AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸುರೇಶ್ ನಾಯಕ್

ಸುರೇಶ್ ನಾಯಕ್

ಜಿಲ್ಲಾ ವರದಿಗಾರ - TV9 Kannada

suresh.naik@tv9.com

ಸುರೇಶ ನಾಯಕ ಮೂಲತಃ, ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಮೇಲ್ಮನಹಟ್ಟಿ ಗ್ರಾಮದರು. ಓದಿದ್ದು ಪತ್ರಿಕೋದ್ಯಮದಲ್ಲಿ ಡಿಪ್ಲೋಮಾ ಪದವಿ ಹಾಗೂ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 2009 ರಿಂದ ಅಂದರೆ ಕಳೆದ 16 ವರ್ಷದಿಂದ ದೃಷ್ಯ ಮಾಧ್ಯಮ ಕ್ಷೇತ್ರದಲ್ಲಿದ್ದು ಸಮಯ ಸುದ್ದಿ ವಾಹಿನಿಯ ಇನ್ ಪೂಟ್ ವಿಭಾಗದಲ್ಲಿ, ಜೊತೆಗೆ ಕಸ್ತೂರಿ ಸುದ್ದಿವಾಹಿನಿಯ ಹುಬ್ಬಳ್ಳಿ ವರದಿಗಾರನಾಗಿ ನಾಲ್ಕು ವರ್ಷ ಕೆಲಸ ಮಾಡಿದ ಅನುಭವವಿದೆ. 2014 ಪೆಬ್ರುವರಿ 01 ರಿಂದ ಟಿವಿ9 ಸುದ್ದಿವಾಹಿನಿಯಲ್ಲಿ ಕೆಲಸ ಮಾಡುತ್ತಿದ್ದು, 10 ವರ್ಷ ಪೂರೈಸಿದ್ದಾರೆ. ಟಿವಿ9 ನ ಆರಂಭದಲ್ಲಿ ಬಾಗಲಕೋಟೆ ಜಿಲ್ಲೆಯ ವರದಿಗಾರನಾಗಿ ಸಧ್ಯ ಬೀದರ್ ಜಿಲ್ಲೆಯ ವರದಿಗಾರನಾಗಿ ಕೆಲಸ ಮಾಡುತ್ತಿದ್ದಾರೆ. ಕೃಷಿ, ಮಾನವೀಯ ಕಳಕಳಿಯ ವರದಿ, ರೈತರ ಸಮಸ್ಯೆಗಳ ಕುರಿತು ಹೆಚ್ಚಿನ ಒತ್ತು ಕೊಟ್ಟು ತಮ್ಮ ಸುದ್ದಿಯ ಮೂಲಕ ನೊಂದವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿದ್ದಾರೆ. ಕಾಡು ಸುತ್ತೋದು, ಸಂಗೀತ ಕೇಳೋದು, ಇವರ ಹವ್ಯಾಸವಾಗಿದೆ…

Read More
ಮಾಜಿ ಸಿಎಂ ಸಿದ್ದರಾಮಯ್ಯ ಮೇಲಿನ ಒಲವು: ಮಗುವಿಗೆ ‘ಅನ್ನರಾಮಯ್ಯ’ ಎಂದು ನಾಮಕರಣ ಮಾಡಿದ ಅಭಿಮಾನಿ

ಮಾಜಿ ಸಿಎಂ ಸಿದ್ದರಾಮಯ್ಯ ಮೇಲಿನ ಒಲವು: ಮಗುವಿಗೆ ‘ಅನ್ನರಾಮಯ್ಯ’ ಎಂದು ನಾಮಕರಣ ಮಾಡಿದ ಅಭಿಮಾನಿ

ಬೀದರ್‌ನಲ್ಲಿ ಸಿದ್ದರಾಮಯ್ಯ ಅವರ ಅನ್ನಭಾಗ್ಯ ಯೋಜನೆಯ ಅಭಿಮಾನಿಯಾಗಿ, ದಂಪತಿಯೊಬ್ಬರು ತಮ್ಮ ನವಜಾತ ಗಂಡು ಮಗುವಿಗೆ 'ಅನ್ನರಾಮಯ್ಯ' ಎಂದು ಹೆಸರಿಟ್ಟಿದ್ದಾರೆ. ಇದು ಜನಪರ ಯೋಜನೆಗಳು ಜನರ ಮನಸ್ಸಿನಲ್ಲಿ ಹೇಗೆ ಅಚ್ಚಳಿಯದೆ ಉಳಿಯುತ್ತವೆ ಎಂಬುದಕ್ಕೆ ಉತ್ತಮ ನಿದರ್ಶನವಾಗಿದೆ. ಈ ವಿಶಿಷ್ಟ ನಾಮಕರಣವು ಜಿಲ್ಲಾದ್ಯಂತ ಮೆಚ್ಚುಗೆಗೆ ಪಾತ್ರವಾಗಿದೆ, ಸಿದ್ದರಾಮಯ್ಯರಿಗೆ ಅಪರೂಪದ ಗೌರವ ಸೂಚಿಸಿದೆ.

ಡೀಸೆಲ್​ ಟ್ಯಾಂಕರ್​​ನಲ್ಲಿ ತಾಂತ್ರಿಕ ದೋಷ, ಬಸ್​ ಸಂಚಾರ ಸ್ಥಗಿತ: ಪ್ರಯಾಣಿಕರು ಪರದಾಟ

ಡೀಸೆಲ್​ ಟ್ಯಾಂಕರ್​​ನಲ್ಲಿ ತಾಂತ್ರಿಕ ದೋಷ, ಬಸ್​ ಸಂಚಾರ ಸ್ಥಗಿತ: ಪ್ರಯಾಣಿಕರು ಪರದಾಟ

ಡೀಸೆಲ್​ ಟ್ಯಾಂಕರ್​​ನಲ್ಲಿ ತಾಂತ್ರಿಕ ದೋಷ ಹಿನ್ನೆಲೆಯಲ್ಲಿ ಡೀಸೆಲ್ ಇಲ್ಲದೆ ಬಸ್​ ಸಂಚಾರ ಸ್ಥಗಿತವಾಗಿದೆ. ಬೀದರ್ ಜಿಲ್ಲೆ ಭಾಲ್ಕಿ KKRTC ಡಿಪೋದಲ್ಲಿ  ಡೀಸೆಲ್ ಟ್ಯಾಂಕರ್‌ನ ಲಾಕ್ ತೆರೆಯಲು ಸಾಧ್ಯವಾಗುತ್ತಿಲ್ಲ.  ಇದರಿಂದ ಡೀಸೆಲ್ ಇಲ್ಲದೇ ಸಾರಿಗೆ ಬಸ್​​​ಗಳು   ನಿಂತಲ್ಲೇ ನಿಂತುಕೊಂಡಿವೆ. ಭಾಲ್ಕಿಯಿಂದ ಯಾವುದೇ ಬಸ್ ಸಂಚಾರವಾಗುತ್ತಿಲ್ಲ. ಇದರಿಂದ ಪ್ರಯಾಣಿಕರು ಪರದಾಡುವಂತಾಗಿದೆ. ಅದರಲ್ಲೂ ಭಾಲ್ಕಿಯಿಂದ ಸುತ್ತಮುತ್ತಲಿನ ಹಳ್ಳಗೆ ಹೋಗುವ ಪ್ರಯಾಣಿಕರಿಗೆ ಸಾಕಷ್ಟು ತೊಂದರೆಯಾಗಿದೆ. ಕೂಡಲೇ ಸಡಿಪಡಿಸಿ ಬಸ್ ಸಂಚಾರಕ್ಕೆ ಅನುವು ಮಾಡಿಕೊಡಬೇಕೆಂದು ಪ್ರಯಾಣಿಕರು ಆಗ್ರಹಿಸಿದ್ದಾರೆ.

ಪಾಕಿಸ್ತಾನಿ ಉಗ್ರರೊಂದಿಗೆ ಸಂಪರ್ಕ ಆರೋಪ: ಬೀದರ್‌ನ ವಿಶಾಲ್ ಮೈತ್ರೆ ಸಹಿತ ಏಳು ಜನರ ವಿರುದ್ಧ FIR

ಪಾಕಿಸ್ತಾನಿ ಉಗ್ರರೊಂದಿಗೆ ಸಂಪರ್ಕ ಆರೋಪ: ಬೀದರ್‌ನ ವಿಶಾಲ್ ಮೈತ್ರೆ ಸಹಿತ ಏಳು ಜನರ ವಿರುದ್ಧ FIR

ಪಾಕಿಸ್ತಾನ ಮೂಲದ ಉಗ್ರ ಸಂಘಟನೆಗಳೊಂದಿಗೆ ಸಂಪರ್ಕ ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ಬೀದರ್ ಜಿಲ್ಲೆಯ ಭಾಲ್ಕಿಯ ವಿಶಾಲ್ ಮೈತ್ರೆಯನ್ನು ತೀವ್ರವಾಗಿ ತನಿಖೆಗೆ ಒಳಪಡಿಸಲಾಗಿದೆ. ವಿಶಾಲ್ ಮೈತ್ರೆ ಸೇರಿದಂತೆ ಒಟ್ಟು ಏಳು ಜನರ ವಿರುದ್ಧ ಎಫ್‌ಐಆರ್ ಆಗಿದ್ದು, ಖಡಕ್ ಚಿಂಚೋಳಿ ಪೊಲೀಸ್ ಠಾಣೆಯಲ್ಲಿ ಸ್ವಯಂಪ್ರೇರಿತ ದೂರು ದಾಖಲಾಗಿದೆ. ಪಾಕಿಸ್ತಾನದ ಶಹಜಾದ್ ಭಟ್ಟಿ, ನೋಮಿ ಖಾನ್, ರಾನಾ ಹುನೈನ್, ಉತ್ತರ ಪ್ರದೇಶದ ಅಶು ಶರ್ಮ ಮತ್ತು ರಾಜೀವ್ ಹಾಗೂ ಬೀದರ್‌ನ ವಿಶಾಲ್ ಮೈತ್ರೆ ಸೇರಿದಂತೆ ಏಳು ಜನರನ್ನು ಈ ಪ್ರಕರಣದಲ್ಲಿ ಹೆಸರಿಸಲಾಗಿದೆ.

ಬೀದರ್‌ನ ಕೀರ್ತಿ ವೈರ್ ಮೆಶ್ ಪ್ಲಾಸ್ಟಿಕ್ ಗೋದಾಮಿಗೆ ಬೆಂಕಿ!

ಬೀದರ್‌ನ ಕೀರ್ತಿ ವೈರ್ ಮೆಶ್ ಪ್ಲಾಸ್ಟಿಕ್ ಗೋದಾಮಿಗೆ ಬೆಂಕಿ!

ಬೀದರ್ ತಾಲೂಕಿನ ಬೆಳ್ಳೂರು ಗ್ರಾಮದ ಬಳಿ ಇರುವ ಕೀರ್ತಿ ವೈರ್ ಮೆಶ್ ಪ್ಲಾಸ್ಟಿಕ್ ಕಚ್ಚಾ ಸಾಮಗ್ರಿ ಗೋದಾಮಿನಲ್ಲಿ ಭಾರಿ ಬೆಂಕಿ ಅನಾಹುತ ಸಂಭವಿಸಿದೆ. ಬೆಂಕಿಯ ಕೆನ್ನಾಲಿಗೆಗೆ ಸಂಪೂರ್ಣ ಗೋದಾಮು ಸುಟ್ಟು ಕರಕಲಾಗಿದ್ದು, ಪ್ಲಾಸ್ಟಿಕ್ ಕಚ್ಚಾವಸ್ತುಗಳೆಲ್ಲವೂ ನಾಶವಾಗಿವೆ. ದಟ್ಟ ಹೊಗೆ ಆವರಿಸಿದ್ದರಿಂದ ಸುತ್ತಮುತ್ತಲ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿತ್ತು. ಅಗ್ನಿಶಾಮಕ ದಳದವರು ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ.

ಬೀದರ್ ಪೊಲೀಸರ ಭರ್ಜರಿ ಕಾರ್ಯಾಚರಣೆ: 10 ನಾಡ ಪಿಸ್ತೂಲ್, 36 ಗುಂಡುಗಳು ಪತ್ತೆ

ಬೀದರ್ ಪೊಲೀಸರ ಭರ್ಜರಿ ಕಾರ್ಯಾಚರಣೆ: 10 ನಾಡ ಪಿಸ್ತೂಲ್, 36 ಗುಂಡುಗಳು ಪತ್ತೆ

ಬೀದರ್ ಪೊಲೀಸರು ಭರ್ಜರಿ ಕಾರ್ಯಚರಣೆ ನಡೆಸಿದ್ದು, ಈ ವೇಳೆ 10 ನಾಡ ಪಿಸ್ತೂಲ್, 36 ಜೀವಂತ ಗುಂಡುಗಳು ಹಾಗೂ ಐದು ತಲವಾರುಗಳು ಪತ್ತೆಯಾಗಿವೆ. ಇನ್ನು ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಮಾಡುವ ಹುಚ್ಚಿಗಾಗಿ ನಾಡ ಪಿಸ್ತೂಲ್ ಖರೀದಿಸಿದ್ದ ಆರೋಪದ ಮೇಲೆ ಬೀದರ್‌ನ ಮೂವರು ಯುವಕರನ್ನೂ ಪೊಲೀಸರು ಬಂಧಿಸಿದ್ದಾರೆ. ಅಲ್ಲದೇ ಇದರ ಹಿಂದಿನ ಸೂತ್ರದಾರ ಮಹಾರಾಷ್ಟ್ರದ ಮೂಲದ ವ್ಯಕ್ತಿ ಎನ್ನುವುದು ಬೆಳಕಿಗೆ ಬಂದಿದೆ.

ಕರ್ನಾಟಕ ಟು ಪಾಕಿಸ್ತಾನ: ಉಗ್ರನ ಜತೆ ಸಂಪರ್ಕ ಶಂಕೆ ಮೇರೆಗೆ ಬೀದರ್​​​ ಯುವಕ ಅರೆಸ್ಟ್

ಕರ್ನಾಟಕ ಟು ಪಾಕಿಸ್ತಾನ: ಉಗ್ರನ ಜತೆ ಸಂಪರ್ಕ ಶಂಕೆ ಮೇರೆಗೆ ಬೀದರ್​​​ ಯುವಕ ಅರೆಸ್ಟ್

ದೇಶದಲ್ಲಿ ವಿಧ್ವಂಸಕ ಕೃತ್ಯ ನಡೆಸಲು ಸಂಚು ಆರೋಪ ಹಿನ್ನೆಲೆ ಇತ್ತೀಚೆಗೆ ಚಿಕ್ಕಬಳ್ಳಾಪುರದಲ್ಲಿ ಇಬ್ಬರನ್ನ ಬಂಧಿಸಲಾಗಿತ್ತು. ಇದೀಗ ಉಗ್ರನ ಜತೆ ಸಂಪರ್ಕ ಶಂಕೆ ಹಿನ್ನೆಲೆ ಬೀದರ್ ಮೂಲದ​ ಯುವಕನನ್ನ ಎನ್​ಐಎ ತಂಡ ಬಂಧಿಸಿದೆ. ಇನ್ನು ಬಂಧಿಸಲ್ಪಟ್ಟ ಯುವಕ ಅಪರಾಧ ಹಿನ್ನೆಲೆ ಹೊಂದಿರುವ ಮಾಹಿತಿ ಕೂಡ ಇದೆ.

ಇಡೀ ಊರಿಗೆ ಉಪಕಾರ ಮಾಡಿ ಕಂಗಾಲಾದ ರೈತರು: ಕೆರೆಗಾಗಿ ಭೂಮಿ ಕೊಟ್ಟವರಿಗೆ 5 ದಶಕವಾದ್ರೂ ಸಿಕ್ಕಿಲ್ಲ ಪರಿಹಾರ

ಇಡೀ ಊರಿಗೆ ಉಪಕಾರ ಮಾಡಿ ಕಂಗಾಲಾದ ರೈತರು: ಕೆರೆಗಾಗಿ ಭೂಮಿ ಕೊಟ್ಟವರಿಗೆ 5 ದಶಕವಾದ್ರೂ ಸಿಕ್ಕಿಲ್ಲ ಪರಿಹಾರ

ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ಹಾಲಹಿಪ್ಪರ್ಗಾ ರೈತರು ಕೆರೆ ನಿರ್ಮಾಣಕ್ಕೆ ಫಲವತ್ತಾದ ಭೂಮಿ ನೀಡಿ ಐದು ದಶಕಗಳಾದರೂ ಪೂರ್ಣ ಪರಿಹಾರ ದೊರೆತಿಲ್ಲ. ಸರ್ಕಾರ ಮೊದಲ ಕಂತು ಮಾತ್ರ ಪಾವತಿಸಿ, ಉಳಿದ ಹಣ ನೀಡದೆ ಅನ್ಯಾಯ ಎಸಗಿದೆ. ಇದರ ಜೊತೆ ಕೆರೆಯ ಹಿನ್ನೀರಿನಿಂದ ಬೆಳೆ ನಷ್ಟ ಅನುಭವಿಸುತ್ತಿದ್ದರೂ ಪರಿಹಾರವಿಲ್ಲದೆ ಪರದಾಡುತ್ತಿದ್ದಾರೆ.

ಬೀದರ್​ನಲ್ಲಿ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ!

ಬೀದರ್​ನಲ್ಲಿ ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ ಮಹಿಳೆ!

ಬೀದರ್‌ನ ಶ್ಯಾಮರಾಜಪುರ ಬಡಾವಣೆಯ ಫರೀನಾ ಬೇಗಂ ಬ್ರಿಮ್ಸ್ ಆಸ್ಪತ್ರೆಯಲ್ಲಿ ಸಿಜೇರಿಯನ್ ಮೂಲಕ ಒಂದೇ ಹೆರಿಗೆಯಲ್ಲಿ ಮೂವರು ಮಕ್ಕಳಿಗೆ ಜನ್ಮ ನೀಡಿದ್ದಾರೆ. ತಲಾ ಒಂದೂವರೆ ಕೆಜಿ ತೂಕವಿದ್ದ ಎರಡು ಹೆಣ್ಣು ಹಾಗೂ ಒಂದು ಗಂಡು ಮಗುವಿಗೆ ಬ್ರಿಮ್ಸ್ ವೈದ್ಯರು ನೀಡಿದ ಅತ್ಯುತ್ತಮ ಆರೈಕೆಯ ನಂತರ ತಾಯಿ ಮತ್ತು ಶಿಶುಗಳು ಸಂಪೂರ್ಣ ಚೇತರಿಸಿಕೊಂಡಿದ್ದು, ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ.

ಶಾಲೆಯಿದೆ, ರಸ್ತೆಯಿಲ್ಲ: ಮಳೆಗಾಲದಲ್ಲಿ ಕೆಸರುಮಯ ರಸ್ತೆ, ಆಟದ ಮೈದಾನವೂ ಇಲ್ಲ: ಸರ್ಕಾರಿ ಶಾಲೆಯ ಬಡ ಮಕ್ಕಳ ಆತಂಕದ ಪಯಣ

ಶಾಲೆಯಿದೆ, ರಸ್ತೆಯಿಲ್ಲ: ಮಳೆಗಾಲದಲ್ಲಿ ಕೆಸರುಮಯ ರಸ್ತೆ, ಆಟದ ಮೈದಾನವೂ ಇಲ್ಲ: ಸರ್ಕಾರಿ ಶಾಲೆಯ ಬಡ ಮಕ್ಕಳ ಆತಂಕದ ಪಯಣ

ಬೀದರ್‌ನ ಜನವಾಡ ಆದರ್ಶ ವಿದ್ಯಾಲಯದ ವಿದ್ಯಾರ್ಥಿಗಳು ರಸ್ತೆ ಮತ್ತು ಆಟದ ಮೈದಾನದ ಕೊರತೆಯಿಂದ ಪ್ರತಿನಿತ್ಯ ಪರದಾಡುತ್ತಿದ್ದಾರೆ. 542 ವಿದ್ಯಾರ್ಥಿಗಳಿರುವ ಈ ಶಾಲೆಗೆ ಮೂರು ಕಿಲೋಮೀಟರ್ ದೂರದಿಂದ ಕಚ್ಚಾರಸ್ತೆಯಲ್ಲಿ ನಡೆದು ಬರಬೇಕು. ಉತ್ತಮ ಶೈಕ್ಷಣಿಕ ಸಾಧನೆ ತೋರುತ್ತಿದ್ದರೂ, 5-6 ವರ್ಷಗಳಿಂದ ಈ ಸಮಸ್ಯೆಗಳಿಗೆ ಸ್ಪಂದನೆ ಸಿಕ್ಕಿಲ್ಲ.

ಖಾಸಗಿ ಶಾಲೆಗಳಿಗೆ ಸವಾಲೆಸೆದ ಬೀದರ್​ನ ಸರ್ಕಾರಿ ಶಾಲೆ; ಶಿಕ್ಷಕರ ಸ್ವಂತ ಹಣದಲ್ಲೇ ಸ್ಕೂಲ್ ಅಭಿವೃದ್ಧಿ!

ಖಾಸಗಿ ಶಾಲೆಗಳಿಗೆ ಸವಾಲೆಸೆದ ಬೀದರ್​ನ ಸರ್ಕಾರಿ ಶಾಲೆ; ಶಿಕ್ಷಕರ ಸ್ವಂತ ಹಣದಲ್ಲೇ ಸ್ಕೂಲ್ ಅಭಿವೃದ್ಧಿ!

ಬೀದರ್ ತಾಲೂಕಿನ ಯಾಕತಪುರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರು ಸ್ವಂತ ಹಣದಿಂದ ಶಾಲೆಯನ್ನು ಉದ್ಯಾನವನದಂತೆ ಕಂಗೊಳಿಸುವಂತೆ ಮಾಡಿದ್ದಾರೆ. 300ಕ್ಕೂ ಹೆಚ್ಚು ಗಿಡಗಳು, ಆಕರ್ಷಕ ರೇಖಾಚಿತ್ರಗಳು ಹಾಗೂ ಉತ್ತಮ ಮೂಲಸೌಕರ್ಯಗಳ ಮೂಲಕ 182 ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುವ ಮೂಲಕ ಈ ಶಾಲೆ ಖಾಸಗಿ ಶಾಲೆಗಳಿಗೆ ಸೆಡ್ಡು ಹೊಡೆದು ಮಾದರಿಯಾಗಿ ಹೊರಹೊಮ್ಮಿದೆ.

ಬೀದರ್‌ನಲ್ಲಿ ವಿದ್ಯುತ್ ನೀಡಲು ಕಣ್ಣಾಮುಚ್ಚಾಲೆ: ಜೆಸ್ಕಾಂ ಕಚೇರಿ ಮುಂದೆ ರೈತರ ಬೃಹತ್ ಪ್ರತಿಭಟನೆ

ಬೀದರ್‌ನಲ್ಲಿ ವಿದ್ಯುತ್ ನೀಡಲು ಕಣ್ಣಾಮುಚ್ಚಾಲೆ: ಜೆಸ್ಕಾಂ ಕಚೇರಿ ಮುಂದೆ ರೈತರ ಬೃಹತ್ ಪ್ರತಿಭಟನೆ

ಬೀದರ್ ಜಿಲ್ಲೆಯ ಕಮಠಾಣ ಗ್ರಾಮದ ರೈತರು ಜೆಸ್ಕಾಂ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಸರ್ಕಾರ 7 ಗಂಟೆ ತ್ರೀ ಫೇಸ್ ವಿದ್ಯುತ್ ಭರವಸೆ ನೀಡಿದ್ದರೂ, ಕೇವಲ 4-5 ಗಂಟೆಗಳ ಕಾಲ ಅಸಮರ್ಪಕ ವಿದ್ಯುತ್ ಪೂರೈಕೆಯಿಂದ ನೀರಾವರಿಗೆ ತೀವ್ರ ತೊಂದರೆಯಾಗಿದೆ. ಬರಗಾಲದ ಪರಿಸ್ಥಿತಿಯಲ್ಲಿ ಬೆಳೆಗಳನ್ನು ರಕ್ಷಿಸಲು ನಿರಂತರ ವಿದ್ಯುತ್ ಬೇಕೆಂದು ರೈತರು ಆಗ್ರಹಿಸಿದ್ದಾರೆ.

ಬೀದರ್​ನಲ್ಲಿ ನಿವೃತ್ತ ಅಗ್ನಿಶಾಮಕ ಸಿಬ್ಬಂದಿ ಮನೆಯಲ್ಲಿ ಚಿನ್ನಾಭರಣ ಕಳ್ಳತನ

ಬೀದರ್​ನಲ್ಲಿ ನಿವೃತ್ತ ಅಗ್ನಿಶಾಮಕ ಸಿಬ್ಬಂದಿ ಮನೆಯಲ್ಲಿ ಚಿನ್ನಾಭರಣ ಕಳ್ಳತನ

ಬೀದರ್‌ನ ಶಿವನಗರದ ಪಾರ್ವತಿ ಲೇಔಟ್‌ನಲ್ಲಿ ನಿವೃತ್ತ ಅಗ್ನಿಶಾಮಕ ಸಿಬ್ಬಂದಿ ರಮೇಶ್ ಬಿರಾದಾರ್ ಅವರ ಮನೆಯಲ್ಲಿ ₹13.24 ಲಕ್ಷ ಮೌಲ್ಯದ ಚಿನ್ನಾಭರಣ ಕಳ್ಳತನವಾಗಿದೆ. ಕಳ್ಳರು ಮನೆಯ ಹಿಂಬಾಗಿಲು ಮುರಿದು ಒಳನುಗ್ಗಿ, ಮಲಗುವ ಕೋಣೆಯಲ್ಲಿದ್ದ ಎರಡು ಅಲ್ಮೇರಾಗಳಿಂದ ಚಿನ್ನ ಮತ್ತು ಬೆಳ್ಳಿ ಆಭರಣಗಳನ್ನು ಕದ್ದಿದ್ದಾರೆ. ನೂತನ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಏಷ್ಯನ್ ಗೇಮ್ಸ್ ಪದಕ ವಿಜೇತ ಕ್ರೀಡಾಪಟುಗಳನ್ನು ಸನ್ಮಾನಿಸಿದ ಪ್ರಧಾನಿ ಮೋದಿ
ಏಷ್ಯನ್ ಗೇಮ್ಸ್ ಪದಕ ವಿಜೇತ ಕ್ರೀಡಾಪಟುಗಳನ್ನು ಸನ್ಮಾನಿಸಿದ ಪ್ರಧಾನಿ ಮೋದಿ
‘ರಾಯ’, ‘ರಾವಣ’, ‘ರಾಜಾ ಹುಲಿ’ ಏನೇ ಆಗ್ಲಿ...’: ರಾಧಿಕಾ ಬಗ್ಗೆ ಯಶ್ ಮಾತು
‘ರಾಯ’, ‘ರಾವಣ’, ‘ರಾಜಾ ಹುಲಿ’ ಏನೇ ಆಗ್ಲಿ...’: ರಾಧಿಕಾ ಬಗ್ಗೆ ಯಶ್ ಮಾತು
ಬೆಂಗಳೂರಿಗೆ ಆಗಮಿಸಿದ ಕರ್ನಾಟಕದ ನೂತನ ರಾಜ್ಯಪಾಲೆ ಸುಧಾ ಯಾದವ್
ಬೆಂಗಳೂರಿಗೆ ಆಗಮಿಸಿದ ಕರ್ನಾಟಕದ ನೂತನ ರಾಜ್ಯಪಾಲೆ ಸುಧಾ ಯಾದವ್
ಮೈಸೂರು ದಸರಾ: ಜಂಬೂಸವಾರಿಯಲ್ಲಿ 12 ಆನೆಗಳು ಫೈನಲ್​​! ಯಾರಿಗೆ ಯಾವ ಸ್ಥಾನ?
ಮೈಸೂರು ದಸರಾ: ಜಂಬೂಸವಾರಿಯಲ್ಲಿ 12 ಆನೆಗಳು ಫೈನಲ್​​! ಯಾರಿಗೆ ಯಾವ ಸ್ಥಾನ?
ಮೈಸೂರಿನಲ್ಲಿ ಮಳೆ ರೌದ್ರಾವತಾರ! ಯುವ ದಸರಾ ಸ್ಥಗಿತ
ಮೈಸೂರಿನಲ್ಲಿ ಮಳೆ ರೌದ್ರಾವತಾರ! ಯುವ ದಸರಾ ಸ್ಥಗಿತ
‘ರಾಮಾಯಣ’ ಸಿನಿಮಾ ಟ್ರೈಲರ್ ಇವೆಂಟ್: ಲೈವ್ ಇಲ್ಲಿ ನೋಡಿ
‘ರಾಮಾಯಣ’ ಸಿನಿಮಾ ಟ್ರೈಲರ್ ಇವೆಂಟ್: ಲೈವ್ ಇಲ್ಲಿ ನೋಡಿ
ದಸರಾ ರಜೆಗೆ ಪ್ರವಾಸಿಗರ ದಂಡು: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್
ದಸರಾ ರಜೆಗೆ ಪ್ರವಾಸಿಗರ ದಂಡು: ಆಗುಂಬೆ ಘಾಟಿಯಲ್ಲಿ ಟ್ರಾಫಿಕ್ ಜಾಮ್
ಯಶ್​​ ಅವರ ನೋಡಲು ದೂರ-ದೂರದಿಂದ ಬಂದಿರುವ ಅಭಿಮಾನಿಗಳು
ಯಶ್​​ ಅವರ ನೋಡಲು ದೂರ-ದೂರದಿಂದ ಬಂದಿರುವ ಅಭಿಮಾನಿಗಳು
'ನಕ್ಸಲಿಸಂನ ಎಲ್ಲ ಕುರುಹನ್ನೂ ಅಳಿಸಿಹಾಕಬೇಕು'; ಅಮಿತ್ ಶಾ ಹೇಳಿಕೆ
'ನಕ್ಸಲಿಸಂನ ಎಲ್ಲ ಕುರುಹನ್ನೂ ಅಳಿಸಿಹಾಕಬೇಕು'; ಅಮಿತ್ ಶಾ ಹೇಳಿಕೆ
ಹಾರ್ಮುಜ್ ಜಲಸಂಧಿಯಲ್ಲಿ ಮುಳುಗಿದ ಹಡಗು; ಸಮುದ್ರದಲ್ಲಿ ತೇಲಾಡಿದ ಐಫೋನ್‌ಗಳು
ಹಾರ್ಮುಜ್ ಜಲಸಂಧಿಯಲ್ಲಿ ಮುಳುಗಿದ ಹಡಗು; ಸಮುದ್ರದಲ್ಲಿ ತೇಲಾಡಿದ ಐಫೋನ್‌ಗಳು