ಸ್ವಾತಂತ್ರ್ಯ ದಿನಾಚರಣೆ ವೇಳೆ ಅಸ್ವಸ್ಥಗೊಂಡ ಆಂಧ್ರ ಸಚಿವ
ತಿರುಪತಿಯಲ್ಲಿ 80ನೇ ಸ್ವಾತಂತ್ರ್ಯ ದಿನಾಚರಣೆ ವೇಳೆ ಆಂಧ್ರ ಸಚಿವ ಆನಂ ರಾಮನಾರಾಯಣ ರೆಡ್ಡಿ ಭಾಷಣ ಮಾಡುವಾಗ ದಿಢೀರ್ ಅಸ್ವಸ್ಥಗೊಂಡಿದ್ದಾರೆ. ಒಂದು ಗಂಟೆಗೂ ಹೆಚ್ಚು ಕಾಲ ನಿಂತು ಭಾಷಣ ಮಾಡುತ್ತಿದ್ದಾಗ ಅವರ ರಕ್ತದೊತ್ತಡ (ಬಿಪಿ) ಕುಸಿದಿದೆ. ತಕ್ಷಣವೇ ವೈದ್ಯಕೀಯ ಸಿಬ್ಬಂದಿ ಪ್ರಥಮ ಚಿಕಿತ್ಸೆ ನೀಡಿ, ಸದ್ಯ ಅವರ ಆರೋಗ್ಯ ಸ್ಥಿರವಾಗಿದೆ ಎಂದು ಖಚಿತಪಡಿಸಿದ್ದಾರೆ.
ತಿರುಪತಿ, ಆ.15: ಆಂಧ್ರಪ್ರದೇಶದ ಸಚಿವ ಆನಂ ರಾಮನಾರಾಯಣ ರೆಡ್ಡಿ ಅವರು 80ನೇ ಸ್ವಾತಂತ್ರ್ಯ ದಿನಾಚರಣೆ ಸಮಾರಂಭದಲ್ಲಿ ಭಾಷಣ ಮಾಡುವಾಗ ದಿಢೀರ್ ಅಸ್ವಸ್ಥಗೊಂಡ ಘಟನೆ ತಿರುಪತಿಯ ಪೊಲೀಸ್ ಪರೇಡ್ ಮೈದಾನದಲ್ಲಿ ನಡೆದಿದೆ. ಸ್ವಾತಂತ್ರ್ಯೋತ್ಸವದ ಅಂಗವಾಗಿ ಧ್ವಜಾರೋಹಣ ನೆರವೇರಿಸಿ, ಸತತ ಒಂದು ಗಂಟೆಯಿಂದ ನಿಂತುಕೊಂಡೇ ಭಾಷಣ ಮಾಡುತ್ತಿದ್ದ ಸಚಿವರಿಗೆ ರಕ್ತದೊತ್ತಡ (BP) ದಿಢೀರ್ ಕುಸಿದಿದ್ದರೆ. ಭಾಷಣ ಮುಂದುವರಿಸಲಾಗದೆ ಸಚಿವರು ಅಸ್ವಸ್ಥತೆಯನ್ನು ಅನುಭವಿಸಿದ ತಕ್ಷಣವೇ ವೇದಿಕೆಯಲ್ಲಿದ್ದ ಅಧಿಕಾರಿಗಳು ಹಾಗೂ ವೈದ್ಯಕೀಯ ಸಿಬ್ಬಂದಿ ಅವರ ನೆರವಿಗೆ ಧಾವಿಸಿದರು. ಸಚಿವರಿಗೆ ತಕ್ಷಣವೇ ಪ್ರಥಮ ಚಿಕಿತ್ಸೆ ಒದಗಿಸಲಾಗಿದ್ದು, ಸದ್ಯ ಅವರ ಆರೋಗ್ಯ ಪರಿಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯಕೀಯ ಮೂಲಗಳು ತಿಳಿಸಿವೆ.
ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Follow Us
Latest Videos
'ನಮ್ಮ ಉಗ್ರರು ನಿಯಂತ್ರಣದಲ್ಲಿದ್ದಾರೆ'; ಮಾನ ಹರಾಜು ಹಾಕಿಕೊಂಡ ಪಾಕಿಸ್ತಾನ
: ಟಿವಿ9 ವರದಿಯ ಸಕಾರಾತ್ಮಕ ಪರಿಣಾಮಕ್ಕೆ ಗದಗ ಪೋಷಕರ ಧನ್ಯವಾದ
‘ಭಾರತ-ಪಾಕ್ ಯುದ್ಧ ತಡೆದು, 3 ಕೋಟಿ ಜನರ ಜೀವ ಉಳಿಸಿದೆ’; ಟ್ರಂಪ್ ಹಳೇ ರಾಗ
ಸಿದ್ದರಾಮಯ್ಯ ಪ್ಯಾಲೇಸ್ ಕಟ್ಟಿಲ್ಲ: ಹೊಸ ಮನೆ ಬಗ್ಗೆ ಜಮೀರ್ ಹೇಳಿದ್ದಿಷ್ಟು

