AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಾನು ಸಂಭಾವನೆ ಪಡೆಯಲ್ಲ’, ತಮ್ಮ ವಿಧಾನದ ಬಗ್ಗೆ ವಿವರಿಸಿದ ಯಶ್

Yash remuneration: ‘ಕೆಜಿಎಫ್’, ‘ಕೆಜಿಎಫ್ 2’ ಸಿನಿಮಾ ಮೂಲಕ ಕರ್ನಾಟಕದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆವ ನಟ ಎನಿಸಿಕೊಂಡಿದ್ದರು. ಈಗ ‘ಟಾಕ್ಸಿಕ್’ ಮೂಲಕ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆವ ನಟರಲ್ಲಿ ಒಬ್ಬರು ಎನಿಸಿಕೊಂಡಿದ್ದಾರೆ. ಇದೀಗ ‘ಆಪ್​ ಕಿ ಅದಾಲತ್’ ಸಂದರ್ಶನದಲ್ಲಿ ಭಾಗಿ ಆಗಿರುವ ನಟ ಯಶ್, ತಮ್ಮ ಸಂಭಾವನೆ ವಿಷಯವನ್ನು ಹಂಚಿಕೊಂಡಿದ್ದಾರೆ. ತಾವು ಸಂಭಾವನೆಯೇ ಪಡೆಯುವುದಿಲ್ಲ ಎಂದಿದ್ದಾರೆ ನಟ.

‘ನಾನು ಸಂಭಾವನೆ ಪಡೆಯಲ್ಲ’, ತಮ್ಮ ವಿಧಾನದ ಬಗ್ಗೆ ವಿವರಿಸಿದ ಯಶ್
Yash
ಮಂಜುನಾಥ ಸಿ.
|

Updated on: Aug 15, 2026 | 11:06 PM

Share

ಮುಖ್ಯಾಂಶಗಳು

  • ಯಶ್ ಸಂಭಾವನೆ ಎಷ್ಟು ಕೋಟಿ?
  • ನಾನು ಸಂಭಾವನೆ ಪಡೆಯಲ್ಲ ಎಂದಿದ್ದಾರೆ ಯಶ್
  • ಹಾಗಿದ್ದರೆ ಯಶ್ ಹಣ ಗಳಿಸುವುದು ಹೇಗೆ?

ಯಶ್ (Yash) ನಟನೆಯ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇದೆ. ಸಿನಿಮಾದ ಬಗ್ಗೆ ಭಾರತದಲ್ಲಿ ಮಾತ್ರವೇ ಅಲ್ಲ ವಿದೇಶಗಳಲ್ಲೂ ಸಹ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ‘ಕೆಜಿಎಫ್’, ‘ಕೆಜಿಎಫ್ 2’ ಸಿನಿಮಾ ಮೂಲಕ ಕರ್ನಾಟಕದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆವ ನಟ ಎನಿಸಿಕೊಂಡಿದ್ದರು. ಈಗ ‘ಟಾಕ್ಸಿಕ್’ ಮೂಲಕ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆವ ನಟರಲ್ಲಿ ಒಬ್ಬರು ಎನಿಸಿಕೊಂಡಿದ್ದಾರೆ. ಇದೀಗ ‘ಆಪ್​ ಕಿ ಅದಾಲತ್’ ಸಂದರ್ಶನದಲ್ಲಿ ಭಾಗಿ ಆಗಿರುವ ನಟ ಯಶ್, ತಮ್ಮ ಸಂಭಾವನೆ ವಿಷಯವನ್ನು ಹಂಚಿಕೊಂಡಿದ್ದಾರೆ. ತಾವು ಸಂಭಾವನೆಯೇ ಪಡೆಯುವುದಿಲ್ಲ ಎಂದಿದ್ದಾರೆ ನಟ.

‘ಒಂದು ಸಿನಿಮಾಕ್ಕೆ 50 ಕೋಟಿ ಕೇಳುತ್ತೀರಂತೆ?’ ಎಂದು ಸಂದರ್ಶಕ ರಜತ್ ಶರ್ಮಾ ಕೇಳಿದ ಪ್ರಶ್ನೆಗೆ ಉತ್ತರಿಸಿದ ಯಶ್, ‘ಇಲ್ಲ ಅದಕ್ಕಿಂತಲೂ ಹೆಚ್ಚು ಪಡೆಯುತ್ತೇನೆ’ ಎಂದಿದ್ದಾರೆ. ‘ಮೌಲ್ಯ ಇದ್ದರಷ್ಟೆ ಹಣ ಕೊಡುತ್ತಾನೆ. ನನಗೆ ಕೊಡುತ್ತಿದ್ದಾರೆ ಎಂದರೆ ಮೌಲ್ಯ ಇದೆ ಎಂದು ಅರ್ಥ’ ಎಂದಿದ್ದಾರೆ ಯಶ್. ಮುಂದುವರೆದು ಮಾತನಾಡಿದ ಯಶ್, ‘ನಾನು ಮೊದಲಿನಿಂದಲೂ ಸಂಭಾವನೆ ಪಡೆಯುವುದಿಲ್ಲ ಸರ್, ನಾನು ಪಾರ್ಟನರ್​​ಶಿಪ್​​ನಲ್ಲಿ ಕೆಲಸ ಮಾಡುತ್ತೀನಿ. ‘ಕೆಜಿಎಫ್’ ಮಾತ್ರವಲ್ಲ, ಅದಕ್ಕೆ ಮುಂಚಿನಿಂದಲೂ ನಾನು ಪಾರ್ಟನರ್​ಶಿಪ್​​ನಲ್ಲೇ ಕೆಲಸ ಮಾಡುತ್ತಿದ್ದೀನಿ’ ಎಂದಿದ್ದಾರೆ ಯಶ್.

‘ನಮ್ಮನ್ನು ನಂಬಿ ಕೆಲವರು ಹಣ ಹಾಕಿರುತ್ತಾರೆ. ನಾನೂ ಸಹ ಅವರೊಟ್ಟಿಗೆ ಸೇರಿಕೊಳ್ಳುತ್ತೇನೆ. ಗೆದ್ದರೆ ಇಬ್ಬರೂ ಗೆಲ್ಲುತ್ತೇವೆ, ಸೋತರೆ ಇಬ್ಬರೂ ಕಳೆದುಕೊಳ್ಳುತ್ತೇವೆ. ಹಣ ಪಡೆದುಕೊಂಡು, ಸಿನಿಮಾ ಗೆದ್ದರೂ, ಸೋತರೂ ಸಂಬಂಧ ಇಲ್ಲ ಎನ್ನುವ ವ್ಯಕ್ತಿ ನಾನಲ್ಲ. ಮೊದಲಿನಿಂದಲೂ ನಾನು ಸಹ ನಿರ್ಮಾಪಕನಾಗಿಯೇ ಕೆಲಸ ಮಾಡುತ್ತಾ ಬಂದಿದ್ದೇನೆ. ಸಂಭಾವನೆ ಪಡೆಯುವುದಿಲ್ಲ ಬದಲಿಗೆ ಸಹ ನಿರ್ಮಾಪಕನಾಗಿ ಕೆಲಸ ಮಾಡುತ್ತೇನೆ’ ಎಂದಿದ್ದಾರೆ ನಟ.

ಇದನ್ನೂ ಓದಿ:‘ಕೆಜಿಎಫ್ 3’ ಮಾಡದೆ ಹೊಸ ರಿಸ್ಕ್ ತಗೊಂಡಿದ್ದೇಕೆ? ಕೊನೆಗೂ ಮೌನ ಮುರಿದ ನಟ ಯಶ್

ಯಶ್ ಅವರು ಮೊದಲಿನಿಂದಲೂ ತಾವು ನಟಿಸುವ ಸಿನಿಮಾಗಳಲ್ಲಿ ಸಹ ನಿರ್ಮಾಪಕನಾಗಿ ಇರುತ್ತಾರೆ. ಅವರೇ ಹೇಳಿರುವಂತೆ ‘ಕೆಜಿಎಫ್’ ಸಿನಿಮಾಕ್ಕೂ ಬಹಳ ಮೊದಲಿನಿಂದಲೇ ಅದನ್ನು ಅವರು ಪಾಲಿಸಿಕೊಂಡು ಬಂದಿದ್ದಾರೆ. ‘ಸಿನಿಮಾ ಗೆದ್ದರೆ ನನಗೆ ಲಾಭ ಬರುತ್ತದೆ, ಆದರೆ ಲಾಭ ತೆಗೆದುಕೊಂಡು ಸುಮ್ಮನೆ ಕೂರುವುದಿಲ್ಲ, ಬದಲಿಗೆ ಇನ್ನೂ ಒಳ್ಳೆಯ ಸಿನಿಮಾ ನೀಡುವ ಪ್ರಯತ್ನ ಮಾಡುತ್ತೇನೆ’ ಎಂದಿದ್ದಾರೆ ಯಶ್.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us