ಪೊಲೀಸ್ ಭವನದಲ್ಲೇ ಬಿಡದಿ ರೈತರ ಉಪವಾಸ ಸತ್ಯಾಗ್ರಹ: ‘ಭೂಮಿ ಬಿಡಿ, ಇಲ್ಲಾ ದಯಾಮರಣ ಕೊಡಿ’ ಎಂದು ಆಕ್ರೋಶ
ಬಿಡದಿ ಟೌನ್‌ಶಿಪ್ ಯೋಜನೆ ವಿರೋಧಿಸಿ ಬೈರಮಂಗಲದಲ್ಲಿ ಐದು ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ರೈತರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚನ್ನಪಟ್ಟಣದ ಪೊಲೀಸ್ ಭವನಕ್ಕೆ ಕರೆತಂದರೂ ರೈತರು ಹೋರಾಟ ಮುಂದುವರಿಸಿದ್ದಾರೆ. ಕೃಷಿ ಭೂಮಿ ಉಳಿಸುವಂತೆ ಅಥವಾ ದಯಾಮರಣಕ್ಕೆ ಅನುಮತಿ ನೀಡುವಂತೆ ಒತ್ತಾಯಿಸುತ್ತಿದ್ದಾರೆ. ವಶಕ್ಕೆ ಪಡೆಯುವ ವೇಳೆ ಮಹಿಳೆಯೊಬ್ಬರು ಅಸ್ವಸ್ಥಗೊಂಡರು.
ರಾಮನಗರ, ಸೆಪ್ಟೆಂಬರ್ 25: ಬಿಡದಿ ಟೌನ್‌ಶಿಪ್ ಯೋಜನೆಯನ್ನು ವಿರೋಧಿಸಿ ರಾಮನಗರ ತಾಲೂಕಿನ ಬೈರಮಂಗಲ ಗ್ರಾಮದಲ್ಲಿ ಕಳೆದ 5 ದಿನಗಳಿಂದ ರೈತರು ಉಪವಾಸ ಸತ್ಯಾಗ್ರಹ ನಡೆಸಿದ್ದರು. ಇಂದು ಪೊಲೀಸರು ಅವರನ್ನು ವಶಕ್ಕೆ ಪಡೆದು ಚನ್ನಪಟ್ಟಣದ ಪೊಲೀಸ್ ಭವನಕ್ಕೆ ಸ್ಥಳಾಂತರಿಸಿದರು. ತಮ್ಮ ಹೋರಾಟವನ್ನು ನಿಲ್ಲಿಸದ ರೈತರು, ಪೊಲೀಸ್ ಭವನದಲ್ಲಿಯೂ ಉಪವಾಸ ಸತ್ಯಾಗ್ರಹ ಮುಂದುವರಿಸಿದ್ದಾರೆ. ಬಿಡದಿ ಟೌನ್‌ಶಿಪ್ ಯೋಜನೆ ಕೈಬಿಡದಿದ್ದರೆ ದಯಾಮರಣ ಕೊಡಿ ಎಂದು
ರೈತರು ಕೈಯಲ್ಲಿ ದಯಾಮರಣ ಅರ್ಜಿ ಹಿಡಿದು ಪ್ರತಿಭಟನೆ ನಡೆಸಿದ್ದು, ಜಡ್ಜ್ ಮುಂದೆ ಹಾಜರುಪಡಿಸಿದರೆ ಮನವಿ ಮಾಡುತ್ತೇವೆ ಎಂದಿದ್ದಾರೆ.
ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.
Follow Us
Latest Videos
ಭಜನ್ ಕ್ಲಬ್ಬಿಂಗ್; ದೆಹಲಿಯಲ್ಲಿ ಭಕ್ತಿಗೀತೆಗೆ ತಾಳ ಹಾಕಿದ ಪ್ರಧಾನಿ ಮೋದಿ
ಬಳ್ಳಾರಿ ಪಾದಯಾತ್ರೆ ಯಶಸ್ಸಿನ ಬೆನ್ನಲ್ಲೇ ಬಿಜೆಪಿಯಿಂದ ಮತ್ತೊಂದು ಯಾತ್ರೆ
ಮಾಡರ್ನ್ ಮಹಾಕವಿ ಮಂಜು ವಿರುದ್ಧ ಕುಶಾಲ ದೂರು: ವಿಡಿಯೋ
ಶವಪೆಟ್ಟಿಗೆ ಒಳಗೆ ತುಂಡು ತುಂಡಾದ ದೇಹ: 3 ತಿಂಗಳ ಬಳಿಕ ಉಡುಪಿಗೆ ಬಂತು ಶವ

