Important Days in December 2026: ವರ್ಷದ ಕೊನೆಯ ತಿಂಗಳು ಡಿಸೆಂಬರ್‌ನಲ್ಲಿ ಆಚರಿಸಲಾಗುವ ಪ್ರಮುಖ ದಿನಾಚರಣೆಗಳಿವು
ಡಿಸೆಂಬರ್ ವರ್ಷದ ಹನ್ನೆರಡನೇ ಮತ್ತು ಕೊನೆಯ ತಿಂಗಳು. ಕ್ರಿಸ್ಮಸ್ ಮಾತ್ರವಲ್ಲ ಈ ತಿಂಗಳು ರಾಷ್ಟ್ರೀಯ ಸ್ಮರಣಾರ್ಥಗಳು ಮತ್ತು ಜಾಗತಿಕ ಜಾಗೃತಿ ದಿನಗಳ ಮಿಶ್ರಣವಾಗಿದೆ. ವರ್ಷದ ಕೊನೆಯ ತಿಂಗಳು ಭಾರತೀಯ ನೌಕಾಪಡೆ ದಿನ, ವಿಜಯ ದಿವಸ, ರಾಷ್ಟ್ರೀಯ ಗಣಿತ ದಿನ, ಸೇರಿದಂತೆ ಹಲವು ಮಹತ್ವದ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ದಿನಾಚರಣೆಗಳನ್ನು ಒಳಗೊಂಡಿದೆ. ಈ ತಿಂಗಳಲ್ಲಿ ಆಚರಿಸಲಾಗುವ ಪ್ರಮುಖ ಕಾರ್ಯಕ್ರಮಗಳ ಪಟ್ಟಿ ಇಲ್ಲಿದೆ.

ಸಾಂದರ್ಭಿಕ ಚಿತ್ರ Image Credit source: vecteezy
ಮಾನವ ಹಕ್ಕುಗಳು, ಪರಿಸರ ಸಂರಕ್ಷಣೆ, ಆರೋಗ್ಯ ರಕ್ಷಣೆ, ಸಾಮಾಜಿಕ ನ್ಯಾಯ, ಶಿಕ್ಷಣ ಮತ್ತು ರಾಷ್ಟ್ರೀಯ ಹೆಮ್ಮೆಯಂತಹ ಹಲವಾರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಕಾರ್ಯಕ್ರಮಗಳನ್ನು ವರ್ಷದ ಪ್ರತಿ ತಿಂಗಳು ಕೂಡ ಆಚರಿಸಲಾಗುತ್ತದೆ. ವರ್ಷದ ಕೊನೆಯ ತಿಂಗಳಾದ ಡಿಸೆಂಬರ್‌ನಲ್ಲೂ ಐತಿಹಾಸಿಕ ಸ್ಮರಣೆ, ಸಾರ್ವಜನಿಕ ಅರಿವು, ಜಾಗತಿಕ ಜಾಗೃತಿ ಸೇರಿದಂತೆ ಒಂದಷ್ಟು ಪ್ರಮುಖ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ದಿನಾಚರಣೆಗಳನ್ನು ಆಚರಿಸಲಾಗುತ್ತದೆ. ವಿಶ್ವ ಏಡ್ಸ್ ದಿನ, ಸೀರೆ ದಿನದಿಂದ ಹಿಡಿದು ಕ್ರಿಸ್‌ಮಸ್ ವರೆಗೆ ವರ್ಷದ ಕೊನೆಯ ತಿಂಗಳಾದ ಡಿಸೆಂಬರ್‌ನಲ್ಲಿ ಯಾವೆಲ್ಲಾ ಪ್ರಮುಖ ಕಾರ್ಯಕ್ರಮಗಳನ್ನು ಆಚರಿಸಲಾಗುತ್ತದೆ ಎಂಬ ಪೂರ್ಣ ವಿವರ ಇಲ್ಲಿದೆ.
ಡಿಸೆಂಬರ್ ತಿಂಗಳಲ್ಲಿನ ಪ್ರಮುಖ ರಾಷ್ಟ್ರಿಯ, ಅಂತಾರಾಷ್ಟ್ರೀಯ ಕಾರ್ಯಕ್ರಮಗಳ ಪಟ್ಟಿ:
- ಡಿಸೆಂಬರ್ 1: ವಿಶ್ವ ಏಡ್ಸ್ ದಿನ
- ಡಿಸೆಂಬರ್ 2: ರಾಷ್ಟ್ರೀಯ ಮಾಲಿನ್ಯ ನಿಯಂತ್ರಣ ದಿನ
- ಡಿಸೆಂಬರ್ 2: ಅಂತಾರಾಷ್ಟ್ರೀಯ ಗುಲಾಮಗಿರಿ ನಿರ್ಮೂಲನೆ ದಿನ
- ಡಿಸೆಂಬರ್ 2: ವಿಶ್ವ ಕಂಪ್ಯೂಟರ್ ಸಾಕ್ಷರತಾ ದಿನ
- ಡಿಸೆಂಬರ್ 3: ವಿಶ್ವ ವಿಕಲಚೇತನರ ದಿನ
- ಡಿಸೆಂಬರ್ 4: ಭಾರತೀಯ ನೌಕಾಪಡೆ ದಿನ
- ಡಿಸೆಂಬರ್ 4: ವನ್ಯಜೀವಿ ಸಂರಕ್ಷಣಾ ದಿನ
- ಡಿಸೆಂಬರ್ 5: ಅಂತಾರಾಷ್ಟ್ರೀಯ ಸ್ವಯಂಸೇವಕರ ದಿನ
- ಡಿಸೆಂಬರ್ 5: ವಿಶ್ವ ಮಣ್ಣು ದಿನ
- ಡಿಸೆಂಬರ್ 7: ಸಶಸ್ತ್ರ ಪಡೆಗಳ ಧ್ವಜ ದಿನ
- ಡಿಸೆಂಬರ್ 7: ಅಂತರರಾಷ್ಟ್ರೀಯ ನಾಗರಿಕ ವಿಮಾನಯಾನ ದಿನ
- ಡಿಸೆಂಬರ್ 9: ಅಂತಾರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನ
- ಡಿಸೆಂಬರ್ 10: ಮಾನವ ಹಕ್ಕುಗಳ ದಿನ
- ಡಿಸೆಂಬರ್ 1: ಅಂತಾರಾಷ್ಟ್ರೀಯ ಪರ್ವತ ದಿನ
- ಡಿಸೆಂಬರ್ 11: ಯುನಿಸೆಫ್ ದಿನ
- ಡಿಸೆಂಬರ್ 12: ಸಾರ್ವತ್ರಿಕ ಆರೋಗ್ಯ ವಿಮಾ ದಿನ
- ಡಿಸೆಂಬರ್ 13: ರಾಷ್ಟ್ರೀಯ ಕುದುರೆ ದಿನ
- ಡಿಸೆಂಬರ್ 14: ರಾಷ್ಟ್ರೀಯ ಇಂಧನ ಸಂರಕ್ಷಣಾ ದಿನ
- ಡಿಸೆಂಬರ್ 16: ವಿಜಯ ದಿವಸ
- ಡಿಸೆಂಬರ್ 18: ಅಲ್ಪಸಂಖ್ಯಾತರ ಹಕ್ಕುಗಳ ದಿನ
- ಡಿಸೆಂಬರ್ 18: ಅಂತಾರಾಷ್ಟ್ರೀಯ ವಲಸಿಗರ ದಿನ
- ಡಿಸೆಂಬರ್ 20: ಅಂತಾರಾಷ್ಟ್ರೀಯ ಮಾನವ ಒಗ್ಗಟ್ಟಿನ ದಿನ
- ಡಿಸೆಂಬರ್ 21: ವಿಶ್ವ ಸೀರೆ ದಿನ
- ಡಿಸೆಂಬರ್ 21: ವಿಶ್ವ ಧ್ಯಾನ ದಿನ
- ಡಿಸೆಂಬರ್ 21: ವಿಶ್ವ ಬ್ಯಾಸ್ಕೆಟ್‌ಬಾಲ್ ದಿನ
- ಡಿಸೆಂಬರ್ 22: ರಾಷ್ಟ್ರೀಯ ಗಣಿತ ದಿನ
- ಡಿಸೆಂಬರ್ 23: ರಾಷ್ಟ್ರೀಯ ರೈತರ ದಿನ
- ಡಿಸೆಂಬರ್ 24: ರಾಷ್ಟ್ರೀಯ ಗ್ರಾಹಕ ಹಕ್ಕುಗಳ ದಿನ
- ಡಿಸೆಂಬರ್ 25: ಕ್ರಿಸ್‌ಮಸ್
- ಡಿಸೆಂಬರ್ 25: ಉತ್ತಮ ಆಡಳಿತ ದಿನ
- ಡಿಸೆಂಬರ್ 26: ವೀರ ಬಾಲದಿವಸ
- ಡಿಸೆಂಬರ್ 26: ಬಾಕ್ಸಿಂಗ್ ಡೇ
- ಡಿಸೆಂಬರ್ 27: ಅಂತಾರಾಷ್ಟ್ರೀಯ ಸಾಂಕ್ರಾಮಿಕ ಸನ್ನದ್ಧತಾ ದಿನ
- ಡಿಸೆಂಬರ್ 31: ಹೊಸ ವರ್ಷದ ಮುನ್ನಾದಿನ
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Follow Us




