18 ವರ್ಷಗಳ ಹಿಂದೆ ಉತ್ತಮ ಸಮಾಜಕ್ಕಾಗಿ ಟಿವಿ9 ಚಾನೆಲ್ ಆರಂಭವಾದಾಗಿನಿಂದ ನನ್ನ ಮಾಧ್ಯಮ ಕಾಯಕವೂ ಆರಂಭ ಪಡೆಯಿತು. ಸ್ನಾತಕೋತ್ತರ ಪದವಿ ಮುಗಿಸಿದ್ದ ನಾನು ಚಿನ್ನದ ನಾಡು, ಕೃಷಿಕರ ಬೀಡು ಕೋಲಾರ ಜಿಲ್ಲೆಯ ಹಿರಿಯ ಪ್ರತಿನಿಧಿಯಾಗಿ ಕೆಲಸ ಮಾಡುತ್ತಾ ಬಂದಿದ್ದೇನೆ. ಟಿವಿ9 ಸಂಸ್ಥೆಯ ಆಶೋತ್ತರಗಳಿಗೆ ತಕ್ಕಂತೆ ಕೋಲಾರ ಜನತೆಯ ಪರವಾಗಿ ಧ್ವನಿ ಎತ್ತುವ ಕೆಲಸ ಮಾಡಿದ್ದೇನೆ. ನನ್ನದು ಸಾಮಾಜಿಕ ಕಳಕಳಿ ಇರುವ ಟಿವಿ9 ಸಂಸ್ಥೆಯಲ್ಲಿ ಕೆಲಸ ಅನ್ನೋದಕ್ಕಿಂತ ಉತ್ತಮ ಸಮಾಜಕ್ಕಾಗಿ ನನ್ನ ಸೇವೆ ಅನ್ನುವ ಭಾವನೆಯಲ್ಲಿ ಕೆಲಸ ಮಾಡಿಕೊಂಡು ಬಂದಿದ್ದೇನೆ.
ನಡುರಾತ್ರಿ ರೌಡಿ ಶೀಟರ್ಗಳ ಬೆವರಿಳಿಸಿದ ಕೆಜಿಎಫ್ ಎಸ್ಪಿ: ಖಡಕ್ ವಾರ್ನಿಂಗ್ ಕೊಟ್ಟ ಶಿವಾಂಶು ರಜಪೂತ್
ಕೋಲಾರ ಜಿಲ್ಲೆಯ ಕೆಜಿಎಫ್ನಲ್ಲಿ ಎಸ್ಪಿ ಶಿವಾಂಶು ರಜಪೂತ್ ಅವರು ರೌಡಿಶೀಟರ್ಗಳ ಮನೆಗಳಿಗೆ ರಾತ್ರೋರಾತ್ರಿ ಭೇಟಿ ನೀಡಿ ಎಚ್ಚರಿಕೆ ನೀಡಿದ್ದಾರೆ. ಗಲಾಟೆ ಬಿಟ್ಟು ಶಾಂತಿಯುತವಾಗಿ ಬದುಕು ನಡೆಸುವಂತೆ ಮತ್ತು ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವಂತೆ ಸೂಚಿಸಿದ್ದಾರೆ. ಸಮಸ್ಯೆಗಳಿದ್ದರೆ ಪೊಲೀಸರಿಗೆ ತಿಳಿಸುವಂತೆ ತಿಳಿಸಿ, ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಅಗತ್ಯ ಕ್ರಮಕ್ಕೆ ಮುಂದಾಗಿದ್ದಾರೆ.
- Rajendra Simha BL
- Updated on: Dec 28, 2025
- 11:26 am
ಕುಡಿದ ಮತ್ತಲ್ಲಿ ಕಿರಿಕ್: ಬಾಯಿ ಚಪಲಕ್ಕೆ ಬಿಹಾರ ಮೂಲದ ಕಾರ್ಮಿಕ ಬಲಿ!
ಕೋಲಾರದ ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ ಕುಡಿದ ಮತ್ತಿನಲ್ಲಿ ಕಾರ್ಮಿಕರ ನಡುವೆ ನಡೆದ ಕಿರಿಕ್ ಕೊಲೆಯಲ್ಲಿ ಅಂತ್ಯವಾಗಿದೆ. ಬಿಹಾರ ಮೂಲದ ವ್ಯಕ್ತಿ ಬರ್ಬರ ಕೊಲೆಯಾಗಿದ್ದು, ಘಟನೆ ಸಂಬಂಧ ಮೂರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. ಕೆಲವೊಮ್ಮೆ ಅನಗತ್ಯ ಮಾತಾಡದೇ ಇದ್ದರೆ ಮುಂದಿನ ಅನಾಹುತ ತಪ್ಪಿಸಬಹುದು ಎಂಬುದಕ್ಕೆ ಈ ಘಟನೆ ಕೈಗನ್ನಡಿಯಂತಿದೆ.
- Rajendra Simha BL
- Updated on: Dec 26, 2025
- 6:19 pm
ವಕ್ಫ್ ಆಸ್ತಿಗಾಗಿ ಸಂಘರ್ಷ: 11 ಎಕರೆ ಜಮೀನಿಗಾಗಿ ಕುಟುಂಬಗಳ ಮಧ್ಯೆ ಕಲ್ಲು, ದೊಣ್ಣೆಗಳಿಂದ ಬಡಿದಾಟ
ಕೋಲಾರ ಜಿಲ್ಲೆಯ ಮಾಲೂರು ತಾಲ್ಲೂಕಿನ ಮಾಸ್ತಿ ಗ್ರಾಮದಲ್ಲಿ ವಕ್ಫ್ ಬೋರ್ಡ್ಗೆ ಸೇರಿದ 11 ಎಕರೆ ಜಮೀನಿಗಾಗಿ ಎರಡು ಕುಟುಂಬಗಳ ಮಧ್ಯೆ ಭೀಕರ ಹೊಡೆದಾಟ ನಡೆದಿದೆ. ಜಮೀನು ತಮ್ಮದೆಂದು ಹೇಳಿಕೊಂಡಿದ್ದು, ಕಲ್ಲು ಮತ್ತು ದೊಣ್ಣೆಗಳಿಂದ ಹಲ್ಲೆ ಮಾಡಲಾಗಿದೆ. ಈದ್ಗಾ ಮತ್ತು ಬಾಡಿಗೆ ಕಟ್ಟಡಗಳಿರುವ ಈ ಆಸ್ತಿ ವಕ್ಫ್ ಬೋರ್ಡ್ಗೆ ಸೇರಿದ್ದರೂ, ಕುಟುಂಬಗಳು ಮಾಲಿಕತ್ವಕ್ಕಾಗಿ ಘರ್ಷಣೆಗಿಳಿದಿರುವುದು ಗಂಭೀರ ಪ್ರಕರಣವಾಗಿದೆ.
- Rajendra Simha BL
- Updated on: Dec 19, 2025
- 4:10 pm
ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ: ಇಡೀ ರಾತ್ರಿ ಕೋಲಾರ ತಾಲೂಕು ಕಚೇರಿ ಕಾವಲಿಗೆ ಕುಳಿತ BJP ಕಾರ್ಯಕರ್ತರು!
ಬಿಜೆಪಿ ಶಾಸಕ ಛಲವಾದಿ ನಾರಾಯಣಸ್ವಾಮಿ ವಿಧಾನಸಭೆ ಅಧಿವೇಶನದಲ್ಲಿ ಬುಧವಾರ ಕಂದಾಯ ಸಚಿವ ಕೃಷ್ಣಭೈರೇಗೌಡ ವಿರುದ್ಧ ಭೂಕಬಳಿಕೆ ಆರೋಪ ಮಾಡಿದ ಹಿನ್ನೆಲೆಯಲ್ಲಿ ಕೋಲಾರ ಜಿಲ್ಲಾ ಬಿಜೆಪಿ ಅಧ್ಯಕ್ಷ ಓಂಶಕ್ತಿ ಚಲಪತಿ ಅವರ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರು ತಾಲೂಕು ಕಚೇರಿಯ ಮುಂದೆ ಜಮಾಯಿಸಿ ದಾಖಲೆಗಳನ್ನು ರಕ್ಷಿಸುವ ಉದ್ದೇಶದಿಂದ ಇಡೀ ರಾತ್ರಿ ಕಾವಲು ಕಾದಿದ್ದಾರೆ.
- Rajendra Simha BL
- Updated on: Dec 18, 2025
- 9:52 am
ಅರೇ ಇದೇನಿದು ಎರಡು ಬಸ್ ಒಂದೇ ನಂಬರ್ ಪ್ಲೇಟ್: ಆರ್ಟಿಓ ಅಧಿಕಾರಿಗಳೇ ಶಾಕ್!
ಸಾರಿಗೆ ಇಲಾಖೆಯ ಜಂಟಿ ಆಯುಕ್ತೆ ಗಾಯತ್ರಿದೇವಿ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿ, ನಗರದಲ್ಲಿ ಒಂದೇ ನಂಬರ್ ಪ್ಲೇಟ್ ಹಾಕಿ ಸಂಚಾರ ಮಾಡುತ್ತಿದ್ದ ಎರಡು ಖಾಸಗಿ ಬಸ್ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಸದ್ಯ ಎರಡು ಖಾಸಗಿ ಬಸ್ಗಳನ್ನು ಕೋಲಾರ ಜಿಲ್ಲೆಯ ಕೆಜಿಎಫ್ ಆರ್.ಟಿ.ಓ ಕಚೇರಿಯಲ್ಲಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.
- Rajendra Simha BL
- Updated on: Dec 15, 2025
- 9:30 pm
ಕೋಲಾರ: ಬೆಳ್ಳಂಬೆಳಗ್ಗೆ ಬಸ್, ಕಾರುಗಳ ನಡುವೆ ಭೀಕರ ಸರಣಿ ಅಪಘಾತ
ಕೋಲಾರ ಜಿಲ್ಲೆಯ ಕೊಂಡರಾಜನಹಳ್ಳಿ ಗೇಟ್ ಬಳಿ ಶನಿವಾರ ಬೆಳ್ಳಂಬೆಳಗ್ಗೆ ಸರಣಿ ಅಪಘಾತ ಸಂಭವಿಸಿದೆ. ಅದೃಷ್ಟವಶಾತ್, ಸಾವು-ನೋವು ಸಂಭವಿಸಿಲ್ಲ. ರಸ್ತೆ ಬದಿಯಲ್ಲಿ ನಿಂತಿದ್ದ ಲಾರಿಗೆ ಬಸ್ ಡಿಕ್ಕಿಯಾದ ಕಾರಣ ಅಪಘಾತ ಸಂಭವಿಸಿದೆ. ಹಿಂದಿನಿಂದ ಬಂದ ಕಾರುಗಳು ಸಹ ಡಿಕ್ಕಿಹೊಡೆದಿವೆ. ಘಟನಾ ಸ್ಥಳದಲ್ಲಿನ ವಿಡಿಯೋ ಇಲ್ಲಿದೆ.
- Rajendra Simha BL
- Updated on: Dec 13, 2025
- 11:36 am
13 ವರ್ಷದ ಬಾಲಕಿಯಿಂದ ಕೋಲಾರ ಜಿಲ್ಲಾಧಿಕಾರಿ ಕಚೇರಿಗೆ ಬಾಂಬ್ ಬೆದರಿಕೆ: ಕಾರಣ ಕೇಳಿ ಶಾಕ್ ಆದ ಅಧಿಕಾರಿಗಳು!
ಕೋಲಾರ ಜಿಲ್ಲಾಧಿಕಾರಿ ಕಚೇರಿಗೆ ಶುಕ್ರವಾರ ಬಂದ ಬಾಂಬ್ ಬೆದರಿಕೆ ಇಮೇಲ್ ಕೆಲಕಾಲ ಆತಂಕ ಸೃಷ್ಟಿಸಿತ್ತು. ಜಿಲ್ಲಾಡಳಿತ ಹಾಗೂ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಶೋಧ ನಡೆಸಿದ್ದು, ಇದು ಹುಸಿ ಬೆದರಿಕೆ ಎಂದು ತಿಳಿದುಬಂದಿದೆ. ತಮಿಳುನಾಡಿನ 13 ವರ್ಷದ ಬಾಲಕಿಯೊಬ್ಬಳು ಈ ಇಮೇಲ್ ಕಳುಹಿಸಿದ್ದಳು ಎಂಬುದು ಗೊತ್ತಾಗಿದ್ದು, ಆಕೆ ಈ ಕೃತ್ಯ ಎಸಗಲು ಕಾರಣವಾದ ವಿಚಾರ ಮಾತ್ರ ಆತಂಕಕಾರಿಯಾಗಿದೆ.
- Rajendra Simha BL
- Updated on: Dec 13, 2025
- 8:50 am
ಕೋಲಾರ: ಮಲ ತಂದೆ ತಾಯಿಗೆ ತಲಾಖ್ ನೀಡಿದ್ದರಿಂದ ಮನನೊಂದು ಮಗ ಆತ್ಮಹತ್ಯೆ
ತ್ರಿವಳಿ ತಲಾಖ್ ಹೇಳುವ ಮೂಲಕ ವಿವಾಹ ವಿಚ್ಛೇದನ ನೀಡುವ ಪದ್ಧತಿಗೆ ಕೇಂದ್ರ ಸರ್ಕಾರ ತಡೆನೀಡಿದೆ. ಆದರೂ ಕೂಡ ಕೆಲವೆಡೆ ಈ ಪದ್ಧತಿ ಇನ್ನು ಜಾರಿಯಲ್ಲಿದೆ. ಇದೀಗ ಇದಕ್ಕೆ ಸಾಕ್ಷಿಯೆಂಬಂತೆ ಕೋಲಾರ ಜಿಲ್ಲೆಯ ಮುಳಬಾಗಿಲಿನಲ್ಲಿ ಇಂತಹದೇ ಒಂದು ಘಟನೆ ನಡೆದಿದ್ದು, ಅಮಾಯಕ ಯುವಕನೋರ್ವ ಆತ್ಮಹತ್ಯೆಗೆ ಶರಣಾಗಿದ್ದಾರೆ.
- Rajendra Simha BL
- Updated on: Dec 10, 2025
- 7:26 pm
7 ದಿನದ ಮಗು ಬಿಟ್ಟು ದಂಪತಿ ಆತ್ಮಹತ್ಯೆ: ಈಗ ತಾನೇ ಕಣ್ಬಿಟ್ಟು ನೋಡುತ್ತಿರುವಾಗಲೇ ಅನಾಥವಾದ ಮಗು
ಏಳ ದಿನಗಳ ಪುಟ್ಟ ಹಸುಳೆಯನ್ನು ಬಿಟ್ಟು ಬಾಣಂತಿ ಗಂಡನ ಜೊತೆ ಆತ್ಮಹತ್ಯೆ ಮಾಡಿಕೊಂಡಿರುವ ಹೃದಯವಿದ್ರಾವಕ ಘಟನೆ ನಡೆದಿದೆ. ಮಗ ಜನಿಸಿ ಏಳ ದಿನವಾಗಿದೆ ಅಷ್ಟೇ. ಅದ್ಯಾಕೋ ಏನು ದಂಪತಿ ಏಕಾಏಕಿ ಆತ್ಮಹತ್ಯೆಗೆ ಶರಣಾಗಿದ್ದು, ಈಗ ತಾನೇ ಕಣ್ಬಿಟ್ಟಿರುವ ಮಗ ತಂದೆ ತಾಯಿ ಇಲ್ಲದೇ ಅನಾಥವಾಗಿದೆ. ಈ ಘಟನೆ ನಡೆದಿದ್ದೆಲ್ಲಿ? ಯಾರಿವರು ಎನ್ನುವ ವಿವರ ಈ ಕೆಳಗಿನಂತಿದೆ.
- Rajendra Simha BL
- Updated on: Dec 7, 2025
- 6:08 pm
ಅಕ್ರಮ ಚಟುವಟಿಕೆಗೆ ಬ್ರೇಕ್ ಹಾಕಲು ಡ್ರೋನ್ ಗಸ್ತು: ಏನಿದು ಕೋಲಾರ ಪೊಲೀಸರ ಹೊಸ ಪ್ರಯೋಗ?
ಕೋಲಾರ ಜಿಲ್ಲಾ ಪೊಲೀಸ್ ಇಲಾಖೆ ಜಿಲ್ಲೆಯಲ್ಲಿ ಅಪರಾಧ ತಡೆಗೆ ಹೊಸ ಪ್ರಯೋಗವೊಂದಕ್ಕೆ ಮುಂದಾಗಿದೆ. ರಾಜ್ಯದಲ್ಲಿ ಮೊದಲ ಬಾರಿಗೆ ಪ್ರಾಯೋಗಿಕವಾಗಿ ಈ ಹೊಸ ಪ್ರಯೋಗವನ್ನು ಜಿಲ್ಲೆಯಲ್ಲಿ ಆರಂಭಿಸಲಾಗಿದೆ. ಆ ಮೂಲಕ ಕಾನೂನು ಬಾಹಿರ ಮತ್ತು ಅಕ್ರಮ ಚಟುವಟಿಕೆಗಳನ್ನು ಪತ್ತೆ ಹಚ್ಚಲು ಇದು ಸಹಕಾರಿಯಾಗಲಿದೆ. ಹಾಗಾದರೆ ಆ ಮಾಸ್ಟರ್ ಪ್ಲಾನ್ ಏನು ಎಂಬ ಮಾಹಿತಿ ಇಲ್ಲಿದೆ.
- Rajendra Simha BL
- Updated on: Dec 4, 2025
- 6:16 pm
ಟೊಮ್ಯಾಟೋಗೆ ಡಿಮ್ಯಾಂಡಪ್ಪೋ ಡಿಮ್ಯಾಂಡ್: ದುಡ್ಡು ಕೊಟ್ರೂ ಸಿಗ್ತಿಲ್ಲ ನುಗ್ಗೇಕಾಯಿ!
ಹವಾಮಾನ ವೈಪರೀತ್ಯದಿಂದಾಗಿ ಇಳುವರಿ ಕಡಿಮೆಯಾದ ಪರಿಣಾಮ ವಿವಿಧ ತರಕಾರಿಗಳ ಬೆಲೆಯಲ್ಲಿ ಭಾರಿ ಏರಿಕೆಯಾಗಿದೆ. ಕೋಲಾರದ ಏಷ್ಯಾದ ಅತಿದೊಡ್ಡ ಟೊಮ್ಯಾಟೋ ಮಾರುಕಟ್ಟೆಯಲ್ಲಿಯೇ ಪೂರೈಕೆ ಕೊರತೆ ಎದುರಾಗಿದೆ. 15 ಕೆಜಿ ಟೊಮ್ಯಾಟೋ ಬಾಕ್ಸ್ ಬೆಲೆ ದುಪ್ಪಟ್ಟಾಗಿದ್ರೆ, ಕೆಲ ತರಕಾರಿಗಳು ಮಾರುಕಟ್ಟೆಯಿಂದಲೇ ನಾಪತ್ತೆಯಾಗಿವೆ. ಹಣ ಕೊಡ್ತೀವಿ ಎಂದರೂ ಬೇಕಾದ ತರಕಾರಿ ಮಾತ್ರ ಸಿಗುತ್ತಿಲ್ಲ.
- Rajendra Simha BL
- Updated on: Dec 3, 2025
- 7:06 pm
ಶ್ರೀನಿವಾಸಪುರ ಬಳಿ ಭೀಕರ ಬಸ್ ಅಪಘಾತ: ಮಹಿಳೆ ಸಾವು, ಹಲವರಿಗೆ ಗಾಯ
ಶ್ರೀನಿವಾಸಪುರ ತಾಲೂಕಿನ ಮಂಚಿನೀಳ್ಳಕೋಟೆ ಗ್ರಾಮದ ಬಳಿ ಮುಂಜಾನೆ 3 ಗಂಟೆ ಸುಮಾರಿಗೆ ಖಾಸಗಿ ಬಸ್ ಡಿವೈಡರ್ಗೆ ಡಿಕ್ಕಿ ಹೊಡೆದು ಪಲ್ಟಿಯಾಗಿದೆ. ಆಂಧ್ರದ ಬದ್ವೇಲ್ನಿಂದ ಬೆಂಗಳೂರಿಗೆ ತೆರಳುತ್ತಿದ್ದ ಬಸ್ ಅಪಘಾತವಾಗಿದ್ದು, ಘಟನೆಯಲ್ಲಿ ಓರ್ವ ಮಹಿಳೆ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಲವು ಪ್ರಯಾಣಿಕರು ಗಾಯಗೊಂಡಿದ್ದು, ಶ್ರೀನಿವಾಸಪುರ ಹಾಗೂ ಮದನಪಲ್ಲಿ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ.
- Rajendra Simha BL
- Updated on: Dec 2, 2025
- 12:53 pm