ಅನುಭವ ಮಂಟಪ ಉತ್ಸವದಲ್ಲಿ ಧರ್ಮ ದಂಗಲ್: ಕಾರ್ಯಕ್ರಮದಿಂದ ಅರ್ಧಕ್ಕೆ ಎದ್ದು ಹೋದ ವಿಜಯೇಂದ್ರ
ಬಸವಕಲ್ಯಾಣದಲ್ಲಿ ಇಂದಿನಿಂದ (ನವೆಂಬರ್ 28) 2 ದಿನದ 47ನೇ ಅನುಭವ ಮಂಟಪ ಉತ್ಸವದಲ್ಲಿ ಧರ್ಮ ದಂಗಲ್ ನಡೆದಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕಾರ್ಯಕ್ರದಿಂದ ಅರ್ಧಕ್ಕೆ ಎದ್ದು ಹೋಗಿರುವ ಪ್ರಸಂಗ ನಡೆದಿದೆ. ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಆಯೋಜಿಸಲಾಗಿರುವ 47ನೇ ಅನುಭವ ಮಂಟಪ ಉತ್ಸವಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಚಾಲನೆ ನೀಡಿದರು. ಬಳಿಕ ಮಾತನಾಡುವ ವೇಳೆ ಧರ್ಮ ದಂಗಲ್ ಶುರುವಾಗಿದೆ.
ಬೀದರ್, ನವೆಂಬರ್ 28: ಬಸವಕಲ್ಯಾಣದಲ್ಲಿ ಇಂದಿನಿಂದ (ನವೆಂಬರ್ 28) 2 ದಿನದ 47ನೇ ಅನುಭವ ಮಂಟಪ ಉತ್ಸವದಲ್ಲಿ ಧರ್ಮ ದಂಗಲ್ ನಡೆದಿದ್ದು, ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕಾರ್ಯಕ್ರದಿಂದ ಅರ್ಧಕ್ಕೆ ಎದ್ದು ಹೋಗಿರುವ ಪ್ರಸಂಗ ನಡೆದಿದೆ. ಬೀದರ್ ಜಿಲ್ಲೆಯ ಬಸವಕಲ್ಯಾಣದಲ್ಲಿ ಆಯೋಜಿಸಲಾಗಿರುವ 47ನೇ ಅನುಭವ ಮಂಟಪ ಉತ್ಸವಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಚಾಲನೆ ನೀಡಿದರು. ಬಳಿಕ ಮಾತನಾಡುವ ವೇಳೆ ಧರ್ಮ ದಂಗಲ್ ಶುರುವಾಗಿದೆ.
ಹೌದು.. ವಿಜಯೇಂದ್ರ ಉದ್ಘಾಟನಾ ಭಾಷಣದ ವೇಳೆ ಲಿಂಗಾಯತ ಪ್ರತ್ಯೇಕ ಧರ್ಮ ಬೇಡ, ನಾವೆಲ್ಲರೂ ಹಿಂದೂಗಳು ಎನ್ನುತ್ತಿದ್ದಂತೆಯೇ ವಿರೋಧಗಳು ವ್ಯಕ್ತವಾಗಿದ್ದು, ಪ್ರತ್ಯೇಕ ಲಿಂಗಾಯತ ಧರ್ಮ ಆಗಬೇಕು ಎಂದು ವಿಜಯೇಂದ್ರ ವಿರುದ್ಧ ಬಸವಾಭಿಮಾನಿಗಳು ಘೋಷಣೆ ಕೂಗಿ ಭಾಷಣಕ್ಕೆ ಅಡ್ಡಿಪಡಿಸಿದರು. ಈ ವೇಳೆ ಮಾತಿನ ಚಕಮಕಿ, ಗಲಾಟೆ-ಗದ್ದಲ ಉಂಟಾಗಿದ್ದು, ಕೊನೆಗೆ ವಿಜಯೇಂದ್ರ ಕಾರ್ಯಕ್ರಮದಿಂದ ಅರ್ಧಕ್ಕೆ ಎದ್ದು ಹೋದರು.

