AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಚಿವರ ಪ್ರಮಾಣವಚನ ಸ್ವೀಕಾರಕ್ಕೆ ಸಿದ್ದರಾಮಯ್ಯ ಗೈರಾಗಿದ್ದೇಕೆ: ಯತೀಂದ್ರ ಕೊಟ್ಟರು ಕಾರಣ!

ಸಚಿವರ ಪ್ರಮಾಣವಚನ ಸ್ವೀಕಾರಕ್ಕೆ ಸಿದ್ದರಾಮಯ್ಯ ಗೈರಾಗಿದ್ದೇಕೆ: ಯತೀಂದ್ರ ಕೊಟ್ಟರು ಕಾರಣ!

ಸುರೇಶ್ ನಾಯಕ್
| Edited By: |

Updated on: Aug 04, 2026 | 12:59 PM

Share

ಸಚಿವ ಸಂಪುಟ ವಿಸ್ತರಣೆಯ ಸಂದರ್ಭದಲ್ಲಿ ಸಿದ್ದರಾಮಯ್ಯನವರ ಅನುಪಸ್ಥಿತಿ ಮತ್ತು ಅಸಮಾಧಾನದ ಬಗ್ಗೆ ಅವರ ಪುತ್ರ ಯತೀಂದ್ರ ಸ್ಪಷ್ಟನೆ ನೀಡಿದ್ದಾರೆ. ಹಿರಿಯರು, ಕಿರಿಯರನ್ನು ಸೇರಿಸಿ ಸಂಪುಟ ರಚನೆಯಾಗುತ್ತದೆ. ಕೆಲವರಿಗೆ ಸಚಿವ ಸ್ಥಾನ ಸಿಗದೇ ಇರುವುದು ಸಹಜ. ಹೈಕಮಾಂಡ್ ಎಲ್ಲವನ್ನೂ ಸರಿಪಡಿಸಲಿದೆ. ಸಿದ್ದರಾಮಯ್ಯರಿಗೆ ಯಾವುದೇ ಅಸಮಾಧಾನವಿಲ್ಲ ಎಂದು ಯತೀಂದ್ರ ತಿಳಿಸಿದ್ದಾರೆ.

ಬೀದರ್, ಆಗಸ್ಟ್ 4: ನೂತನ ಸಚಿವ ಸಂಪುಟ ರಚನೆಯಾದ ಬಳಿಕ, ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಲೋಕಭವನಕ್ಕೆ ಆಗಮಿಸದಿರುವ ಬಗ್ಗೆ ಅವರ ಪುತ್ರ ಯತೀಂದ್ರ ಸ್ಪಷ್ಟನೆ ನೀಡಿದ್ದಾರೆ. ಬೀದರ್​​ನಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯನವರಿಗೆ ಯಾವುದೇ ಅಸಮಾಧಾನ ಇಲ್ಲ ಎಂದು ಸ್ಪಷ್ಡಪಡಿಸಿದ್ದಾರೆ. ಹುಟ್ಟುಹಬ್ಬದ ಪ್ರಯುಕ್ತ ಸಿದ್ದರಾಮಯ್ಯನವರಿಗೆ ಲೋಕಭವನಕ್ಕೆ ತೆರಳಲು ಆಗಿಲ್ಲ. ಸಚಿವರೇ ಅವರ ಮನೆಗೆ ಬಂದು ಶುಭಾಶಯ ಕೋರಿದ್ದಾರೆ. ಸಿದ್ದರಾಮಯ್ಯನವರು ಕೂಡ ಎಲ್ಲರಿಗೂ ಶುಭ ಹಾರೈಸಿದ್ದಾರೆ ಎಂದು ಯತೀಂದ್ರ ಹೇಳಿದ್ದಾರೆ.

ಕೆಲವು ಶಾಸಕರು ಸಚಿವ ಸ್ಥಾನದ ಪಟ್ಟಿಯಲ್ಲಿ ಇಲ್ಲದಿರುವ ಕುರಿತು ಕೇಳಿದ ಪ್ರಶ್ನೆಗೆ, ಬ್ಯಾಡಗಿ ಶಾಸಕರ ಉದಾಹರಣೆ ನೀಡಿ ಅವರಿಗೆ ಯಾವುದೇ ಅಸಮಾಧಾನ ಇಲ್ಲ ಎಂದು ಯತೀಂದ್ರ ಸ್ಪಷ್ಟಪಡಿಸಿದರು. ಸಂಪುಟ ರಚನೆಯ ಸಂದರ್ಭದಲ್ಲಿ ಹಿರಿಯರು ಮತ್ತು ಕಿರಿಯರನ್ನು ಸೇರಿಸಿ ಸಂಪುಟ ರೂಪಿಸಲಾಗುತ್ತದೆ. ಹಾಗಾದಾಗ ಕೆಲವರನ್ನು ಕೈಬಿಡುವುದು ಸಹಜ ಪ್ರಕ್ರಿಯೆ. ಈ ಸಣ್ಣ ಪುಟ್ಟ ಅಸಮಾಧಾನಗಳು ಸಹಜವಾಗಿದ್ದು, ಕಾಲಕ್ರಮೇಣ ಎಲ್ಲವೂ ಸರಿಯಾಗಲಿದೆ ಎಂದು ಯತೀಂದ್ರ ತಿಳಿಸಿದ್ದಾರೆ. ಯಾವ ಹಿರಿಯರನ್ನೂ ಕಡೆಗಣಿಸಿಲ್ಲ. ಮಹಿಳೆಯರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಚರ್ಚೆ ನಡೆದಿದ್ದು, ಸದ್ಯಕ್ಕೆ ಸ್ಥಾನ ಖಾಲಿ ಇಡಲಾಗಿದೆ. ಹೈಕಮಾಂಡ್ ಅಂತಿಮ ತೀರ್ಮಾನ ಕೈಗೊಂಡು ಎಲ್ಲವನ್ನೂ ಸರಿಪಡಿಸುತ್ತದೆ ಎಂದು ಯತೀಂದ್ರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us