಡಡೆಯನ್ನೇ ಕಚ್ಚುತ್ತವೆ.
  • ಜಾಗ್ವಾರ್ ಕೆಲವೊಮ್ಮೆ ಸಂಪೂರ್ಣವಾಗಿ ಕಪ್ಪು ಬಣ್ಣದಲ್ಲಿ (ಮೆಲನಿಸ್ಟಿಕ್) ಕಂಡುಬರುತ್ತದೆ, ಇದನ್ನು ‘ಬ್ಲ್ಯಾಕ್ ಪ್ಯಾಂಥರ್’ ಎಂದು ಕರೆಯಲಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಮಾಲಾಶ್ರೀ ಅಂಚನ್​
ಮಾಲಾಶ್ರೀ ಅಂಚನ್​

ಮಾಲಾಶ್ರೀ ಅಂಚನ್- ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದವರು. ಸಮೂಹ ಸಂವಹನ ಮತ್ತು ಪತ್ರಿಕೋದ್ಯಮದಲ್ಲಿ (MCJ) ಸ್ನಾತಕೋತ್ತರ ಪದವಿಧರೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಹೆಚ್ಚಿನ ಒಲವನ್ನು ಹೊಂದಿದ್ದು, ಪತ್ರಿಕಾ ರಂಗದಲ್ಲಿ 2 ವರ್ಷಗಳ ಅನುಭವವಿದೆ. ಜೀವನಶೈಲಿ, ವೈರಲ್ ಸುದ್ದಿಗಳನ್ನು ಬರೆಯುವುದರಲ್ಲಿ ಆಸಕ್ತಿಯನ್ನು ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುತ್ತಿದ್ದಾರೆ.

Read More