ಕೋಲಾರ: ಸ್ವಾತಂತ್ರ್ಯ ದಿನಾಚರಣೆ ವೇಳೆ ಖಡ್ಗ ಪ್ರದರ್ಶಿಸಿ ರಾಷ್ಟ್ರಧ್ವಜಕ್ಕೆ ಅಗೌರವ; ಓರ್ವನ ಬಂಧನ
ಕೋಲಾರದಲ್ಲಿ ಸ್ವಾತಂತ್ರ್ಯ ದಿನಾಚರಣೆ ವೇಳೆ ಖಡ್ಗ ಪ್ರದರ್ಶಿಸಿದ ಆರೋಪದಲ್ಲಿ ಮೊಹಮ್ಮದ್ ಪೀರ್ ಅಲಿಯಾಸ್ ಜಾವಾ ಎಂಬುವರನ್ನು ಪೊಲೀಸರು ಬಂಧಿಸಿದ್ದಾರೆ. ಮಹಾಲಕ್ಷ್ಮೀ ಬಡಾವಣೆಯಲ್ಲಿ ಧ್ವಜಾರೋಹಣ ಸಂದರ್ಭದಲ್ಲಿ ಮುಸ್ತಫಾ ಎಂಬುವರಿಗೆ ಉಡುಗೊರೆ ನೀಡಲು ತಂದಿದ್ದ ಖಡ್ಗವನ್ನು ಪ್ರದರ್ಶಿಸಲಾಗಿತ್ತು. ಈ ಘಟನೆಯು ರಾಷ್ಟ್ರಧ್ವಜಕ್ಕೆ ಅಗೌರವ ತೋರಿದ ಆರೋಪಕ್ಕೆ ಗುರಿಯಾಗಿದ್ದು, ಕೋಲಾರ ನಗರ ಠಾಣೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.
ಕೋಲಾರ, ಆಗಸ್ಟ್ 15: ನಗರದ ಮಹಾಲಕ್ಷ್ಮೀ ಬಡಾವಣೆಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣದ ವೇಳೆ ಖಡ್ಗ ಪ್ರದರ್ಶಿಸಿ ರಾಷ್ಟ್ರಧ್ವಜಕ್ಕೆ ಅಗೌರವ ತೋರಿದ ಆರೋಪದಡಿ ಮಹಾಲಕ್ಷ್ಮೀ ಬಡಾವಣೆ ನಿವಾಸಿ ಮೊಹಮ್ಮದ್ ಪೀರ್ ಅಲಿಯಾಸ್ ಜಾವಾ ಎಂಬಾತನನ್ನು ಕೋಲಾರ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಧ್ವಜಾರೋಹಣದ ಸಂದರ್ಭದಲ್ಲಿ ಮುಸ್ತಫಾ ಎಂಬುವರಿಗೆ ಉಡುಗೊರೆಯಾಗಿ ನೀಡಲು ಆರೋಪಿ ಈ ಖಡ್ಗವನ್ನು ತಂದಿದ್ದ ಎನ್ನಲಾಗಿದ್ದು, ಸಾರ್ವಜನಿಕವಾಗಿ ಖಡ್ಗ ಪ್ರದರ್ಶಿಸಿ ಧ್ವಜಕ್ಕೆ ಅಪಚಾರ ಎಸಗಿದ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ವಶಕ್ಕೆ ಪಡೆದು ಕಾನೂನು ಕ್ರಮ ಕೈಗೊಂಡಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Follow Us

