AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ವಾತಂತ್ರ್ಯೋತ್ಸವ ಅಂಗವಾಗಿ HMT ನೂತನ ವಾಚ್ ಬಿಡುಗಡೆ: ಖರೀದಿಗೆ ಮುಗಿಬಿದ್ದ ಜನ

ಸ್ವಾತಂತ್ರ್ಯೋತ್ಸವ ಅಂಗವಾಗಿ HMT ನೂತನ ವಾಚ್ ಬಿಡುಗಡೆ: ಖರೀದಿಗೆ ಮುಗಿಬಿದ್ದ ಜನ

ವಿನಯ್​ ಕಾಶಪ್ಪನವರ್​
| Edited By: |

Updated on: Aug 15, 2026 | 10:13 PM

Share

ಸ್ವಾತಂತ್ರ್ಯೋತ್ಸವದ ಪ್ರಯುಕ್ತ ಹೆಚ್‌ಎಂಟಿ ಸಂಸ್ಥೆಯು ಗಂಡಭೇರುಂಡ ಚಿಹ್ನೆ ಮತ್ತು ಕನ್ನಡ ಅಂಕಿಗಳಿರುವ ವಿಶೇಷ ವಾಚ್‌ಗಳನ್ನು ಬಿಡುಗಡೆ ಮಾಡಿದೆ. ಬೆಂಗಳೂರಿನ ಜಾಲಹಳ್ಳಿ ಕೇಂದ್ರದಲ್ಲಿ ಈ ಅನನ್ಯ ವಾಚ್‌ಗಳ ಖರೀದಿಗೆ ಜನ ಮುಗಿಬಿದ್ದಿದ್ದಾರೆ. 2 ಕಿಲೋಮೀಟರ್ ಉದ್ದದ ಕ್ಯೂನಲ್ಲಿ ನಿಂತು ಜನ ತಮ್ಮ ಮೆಚ್ಚಿನ ಮೇಡ್ ಇನ್ ಇಂಡಿಯಾ ವಾಚ್‌ಗಳನ್ನು ಖರೀದಿಸುತ್ತಿದ್ದಾರೆ, ಇದು ಭಾರತೀಯ ಸಂಸ್ಕೃತಿಯ ಹೆಮ್ಮೆಯನ್ನು ಸಾರುತ್ತಿದೆ.

ಬೆಂಗಳೂರು, ಆಗಸ್ಟ್​ 15: ಸ್ವಾತಂತ್ರ್ಯೋತ್ಸವದ ಅಂಗವಾಗಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಸೂಚನೆ ಮೇರೆಗೆ ಗಂಡಭೇರುಂಡ ಲಾಂಛನ ಹಾಗೂ ಕನ್ನಡ ಅಂಕಿಗಳನ್ನು ಒಳಗೊಂಡ ವಿಶೇಷವಾದ ಹೆಚ್‌ಎಂಟಿ (HMT) ನೂತನ ವಾಚ್‌ಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದ್ದು, ಬೆಂಗಳೂರಿನ ಜಾಲಹಳ್ಳಿಯಲ್ಲಿರುವ ಹೆಚ್‌ಎಂಟಿ ಕೇಂದ್ರದಲ್ಲಿ ಈ ವಾಚ್‌ಗಳನ್ನು ಖರೀದಿಸಲು ಸಾರ್ವಜನಿಕರು ಮುಗಿಬಿದ್ದಿದ್ದರು. ಈ ವಿಶೇಷ ವಾಚ್‌ಗಳನ್ನು ಖರೀದಿಸಲು ಜನರು ಮುಂಜಾನೆಯಿಂದಲೇ ಬರೋಬ್ಬರಿ 2 ಕಿ.ಮೀಗೂ ಅಧಿಕ ಉದ್ದದ ಕ್ಯೂನಲ್ಲಿ ನಿಂತಿದ್ದು, ಭಾರೀ ಬೇಡಿಕೆ ಕಂಡುಬಂದಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Follow Us
ವಿನಯ್​ ಕಾಶಪ್ಪನವರ್​
ವಿನಯ್​ ಕಾಶಪ್ಪನವರ್​

ವಿನಯಕುಮಾರ್ ಕಾಶಪ್ಪನವರ್ ಅವರು ಸಮೂಹ ಸಂವಹನ ಹಾಗೂ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಮತ್ತು ಪತ್ರಿಕೋದ್ಯಮದಲ್ಲಿ ವಿದ್ಯಾಭ್ಯಾಸ ಪಡೆದಿದ್ದಾರೆ. ಕಳೆದ 8 ವರ್ಷಗಳಿಂದ ಟಿವಿ9 ಕನ್ನಡದಲ್ಲಿ ಹಿರಿಯ ವರದಿಗಾರನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬೆಂಗಳೂರು ನಗರ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಗಳಲ್ಲಿ 10 ವರ್ಷಗಳ ವರದಿಗಾರಿಕೆ ಅನುಭವ ಹೊಂದಿದ್ದು, ಸಮಾಜಮುಖಿ ಹಾಗೂ ತನಿಖಾ ವರದಿಗಳ ಮೂಲಕ ಜನಪರ ವಿಷಯಗಳನ್ನು ಬೆಳಕಿಗೆ ತರುತ್ತಿದ್ದಾರೆ.

Read More